Bhavya Gowda: ಬಾಯ್ಸ್ vs ಗರ್ಲ್ಸ್ ಶೋ ಆಫರ್ ನಿರಾಕರಿಸಿದ ಭವ್ಯಾ- ಕಾರಣ ಏನು?
ಬಿಗ್‌ಬಾಸ್ ಮನೆಯಲ್ಲಿ ಇರುವಷ್ಟು ದಿನ ಭವ್ಯಾ ಗೌಡ ಸಾಕಷ್ಟು ಸುದ್ದಿ ಮಾಡಿದ ಸ್ಪರ್ಧಿ. ಈಗಲೂ ಕೂಡ ಭವ್ಯಾ ಗೌಡ ಅವರನ್ನು ಜನ ಅಷ್ಟೇ ಪ್ರೀತಿಸುತ್ತಾರೆ. ಹೀಗಾಗಿ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಭವ್ಯಾ ಗೌಡ ಅವರಿಗೆ ಸಾಕಷ್ಟು ಆಫರ್ ಬಂದಿವೆ. ಆದರೆ ಭವ್ಯಾ ಗೌಡ ಅವರು ಕೆಲ ಆಫರ್‌ಗಳನ್ನು ನಿರಾಕರಿಸಿದ್ದಾರೆ. ಹಾಗಾದರೆ ಭವ್ಯಾ ಬಾಯ್ಸ್ vs ಗರ್ಲ್ಸ್ ಶೋ ಆಫರ್ ನಿರಾಕರಿಸಿದ್ದು ಯಾಕೆ?
ಭವ್ಯಾ ಗೌಡ ಅವರಿಗೆ ಬಿಗ್‌ಬಾಸ್ ಮನೆಯಲ್ಲಿ ಇರುವಾಗಲೇ ಬಾಯ್ಸ್ vs ಗರ್ಲ್ಸ್ ಶೋ ಆಫರ್ ಬಂದಿತ್ತು. ಇದರ ಶೂಟಿಂಗ್ ಕೂಡ ಶುರು ಮಾಡಲಾಗಿತ್ತು. ಆದರೆ ಈ ಶೋ ಬಗ್ಗೆ ಭವ್ಯಾ ಗೌಡ ಅದ್ಯಾಕೋ ಆಸಕ್ತಿ ತೋರಲಿಲ್ಲ. ಈ ಶೋನಲ್ಲಿ ಭಾಗವಹಿಸುವ ಮನಸ್ಸು ಮಾಡಲಿಲ್ಲ. ಇದಕ್ಕೆ ಕಾರಣವನ್ನು ಅವರು ಹೇಳಿಕೊಂಡಿದ್ದಾರೆ.

ಬಾಯ್ಸ್ vs ಗರ್ಲ್ಸ್ ಶೋ ಆಫರ್ ನಿರಾಕರಿಸಿದ ಭವ್ಯಾ
ಹೌದು... ಬಿಗ್‌ಬಾಸ್ ಮನೆಯಲ್ಲಿ ಇರುವಾಗ ಭವ್ಯಾ ಗೌಡ ಅವರಿಗೆ ಬಾಯ್ಸ್ vs ಗರ್ಲ್ಸ್ ಶೋ ಆಫರ್ ಬಂದಿತ್ತು. ಇದನ್ನು ಭವ್ಯಾ ಗೌಡ ನಿರಾಕರಿಸಿದ್ದರು. ಇದಕ್ಕೆ ಕಾರಣವನ್ನೂ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 'ನನಗೆ ಆಫರ್ ಬಂದಿದ್ದು ನಿಜ. ಆದರೆ ಬಿಗ್‌ಬಾಸ್ ಕೊನೆಯಲ್ಲಿ ನನಗೆ ತುಂಬಾ ಆರೋಗ್ಯದಲ್ಲಿ ಸಮಸ್ಯೆ ಆಯ್ತು. ಮನೆಯಲ್ಲಿ ರೆಸ್ಟ್ ಮಾಡುವುದು ಅನಿವಾರ್ಯವಾಯ್ತು. ಯಾಕೆಂದರೆ ನಾನು ಅದಕ್ಕೆ ಒಪ್ಪಿಕೊಂಡಿದ್ದರೆ ಶೂಟಿಂಗ್ ಹೋಗಬೇಕಿತ್ತು. ಆದರೆ ನನಗೆ ಆರೋಗ್ಯ ಸರಿ ಇಲ್ಲದೇ ಇರುವುದರಿಂದ ನಾನು ಆ ಶೋ ಅನ್ನು ನಿರಾಕರಿಸಿದೆ' ಎಂದು ಭವ್ಯಾ ಹೇಳಿದ್ದಾರೆ.
ತ್ರಿವಿಕ್ರಮ್ ಬಗ್ಗೆ ಭವ್ಯಾ ಹೇಳಿದ್ದೇನು?
