Bigg Boss: ಬಿಗ್‌ಬಾಸ್ ಸ್ಪರ್ಧಿಗೆ ಬಯಸಿದ್ದೇ ಸಿಕ್ಕಿತು... ಏನು ಗೊತ್ತಾ?
ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಾ, ದೇಶಾದ್ಯಂತ ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಗಳಿಸುತ್ತಿದೆ. 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮ, ಕನ್ನಡ ನಾಡು ಅಂದ್ರೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಇಡೀ ದೇಶದಲ್ಲಿ ಮಾತ್ರವಲ್ಲ ಹೊರ ದೇಶದಲ್ಲಿ ಕೂಡ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮ ಫೇಮಸ್ ಆಗ್ತಿದೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಖದರ್ ಫುಲ್ ನಿರೂಪಣೆಗೆ ಅಭಿಮಾನಿಗಳು ಫಿದಾ....
ಹೀಗೆ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ನಡೆದುಕೊಂಡು ಬರುತ್ತಿರುವ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮ ಇನ್ನೇನು ಕೊನೇ ಹಂತಕ್ಕೆ ಸಮೀಪಿಸುತ್ತಿದೆ. ಈ ಮೂಲಕ 'ಬಿಗ್‌ಬಾಸ್ ಕನ್ನಡ' ವಿನ್ನರ್ ಯಾರು? ಲಕ್ಷ ಲಕ್ಷ ರೂಪಾಯಿ ಬಹುಮಾನ ಯಾರಿಗೆ? ಅನ್ನೋ ಕುತೂಹಲ ಕೂಡ ಕೆರಳಿದೆ. ಹೀಗಿದ್ದಾಗಲೇ, ಬಿಗ್‌ಬಾಸ್ ಸ್ಪರ್ಧಿಗೆ ಬಯಸಿದ್ದೇ ಸಿಕ್ಕಿಬಿಟ್ಟಿದೆ...

ಬಿಗ್‌ಬಾಸ್ ಸ್ಪರ್ಧಿಗೆ ಬಯಸಿದ್ದೇ ಸಿಕ್ಕಿಬಿಟ್ಟಿದೆ...
ಯೆಸ್, ' ಬಿಗ್ ಬಾಸ್ ಕನ್ನಡ ಸೀಸನ್ 11' ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಶಿಶಿರ್ ಶಾಸ್ತ್ರಿ ಅವರು ವಿನ್ನರ್ ಆಗುವುದು ಗ್ಯಾರಂಟಿ ಎನ್ನಲಾಗಿತ್ತು. ಆದ್ರೆ 'ಬಿಗ್ ಬಾಸ್ ಕನ್ನಡ ಸೀಸನ್ 11' ಅಖಾಡ ಪ್ರವೇಶ ಮಾಡಿ, 11 ವಾರಗಳ ಕಾಲ ಸ್ಪರ್ಧೆ ಮಾಡಿ ಅದ್ಭುತವಾಗಿ ಆಟ ಆಡಿ ಇದೀಗ ಹೊರ ಬಂದಿದ್ದಾರೆ ಶಿಶಿರ್ ಶಾಸ್ತ್ರಿ. ಹೀಗಿದ್ದರೂ ಬಿಗ್‌ಬಾಸ್ ಕನ್ನಡ ಸ್ಪರ್ಧಿಯಾದ ಶಿಶಿರ್ ಶಾಸ್ತ್ರಿ ಅವರಿಗೆ ಅಂದುಕೊಂಡಿದ್ದು ಸಿಕ್ಕೇ ಬಿಟ್ಟಿದೆ!
