Bigg Boss: ಗೌತಮಿ ನಂಬುವ ದೇವರು ಯಾರೆಂದು ಹೇಳಿದ ಪತಿ ಅಭಿಷೇಕ್
ಬಿಗ್‌ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಗೌತಮಿ ಜಾದವ್ ಅವರು ಅಪಾರ ದೈವ ಭಕ್ತೆ. ಪ್ರತಿಯೊಂದು ಆಟವನ್ನು ಶುರು ಮಾಡುವಾಗ ಹಾಗೂ ಆಡುವಾಗ ತಾವು ಪೂಜಿಸುವ ಹಾಗೂ ನಂಬುವ ದೇವರನ್ನು ಮನದಲ್ಲಿ ನೆನಪಿಸಿಕೊಳ್ಳುತ್ತಾರೆ. ಜೊತೆಗೆ ಮಂತ್ರಗಳನ್ನು ಪಠಿಸುತ್ತಾರೆ. ಹೀಗೆ ಮನೆಯಲ್ಲಿ ಗಟ್ಟಿಯಾಗಿ ಉಳಿಯಲು ಗೌತಮಿ ಅವರಿಗೆ ಶಕ್ತಿಯಾಗಿದ್ದು ಅವರು ಪೂಜಿಸುವ ದೇವರು. ಹಾಗಾದರೆ ಗೌತಮಿ ಪೂಜಿಸುವ ದೇವರು ಯಾರು? ಅವರು ಬಿಗ್‌ಬಾಸ್ ಮನೆಯಲ್ಲಿ ಆಡುವಾಗ ನೆನಪಿಸಿಕೊಳ್ಳುವ ಆ ದೈವ ಯಾವುದು? ಈ ಪ್ರಶ್ನೆಗೆ ಉತ್ತರ ಗೌತಮಿ ಪತಿ ಅಭಿಷೇಕ್ ಅವರಿಂದ ಸಿಕ್ಕಿದೆ.
ಹೌದು... ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಗೌತಮಿ ಜಾದವ್ ಈವರೆಗೂ ಚೆನ್ನಾಗಿ ಆಟ ಆಡಿಕೊಂಡು ಬಂದಿದ್ದಾರೆ. ನಟಿ ಗೌತಮಿ ಜಾದವ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಅವರ ಅದೃಷ್ಟ ಬದಲಾಗಿದೆ. ಅವರು ಆಡುವ ಆಟದಲ್ಲಿ, ಅವರೊಂದಿಗೆ ಇರುವ ಸ್ನೇಹಿತರ ಬಳಗದಲ್ಲಿ, ಅವರ ಬಗ್ಗೆ ಜನರಿಗೆ ಇರುವ ಅಭಿಪ್ರಾಯವೂ ಬದಲಾಗಿದೆ. ಇದಕ್ಕೆ ಕಾರಣ ಗೌತಮಿ ಅವರು ಅಘಾದವಾಗಿ ನಂಬಿರುವ ದೇವರು. ಗೌತಮಿ ಅವರನ್ನು 100 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಉಳಿಸಿದ್ದು ಕೂಡ ಗೌತಮಿ ನಂಬುವ ದೈವ ಶಕ್ತಿಯ ಆಶೀರ್ವಾದ.

ಇಂದು ಗೌತಮಿ ಪತಿ ಅಭಿಷೇಕ್ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಗೌತಮಿಗೆ ಓಟ್ ಮಾಡಿದ ಪ್ರತಿಯೊಬ್ಬರಿಗೂ ಅಭಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಓಟ್ ಮಾಡುವುದು ಎಷ್ಟು ಕಷ್ಟ ಅನ್ನೋದನ್ನೂ ಕೂಡ ಅಭಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಹಾಗಾದರೆ ಅಭಿ ಹೇಳಿದ್ದೇನು?
ಗೌತಮಿ ನಂಬುವ ದೇವರು ಯಾರೆಂದು ಹೇಳಿದ ಪತಿ ಅಭಿಷೇಕ್
ಅಭಿಷೇಕ್ ಅವರು ಹಂಚಿಕೊಂಡಿರುವ ವೀಡಿಯೋದಲ್ಲಿ, 'ಗೌತಮಿ ಅವರಿಗೆ ಮತ ನೀಡಿ ಇಲ್ಲಿಯವರೆಗೂ ಬಿಗ್‌ಬಾಸ್ ಮನೆಯಲ್ಲಿ ಉಳಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳನ್ನ ತಿಳಿಸುತ್ತೇನೆ. ಓಟ್ ಮಾಡುವುದು ಎಷ್ಟು ಕಷ್ಟ ಅನ್ನೋದು ನನಗೆ ಗೊತ್ತು. ಅದನ್ನು ಸ್ಕ್ರೋಲ್ ಮಾಡಿ ಕೆಳಗೆ ಹೋಗಿ 99 ಬಾರಿ ಒತ್ತಬೇಕು. ಇಷ್ಟೊಂದು ಸಮಯಯವನ್ನು ಕೊಟ್ಟು ಜನ ಓಟ್ ಮಾಡುತ್ತಿದ್ದಾರೆ. ಈ ವಾರ ಅವಳನ್ನು ಸೇವ್ ಮಾಡೋದು ತುಂಬಾನೇ ಮುಖ್ಯ. ಅವಳು ಮನಸ್ಸಿಂದ ಆಡಿ ಯಾರಿಗೂ ನೋವಾಗದಂತೆ ಆಡ್ಬೇಕು ಅಂತ ತಲೆಯಲ್ಲಿ ಇಟ್ಕೊಂಡು ಹೋಗಿದ್ಲು. ಅದೇ ರೀತಿ ಆಡುತ್ತಿದ್ದಾಳೆ. ಈಗ ನಾವು ಅವಳಿಗೆ ಆದಷ್ಟು ಓಟ್ ಮಾಡಬೇಕು. ಹೀಗಾಗಿ ಈ ವಾರ ಆದಷ್ಟು ಓಟ್ ಮಾಡೋಣ. ಸೇವ್ ಮಾಡೋಣ. ವನದುರ್ಗಮ್ಮ ಅವಳಿಗೆ ಏನ್ ಸಿಗಬೇಕೋ ಅದನ್ನು ಸಿಗೋ ತರ ಮಾಡ್ತಾರೆ ಅನ್ನೋ ನಂಬಿಕೆ ನನಗೆ ಇದೆ' ಎಂದು ಹೇಳಿದ್ದಾರೆ.
ಗೌತಮಿ ಅವರು ಬಿಗ್‌ಬಾಸ್ ಮನೆಯಲ್ಲಿ ಈವರೆಗೂ ಉಳಿದಿರುವುದಕ್ಕೆ ನವದುರ್ಗಮ್ಮ ಅವರ ಶಕ್ತಿ ಹಾಗೂ ಆಶೀರ್ವಾದ ಕಾರಣ ಎಂದು ಗೌತಮಿ ನಂಬುತ್ತಾರೆ. ಅಷ್ಟೇ ಅಲ್ಲ ಭಕ್ತಿಯಿಂದ ಆಕೆಯನ್ನು ನೆನೆದರೆ ಯಾವೆಲ್ಲಾ ಪವಾಡ ನಡೆಯಬಹುದು ಅನ್ನೋದಕ್ಕೆ ಸಾಕ್ಷಿ ಗೌತಮಿ ಕ್ಯಾಪ್ಟನ್ ಆಗಿದ್ದು. ಕ್ಯಾಪ್ಟನ್ ಓಟದಲ್ಲಿ ಇಲ್ಲದ ಗೌತಮಿ ಪವಾಡ ಎಂಬತ್ತೆ ಕ್ಯಾಪ್ಟನ್ ಆಗಿದ್ದರು.
ಕ್ಯಾಪ್ಟನ್ ಟಾಸ್ಕ್ ಆಡುವಾಗ ವನದುರ್ಗಾಮ್ಮ ದೇವಿಯನ್ನು ಮನದಲ್ಲಿ ನೆನೆದು ಗೌತಮಿ ಆಟ ಆಡಿದ್ದರು. ಆಟ ಆಡುವ ಅಷ್ಟು ಸಮಯ ದೇವಿಯನ್ನು ನೆನೆಯುತ್ತಲೇ ಇದ್ದರು. ಬಳಿಕ ಅವರು ಟಾಸ್ಕ್ ಪೂರ್ಣಗೊಳಿಸಿ ಕ್ಯಾಪ್ಟನ್ ಆಗಿದ್ದರು. ಇದು ನಿಜಕ್ಕೂ ಪವಾಡ ಎಂಬಂತೆ ನಡೆದಿದೆ. ಅಲ್ಲದೆ ಗೌತಮಿ ಅವರಿಗೆ ವನದುರ್ಗಮ್ಮನ ಮೇಲೆ ನಂಬಿಕೆ ಕೂಡ ಹೆಚ್ಚಾಗಿದೆ. ಪ್ರಸ್ತುತ ಇದೇ ದೇವರನ್ನ ನೆನೆಯುವ ಮೂಲಕ ಅಭಿಷೇಕ್ ಮಾತನಾಡಿದ್ದಾರೆ.
ವಿಡ್ ವೀಕ್ ಎಲಿಮಿನೇಷನ್‌ನಿಂದ ಗೌತಮಿ ಗ್ರೇಟ್ ಎಸ್ಕೇಪ್
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಮಿಡ್ ವೀಕ್ ಎಲಿಮಿನೇಷನ್ ಈವರೆಗೂ ಆಗಿಲ್ಲ. ಆದರೆ ಈ ವಾರ ಆಗುತ್ತೆ ಎಂದು ವೀಕ್ಷಕರು ಭಾವಿಸಿದ್ದರು. ಆದರೆ ಗುರುವಾರ ರಾತ್ರಿ ಎಪಿಸೋಡ್‌ವರೆಗೂ ಮಿಡ್ ವೀಕ್ ಎಲಿಮಿನೇಷನ್ ಆಗಿಲ್ಲ. ಶುಕ್ರವಾರ ಆಗುತ್ತಾ ಇಲ್ವಾ ಎನ್ನುವ ಬಗ್ಗೆ ನಿಖರತೆ ಇಲ್ಲ.
ಈ ವಾರ ಮಿಡ್ ವೀಕ್ ಎಲಿಮಿನೇಷನ್ ಆದರೆ ಗೌತಮಿ ಜಾದವ್ ಅಥವಾ ಭವ್ಯಾ ಗೌಡ ಮನೆಯಿಂದ ಹೊರ ಹೋಗುತ್ತಾರೆ ಎಂದು ಅಂದುಕೊಳ್ಳಲಾಗಿತ್ತು. ಆದರೆ ಈ ವಾರ ಎಮಿನೇಟ್ ಆಗಿ ಮನೆಯಿಂದ ಯಾರೂ ಕೂಡ ಹೊರಬಂದಿಲ್ಲ. ಹೀಗಾಗಿ ಗೌತಮಿ ಅವರು ಟಾಪ್ 5ಗೆ ಹೋಗುತ್ತಾರಾ ಅಥವಾ ಇಲ್ವಾ ಎನ್ನುವ ಕೂತೂಹಲ ವೀಕ್ಷಕರಿಗೆ ಹೆಚ್ಚಾಗಿದೆ.












Click it and Unblock the Notifications