BBK 12: ಇಬ್ಬರ ಎಲಿಮಿನೇಷನ್ ಶಾಕ್ ಕೊಟ್ಟ ಬಿಗ್‌ಬಾಸ್, ಹೊರಬಂದಿದ್ದು ಯಾರು?
ಬಿಗ್‌ಬಾಸ್‌ನಲ್ಲಿ ವೀಕೆಂಡ್ ಮುಗಿಯುತ್ತಿದ್ದಂತೆ ಎಲಿಮಿನೇಷನ್ ಪ್ರಕ್ರಿಯೆ ಮುಗಿದು ಒಬ್ಬೊಬ್ಬರಾಗಿ ತಮ್ಮ ಜರ್ನಿಗೆ ವಿದಾಯ ಹೇಳುವುದು ವಾಡಿಕೆ. ಆದರೆ ಈ ವಾರ ಬಿಗ್‌ಬಾಸ್‌ನಲ್ಲಿ ಪ್ರಬಲ ಸ್ಪರ್ಧಿಗಳು ಎನಿಸಿಕೊಂಡಿದ್ದ ಇಬ್ಬರನ್ನು ಮನೆಯಿಂದ ಹೊರಗೆ ಕಳಿಸಿ ಶಾಕ್ ನೀಡಲಾಗಿದೆ. ಈಗ ಮನೆಯಲ್ಲಿ ಉಳಿದಿರುವವರು ಇದನ್ನು ನಿಜವಾದ ಎಲಿಮಿನೇಷನ್ ಎಂದೇ ಭಾವಿಸಿದ್ದಾರೆ. ಆದರೆ ಟ್ವಿಸ್ಟ್ ಇರೋದು ಇಲ್ಲೇ...ಬಿಗ್‌ಬಾಸ್ ಈ ಬಾರಿ ಇಬ್ಬರನ್ನು ಮನೆಯಿಂದ ಹೊರಗೆ ಕಳಿಸುವುದಾಗಿ ಹೇಳಿ, ಸೈಲೆಂಟಾಗಿ ಅವರನ್ನು ಸೀಕ್ರೇಟ್ ರೂಂನಲ್ಲಿ ಇಟ್ಟಿದೆ.
ಒಟ್ಟಿನಲ್ಲಿ ಈ ವಾರ ಯಾರಾದರೂ ಒಬ್ಬರಂತೂ ಎಲಿಮಿನೇಟ್ ಆಗೋದು ಪಕ್ಕಾ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕಿಚ್ಚ ಸುದೀಪ್ ವೀಕೆಂಡ್ ಶಾಕ್ ಕೊಟ್ಟರು. ಈ ವಾರ ಮನೆಯಿಂದ ಹೊರ ಹೋಗುವುದು ಒಬ್ಬರಲ್ಲ, ಬದಲಾಗಿ ಇಬ್ಬರು ಎಂದು ಘೋಷಿಸಿದರು. ಇದರಿಂದ ಕಂಗಾಲಾದ ಸ್ಪರ್ಧಿಗಳು ನಮ್ ಕಥೆ ಮುಗೀತು ಅಂದುಕೊಂಡಿದ್ರು. ಆದ್ರೆ, ಅಂತಿಮವಾಗಿ ಮೂವರನ್ನು ಆಯ್ಕೆ ಮಾಡಲಾಯಿತು. ರಜತ್, ಧ್ರುವಂತ್ ಹಾಗು ರಕ್ಷಿತಾ ಶೆಟ್ಟಿ ಇವರಲ್ಲಿ ಇಬ್ಬರು ಇಲ್ಲಿಗೆ ಆಟ ಮುಗಿಸುತ್ತಾರೆ ಎಂದು ಸುದೀಪ್ ಹೇಳಿದ್ರು.

ಕೊನೆಯದಾಗಿ ರಜತ್ ನೀವು ಸೇಫ್ ಎಂದು ಘೋಷಿಸಿ, ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿಯನ್ನ ಮನೆಯಿಂದ ಹೊರಗೆ ಕಳುಹಿಸಲಾಯಿತು. ಸಹಜವಾಗಿ ಎಲಿಮಿನೇಟ್ ಆದವರನ್ನು ಕಳಿಸಿದಂತೆಯೇ ಅವರನ್ನು ಮುಖ್ಯದ್ವಾರದಿಂದ ಕಳಿಸಲಾಯಿತು. ಈ ವೇಳೆ ಸೇಫ್ ಆದ ಸ್ಪರ್ಧಿಗಳೆಲ್ಲ ಕಣ್ಣೀರಿಟ್ಟರು, ನಮ್ಮೊಂದಿಗೆ ಇದ್ದ ಇಬ್ಬರು ಹೊರಗೆ ಹೋದ್ರಲ್ಲ ಅಂತ ಬೇಸರಗೊಂಡರು. ಆದ್ರೆ ಅಸಲಿಗೆ ಧ್ರುವಂತ್ ಹಾಗೂ ರಕ್ಷಿತಾ ಬಿಗ್‌ಬಾಸ್ ಮನೆಯಿಂದ ಹೊರಬಂದಿಲ್ಲ.
