Mokshitha Pai: ಬಿಗ್ ಬಾಸ್ ಸ್ಪರ್ಧಿ ಮೋಕ್ಷಿತಾ ಪೈ ವಿಡಿಯೋ ಭಾರೀ ವೈರಲ್
Mokshitha Pai: ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭಾರೀ ಸದ್ದು ಮಾಡಿದ್ದ ಮಹಿಳಾ ಸ್ಪರ್ಧಿಗಳಲ್ಲಿ ಮೋಕ್ಷಿತಾ ಪೈ ಕೂಡ ಒಬ್ಬರಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವಾಗಲೇ ಅವರ ಮೇಲೆ ಇಲ್ಲಸಲ್ಲದ ಆರೋಪಗಳು ಬಂದಿದ್ದು, ಈ ಬಗ್ಗೆ ಹೊರಗಡೆ ಬಂದ ಮೇಲೆ ಸ್ಪಷ್ಟನೆಯನ್ನೂ ಕೂಡ ನೀಡಿದ್ದರು. ಇದರ ಬೆನ್ನಲ್ಲೇ ಅವರ ವಿಡಿಯೋವೊಂದು ಸಾಮಾಜಿ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಕನ್ನಡ 11 ಸೀಸನ್‌ನಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಇದಕ್ಕೂ ಮುಂಚೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟವರು ತುಂಬಾ ದಿನಗಳ ಕಾಲ ಉಳಿದುಕೊಳ್ಳದೇ, ಬೇಗನೇ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದರು. ಆದರೆ, ಈ ಬಾರಿ ಮಾತ್ರ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಸ್ಪರ್ಧಿಗಳಿಬ್ಬರು ಫೈನಲ್ ಹಂತದವರೆಗೂ ಬಂದಿದ್ದು, ಈ ಪೈಕಿ ಬಿಗ್ ಬಾಸ್ ವಿನ್ ಆಗಿ ಇತಿಹಾಸ ಸೃಷ್ಟಿಸಿದ್ದಾರೆ.

ಕುರಿಗಾಹಿ ಹನುಮಂತು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಆರಂಭದಲ್ಲಿ ಸೈಲೆಂಟ್ ಆಗಿ ಭಯಭೀತರಾಗಿರುವಂತೆ ಕಂಡುಬಂದಿತ್ತು. ಆದರೆ, ಒಂದು ವಾರ ಕಳೆಯುತ್ತಿದ್ದಂತೆ ತಾವಾಯ್ತು, ತಮಗೆ ಬಂದ ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಟ ಆಡುವುದನ್ನಷ್ಟೇ ಮುಂದುವರೆಸಿದ್ದರು. ದಿನ ಕಳೆಯುತ್ತಿದ್ದಂತೆ ಟಾಸ್ಟ್ ಜೊತೆ ಅವರು ಉತ್ತಮ ಮನರಂಜನೆ ನೀಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು.
ಯಾರೇನೇ ಅಂದುಕೊಳ್ಳಲಿ ನಾನಿರೋದೇ ಹೀಗೆ ಎಂದು ಎದುರೇಟು ಕೊಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು ಹನುಮಂತು. ಹೀಗೆ ಎಲ್ಲಾ ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಟ ಆಡುತ್ತಾ, ಮನರಂಜನೆ ಮಾಡುತ್ತಾ ಫೈನಲ್ ಪ್ರವೇಶಿಸಿ ಕಪ್ ಗೆದ್ದು ದಾಖಲೆ ಸೃಷ್ಟಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದುವರೆಗೂ ಇಂತಹ ದಾಖಲೆ ಆಗಿರೋದು ಇದೇ ಮೊದಲು.
ಇನ್ನು ಮೊದಲ ರನ್ನರ್ ಅಪ್ ತ್ರಿವಿಕ್ರಂ ಆದರೆ, ಮತ್ತೊಬ್ಬ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ರಜತ್ ಖಡಕ್ ಮಾತುಗಳ ಮೂಲಕವೇ ಕೊನೆಯವರೆಗೂ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡು 2ನೇ ರನ್ನರ್ ಅಪ್ ಆಗಿದ್ದರು. ಮೂರನೇ ರನ್ನರ್ ಆದವರೇ ಖಡಕ್, ನೇರ ಮಾತುಗಳ ಮೂಲಕ ಗುರುತಿಸಿಕೊಂಡಿದ್ದ ಮೋಕ್ಷಿತಾ.
ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿರುವಾಗ ಅವರ ಮೇಲೆ ಇಲ್ಲಸಲ್ಲದ ಆರೋಗಳು ಬಂದಿದ್ದವು. ಹೊರಗಡೆ ಬಂದ ಬಳಿಕ ಟೀಕೆ, ಆರೋಪ ಮಾಡಿದವರಿಗೆ ಸ್ಪಷ್ಟನೆ ನೀಡುವ ಮೂಲಕ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ದರು. ಇದರ ಬೆನ್ನಲ್ಲೇ ಅವರ ಭಾವನಾತ್ಮಕ, ಸರಳತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಸೀಸನ್ 11ರಲ್ಲಿ ಕಪ್ ಗೆಲ್ಲದಿದ್ದರೂ ಅಪಾರ ಮಂದಿ ಕನ್ನಡಿಗರ ಮನ ಗೆದ್ದವರಾಗಿದ್ದರು. 3ನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಮುಗಿದ ನಂತರವೂ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ತನ್ನ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ.
ಇದೀಗ ಮೋಕ್ಷಿತಾ ಪೈ ಮುಗ್ಧ ಮನಸ್ಸಿನ ಮಕ್ಕಳ ಜೊತೆ ಬೆರೆತು ಕಾಲ ಕಳೆದಿದ್ದಾರೆ. ವಿಶೇಷ ಚೇತನ ಮಕ್ಕಳನ್ನು ಭೇಟಿ ಮಾಡಿರುವ ಮೋಕ್ಷಿತಾ ಅವರು ಆ ವಿಡಿಯೋವನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಮುಗ್ಧ ಮನಸ್ಸಿನ ಮಕ್ಕಳು ದೇವರ ಸಮಾನ. ಅಂತ ಮಕ್ಕಳು ನನ್ನನ್ನು ಇಷ್ಟ ಪಡ್ತಾ ಇರೋದು ನನ್ನ ಪುಣ್ಯ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಹಾರ್ಟ್ ಸಿಂಬಲ್ ಇಟ್ಟು ಮಕ್ಕಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications