Bigg Boss Kannada 13: ಗಾನವಿನ ನಂಬಿ ಕೆಟ್ರಾ ಒಂಟಿ ಪಂಟರ್ಸ್?, ಮತ್ತೊಬ್ಬ ಕಾಮನ್ ಮ್ಯಾನ್ ಟಾರ್ಗೆಟ್‌! ಇಲ್ಲಿದೆ ವಿಡಿಯೋ

Bigg Boss Kannada 13: ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಗಾನವಿ ಅವರ ನಿರ್ಧಾರದಿಂದ ಒಂಟಿ ಪಂಟರ್ಸ್‌ಗೆ ಸಂಕಷ್ಟ ಎದುರಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಒಂಟಿ ಪಂಟರ್ಸ್‌ನ ಪಾಯಿಂಟ್ ಲೆಕ್ಕಾಚಾರ ತಲೆಕೆಳಗಾಗಿದೆ. ಇದೇ ಸಂದರ್ಭದಲ್ಲಿ ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಮತ್ತೊಬ್ಬ ಕಾಮನ್‌ಮ್ಯಾನ್‌ನ ಟಾರ್ಗೆಟ್ ಮಾಡಲಾಗಿದೆ ಎನ್ನುವ ಆರೋಪ ಸಹ ಕೇಳಿ ಬಂದಿದೆ.

ಈ ವಾರದ ಕ್ಯಾಪ್ಟನ್ ಆಗಿರುವ ಧನುಷ್ ಅವರು ಉತ್ತಮವಾಗಿ ಕ್ಯಾಪ್ಟನ್ಸಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಕ್ಯಾಪ್ಟನ್ಸಿ ಜವಾಬ್ದಾರಿಯಲ್ಲಿ ಧನುಷ್ ಅವರು ಎಡವಿದ್ದಾರೆ. ನಾನು ಆ ಜಾಗದಲ್ಲಿ ಇದ್ದಿದ್ದರೆ ಬೇರೆಯದ್ದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ ಎಂದು ಗಗನ್ ಚಿನ್ನಪ್ಪ ಅವರು ಹೇಳಿದ್ದಾರೆ. ಧನುಷ್ ಅವರ ಬಗ್ಗೆ ಗಗನ್ ಚಿನ್ನಪ್ಪ ಅವರು ಹೇಳಿರುವುದನ್ನು ನೋಡಿ ವೀಕ್ಷಕರು ಬಿಗ್‌ಬಾಸ್ ಮನೆಯಲ್ಲಿ ಮತ್ತೊಬ್ಬ ಕಾಮನ್ ಮ್ಯಾನ್ ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ.

Bigg Boss Kannada 13 Did Solo Punters Pay the Price for Trusting Ganavi Another Commoner Targeted

ಒಂಟಿ ಪಂಟರ್ಸ್‌ ತಂಡವು ಟಾಸ್ಕ್‌ನಲ್ಲಿ 30 ಪವರ್ ಪಾಯಿಂಟ್ಸ್‌ಗಳನ್ನು ಗಳಿಸಿದೆ. ಗಳಿಸಿರುವ ಪಾಯಿಂಟ್ಸ್‌ಗಳನ್ನು ಹಂಚಿಕೊಳ್ಳುವ ಸಮಯ. ಒಬ್ಬರನ್ನು ಬಹುಮತದಿಂದ ಆಯ್ಕೆ ಮಾಡಿ ಕನ್ಫೆಷನ್ ರೂಮ್‌ಗೆ ಕಳುಹಿಸುವಂತೆ ಬಿಗ್‌ಬಾಸ್ ಟಾಸ್ಕ್‌ ಕೊಟ್ಟಿದ್ದಾರೆ. ಇದಕ್ಕೆ ಗಾನವಿ ಅವರು ಬಹುಮತದಲ್ಲಿ ನನ್ನ ಹೆಸರು ಯಾವೊತ್ತೂ ಬರುವುದಿಲ್ಲ. ನೀವೆಲ್ಲರೂ ಒಂದು ಚಾನ್ಸ್‌ ಕೊಟ್ಟರೆ ನಾನು ನಿಮ್ಮನ್ನೆಲ್ಲ ಖಂಡಿತ ಗೌರವಿಸುತ್ತೇನೆ ಅಂತ ಗಾನವಿ ಅವರು ಹೇಳಿದ್ದಾರೆ. ಆದರೆ ಗಗನ್ ಅವರು ನಾನು ಕನ್ಫೆಷನ್ ರೂಮ್‌ಗೆ ಹೋಗ್ತೀನಿ ಅಂತ ಹೇಳಿದ್ದಾರೆ. ಇದು ಇಡೀ ತಂಡದ ಪರಿಶ್ರಮ ಇದೆ. ಎಲ್ಲರೂ ತಲಾ ಆರು ಪಾಯಿಂಟ್ಸ್‌ ಪಡೆಯಲು ಅರ್ಹರಾಗಿದ್ದಾರೆ ಅಂತ ಹೇಳಿದ್ದಾರೆ.

