Actor Darshan: ದರ್ಶನ್‌ಗೆ ಸಹಾಯ ಮಾಡುವೆ, ಆದರೆ ಕಂಡಿಷನ್ಸ್ ಅಪ್ಲೈ: ಲಾಯರ್ ಜಗದೀಶ್
ಬೆಂಗಳೂರು, ಅಕ್ಟೋಬರ್ 29: ನಟ ದರ್ಶನ್ ತೂಗುದೀಪ ವಿಚಾರವಾಗಿ ಮಾತನಾಡಿ, ಪ್ರತಿಭಟನೆಗೂ ಕರೆ ನೀಡಿದ್ದ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಮತ್ತಷ್ಟು ವಿಚಾರಗಳಿಗಾಗಿ ಸುದ್ದಿಯಾಗಿದ್ದಾರೆ. ನಟ ದರ್ಶನ್ ಗೆ ಇನ್ನೂವರೆಗೂ ಜಾಮೀನು ಸಿಕ್ಕಿಲ್ಲ. ಇದೀಗ ದರ್ಶನ್ ಶತದಡ್ಡ ಎಂದಿದ್ದ ಲಾಯರ್ ಜಗದೀಶ್ ಅವರು ನಟನಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ದರ್ಶನ್‌ಗೆ ಒಂದಷ್ಟು ಕಂಡಿಷನ್ಸ್ ಹಾಕಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಕುರಿತು ಓಪನ್ ಆಗಿ ಮಾತನಾಡಿದ್ದ ಲಾಯರ್ ಜಗದೀಶ್ ಏನೇ ಮಾತನಾಡಿದರೂ ಸುದ್ದಿ ಆಗುತ್ತದೆ. ರಾಜಕಾರಣಗಳು ಹಾಗೂ ಡಿ.ಬಾಸ್ ವಿಚಾರವಾಗಿ ಮಾತನಾಡುತ್ತಿದ್ದಂತೆ ಮುನ್ನೆಲೆಗೆ ಬಂದು.

ಅದರಿಂದಲೇ ಅವರಿಗೆ ಬಿಗ್ ಬಾಸ್ ಹೋಗಲು ಅವಕಾಶ ಸಿಕ್ಕಿತು ಎನ್ನಲಾಗಿದೆ. ಇದೀಗ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು, ಜೈಲಿನಲ್ಲಿದ್ದು ಜಾಮೀನಿಗೆ ಪರದಾಡುತ್ತಿರುವ ನಟ ದರ್ಶನ್‌ಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರ ಹೇಳಿಕೆ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಸದ್ಯ ಬಿಗ್ ಬಾಸ್‌ನಿಂದ ಹೊರ ಬಂದಿರುವ ಲಾಯರ್ ಜಗದೀಶ್ ಅವರು ಮತ್ತೆ ನಟ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ನಾನು ಅವರಿಗೆ ಸಹಾಯ ಮಾಡುತ್ತೇನೆ ಆದರೆ ನಟ ಶೆಡ್‌ಗೆ ಹೋಗಬಾರದು ಎಂದು ಷರತ್ತು ವಿಧಿಸಿದ್ದಾರೆ. ಈ ಮಾತನ್ನು ಅವರು ಖಾಸಗಿ ಟಿವಿ ವಾಹಿನಿಯೊಂದರಲ್ಲಿ ತಿಳಿಸಿದ್ದು, ಆ ವಿಡಿಯೋ ತುಣುಕು ವೈರಲ್ ಆಗುತ್ತಿದೆ.
