Bhavya Gowda: ಎಲ್ಲಾ ಬಾಲ್‌ಗೂ ಸಿಕ್ಸ್ ಹೊಡಿಯೋಕೆ ಆಗಲ್ಲ- ಮೋಕ್ಷಿತಾ ಬಗ್ಗೆ ಭವ್ಯಾ ಶಾಕಿಂಗ್ ಹೇಳಿಕೆ

ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಚಾಪ್ಟರ್ ಕ್ಲೋಸ್ ಆಗಿದೆ. ಈ ಅಧ್ಯಾಯದ ಪುಟಗಳಲ್ಲಿ ಕೊನೆಯಲ್ಲಿ ಉಳಿದ ಆರು ಜನ ಸ್ಪರ್ಧಿಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ಈ ಪೈಕಿ ಮಹಿಳಾ ಸ್ಪರ್ಧಿಗಳಲ್ಲಿ ಭವ್ಯಾ ಹಾಗೂ ಮೋಕ್ಷಿತಾ ಗೆದ್ದೇ ಗೆಲ್ಲುತ್ತಾರೆ ಎನ್ನುವಷ್ಟು ವಿನ್ನರ್‌ ರೇಸ್‌ನಲ್ಲಿ ಮುಂದಿದ್ದರು. ಆದರೆ ಗೆಲ್ಲಲಿಲ್ಲ. ಯಾಕೆ ಹೀಗಾಯ್ತು ಅನ್ನೋ ಪ್ರಶ್ನೆಗೆ ಭವ್ಯಾ ಗೌಡ ಉತ್ತರ ನೀಡಿದ್ದಾರೆ. ಹಾಗಾದರೆ ಭವ್ಯಾ ಹೇಳಿದ್ದೇನು? ಮೋಕ್ಷಿತಾ ಬಗ್ಗೆ ಭವ್ಯಾ ಹೇಳುವುದೇನು?

ಭವ್ಯಾ ಗೌಡ ಬಿಗ್‌ಬಾಸ್‌ ಮನೆಯಲ್ಲಿ ಇದ್ದುಕೊಂಡು ಸಾಕಷ್ಟು ಜನಪ್ರಿಯತೆ ಪಡೆದಿರುವ ಹುಡುಗಿ. ಜಿಲೇಬಿ ಬೇಬಿ, ಬಿಗ್‌ಬಾಸ್‌ ಲೇಡಿ ಟೈಗರ್, ರೌಡಿ ಬೇಬಿ, ಲವ್ ರಾಣಿ ಇಂತೆಲ್ಲಾ ಬಿರುದು ಪಡೆದುಕೊಂಡಿದ್ದಾರೆ ಭವ್ಯಾ. ಟಾಪ್‌ 6 ಸ್ಪರ್ಧಿಯಾಗಿ ಹೊರ ಬಂದ ಭವ್ಯಾ ಗೌಡ ಮೋಕ್ಷಿತಾ ಅವರ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಮೋಕ್ಷಿತಾ ಬಗ್ಗೆ ಭವ್ಯಾ ಹೇಳಿದ್ದೇನು?

Bigg boss bhavya gowda shocking statement about mokshitha pai

ಮೋಕ್ಷಿತಾ ಬಗ್ಗೆ ಭವ್ಯಾ ಶಾಕಿಂಗ್ ಹೇಳಿಕೆ

ಮೋಕ್ಷಿತಾ ಅವರ ಬಗ್ಗೆ ಮಾತನಾಡಿದ ಭವ್ಯಾ, 'ಬಿಗ್‌ಬಾಸ್‌ ಮನೆಯಲ್ಲಿ ನಾನು ಕಂಡಂತೆ ತುಂಬಾ ತಾಳ್ಮೆ ಇರುವ ಹುಡುಗಿ ಅಂದರೆ ಅದು ಮೋಕ್ಷಿತಾ. ಚೆನ್ನಾಗಿ ಆಡ್ತಾಯಿದ್ದರು. ಕೆಲವೊಂದು ಸಲ ಚೆನ್ನಾಗಿ ಆಡಲು ಆಗಿಲ್ಲ. ಅದು ಎಲ್ಲರ ವಿಷಯದಲ್ಲೂ ಆಗಿದೆ. ಎಲ್ಲಾ ಬಾಲ್‌ಗೂ ಸಿಕ್ಸ್ ಹೊಡಿಯುತ್ತೇವೆ ಅಂತ ಹೇಳಲು ಆಗಲ್ಲ. ಇರುವಷ್ಟು ದಿನ ಚೆನ್ನಾಗಿ ಆಡಿದ್ದೇವೆ. ಕಾಲ ಕಳೆದಂತೆ ಒಬ್ಬರಲ್ಲ ಒಬ್ಬರು ಹೊರಬರಲೇಬೇಕಿತ್ತು' ಎಂದು ಹೇಳಿದರು.