ಇದಕ್ಕೆ ಗಾನವಿ ಅವರು, ನಾನು ಅದನ್ನೇ ಪ್ರಾಮಿಸ್ ಮಾಡ್ತೀನಿ ಎಲ್ಲರಿಗೂ ಸಿಕ್ಸ್‌ ಪಾಯಿಂಟ್ಸ್‌ ಕೊಡ್ಸತೀನಿ ಅಂತ ಹೇಳಿದ್ದಾರೆ. ತಂಡದ ಒಮ್ಮತದ ನಿರ್ಧಾರದ ಮೇಲೆ ಕ್ಯಾಪ್ಟನ್ ಧನುಷ್ ಅವರು ಗಾನವಿ ಅವರನ್ನು ಕಳುಹಿಸಿಕೊಡುತ್ತೇವೆ ಅಂತ ಹೇಳಿದ್ದಾರೆ. ಆದರೆ, ಕನ್ಫೆಷನ್ ರೂಮ್‌ನ ಒಳಗೆ ಹೋದ ಮೇಲೆ ಗಾನವಿ ಅವರು ತಮ್ಮದೇ ತಂತ್ರ ಉಪಯೋಗಿಸಿದ್ದಾರೆ. ನನಗೆ ನಾನು 15 ಪವರ್ ಪಾಯಿಂಟ್ಸ್‌ ತಗೋಳಕ್ಕೆ ಇಷ್ಟಪಡ್ತೀನಿ ಬಿಗ್‌ಬಾಸ್ ಅಂತ ಹೇಳುವ ಮೂಲಕ ಬಿಗ್‌ಬಾಸ್ ಮನೆಯಲ್ಲಿ ಒಂಟಿ ಪಂಟರ್ಸ್ ತಂಡದ ಸದಸ್ಯರಿಗೆ ಶಾಕ್ ಕೊಟ್ಟಿದ್ದಾರೆ.

Bigg Boss Kannada 13: ಧನುಷ್ ಉಸ್ತುವಾರಿಗೆ ಗಗನ್ ಅಪಸ್ವರ

ಇನ್ನು ಧನುಷ್ ಅವರ ಉಸ್ತುವಾರಿಗೆ ಗಗನ್ ಚಿನ್ನಪ್ಪ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂಗೆ ಯಾರು ಮಾಡ್ತಾರೆ ಉಸ್ತುವಾರಿ ಅಂತ ಕೇಳಿದ್ದಾರೆ. ನಾನಾಗಿದ್ದರೆ ಆ ಚೌಕಟ್ಟಿನಲ್ಲೇ ಇರಬೇಕು ಬಾಲ್‌ ಹಿಡಿಬೇಕಾದರೆ ಕಾಲು ಹೊರಗಿಟ್ಟರೆ ಮೈನಸ್‌ ಒಂದು ಬಾಲೇ ಹಿಡಿದಿಲಲ್ಲ ಜಾರಿ ಬಿದ್ದರು ಅಥವಾ ಲೈನಿಂದ ಹೊರ ಬಂದರೆ ಯಾಕೆ ಮೈನಸ್ ಕೊಡೋದು ಅಂತ ಕೇಳಿದ್ದಾರೆ. ಇದು ಮೋಸ್ಟ್‌ ಸ್ಟುಪಿಡ್ ಉಸ್ತುವಾರಿ ಅಂತ ಗಗನ್ ಹೇಳಿದ್ದಾರೆ.

Bigg Boss Kannada 13: ಪ್ರಶಾಂತ್ - ತಾಂಡವ್ ರಾವ್ ಫೈಟ್

ಇನ್ನು ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಪ್ರಾಶಂತ್ ಹಾಗೂ ತಾಂಡವ್ ರಾವ್ ನಡುವೆ ಫ್ರೆಂಡ್ಲಿ ಫೈಟ್ ನಡೆದಿದೆ. ನಿನ್ನಂತಹ ವೇಸ್ಟ್‌ ಕಾಮಿಡಿಯನ್‌ಗೂ ಹೀರೋಹಿಸಮ್ ಇದೆ ಅಂತ ಪ್ರಶಾಂತ್ ಅವರಿಗೆ ತಾಂಡವ್ ರಾವ್ ಅವರುಹೇಳಿದ್ದಾರೆ. ಇದಕ್ಕೆ ಪ್ರಶಾಂತ್ ಅವರು ನೀನು ಬಿಗ್‌ಬಾಸ್ ಮನೆಯಲ್ಲಿ ಮಾಡಿರುವುದು ಇದೇ ಆ ಕಡೆಯಿಂದ ಈ ಕಡೆಯಿಂದ ನಡೆಯೋದಷ್ಟೇ ಅಂತ ಪ್ರಶಾಂತ್ ಅವರು ಕಾಲೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+