Bigg Boss 12: ಜಾಹ್ನವಿ ತರ ಕಾಣೋ ಆಂಟಿಗಳು ಇಷ್ಟ: ಅಭಿಷೇಕ್‌ ವಿಡಿಯೋ ವೈರಲ್

ಬಿಗ್‌ಬಾಸ್‌ ಮನೆ ಅಂದಾಕ್ಷಣ ತರ್ಲೆ, ಹರಟೆ ಮಾತುಗಳಿಗೇನು ಕಡಿಮೆ ಇರೋದಿಲ್ಲ. ಪ್ರತಿ ಸೀಸನ್‌ನಲ್ಲೂ ಇಂತಹ ಪ್ರತಿಭೆಗಳು ಇದ್ದೇ ಇರ್ತಾರೆ. ಇಂತವರಿದ್ದರೆ ಟ್ರೋಲ್‌ ಪೇಜ್‌ಗಳಿಗೆ ಕೂಡ ಹಬ್ಬ. ಕಂಟೆಂಟ್‌ ಸಿಕ್ಕರೆ ಸಾಕು ಅಂತ ಕಾದಿರುತ್ತಾರೆ. ಬಿಗ್‌ಬಾಸ್‌ ಮನೆಯ ಅಂತಹ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್‌ ಹಾಗೂ ಟ್ರೋಲ್‌ ಆಗುತ್ತಿದೆ. ಬಿಗ್‌ಬಾಸ್‌ ಸೀಸನ್‌ 12ರ (Bigg Boss Kannada 12) ಸ್ಪರ್ಧಿಗಳಾಗಿರುವ ಜಾಹ್ನವಿ ಹಾಗೂ ಅಭಿಷೇಕ್‌ ಶ್ರೀಕಾಂತ್‌ ನಡುವೆ ನಡೆದಿರುವ "ಆಂಟಿ ಲವ್ವರ್‌" ಮಾತುಕತೆ ಪಡ್ಡೆಹುಡುಗರ ಗಮನ ಸೆಳೆಯುತ್ತಿದೆ. ಅಭಿಷೇಕ್‌ ನೇರವಾಗಿ ನಿಮ್ಮಂತ ಆಂಟಿ ಅಂದ್ರೆ ನನಗೆ ಇಷ್ಟ ಎಂದು ಹೇಳಿದ್ದಾರೆ.

ಹೌದು, ಟಾಸ್ಕ್‌ ಬದಿಗಿಟ್ಟು ತಮಾಷೆಯ ಮಾತುಗಳಿಗೆ ಜಾರಿರುವ ಜಾಹ್ನವಿ ಹಾಗೂ ಅಭಿಷೇಕ್‌ ಅವರು ತಮ್ಮ ವಯಸ್ಸಿನ ಬಗ್ಗೆ ಚರ್ಚೆ ಶುರು ಮಾಡಿದ್ದು, ಇದು ಕೊನೆಗೆ ಆಂಟಿ ಲವ್ವರ್‌ ಹಂತದವರೆಗೆ ತಲುಪಿದೆ.‌ ಆರಂಭದಲ್ಲಿ ಅಭಿಷೇಕ್ 'ನಿನ್ನಿಂದಲೇ..' ಹಾಡು ಹಾಡುತ್ತಿದ್ದರು. ಆಗ ನೀವು ನನ್ನಂತೆ ಎಷ್ಟು ಜನರಿಗೆ ಇದೇ ರೀತಿ ಹಾಡು ಹಾಡಿದ್ದೀರಿ? ಎಂದು ಜಾಹ್ನವಿ ಕೇಳಿದರು. ಇದು ನಿಮಗಾಗಿ ಮಾತ್ರ ಹೇಳೋದು ಎಂದು ಅಭಿಷೇಕ್ ಫ್ಲರ್ಟ್‌ ಮಾಡಿದ್ದಾರೆ.

Bigg Boss Kannada 12 Abhishek Calls Jhanvi Aunty Lover Viral Video Trolls

ನೀವು ಆಂಟಿ ಲವ್ವರ್‌ರಾ?

ಮೊದಲಿಗೆ ತಮ್ಮ ವಯಸ್ಸಿನ ಬಗ್ಗೆ ಮಾತು ಶುರು ಮಾಡಿರುವ ಜಾಹ್ನವಿ, 'ನಿಮಗಿಂತ ನಾನು ಹತ್ತು ವರ್ಷ ದೊಡ್ಡವಳು. ನಿಮಗೆ ದೊಡ್ಡವರು ಅಂದ್ರೆ ಇಷ್ಟವೇ? ನೀವು ಆಂಟಿ ಲವ್ವರ್ರಾ? ಎಂದು ಅಭಿಷೇಕ್‌ಗೆ ಕೇಳಿದ್ದಾರೆ. ಆಗ ಮಾತಿಗಿಳಿದ ಅಭಿಷೇಕ್‌, ಹಾಗಾದರೆ ನಿಮ್ಮನ್ನು ನೀವು ಆಂಟಿ ಎನ್ನುತ್ತಿರುವಿರೇ? ಎಂದು ಕೇಳಿದ್ದಾರೆ. ನಾನು ಅನ್ನಲ್ಲ, ಸಾಮಾನ್ಯವಾಗಿ ಮದುವೆಯಾದವರನ್ನು ಆಂಟಿ ಅಂತಾರೆ ಎಂದಿದ್ದಾರೆ ಜಾಹ್ನವಿ. ನೀವು ಹಾಗೆ ಕಾಣ್ತಿಲ್ಲ ಎಂದಿದ್ದಕ್ಕೆ ನಾನು ಆ ರೀತಿ ಮೇಂಟೇನ್‌ ಮಾಡಿದ್ದೇನೆ' ಎಂದಿದ್ದಾರೆ.

'ನಿಮ್ಮ ರೀತಿ ಕಾಣೋ ಆಂಟಿಗಳಂದ್ರೆ ಇಷ್ಟ. ಅವರನ್ನ ಆಂಟಿಗಳು ಎಂದು ಭಾವಿಸುವುದಿಲ್ಲ. ಆದರೆ ಇಷ್ಟ ಎಂದು ಅಭಿಷೇಕ್‌ ಮಾತು ಮುಂದುವರಿಸಿದ್ದಾರೆ. ಯಾಕೆ ನಿಮಗೆ ನಿಮಗಿಂತ ದೊಡ್ಡವರು ಇಷ್ಟ ಆಗ್ತಾರೆ?' ಎಂದು ಕೇಳಿದಾಗ 'ಅವನಿಗೆ ಬೇರೆ ಆಪ್ಷನ್‌ ಇಲ್ಲ' ಎಂದು ಅಶ್ವಿನಿ ರೇಗಿಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಇದಕ್ಕಾ ಬಿಗ್‌ಬಾಸ್‌ ಮನೆಗೆ ಹೋಗಿದ್ದು? ಎಂದು ಟ್ರೋಲ್‌ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+