Bigg Boss Kannada 13: ಬಿಗ್‌ಬಾಸ್ ಡೈಮೆಂಡ್ ಚೇಂಜ್ ಮಾಡುವಲ್ಲಿ ಲೂಟಿಕೋರರು ಸಕ್ಸಸ್; ರಕ್ಷಕರ ನೆಮ್ಮದಿ ಲೂಟಿ!
Bigg Boss Kannada 13: ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ಬಿಗ್‌ಬಾಸ್ ನೀಡಿದ್ದ ಟಾಸ್ಕ್‌ನಲ್ಲಿ ಲೂಟಿಕೋರರು ಯಶಸ್ವಿಯಾಗಿದ್ದಾರೆ. ಲೂಟಿಕೋರರು ತಂಡವಾಗಿ ಟಾಸ್ಕ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮೀ ಗೌಡ, ಸೌಂದರ್ಯ ಹಾಗೂ ಆಸಿಯಾ ಮೂವರು ಸೇರಿ ಡೈಮೆಂಡ್ ಕಳ್ಳತನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಕರ ನೆಮ್ಮದಿ ಲೂಟಿ ಎನ್ನುವ ಹ್ಯಾಷ್ ಟ್ಯಾಗ್‌ನೊಂದಿಗೆ ಹೊಸ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿಯಿಂದ ಬಿಡುಗಡೆ ಮಾಡಲಾಗಿದ್ದು, ಲೂಟಿಕೋರರು ಹಾಗೂ ರಕ್ಷಕರ ನಡುವಿನ ಸಂಭಾಷಣೆಯು ಮಜವಾಗಿದೆ. ಲೂಟಿಕೋರರು ರಕ್ಷಕರ ಕಣ್ತಪ್ಪಿಸಿ ಚಾಣಾಕ್ಷತನದಿಂದ ಡೈಮೆಂಡ್ ಕಳ್ಳತನ ಮಾಡಿದ್ದಾರೆ.
ಈ ವಾರ ಎರಡು ತಂಡಗಳನ್ನಾಗಿ ವಿಭಜನೆ ಮಾಡಲಾಗಿತ್ತು. ಅದರಲ್ಲಿ ಲೂಟಿಕೋರರು ಹಾಗೂ ರಕ್ಷಕರು ಎನ್ನುವ ಎರಡು ತಂಡವನ್ನು ಮಾಡಲಾಗಿದೆ. ಡೈಮೆಂಡ್, ಕೀರಿಟ ಹಾಗೂ ಪದಕಗಳ ಮ್ಯೂಸಿಯಂ ಬಿಗ್‌ಬಾಸ್ ಮನೆಯಲ್ಲಿ ಮಾಡಲಾಗಿದ್ದು, ಲೂಟಿಕೋರರು ಈ ಅಮೂಲ್ಯ ವಸ್ತುಗಳನ್ನು ಕಳ್ಳತನ ಮಾಡದಂತೆ ಹಾಗೂ ಸುರಕ್ಷತೆಯಿಂದ ಕಾಪಾಡಿಕೊಳ್ಳುವಂತೆ ರಕ್ಷಕರಿಗೆ ಟಾಸ್ಕ್ ಕೊಡಲಾಗಿತ್ತು. ಅಲ್ಲದೆ ಈ ವಸ್ತುಗಳನ್ನು ಕಳ್ಳತನ ಮಾಡದಿದ್ದರೆ, ಜೈಲು ಶಿಕ್ಷೆ ಮುಂದುವರಿಯುವ ಅಪಾಯವು ಸಹ ಲೂಟಿಕೋರರಿಗಿತ್ತು. ಕೊನೆಗೂ ಚಾಣಾಕ್ಷತನದಿಂದ ಲೂಟಿಕೋರರ ತಂಡವು ಡೈಮೆಂಡ್ ಕಳವು ಮಾಡುವಲ್ಲಿ ಸಕ್ಸಸ್ ಆಗಿದೆ.

ಚಾಣಾಕ್ಷತನದಿಂದ ಡೈಮೆಂಡ್ ಕದ್ದ ಲೂಟಿಕೋರರು
ಇನ್ನು ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಲೂಟಿಕೋರರು ಚಾಣಾಕ್ಷತನದಿಂದ ಡೈಮೆಂಡ್ ಕಳ್ಳತನ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ಅಗ್ನಿ ಪರೀಕ್ಷೆ ಸ್ಪರ್ಧಿ ಲಕ್ಷ್ಮೀ ಗೌಡ ಅವರು ಒರಿಜಿನಲ್ ಡೈಮೆಂಡ್ ಬದಲಾಯಿಸಿ, ಡೂಪ್ಲಿಕೇಟ್ ಡೈಮೆಂಡ್ ಆ ಜಾಗದಲ್ಲಿ ಇರಿಸಿದ್ದಾರೆ. ಧನುಷ್ ಅವರು ಡೈಮೆಂಡ್ ಚೇಂಜ್ ಮಾಡಿದ್ದಾರೆ ಎಂದು ಕಿರುಚಿದ್ದಾರೆ.
