Bigg Boss Kannada 13: ಪ್ರಶಾಂತ್ Vs ತಾಂಡವ್ ರಾವ್ ಫ್ರೆಂಡ್ಲಿ ಫೈಟ್; ಕುಮಾರಿಯ ಡೈಲಾಗ್‌ಗೆ ಮನೆ ಮಂದಿ ಫಿದಾ!

Bigg Boss Kannada 13: ಬಿಗ್‌ಬಾಸ್ ಮನೆಯಲ್ಲಿ ಪ್ರಶಾಂತ್ Vs ತಾಂಡವ್ ರಾವ್ ನಡುವೆ ವಾಕ್ಸಮರ ನಡೆದಿದೆ. ಬಿಗ್‌ಬಾಸ್ ಮನೆಯಲ್ಲಿ ನೀಡಲಾಗಿದ್ದ ಟಾಸ್ಕ್‌ ಈ ವೈಮನಸ್ಸು ಮೂಡುವುದಕ್ಕೆ ಕಾರಣವಾಗಿದೆ. ಬಿಗ್‌ಬಾಸ್ ಸಣ್ಣ ವೇದಿಕೆಯಲ್ಲಿ ಸೂಚಿಸಿದಷ್ಟು ಸಂಖ್ಯೆ ಮೀರದಂತೆ ನಿಲ್ಲಬೇಕು. ತಮ್ಮ ವೇದಿಕೆಯಲ್ಲಿರುವ ಸದಸ್ಯರ ಪೈಕಿ ಒಬ್ಬ ಸದಸ್ಯರನ್ನು ಮನೆಯಿಂದ ಹೊರ ಹೋಗಲು ಆಯ್ಕೆ ಮಾಡಬೇಕು ಎನ್ನುವ ಟಾಸ್ಕ್‌ ಕೊಡಲಾಗಿತ್ತು. ಅಸಿಯಾ ಹಾಗೂ ಯಶಸ್ ಕೃಷ್ಣ ಅವರಿದ್ದ ತಂಡವು ಜಗದೀಶ್ ಅವರನ್ನು ಹೊರಗೆ ಉಳಿಯುವಂತೆ ಆಯ್ಕೆ ಮಾಡಿತ್ತು. ಅಂದರೆ ಜಗದೀಶ್ ಅವರನ್ನು ನಾಮಿನೇಟ್ ಮಾಡಲಾಯಿತು.

ಇನ್ನು ಪ್ರಶಾಂತ್ ಅವರ ತಂಡದಿಂದ ತಾಂಡವ್‌ ರಾವ್ ಅವರನ್ನು ನಾವಿನೇಟ್ ಮಾಡಿದ್ದಾರೆ. ಇಲ್ಲಿ ನೋಡು ಬಿಗ್‌ಬಾಸ್ ಮನೆಗೆ ಬಂದ ಮೇಲೆ ನಿನ್ನ ಯೋಗ್ಯತೆ ಏನು ಅಂತ ಎರಡು ಸೆಕೆಂಡ್‌ನಲ್ಲಿ ಬಿಚ್ಚಿಟ್ಟರು. ಒಬ್ಬ ಒಳ್ಳೆಯ ಸ್ನೇಹಿತ ಏನು ಅನ್ನೋದನ್ನು ಹೆಂಗೆ ತೋರಿಸಿದರು ನೋಡು ಅಂತ ತಾಂಡವ್ ರಾವ್ ಅವರು ಪ್ರಶಾಂತ್ ಅವರಿಗೆ ಹೇಳಿದ್ದಾರೆ. ಇದಕ್ಕೆ ಪ್ರಶಾಂತ್ ಅವರು, ಆಯ್ತು ಬಿಡು ಮಚ್ಚಾ... ನೋಡಿದ್ದೀನಿ ಬಿಡು ಮಚ್ಚಾ ಅಂತ ಪ್ರಶಾಂತ್ ಅವರು ಹೇಳಿದ್ದಾರೆ. ಇದಕ್ಕೆ ತಾಂಡವ್ ರಾವ್ ಅವರು ಥ್ಯಾಂಕ್ಯೂ ಬಿಗ್‌ಬಾಸ್ ಅಂತ ಹೇಳಿದ್ದಾರೆ.