ಶಿಶಿರ್ ಶಾಸ್ತ್ರಿ ಆರಂಭದಲ್ಲಿ ಮಾಡಿದ ಸದ್ದು ಎಲ್ಲರಿಗೂ ಇಷ್ಟವಾಗಿತ್ತು, ಆದ್ರೆ ಯಾಕೋ ಏನೋ ಶಿಶಿರ್ ಶಾಸ್ತ್ರಿ ಅವರು ಕಳೆದ ಕೆಲವು ದಿನಗಳಿಂದ ಡಲ್ ಆಗಿದ್ದರು. ಅಲ್ಲದೆ ತಮಗೆ ಆರೋಗ್ಯ ಸಮಸ್ಯೆ ಕಾಡುತ್ತಿತ್ತು ಎಂಬುದನ್ನ ಕೂಡ ಅವರು ಹೇಳಿಕೊಂಡರು. ಹೀಗೆ ಬಿಗ್‌ಬಾಸ್ ಮನೆ ಬಿಟ್ಟು ಹೊರಗೆ ಬಂದ ಶಿಶಿರ್ ಶಾಸ್ತ್ರಿ ಅವರನ್ನು ನೆನಪು ಮಾಡಿಕೊಂಡು ಮನೆಯ ಮಂದಿ, ಸಿಕ್ಕಾಪಟ್ಟೆ ಅತ್ತು ಕಣ್ಣೀರು ಹಾಕಿದ್ದಾರೆ. ಇಷ್ಟೆಲ್ಲಾ ನಡೆದರೂ ಬಿಗ್‌ಬಾಸ್ ಕನ್ನಡ ಸ್ಪರ್ಧಿಯಾದ ಶಿಶಿರ್ ಶಾಸ್ತ್ರಿ ಅವರಿಗೆ ಅವರು ಅಂದುಕೊಂಡಿದ್ದು ಮಾತ್ರ ಸಿಕ್ಕಿದೆ ಬಿಡಿ!
1991ರ ಡಿಸೆಂಬರ್ 14 ರಂದು ಹುಟ್ಟಿದ್ದ....
ಹೌದು, ಬಿಗ್‌ಬಾಸ್ ಕನ್ನಡ ಸ್ಪರ್ಧಿ ಶಿಶಿರ್ ಶಾಸ್ತ್ರಿ ತಾವು ಬರ್ತ್ ಡೇ ತನಕ ಬಿಗ್‌ಬಾಸ್ ಮನೆ ಒಳಗೆ ಇರಬೇಕು ಅಂತ ಬಯಕೆ ವ್ಯಕ್ತಪಡಿಸಿದ್ದರು. ಹೀಗೆ ಶಿಶಿರ್ ಶಾಸ್ತ್ರಿ ತಾವು ಅಂದುಕೊಂಡಿದ್ದ ರೀತಿಯೇ ಆಗಿದ್ದು, 1991ರ ಡಿಸೆಂಬರ್ 14 ರಂದು ಹುಟ್ಟಿದ್ದ ಶಿಶಿರ್ ಶಾಸ್ತ್ರಿ ಅವರು ತಮ್ಮ 33ನೇ ಹುಟ್ಟುಹಬ್ಬ ಆಚರಣೆಯನ್ನ ಬಿಗ್‌ಬಾಸ್ ಮನೆಯಲ್ಲಿ ಮಾಡಿಕೊಂಡರು. ಈ ಮೂಲಕ ತಾವು ಅಂದುಕೊಂಡ ರೀತಿ ಹುಟ್ಟು ಹಬ್ಬದ ತನಕ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡು, ಹುಟ್ಟು ಹಬ್ಬದ ದಿನವೇ ಹೊರಗೆ ಬಂದಿದ್ದಾರೆ. ಅದು ಹೇಗೆ ಅಂದ್ರೆ.....
'ಬಿಗ್‌ಬಾಸ್ ಕನ್ನಡ'ದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಶೂಟಿಂಗ್ ಒಂದು ದಿನ ಮೊದಲೇ ನಡೆದು ಹೋಗಿರುತ್ತದೆ. ಅಂದ್ರೆ ಭಾನುವಾರ ಪ್ರಸಾರವಾಗುವ ಎಪಿಸೋಡ್ ಒಂದು ದಿನ ಮೊದಲೇ ಶೂಟ್ ಆಗಿರುತ್ತೆ ಎನ್ನಲಾಗಿದೆ. ಇದರ ಅರ್ಥ, ಶನಿವಾರ ಅಂದ್ರೆ ಡಿಸೆಂಬರ್ 14 ರಂದೇ ಈ ಎಪಿಸೋಡ್ ಅರ್ಥಾತ್ ಶಿಶಿರ್ ಶಾಸ್ತ್ರಿ ಅವರು ಬಿಗ್‌ಬಾಸ್ ಮನೆಯಿಂದ ಹೊರ ಬಂದ ದಿನವೇ ಶೂಟ್ ಆಗಿದೆ. ಈ ಮೂಲಕ ಶಿಶಿರ್ ಶಾಸ್ತ್ರಿ ತಮ್ಮ ಹುಟ್ಟುಹಬ್ಬದ ದಿನವೇ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಂತೆ ಆಗಿದೆ.












Click it and Unblock the Notifications