Bigg Boss Kannada 11: ಡ್ರೋನ್ ಆರ್ಮಿ ಬಿಗ್‌ಬಾಸ್‌ನ ಈ ಸ್ಪರ್ಧಿಗೇ ವೋಟ್ ಹಾಕಿ: ಡ್ರೋನ್ ಪ್ರತಾಪ್
ಬಿಗ್‌ಬಾಸ್ ಕನ್ನಡ ಸೀಸನ್ 11 ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಬಿಗ್‌ಬಾಸ್ ಫಿನಾಲೆ ಶನಿವಾರ ಹಾಗೂ ಭಾನುವಾರ ಜನವರಿ 25 ಹಾಗೂ ಜನವರಿ 26ಕ್ಕೆ ನಡೆಯಲಿದೆ. ಈ ಬಾರಿಯ ಸೀಸನ್ ಹಲವು ಕಾರಣಕ್ಕೆ ಕುತೂಹಲ ಪಡೆದುಕೊಂಡಿದೆ. ಇದೇ ಮೊದಲ ಬಾರಿ ಎನ್ನುವಂತೆ ವೈಲ್ಡ್ ಕಾರ್ಡ್‌ನ ಮೂಲಕ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟ ಹನುಮಂತ ಹಾಗೂ ರಜತ್ ಅವರು ಅಂತಿಮ ಕಣದಲ್ಲಿ ಇದ್ದಾರೆ. ಇವರೊಂದಿಗೆ ಮಂಜು, ಮೋಕ್ಷಿತಾ, ಭವ್ಯ ಹಾಗೂ ತ್ರಿವಿಕ್ರಮ್ ಅವರು ಬಿಗ್‌ಬಾಸ್ ಸೀಸನ್ 11 ಗೆಲ್ಲುವ ಕನಸು ಕಾಣುತ್ತಿದ್ದಾರೆ. ಈ ನಡುವೆ ಹಲವು ಸೆಲೆಬ್ರಿಟಿಗಳು, ಗಣ್ಯರು ಹಾಗೂ ಅಭಿಮಾನಿಗಳು ಅವರ ನೆಚ್ಚಿನ ಸ್ಪರ್ಧಿಗಳಿಗೆ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಸಹ ಬಿಗ್‌ಬಾಸ್ ಫಿನಾಲೆಯ ಪ್ರಮುಖ ಸ್ಪರ್ಧಿಯೊಬ್ಬರಿಗೆ ಬೆಂಬಲ ಸೂಚಿಸಿದ್ದಾರೆ. ಹಾಯ್.. ಡ್ರೋನ್ ಆರ್ಮಿ ಈ ಬಾರಿ ಇದೇ ಸ್ಪರ್ಧಿಗೆ ವೋಟ್ ಹಾಕಿ ಅಂತ ಹೇಳಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಗ್‌ಬಾಸ್ ಸೀಸನ್11ರ ವಿನ್ನರ್ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಇನ್ನೆರಡು ದಿನಗಳಲ್ಲಿ ಉತ್ತರ ಸಿಗಲಿದೆ. ಈ ನಡುವೆ ಹಲವು ಅಭಿಮಾನಿಗಳು ಅವರ ನೆಚ್ಚಿನ ಸ್ಪರ್ಧಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಈಗ ಕನ್ನಡ ಬಿಗ್‌ಬಾಸ್ ಸೀಸನ್ 10ರಲ್ಲಿ ಎರಡನೇ ಸ್ಥಾನ ಪಡೆದ ಡ್ರೋನ್ ಪ್ರತಾಪ್ ಅವರು ಈ ಬಾರಿಯ ಬಿಗ್‌ಬಾಸ್ ಸ್ಪರ್ಧಿ ಹನುಮಂತ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಡ್ರೋನ್ ಪ್ರತಾಪ್ ಅವರು ವಿಡಿಯೋ ಮಾಡಿ ಸಪೋರ್ಟ್ ಮಾಡಿದ್ದಾರೆ.