ಬಿಗ್‌ಬಾಸ್‌ ಮನೆಯಲ್ಲಿ ಇರುವಾಗ ಆಟದ ವಿಚಾರದಲ್ಲಿ ಜಗಳ ಎಲ್ಲರ ನಡುವೆ ಸಾಮಾನ್ಯವಾಗಿತ್ತು. ಹಾಗೇ ನನ್ನ ಹಾಗೂ ಮೋಕ್ಷಿತಾ ನಡುವೆ ಜಗಳ ನಡೆದಿದೆ. ಆದರೆ ಅದನ್ನು ನಾನು ಅಲ್ಲಿಗೆ ಮರೆತುಬಿಟ್ಟೆ. ಬಿಗ್‌ಬಾಸ್‌ ಮನೆಯಲ್ಲಿ ಎಲ್ಲನೂ ಇರಬೇಕು. ಆಗಲೇ ಅದು ಚಂದ. ಎಲ್ಲರೂ ಸಂತೋಷವಾಗಿ ಇರಲು ಆಗಲ್ಲ. ಒಂದಲ್ಲಾ ಒಂದು ರೀತಿ ಆಟದಲ್ಲಿ ವ್ಯತ್ಯಾಸಗಳು ಆದಾಗ ಮನಸ್ತಾಪಗಳು ಸಾಮಾನ್ಯವಾಗಿ ಬಮದೇ ಬರುತ್ತವೆ ಎಂದು ಭವ್ಯಾ ಹೇಳಿದ್ದಾರೆ.

ಮೋಕ್ಷಿತಾ ಪ್ರಕರಣದ ಬಗ್ಗೆ ಭವ್ಯಾ ಹೇಳಿದ್ದಿಷ್ಟು..

ಇನ್ನೂ ಇದೇ ವೇಳೆ ಮೋಕ್ಷಿತಾ ಪ್ರಕರಣದ ಬಗ್ಗೆಯೂ ಕೂಡ ಭವ್ಯಾ ಮಾತನಾಡಿದ್ದಾರೆ. 'ನನಗೆ ಮೋಕ್ಷಿತಾ ಏನು ಅನ್ನೋದು ಬಿಗ್‌ಬಾಸ್‌ ಮನೆಯಲ್ಲಿ ಮಾತ್ರ ಗೊತ್ತು. ಹೊರಗಡೆ ಅವರು ಹೇಗೆ ಅನ್ನೋದು ನನಗೆ ಗೊತ್ತಿಲ್ಲ. ಹೀಗಾಗಿ ಬಿಗ್‌ಬಾಸ್‌ ಮನೆಯ ವಿಚಾರ ಮಾತ್ರ ನಾನು ಹೇಳಬಲ್ಲೆ. ಬೇರೆ ವಿಚಾರದ ಬಗ್ಗೆ ಗೊತ್ತಿಲ್ಲದೆ ನಾನು ಮಾತನಾಡುವುದಿಲ್ಲ. ಈ ಬಗ್ಗೆ ಮೋಕ್ಷಿತಾ ಅವರನ್ನೇ ಕೇಳಿದರೆ ಒಳ್ಳೆಯದು' ಎಂದು ಭವ್ಯಾ ಹೇಳಿದ್ದಾರೆ.

ತ್ರಿವಿಕ್ರಮ್ ಬಗ್ಗೆ ಭವ್ಯಾ ಹೇಳಿದ್ದೇನು?

ತ್ರಿವಿಕ್ರಮ್ ನನಗೆ ಪ್ರಪೋಸ್ ಮಾಡಿದ್ದು ನಿಜ. ಆದರೆ ಅದೆಲ್ಲಾ ತಮಾಷೆಗಾಗಿ ಮಾಡಿದ್ದು ಅಂತ ಅವರೇ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ನಾವಿಬ್ಬರು ತುಂಬಾ ಒಳ್ಳೆಯ ಫ್ರೆಂಡ್ಸ್ ಅಷ್ಟೆ. ಇದನ್ನು ಬಿಟ್ಟು ಬೇರೆ ಏನೂ ಕೂಡ ಇಲ್ಲ. ನಾವು ಇಬ್ಬರು ಒಬ್ಬರನ್ನೊಬ್ಬರು ಚೆನ್ನಾಗಿ ಆರ್ಥ ಮಾಡಿಕೊಂಡು ತುಂಬಾ ಕಂಫರ್ಟ್ ಝೋನ್‌ ಅಲ್ಲಿ ಇದ್ವಿ. ಹೀಗಾಗಿ ನಮ್ಮಿಬ್ಬರ ನಡುವೆ ಸ್ನೇಹ ಗಟ್ಟಿಯಾಗಿದೆ. ಯಾರು ಏನೇ ಹೇಳಲಿ ನಮ್ಮಿಬ್ಬರ ನಡುವೆ ಇರುವುದು ಸ್ನೇಹ ಮಾತ್ರ ಎಂದು ಭವ್ಯಾ ಸ್ಪಷ್ಟನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+