Bigg Boss-12: ಬಿಗ್‌ಬಾಸ್ ಪ್ರೋಮೋದಲ್ಲಿ ಸುದೀಪ್ ಧರಿಸಿದ್ದ ಗ್ಲಾಸ್, ಸೂಟ್ ಬೆಲೆ ಎಷ್ಟು?
ಬಿಗ್‌ಬಾಸ್ ಕನ್ನಡ ಸೀಸನ್-12 ಆರಂಭಕ್ಕೆ (Bigg Boss Kannada 12) ವೇದಿಕೆ ಸಜ್ಜಾಗಿದೆ. ಈ ಬಾರಿಯೂ ಕಿಚ್ಚ ಸುದೀಪ್ ನಿರೂಪಣೆಯ ಹೊಣೆ ಹೊತ್ತಿದ್ದಾರೆ. ಈ ಸೀಸನ್‌ನಲ್ಲಿ ಯಾರೆಲ್ಲ ಸ್ಪರ್ಧಿಗಳು ಎನ್ನುವ ಕುತೂಹಲ ಹೆಚ್ಚಾಗಿದೆ. ಪ್ರತಿ ಸೀಸನ್‌ನಲ್ಲಿಯೂ ಕಿಚ್ಚ ಸುದೀಪ್ ಅವರ ಕಾಸ್ಟ್ಯೂಮ್ ಕೂಡ ಗಮನ ಸೆಳೆಯುತ್ತೆ. ಪ್ರತಿ ವಾರವೂ ಕಿಚ್ಚ ವಿಭಿನ್ನ ಗೆಟಪ್‌ನಲ್ಲಿ ಪ್ರತ್ಯಕ್ಷ ಆಗ್ತಾರೆ. ಇನ್ನು ಸುದೀಪ್ ಅವರ ಧರಿಸುವ ಕಾಸ್ಟ್ಯೂಮ್ ಕೂಡ ದುಬಾರಿ ಬೆಲೆ ಬಾಳುವಂತದ್ದು. ಇತ್ತೀಚೆಗೆ ಕಲರ್ಸ್ ವಾಹಿನಿ ಬಿಗ್‌ಬಾಸ್ ಪ್ರೋಮೋ ಹಂಚಿಕೊಂಡಿತ್ತು. ಇದರಲ್ಲಿಯೂ ಸುದೀಪ್ ವಿಶೇಷವಾದ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ದುಬಾರಿ ಕಾಸ್ಟ್ಯೂಮ್‌ನ ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ.
ಸುದೀಪ್ ಧರಿಸುವ ಕಾಸ್ಟ್ಯೂಮ್‌ಗೆ ವಿಶೇಷ ಅಭಿಮಾನಿ ಬಳಗವಿದೆ. ಪ್ರತಿ ವಾರವೂ ಸುದೀಪ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಅದರಲ್ಲೂ ಸುದೀಪ್ ಅವರು ಜಾಕೆಟ್‌ಗಳ ಮೇಲೆ ಸ್ಪರ್ಧಿಗಳೂ ಕಣ್ಣು ಹಾಕ್ತಾರೆ. ಎಷ್ಟೋ ಬಾರಿ ನನಗೆ ಸುದೀಪ್ ಅವರ ಜಾಕೆಟ್ ಬೇಕು ಎಂದು ಎಲ್ಲರ ಮುಂದೆ ಬೇಡಿಕೆ ಇಟ್ಟಿದ್ದೂ ಉಂಟು. ಈ ಪೈಕಿ ಕೆಲವರ ಆಸೆಯನ್ನೂ ಕಿಚ್ಚ ಈಡೇರಿಸಿದ್ದರು. ಮಾತು ಕೊಟ್ಟಂತೆ ಅವರಿಗೆ ತಮ್ಮ ಕಾಸ್ಟ್ಯೂಮ್ ನೀಡಿ ಖುಷಿಪಡಿಸಿದ್ದರು.

ಕಲರ್ಸ್ ವಾಹಿನಿ ಹಂಚಿಕೊಂಡಿದ್ದ ಬಿಗ್‌ಬಾಸ್ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ಲುಕ್ ರಿವೀಲ್ ಆಗಿತ್ತು. ಹೊಸ ಹೇರ್‌ಸ್ಟೈಲ್ ಜೊತೆಗೆ ಸನ್‌ಗ್ಲಾಸ್ ಹಾಕ್ಕೊಂಡು ಕಿಚ್ಚ ಕಿಚ್ಚು ಹೊತ್ತಿಸಿದ್ದರು. ನೋಡಲು ಸಿಂಪಲ್ ಅನಿಸಿದರೂ ಕಿಚ್ಚ ಧರಿಸಿದ್ದ ಕಾಸ್ಟ್ಯೂಮ್ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.
ಗ್ಲಾಸ್, ಸೂಟ್ ಬೆಲೆ ಎಷ್ಟು?
ಬಿಗ್‌ಬಾಸ್-12ರ ಮೊದಲ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ಕಾಸ್ಟ್ಯೂಮ್ ಎಲ್ಲರ ಕಣ್ಣುಕುಕ್ಕಿದೆ. ಸುದೀಪ್ ಧರಿಸಿದ್ದ ಸ್ಟೈಲಿಶ್ ಗ್ಲಾಸ್ ನೋಡಲು ಸಖತ್ ಸಿಂಪಲ್ ಎನಿಸುವಂತಿದೆ. ಆದ್ರೆ ಮೂಲಗಳ ಪ್ರಕಾರ ಇದು ಪ್ರತಿಷ್ಠಿತ ಬ್ರ್ಯಾಂಡ್‌ನ ಗ್ಲಾಸ್ ಆಗಿದ್ದು, ಇದರ ಬೆಲೆ ಬರೋಬ್ಬರಿ 4 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಇನ್ನು ಸುದೀಪ್ ಧರಿಸಿದ್ದ ಸೂಟ್‌ನ ಬೆಲೆ ಕೂಡ ಬರೋಬ್ಬರಿ 15 ಲಕ್ಷ ರೂಪಾಯಿ ಎನ್ನಲಾಗಿದೆ.

ಆರಂಭದಲ್ಲೇ ಸ್ಪೆಷಲ್ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿರುವ ಕಿಚ್ಚ, ಈ ಸೀಸನ್‌ನಲ್ಲಿ ಇನ್ನೂ ವಿಭಿನ್ನವಾದ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸುದೀಪ್ ಅವರಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಲೆಂದೇ ವಿಶೇಷ ಟೀಂ ಕೂಡ ಇದ್ದು, ಪ್ರತಿ ವಾರವೂ ಸುದೀಪ್ ಅವರ ಗೆಟಪ್ ಬಿಗ್‌ಬಾಸ್‌ನ ಪ್ರಮುಖ ಆಕರ್ಷಣೆಯಾಗಿದೆ. ಇನ್ನು ಈ ಬಾರಿಯೂ ಸುದೀಪ್ ಅವರ ಸ್ಟೈಲಿಶ್ ಜಾಕೆಟ್‌ಗಳಿಗಾಗಿ ಯಾವೆಲ್ಲ ಸ್ಪರ್ಧಿಗಳು ಬೇಡಿಕೆ ಇಡಬಹುದು? ಅದನ್ನು ಸುದೀಪ್ ಈಡೇರಿಸುತ್ತಾರಾ ಎನ್ನುವುದು ಸದ್ಯದಲ್ಲೇ ತಿಳಿಯಲಿದೆ.












Click it and Unblock the Notifications