ದರ್ಶನ್ ಪರ ಹೋರಾಡುತ್ತಿರುವವ ನಾನೊಬ್ಬನೇ
ಈಗಾಗಲೇ ನಟ ದರ್ಶನ್ ವಿಚಾರವಾಗಿ ನಾನು ಸಾಕಷ್ಟು ಮಾತನಾಡಿದ್ದೇನೆ. ದರ್ಶನ್ ಕೇಸ್ ವಿಚಾರ ಬರುತ್ತಿದ್ದಂತೆ ಅವರಿಗೆ ಜಾಮೀನು ಸಿಗಬೇಕು. ನಾನು ಅವರ ಪರ ಪ್ರತಿಭಟನೆ, ಅಭಿಯಾನ ಮಾಡಿಸಿದೆ. ಬಿಗ್ ಬಾಸ್ ಬಳಿಕ ಹೊರಗಿದ್ದುಕೊಂಡು ಒಂದಷ್ಟು ಕೆಲಸ ಮಾಡುತ್ತಿರುವೇ. ಈಗಲೇ ನಾನು ನಟ ದರ್ಶನ್‌ಗೆ ಸಹಾಯ ಮಾಡಲು ಸಿದ್ಧ, ಆದರೆ ಅವರ ಮನೆಯವರು ಇನ್ನುವರೆಗೂ ನನ್ನ ಸಂಪರ್ಕಿಸಿಲ್ಲ ಎಂದು ಅವರು ಸಂದರ್ಶನ ವೇಳೆ ಮಾತನಾಡಿದ್ದಾರೆ.
ರೇಣುಕಾಸ್ವಾಮಿ ಪ್ರಕರಣ ಸಂಬಂಧ ದರ್ಶನ್ ವಿರುದ್ಧ ನಡೆದ ಪೊಲೀಸ್ ತನಿಖೆ ವಿರುದ್ಧ ಬಹಿರಂಗವಾಗಿ ಆಕ್ಷೇಪ ಎತ್ತಿರುವವನು ನಾನೊಬ್ಬನೇ. ಅವರಿಗೆ ನಾನು ಸಹಾಯ ಮಾಡುವೆ, ಅವರು ಮತ್ತೆ ಶೆಡ್ ಕಡೆಗೆ ಹೋಗಬಾರದು ಎಂದು ಮಾರ್ಮಿಕವಾಗಿ ಹೇಳಿದರು. ತಮ್ಮ ಮನೆಗೆ ಹೋಗಬೇಕು ಎಂದು ತಮ್ಮದೇ ಸ್ಟೈಲ್‌ನಲ್ಲಿ ತಿಳಿಸಿದ್ದಾರೆ.
ದರ್ಶನ್ ಪರ ನನ್ನ ಕೈಲಾದಷ್ಟು ನಾನು ಪ್ರಯತ್ನ ಮಾಡುತ್ತೇನೆ. ದರ್ಶನ್‌ಗೆ ಬೇಲ್ ಸಿಗಬೇಕು. ವಿಜಯಲಕ್ಷಮೀ ಅವರನ್ನು ನಾನು ಮರಳಿ ದರ್ಶನ್ ಜೊತೆಗೆ ನೋಡಬೇಕು. ಇದು ಅಭಿಮಾನಿಗಳು ಕಾತರವೂ ಹೌದು. ಸಂಜೆ ಆದರೆ, ಬೇರೆ ಮನೆಗೆ, ಅಪ್ಪಿ ತಪ್ಪಿ ಶೆಡ್ ಕಡೆಗೆ ಹೋಗುವುದು ಬೇಡ ಎಂದು ನೀವು ಹೇಳಿ ಎಂದು ನಗುಮೊಖದಲ್ಲಿಯೇ ಸಲಹೆ ನೀಡಿದರು. ಅವರ ಹೇಳಿಕೆಯ ವೈರಲ್ ಆಗುತ್ತಿದೆ. ಈ ಹಿಂದೆ ಪ್ರತಿಭಟನೆ ವೇಳೆ ಬರುವುದಾಗಿ ಹೇಳಿದ್ದ ಡಿ ಬಾಸ್ ಅಭಿಮಾನಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿಯೇ ಜಗದೀಶ್ ಪರವಾಗಿ ಧ್ವನಿ ಎತ್ತಿದ್ದಾರೆ.












Click it and Unblock the Notifications