ಸೀಕ್ರೇಟ್ ರೂಂ ಟ್ವಿಸ್ಟ್
ರಕ್ಷಿತಾ ಶೆಟ್ಟಿಯನ್ನು ಬಿಗ್‌ಬಾಸ್ ಶುರುವಾದ ಒಂದೇ ದಿನಕ್ಕೆ ಮನೆಗೆ ವಾಪಸ್ ಕಳಿಸುವ ಟ್ವಿಸ್ಟ್ ನೀಡಿ ಸೀಕ್ರೇಟ್ ರೂಂನಲ್ಲಿ ಇರಿಸಲಾಗಿತ್ತು. ಇದನ್ನು ಸ್ಪರ್ಧಿಗಳು ಊಹಿಸಿರಲಿಲ್ಲ. ಈಗಲೂ ಅದೇ ಆಟ ಮುಂದುವರಿದಿದ್ದು, ಧ್ರುವಂತ್ ಹಾಗೂ ರಕ್ಷಿತಾ ಅವರನ್ನು ಸೀಕ್ರೇಟ್ ರೂಂನಲ್ಲಿ ಇರಿಸಲಾಗಿದೆ. ಅಲ್ಲದೇ ಧ್ರುವಂತ್ ಹಾಗೂ ರಕ್ಷಿತಾ ಬಗ್ಗೆ ಉಳಿದ ಸ್ಪರ್ಧಿಗಳು ಏನೆಲ್ಲ ಮಾತನಾಡಿಕೊಂಡರು ಎಂದು ಸ್ವತಃ ಅವರಿಗೇ ಕೇಳುವ ಅವಕಾಶ ನೀಡಲಾಗಿದೆ. ನಿರೀಕ್ಷೆಯಂತೆ ಉಳಿದವರು ಈ ಇಬ್ಬರ ಬಗ್ಗೆ ಮಾತನಾಡಿಕೊಂಡಿದ್ದಾರೆ. ಈ ವೇಳೆ ಕೆಲವರು ಅಸಲಿ ಮುಖವಾಡ ಕಳಚಿದ್ದನ್ನು ನೋಡಿ ರಕ್ಷಿತಾ-ಧ್ರುವಂತ್ ದಂಗಾಗಿದ್ದಾರೆ.
ರಕ್ಷಿತಾ ಹೋಗುವಾಗ ಪ್ರತಿಯೊಬ್ಬರ ಕಣ್ಣಲ್ಲೂ ನೀರಿತ್ತು, ಆದ್ರೆ ಧ್ರುವಂತ್‌ನ ಯಾರೂ ಮಾತನಾಡಿಸಲಿಲ್ಲ ಎಂದು ರಜತ್ ಹೇಳಿರುವುದು ಪ್ರೋಮೋದಲ್ಲಿದೆ. ಇದನ್ನು ಕೇಳಿ ರಕ್ಷಿತಾ ನನ್ನ ಜನ ನನ್ನ ಬಿಟ್ಟುಕೊಡಲಿಲ್ಲ ಎಂದು ಖುಷ್ ಆಗಿದ್ದಾರೆ. ರಕ್ಷಿತಾ ತುಂಬಾ ಕನ್ಫ್ಯೂಸ್‌ನಲ್ಲೇ ಇರುತ್ತಿದ್ದಳು ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಬಳಿಕ ಧ್ರುವಂತ್ ಇಡೀ ಮನೆಯಲ್ಲಿ ನಿನ್ನ ನಾಟಕ ನೋಡಿಕೊಂಡು ಬಂದಿದ್ದೀನಿ ಎಂದಿದ್ದು, ಅಯ್ಯೋ ದೇವರೇ ನಿಮ್ಮೊಂದಿಗೆ ನಾನು ಒಂದೇ ರೂಂನಲ್ಲಿ ಹೇಗಿರೋದು ಅಂತ ರಕ್ಷಿತಾ ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications