Bigg Boss Kannada: ದೊಡ್ಮನೆಗೆ ದೊಡ್ಡ ಫ್ಯಾಮಿಲಿ ಎಂಟ್ರಿ- ಧನ್‌ರಾಜ್‌ ಕೆನ್ನೆಗೆ ಬಾರಿಸಿದ ಪತ್ನಿ

ಬಿಗ್‌ಬಾಸ್‌ ಮನೆಗೆ ಪ್ರಸ್ತುತ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಮನೆಯ ಎಲ್ಲಾ ಸದಸ್ಯರು ಖುಷಿಯಾಗಿದ್ದು ಆಡುವ ಉತ್ಸಾಹ ಹೆಚ್ಚಾಗಿದೆ. ಇನ್ನು ಇಂದು ಕಲರ್ಸ್‌ ಕನ್ನಡ ಹಂಚಿಕೊಂಡ ವೀಡಿಯೋದಲ್ಲಿ ಬಿಗ್‌ಬಾಸ್‌ ಮನೆಗೆ ದೊಡ್ಡ ಕುಟುಂಬವೊಂದು ಆಗಮಿಸಿದೆ. ಇದನ್ನು ಕಂಡು ಧನ್‌ರಾಜ್‌ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಹೌದು.. ಬಿಗ್‌ಬಾಸ್‌ ಮನೆಗೆ ಧನ್‌ರಾಜ್‌ ಅವರ ದೊಡ್ಡ ಕುಟುಂಬ ಆಗಮಿಸಿದ್ದು ಧನ್‌ರಾಜ್‌ ಅವರ ಸಂತೋಷಕ್ಕೆ ಮಿತಿಯೇ ಇಲ್ಲದಿರುವುದು ಕಂಡು ಬಂದಿದೆ. ಪುಟ್ಟ ಮಕ್ಕಳಂತೆ ಧನ್‌ರಾಜ್ ಕುಣಿದು ಕುಪ್ಪಳಿಸಿದ್ದಾರೆ. ವಿಶೇಷವಾಗಿ ಈ ಬಾರಿ ದೊಡ್ಮನೆಗೆ ಪುಟ್ಟದೊಂದು ಅತಿಥಿ ಆಗಮಿಸಿದ್ದು ಮನೆ ಮಂದಿಯೆಲ್ಲಾ ಸಖತ್ ಎಂಜಾಯ್ ಮಾಡಿದ್ದಾರೆ. ಜೊತೆಗೆ ಧನ್‌ರಾಜ್ ಅವರಿಗೆ ಪತ್ನಿ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.

bigg boss dhanraj achar large family has entered the bigg boss house

ಧನ್‌ರಾಜ್‌ ಕೆನ್ನೆಗೆ ಬಾರಿಸಿದ ಪತ್ನಿ

ಧನ್‌ರಾಜ್ ಅಚಾರ್ ಪತ್ನಿ ಪ್ರಜ್ಞಾ ಬಿಗ್‌ಬಾಸ್‌ ಮನೆಗೆ ಮೊದಲು ಎಂಟ್ರಿ ಕೊಟ್ಟರು. ಈ ವೇಳೆ ಬಿಗ್‌ಬಾಸ್ ಆದೇಶದಂತೆ ಯಾರೂ ಕೂಡ ಅಲುಗಾಡದೇ ನಿಲ್ಲುತ್ತಾರೆ. ಆಗ ಮನೆ ಒಳಗೆ ಬಂದ ಧನ್‌ರಾಜ್‌ ಪತ್ನಿ ಪ್ರಜ್ಞಾ ಅವರು ಧನ್‌ರಾಜ್ ಅವರಿಗೆ ಹೊಡೆಯುತ್ತಾ 'ಐಶ್ವರ್ಯ ಅವರಿಗೆ ಲೈನ್ ಹೊಡೆದ್ರಾ ನೀವು' ಅಂತ ಕೇಳಿ ಕೇಳಿ ಹೊಡೆದಿದ್ದಾರೆ. ಮುಖ ಮೈ ಎನ್ನದೆ ಸರಿಯಾಗೇ ಪ್ರಜ್ಞಾ ಬಾರಿಸಿದ್ದಾರೆ.

ಬಳಿಕ ಧನ್‌ರಾಜ್ ಅವರ ಪುಟ್ಟ ಮಗುವಿನ ಫೋಟೋವನ್ನು ಟಿವಿ ಪರದೆಯ ಮೇಲೆ ತೋರಿಸಲಾಗುತ್ತದೆ. ಇದರಿಂದ ಭಾವುಕರಾದ ಧನ್‌ರಾಜ್ ಮಗುವನ್ನು ಎತ್ತಿ ಆಡಿಸಲು ಅವಕಾಶ ನೀಡುವಂತೆ ಮನವಿ ಮಾಡುತ್ತಾರೆ. ಆಗ ಬಿಗ್‌ಬಾಸ್‌ ಮನೆಗೆ ಧನ್‌ರಾಜ್ ಅವರ ಪುಟ್ಟ ಮಗು ತೊಟ್ಟಿಲಲ್ಲಿ ಬರುತ್ತದೆ. ಮಗುವನ್ನು ನೋಡಿದ ಧನ್‌ರಾಜ್ ಅವರ ಖುಷಿಗೆ ಪಾರವೇ ಇರಲಿಲ್ಲ. ಮಗುವನ್ನು ಎತ್ತಿ ಮುದ್ದಾಡಿ ತುಂಬಾ ಖುಷಿ ಪಡುತ್ತಾರೆ.

bigg boss dhanraj achar large family has entered the bigg boss house

ಇದಾದ ಬಳಿಕ ಧನ್‌ರಾಜ್‌ ಅವರಿಗೆ ಮತ್ತೊಂದು ಸರ್ಪೈಸ್ ಅನ್ನು ಬಿಗ್‌ಬಾಸ್‌ ನೀಡಿದ್ದಾರೆ. ಧನ್‌ರಾಜ್‌ ಅವರ ತುಂಬು ಕುಟುಂಬ ಬಿಗ್‌ಬಾಸ್‌ ಮನೆಗೆ ಆಗಮಿಸಿ ಎಲ್ಲರ ಯೋಗಕ್ಷೇಮ ವಿಚಾರಿಸುತ್ತದೆ. ಇದರಿಂದ ಧನ್‌ರಾಜ್ ತುಂಬಾನೇ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಜೊತೆಗೆ ಅವರೊಂದಿಗೆ ಕುಣಿದು ಕುಪ್ಪಳಿಸುತ್ತಾರೆ. ಇಂದಿನ ಸಂಚಿಕೆಯಲ್ಲಿ ಧನ್‌ರಾಜ್‌ ಕುಟುಂಬದಿಂದ ಯಾರೆಲ್ಲ ಬಂದಿದ್ದರು ಎನ್ನುವುದು ಸಂಪೂರ್ಣವಾಗಿ ಗೊತ್ತಾಗಲಿದೆ.

ಕೇಕ್‌ ತಂದ ಗೌತಮಿ ಪತಿ..

ಇನ್ನೂ ಬಿಗ್‌ಬಾಸ್‌ ಮನೆಗೆ ಗೌತಮಿ ಅವರ ಪತಿ ಕೂಡ ಆಗಮಿಸಿದ್ದರು. ಪತಿಯನ್ನು ಕಂಡ ಗೌತಮಿ ಕಣ್ಣೀರು ಹಾಕಿದರು. ಬಿಗ್‌ಬಾಸ್‌ ಮನೆಯಲ್ಲಿ ಈ ಜೋಡಿ ಆನಿವರ್ಸರಿಯನ್ನೂ ಆಚರಿಸಿಕೊಂಡಿದೆ. ಕೇಕ್ ಕತ್ತರಿಸಿ ಸಿಹಿ ಹಂಚಿಕೊಂಡಿದೆ. ನಂತರ ಗೌತಮಿ ಪತಿ ಅಭಿ ತಾವು ತಂದ ಗೆಜ್ಜೆಯನ್ನು ಗೌತಮಿ ಅವರ ಕಾಲಿಗೆ ಹಾಕುವ ಮೂಲಕ ವಿಶೇಷವಾಗಿ ಆನಿವರ್ಸರಿಯನ್ನು ಆಚರಿಸಿಕೊಂಡಿದ್ದಾರೆ.

ಇದಲ್ಲದೆ ಭವ್ಯಾ ಗೌಡ ಅವರ ತಾಯಿ, ತ್ರಿವಿಕ್ರಮ್ ಅವರ ತಾಯಿ, ಮಂಜು ಅವರ ತಂದೆ, ಮೋಕ್ಷಿತಾ ತಮ್ಮ ಹಾಗೂ ತಂದೆ-ತಾಯಿ, ರಜತ್‌ ಅವರ ಪತ್ನಿ ಹಾಗೂ ಮಕ್ಕಳು ಕೂಡ ಬಿಗ್‌ಬಾಸ್‌ ಮನೆಗೆ ಬಂದು ಹೋಗಿದ್ದಾರೆ. ಇನ್ನೇನು ಬಿಗ್‌ಬಾಸ್‌ ಮುಗಿಯುವ ಹಂತದಲ್ಲಿ ಇದ್ದು ಗ್ರ್ಯಾಂಡ್‌ ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ.

ಆದರೆ ಇನ್ನೂ ಕೂಡ ಚೈತ್ರಾ ಹಾಗೂ ಹನುಮಂತ ಅವರ ಕುಟುಂಬಸ್ಥರು ಬಿಗ್‌ಬಾಸ್‌ ಮನೆಗೆ ಬಂದಿಲ್ಲ. ಮುಂದಿನ ದಿನದಲ್ಲಿ ಅವರ ಪೋಷಕರು ಕೂಡ ಬರಲಿದ್ದಾರೆ. ಆದರೆ ಹನುಮಂತ ಮನೆಯಿಂದ ಯಾರು ಬರುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+