ಇದಕ್ಕೆ ಕಿರಣ್ ಶಾಸ್ತ್ರಿ ಅವರು, ಅವರು ಡೈಮೆಂಡ್ ಚೇಂಜ್ ಮಾಡುವ ವರೆಗೂ ನೀವು ಏನ್ ಮಾಡುತ್ತಿದ್ದೀರಿ ಅಂತ ಪ್ರಶ್ನೆ ಮಾಡಿದ್ದಾರೆ. ಹುಡುಕ್ ಬಿಡಿ ಎಲ್ಲಿದೆ ನೋಡಿ ಅಂತ ಕಿರಣ್ ಶಾಸ್ತ್ರಿ ಹೇಳಿದರೆ, ಹುಡುಕ್‌ಬಿಡಿ ಅಲ್ಲ, ನಾವೆಲ್ಲ ಹುಡುಕಬೇಕು ಅಂತ ವ್ಯಂಗ್ಯವಾಗಿ ಹೇಳಿದ್ದಾರೆ.
ಈ ಸೈಕಲ್ ಗ್ಯಾಪ್‌ನಲ್ಲಿ ಲಕ್ಷ್ಮಿ ಅವರು ಒರಿಜಿನಲ್ ಡೈಮೆಂಡ್ ಬದಲಾಯಿಸಿ ಡೂಪ್ಲಿಕೇಟ್ ಡೈಮೆಂಡ್ ಅಲ್ಲಿಟ್ಟಿದ್ದಾರೆ. ಬಾತ್‌ರೂಮ್‌ಗೆ ಹೋದ ಆಸಿಯಾ ಚಪ್ಪಲ್ಲಿಯಲ್ಲಿ ಅದನ್ನು ತೆಗೆದುಕೊಂಡು ಬಂದಿದ್ದಾರೆ. ಸೌಂದರ್ಯ ಅವರು ಇದಕ್ಕೆ ಸಹಾಯ ಮಾಡಿದ್ದಾರೆ. ತಾಂಡವ್ ರಾವ್ ಅವರು, ಪ್ರಶಾಂತ್ ಅವರನ್ನು ನಮ್ಮ ತಂಡದ ಸ್ಪೈ ಅಂತ ಘೋಷಿಸಿದ್ದಾರೆ. ಏನಾದರೂ ಅಡ್ವಾಟೇಜ್ ಇದ್ದಿದ್ದರೆ ನೀನು ಈ ಕೆಲಸ ಮಾಡುತ್ತಿದ್ದೆ ಅಂತ ಪ್ರಶಾಂತ್ ಅವರಿಗೆ ಯಶಸ್ ಕೃಷ್ಣ ಹೇಳಿದ್ದಾರೆ. ಮತ್ತೊಂದು ಕಡೆ ಡೈಮೆಂಡ್ ಸಿಕ್ಕ ಖುಷಿಯಲ್ಲಿ ಆಸಿಯಾ - ಸೌಂದರ್ಯ ನಗುತ್ತಿದ್ದಾರೆ.
ಪ್ರಶಾಂತ್ ಅವರು ನನ್ನ ಮೇಲೆ ನನ್ನ ತಂಡದವರಿಗೆ ನಂಬಿಕೆನೇ ಇಲ್ಲ ಅಂತ ಹತಾಶೆ ವ್ಯಕ್ತಪಡಿಸಿದ್ದಾರೆ. ಆದರೆ, ರಕ್ಷಕರ ತಂಡವು ಲೂಟಿಕೋರರು ಇರುವ ಜಾಗಕ್ಕೆ ಬಂದು ಶೋಧ ಕಾರ್ಯಾ ಶುರು ಮಾಡಿದ್ದಾರೆ. ಅವರು ಒಳಗೆ ಬರುವಂತೆ ಇಲ್ಲ, ನಿಮಗೆ ಯಾರು ಅವಕಾಶ ನೀಡಿದ್ದು ಅಂತ ತಾಂಡವ್ ರಾವ್ ಅವರು ಗಗನ್ ಚಿನ್ನಪ್ಪ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಲೂಟಿಕೋರರು ಇರುವ ಜಾಗವನ್ನೆಲ್ಲ ಹುಡುಕಾಡಿದರೂ, ರಕ್ಷಕರಿಗೆ ಒರಿಜಿನಲ್ ಡೈಮೆಂಡ್ ಸಿಕ್ಕಿಲ್ಲ. ಆಸಿಯಾ ಅವರ ಚಪ್ಪಲಿಯಲ್ಲಿ ಡೈಮೆಂಡ್ ಸೇಫ್ ಆಗಿದೆ.


Click it and Unblock the Notifications