ಡಿಯರ್ ಡ್ರೋನ್ ಆರ್ಮಿ ಎಂದ ಪ್ರತಾಪ್...
ಕಳೆದ ಎರಡು ವಾರದಿಂದ ಸೈಲೆಂಟ್ ಆಗಿದ್ದ ಡ್ರೋನ್ ಪ್ರತಾಪ್ ಅವರು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು. ಈ ಬಾರಿಯ ಬಿಗ್‌ಬಾಸ್ ಸ್ಪರ್ಧಿ ಅವರಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಡಿಯರ್ ಡ್ರೋನ್ ಆರ್ಮಿ ಅಂತ ಹೇಳಿ ಎಲ್ಲರೂ ಹನುಮಂತ ಅವರಿಗೆ ಬೆಂಬಲ ಕೊಡಿ ಅಂತ ಹೇಳಿದ್ದಾರೆ. ಡ್ರೋನ್ ಪ್ರತಾಪ್ ಅವರು ವಿಡಿಯೋದಲ್ಲಿ ಹೇಳಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಾಯ್ ಡ್ರೋನ್ ಆರ್ಮಿ ಅಂತ ಮಾತು ಪ್ರಾರಂಭಿಸಿರುವ ಡ್ರೋನ್ ಪ್ರತಾಪ್ ಅವರು, ಎಲ್ಲರಿಗೂ ನಮಸ್ಕಾರ ಈ ಬಾರಿ ನನಗೆ ಬಿಗ್‌ಬಾಸ್‌ನಲ್ಲಿ ಇಷ್ಟವಾಗಿರುವ ಸ್ಪರ್ಧಿ ಹನುಮಂತ. ಈ ಬಾರಿಯ ಬಿಗ್‌ಬಾಸ್‌ನಲ್ಲಿ ಹನುಮಂತ ಅವರು ಗೆಲ್ಲಬೇಕು, ಗೆದ್ದೇಗೆಲ್ಲುತ್ತಾರೆ.

ನಮ್ಮ ಡ್ರೋನ್ ಆರ್ಮಿಯ ಎಲ್ಲಾ ವೋಟ್‌ಗಳನ್ನು ಬಿಗ್‌ಬಾಸ್ ಸ್ಪರ್ಧಿ ಹನುಮಂತ ಅವರಿಗೇ ಹಾಕಿ. ಫೋನ್‌ಗಳನ್ನ ಕುಟ್ಟಿ ಪುಡಿ.. ಪುಡಿ ಮಾಡಿ (ಹೆಚ್ಚು ಮತ ಹಾಕಿ) ಎಂದಿದ್ದಾರೆ. ಮುಂದುವರಿದು ವೋಟಿಂಗ್ ಲೈನ್ಸ್ ಮುಗಿಯುವುದರ ಒಳಗಾಗಿ ಎಲ್ಲರೂ ವೋಟ್ ಮಾಡಿ ಅವರನ್ನು ಗೆಲ್ಲಿಸೋಣ. ಹನುಮಂತ ಅವರಿಗೆ ಒಳ್ಳೆಯದಾಗಲಿ, ಬಡವರ ಮಕ್ಕಳು ಬೆಳೆಯಬೇಕು. ಕೊನೆಯದಾಗಿ ವೋಟಿಂಗ್ ಪ್ರಕಾರವಾಗಿ ಏನದಾರೂ ಹೋದರೆ ಹನುಮಂತ ಅವರೇ ಗೆಲ್ಲುತ್ತಾರೆ ಎಂದಿದ್ದಾರೆ.
ಇಂದಿನಿಂದ ಬಿಗ್‌ಬಾಸ್ ಫಿನಾಲೆ ಪ್ರಾರಂಭವಾಗುತ್ತಿದೆ.












Click it and Unblock the Notifications