Bigg Boss Kannada 13 Prashanth vs Thandav Rao Friendly Feud Kumari s Punchlines Win Hearts

ಮಗಾ ನೀನು ಹೇಳೋದು ಏನು ಗೊತ್ತಾ.. ನಿನಗೆ ಮಾಡಿದ್ರೆ ನಿನಗೆ ಒಳ್ಳೆಯದು ನಾವು ಮಾಡಿದರೆ ಕೆಟ್ಟದು. ಇದೇ ನಿಮ್ಮ ಫ್ರೆಂಡ್ ಗಗನು ನಿನ್ನ ಬಿಟ್ಟು ಬೇರೆ ಅವರನ್ನ ಫೈನಲ್‌ಗೆ ಇರಬೇಕು ಅಂತ ಹೇಳಿದ್ರಲ್ಲ ಅವಾಗ ನಿಮ್ಮ ಫ್ರೆಂಡ್‌ಶಿಫ್‌ ಎಲ್ಲಿ ಹೋಗಿತ್ತು ಅಂತ ಪ್ರಶಾಂತ್ ಅವರು ಪ್ರಶ್ನೆ ಮಾಡಿದ್ದಾರೆ.

ನಿನ್ನ ಜೊತೆನೇ ತಿಂದ, ನಿನ್ನ ಜೊತೆನೇ ಇದ್ದ ಆದರೆ ಹೋಗಿ ಯಾರಿಗೂ ಕೊಟ್ಟ. ನಾನು ನ್ಯಾಯ ಮಾತನಾಡಿದರೆ ಎಲ್ಲರಿಗೂ ಒಂದೇ ಅಂತ ಪ್ರಶಾಂತ್ ಅವರು ಹೇಳಿದ್ದಾರೆ. ಆದರೆ ಇದಕ್ಕೆ ತಾಂಡವ್ ಅವರು ನಾನೇ ಕಣೋ ಅವನಿಗೆ ನನ್ನ ಹೆಸರು ತಗೋಬೇಡ ಅಂತ ಹೇಳಿದ್ದು ಅಂತ ಹೇಳಿದ್ದಾರೆ. ನೀನು ಗಗನ್‌ ಇಬ್ಬರು ಇದ್ದಿದ್ದರೆ ಯಾರನ್ನ ಆಯ್ಕೆ ಮಾಡುತ್ತಿದ್ದಿರಿ ನನ್ನನ್ನೇ ಹೊರಗೆ ಕಳ್ಸತಿದ್ರಿ ಅಂತ ಪ್ರಶಾಂತ್ ಹೇಳಿದ್ದಾರೆ.

Bigg Boss Kannada 13: ಬಿಗ್‌ಬಾಸ್ ಮನೆಯಲ್ಲಿ ಕುಮಾರಿ ರಾಕಿಂಗ್

ಬಿಗ್‌ಬಾಸ್‌ನ ಅಗ್ನಿ ಪರೀಕ್ಷೆಯಲ್ಲಿ ಸ್ಪರ್ಧಿಸಿದ್ದ ಕಾಮನ್ ಮ್ಯಾನ್ ಸ್ಪರ್ಧಿ ಅಶ್ವಿನಿ ಕುಮಾರಿ ಅವರು ಬಿಗ್‌ಬಾಸ್ ಮನೆಗೆ ವೈಲ್ಡ್‌ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಕುಮಾರಿ ಅವರು ಮಿಂಚಿದ್ದಾರೆ. ಜಗ್ಗು ಮಮ್ಮಿ ಎಲ್ಲಾರು ಅಂದುಕೊಂಡಿದ್ದಾರೆ ನಿಮ್ಮನ್ನ ಡಮ್ಮಿ.... ಆದರೆ ನೀವು ಯಾರಿಗಿಂತಲೂ ಇಲ್ಲ ಕಮ್ಮಿ. ಯಶಸ್‌ ಅಣ್ಣ ಸುಣ್ಣದಂತಹ ಬಣ್ಣ ಬಿಗ್‌ಬಾಸ್ ಮನೆಗೆ ಬಂದ ಮೇಲೆ ಆಗಿದ್ದೀರಿ ಸ್ವಲ್ಪ ಸಣ್ಣ ಅಂತ ಕುಮಾರಿ ಸರಣಿ ಡೈಲಾಗ್ ಹೊಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+