Bigg Boss: ಭವ್ಯಾ ಗೌಡಳನ್ನು ಗೆಲ್ಲಿಸಿ- ಮತಯಾಚನೆ ಮಾಡಿದ ಕಿರುತೆರೆ ತಾರೆಯರು

ಬಿಗ್‌ಬಾಸ್‌ ಮನೆಯಲ್ಲಿ ಕೇವಲ ಆರು ಜನ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಅವರಲ್ಲಿ ಭವ್ಯಾ ಗೌಡ ಕೂಡ ಒಬ್ಬರು. ಭವ್ಯಾ ಬಿಗ್‌ಬಾಸ್‌ ಮನೆಗೆ ಆಗಮಿಸಿದಾಗಿನಿಂದಲೂ ತುಂಬಾ ಚೆನ್ನಾಗಿ ಆಡಿಕೊಂಡು ಬಂದಿದ್ದಾರೆ. ಹೀಗಾಗಿ ಅವರಿಗೆ ಓಟ್ ಮಾಡಿ ಅವರನ್ನು ಗೆಲ್ಲಿಸಿ ಎಂದು ಕಿರುತೆರೆಯ ಸ್ಟಾರ್‌ಗಳು ಮನವಿ ಮಾಡಿದ್ದಾರೆ. ಹಾಗಾದರೆ ಭವ್ಯಾ ಗೌಡಳನ್ನು ಗೆಲ್ಲಿಸಿ ಎಂದ ಕಿರುತೆರೆಯ ಸ್ಟಾರ್‌ಗಳು ಯಾರು?

ಕಿರುತೆರೆಯಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದ ಭವ್ಯಾ ಗೌಡ ಅವರು ಬಿಗ್‌ಬಾಸ್‌ ಮನೆಯಲ್ಲಿ ಉತ್ತಮ ಸ್ಪರ್ಧಿ. ಫಿಸಿಕಲ್ ಟಾಸ್ಕ್‌ನಲ್ಲಿ ಭವ್ಯಾ ಗೌಡ ಅದ್ಭುತವಾಗಿ ಆಡಿದ್ದಾರೆ. ಟ್ರೋಫಿ ಗೆಲ್ಲಲು ಮಾಡಬೇಕಾದ ಪ್ರಯತ್ನಗಳನ್ನೆಲ್ಲಾ ಮಾಡಿದ್ದಾರೆ. ಹೀಗಾಗಿ ಈ ಬಾರಿ ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ ಭವ್ಯಾ ಗೌಡ ಅವರೇ ಗೆಲ್ಲಬೇಕು ಅನ್ನೋ ಕೂಗು ಕೂಡ ಹೆಚ್ಚಾಗಿದೆ.

Bigg boss bhavya gowda should win- tv serial stars said

ಕಳೆದ ದಿನ ರಾತ್ರಿ ಬಿಗ್‌ಬಾಸ್‌ ಮನೆಗೆ ಆಗಮಿಸಿದ ಅಭಿಮಾನಿಗಳ ಗುಂಪು ಭವ್ಯಾ ಗೌಡ ಪರ ಜೈಕಾರ ಹಾಕಿದೆ. ಎಲ್ಲರನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ಹೆಣ್ಣುಲಿ ಎನ್ನುವ ಬಿರುದು ಕೂಡ ನೀಡಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕಿರುತೆರೆ ನಟ-ನಟಿಯರು ಭವ್ಯಾ ಗೌಡ ಅವರಿಗೆ ಓಟ್ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ಭವ್ಯಾ ಗೌಡಳನ್ನು ಗೆಲ್ಲಿಸಿ ಎಂದ ರಾಮಾಚಾರಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಖ್ಯಾತ 'ರಾಮಾಚಾರಿ' ಧಾರವಾಹಿಯ ನಟ ರಿತ್ವಿಕ್ ಕೃಪಾಕರ್ ಅವರು ಭವ್ಯಾ ಗೌಡಗೆ ಮತ ಹಾಕಲು ಮನವಿ ಮಾಡಿದ್ದಾರೆ. 'ಭವ್ಯಾ ಗೌಡ ಅವರು ಬಿಗ್‌ಬಾಸ್‌ ಮನೆಯಲ್ಲಿ ತುಂಬಾ ಚೆನ್ನಾಗಿ ಆಟ ಆಡುತ್ತಿದ್ದಾರೆ. ನಿಮ್ಮೆಲ್ಲರಿಗೂ ಭವ್ಯಾ ಗೌಡ ಆಟ ಇಷ್ಟ ಆದರೆ ಜಿ ಸಿನಿಮಾ ಆಪ್ ಮುಖಾಂತರ ಅವರಿಗೆ ಓಟ್ ಮಾಡಿ. ಫಿನಾಲೆಯಲ್ಲಿ ಅವರು ಗೆಲ್ಲೋ ಹಾಗೆ ಮಾಡಿ. ಭವ್ಯಾ ಹಾಗೂ ಎಂಟಾಯರ್ ಟಿಂಗೂ ಕೂಡ ಆಲ್‌ ದಿ ಬೆಸ್ಟ್' ಎಂದು ಹೇಳಿದ್ದಾರೆ.

ನನ್ನ ಓಟ್ ಭವ್ಯಾಗೇ- ನಟಿ ಆಶಿತಾ

ಇನ್ನೂ ನಟಿ ಅಶಿತಾ ಕೂಡ ಭವ್ಯಾ ಗೌಡ ಅವರಿಗೂ ಓಟ್ ಮಾಡಿದ್ದಾರೆ. 'ಭವ್ಯಾ ಗೌಡ ಅವರು ಬಿಗ್‌ಬಾಸ್‌ ಮನೆಯಲ್ಲಿ ತುಂಬಾ ಚೆನ್ನಾಗಿ ಆಡಿಕೊಂಡು ಬಂದಿದ್ದಾರೆ. ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾನು ಒಬ್ಬ ಮಹಿಳೆಯಾಗಿ ಇನ್ನೊಬ್ಬ ಮಹಿಳೆಗೆ ಸಪೋರ್ಟ್ ಮಾಡುತ್ತೇನೆ. ನೀವು ಕೂಡ ಅವರಿಗೆ ಸಪೋರ್ಟ್ ಮಾಡಿ ಕೊನೆವರೆಗೂ ಅವರನ್ನು ಕರೆದುಕೊಂಡು ಬನ್ನಿ ಅನ್ನೋದು ನನ್ನ ಆಸೆ. ಆಲ್‌ ದಿ ಬೆಸ್ಟ್ ಭವ್ಯಾ. ನಿಮಗೆ ಒಳ್ಳೆಯದಾಗಲಿ' ಎಂದು ಹೇಳಿದ್ದಾರೆ.

ಭವ್ಯಾ ಗೆಲ್ಲಬೇಕು ಎಂದ ಹಳೆಯ ಸ್ಪರ್ಧಿ

ಹಳೆಯ ಸ್ಪರ್ಧಿ ರಕ್ಷಕ್ ಸೇನ, 'ಬಿಗ್‌ಬಾಸ್‌ ಕನ್ನಡ ಸೀಸನ್ 11 ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದೇವೆ. ಟಾಸ್ಕ್ , ಜಗಳ ನೋಡಿದ್ದೇವೆ. ನಾನು ನನ್ನ ಬೆಸ್ಟ್ ಫ್ರೆಂಡ್ ಆದ ಭವ್ಯಾ ಗೌಡ ಅವರಿಗೆ ಬೆಸ್ಟ್ ವಿಶಶ್ ತಿಳಿಸುತ್ತಿದ್ದೇನೆ. ಒಳ್ಳೆಯದಾಗಲಿ. ಆಲ್‌ ದಿ ಬೆಸ್ಟ್. ನೀವೆಲ್ಲರೂ ಕೂಡ ಭವ್ಯನಿಗೆ ಓಟ್ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಟಾಸ್ಕ್ ಹಾಗೂ ಮನರಂಜನೆ ಪ್ರತಿಯೊಂದು ಕಡೆ 100% ಕೊಟ್ಟಿದ್ದಾರೆ. ನನಗೆ ಅವರು ಫಿನಾಲೆಗೆ ಬಂದಿದ್ದು ಖುಷಿಯಾಗಿದೆ' ಎಂದರು.

Bigg boss bhavya gowda should win- tv serial stars said

ಕಪ್ ಗೆದ್ದು ಬಾ ಭವ್ಯಾ- ಸಿರಿ

ಇನ್ನೂ ನಟಿ ಸಿರಿ ಕೂಡ ಭವ್ಯಾ ಅವರಿಗೆ ಓಟ್ ಮಾಡಿದ್ದಾರೆ. 'ಬಿಗ್‌ಬಾಸ್ ಫಿನಾಲೆ ತಲುಪುತ್ತಿದೆ. ಇಷ್ಟು ವಾರ ಅಲ್ಲಿ ಭವ್ಯ ಇರಲು ನಿಮ್ಮ ಓಟು ಮತ್ತು ನಿಮ್ಮ ಸಹಕಾರ ಇತ್ತು. ಅವರು ಇನ್ನೊಂದು ಹೆಜ್ಜೆ ಮುಂದೆ ಹೋಗಬೇಕು ಅಂದರೆ ನಿಮ್ಮ ಓಟು ತುಂಬಾನೇ ಮುಖ್ಯ. ಹೀಗಾಗಿ ಅವರಿಗೆ ಓಟ್ ಮಾಡಿ. ಭವ್ಯಾ ನೀವು ತುಂಬಾ ಚೆನ್ನಾಗಿ ಆಟ ಆಡುತ್ತಿದ್ದೀರಾ. ಚೆನ್ನಾಗಿ ಆಟ ಆಡಿ. ವಿಶ್‌ ಯು ಆಲ್‌ ದಿ ಬೆಸ್ಟ್ ಭವ್ಯಾ ಗೌಡ. ಕಪ್ ಗೆದ್ದು ಬನ್ನಿ' ಎಂದು ಶುಭ ಹಾರೈಸಿದ್ದಾರೆ.

ಇನ್ನೂ ಯೂಟ್ಯೂಬರ್ ನಿಖಿಲ್ ಮಲಿಯಕ್ಕಲ್, 'ನಿಮ್ಮೆಲ್ಲರಿಗೂ ಗೊತ್ತು ಬಿಗ್‌ಬಾಸ್‌ ಮನೆಯಲ್ಲಿ ಭವ್ಯಾ ಗೌಡ ಅವರು ಹೇಗೆ ಆಡ್ತಾಯಿದ್ದಾರೆ ಅನ್ನೋದು. ನಿಮ್ಮ ಓಟಿನ ಸಹಕಾರ ಅವರ ಮೇಲೆ ಸದಾ ಇರಲಿ. ನನ್ನ ಓಟ್ ಕೂಡ ಅವರಿಗೆ ಇದ್ದೇ ಇರುತ್ತದೆ. ವಿಶ್‌ ಯು ಆಲ್‌ ದಿ ಬೆಸ್ಟ್ ಭವ್ಯಾ ಗೌಡ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+