ಇನ್ನೂ ತ್ರಿವಿಕ್ರಮ್ ಬಗ್ಗೆ ಕೇಳಿದಾಗ ಭವ್ಯಾ ಗೌಡ ಹೇಳಿದಿಷ್ಟು- 'ಬಿಗ್‌ಬಾಸ್ ಮನೆಯಲ್ಲಿ ನಾವುಗಳೇ ಪರಸ್ಪರ ಮಾತನಾಡಬೇಕು. ಇರುವ ಒಂದಿಷ್ಟು ಜನರಲ್ಲಿ ಯಾರೊಂದಿಗೆ ಕಂಫರ್ಟ್ ಆಗುತ್ತೋ ಅವರೊಂದಿಗೇ ನಾನು ಹೆಚ್ಚು ಮಾತನಾಡಿದ್ದು. ತ್ರಿವಿಕ್ರಮ್ ಅವರೊಂದಿಗೆ ಯಾಕೆ ಹೆಚ್ಚು ಮಾತನಾಡುತ್ತಿದ್ದೆ ಅಂದರೆ ನನಗೆ ಅವರು ತುಂಬಾ ಕಂಫರ್ಟ್ ವ್ಯಕ್ತಿ ಹೀಗಾಗಿ ಅವರೊಂದಿಗೆ ನಾನು ಹೆಚ್ಚಾಗಿ ಮಾತನಾಡುತ್ತಿದ್ದೆ' ಎಂದು ಹೇಳಿದ್ದಾರೆ.
ಇನ್ನೂ ಹೆಚ್ಚಿನ ವಿಚಾರವನ್ನು ಹಂಚಿಕೊಂಡ ಭವ್ಯಾ, 'ನಾವು ಬಿಗ್‌ಬಾಸ್ ಮನೆಯಲ್ಲಿ ದಿನದ 24 ಗಂಟೆ ಇರುತ್ತಿದ್ವಿ. ಅಲ್ಲಿ ಸಿಕ್ಕಾಪಟ್ಟೆ ಕಾಮಿಡಿ ಮಾಡಿರುವುದು ಇದೆ. ಆ ಸಂದರ್ಭದಲ್ಲಿ ನಡೆದ ಘಟನೆಯ ಒಂದು ಸಣ್ಣ ಕ್ಲಿಪ್ ಜನ ನೋಡಿದಾಗ ಇದನ್ನು ಗಂಭೀರವಾಗಿ ಪರಿಗಣಿಸಿರಬಹುದು. ನಾವು ಸಿಕ್ಕಾಪಟ್ಟೆ ಕಾಮಿಡಿ ಮಾಡ್ತಾಯಿದ್ವಿ. ಜಗಳ ಆಡ್ತಾಯಿದ್ವಿ. ಎಲ್ಲವನ್ನೂ ಬಿಗ್‌ಬಾಸ್ ತೋರಿಸಲು ಆಗಲ್ಲ. ಹೊರಗಡೆ ನಾವು ಬಂದು ವಿವರಿಸಲು ಆಗಲ್ಲ. ಹೀಗಾಗಿ ನನ್ನ ತ್ರಿವಿಕ್ರಮ್ ನಡುವೆ ಆದ ಸಂಭಾಷಣೆಗಳು ಆಯಾ ಸಂದರ್ಭಕ್ಕೆ ಆದ ಸಂಭಾಷಣೆಗಳು ಅಷ್ಟೆ. ಅದನ್ನು ಜನ ಹೇಗೆ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ನಾನು ಸ್ಪಷ್ಟನೆ ನೀಡಬಹುದು. ಮುಂದೆ ಒಂದು ದಿನ ಎಲ್ಲವೂ ಅರ್ಥ ಆಗುತ್ತದೆ' ಎಂದು ಭವ್ಯಾ ಹೇಳಿದ್ದಾರೆ.
ಭವ್ಯಾ ಸಂಭಾವನೆ ಎಷ್ಟು?
ಬಿಗ್‌ಬಾಸ್ ಸಂಭಾವನೆ ಬಗ್ಗೆ ಕೇಳಿದಾಗ ಭವ್ಯಾ, 'ಬಿಗ್‌ಬಾಸ್ ತಂಡದವರು ಎಲ್ಲೂ ಕೂಡ ಅದನ್ನು ಬಿಟ್ಟು ಕೊಡಬಾರದು ಎನ್ನುವ ನಿಯಮ ಮಾಡಿದ್ದಾರೆ. ಹೀಗಾಗಿ ನಾನು ಅದನ್ನು ಹೇಳುವುದಿಲ್ಲ ಎಂದು ಭವ್ಯಾ ಹೇಳಿದ್ದಾರೆ. ಧಾರವಾಹಿಯಲ್ಲಿ ಆರಂಭದಲ್ಲಿ 25000 ತಿಂಗಳ ಸಂಬಳ ನಂದು. ನಂತರ ಅದು ಹೆಚ್ಚಾಗುತ್ತಾ ಬಂತು. ತುಂಬಾ ಹಿಟ್ ಧಾರವಾಹಿ ಕೊಟ್ಟಿದ್ದೇನೆ. ಹಾಗಂತ ನನಗೆ ಅದಕ್ಕೆ ತಕ್ಕ ಸಂಭಾವನೆ ಸಿಕ್ಕಿಲ್ಲ. ಹಾಗೊಂದು ವೇಳೆ ತುಂಬಾ ಒಳ್ಳೆಯ ಸಂಭಾವನೆ ಸಿಕ್ಕಿದ್ದರೆ ನನ್ನ ಬಳಿ ಕಾರು, ಬಂಗಲೆ ಇರುತ್ತಿತ್ತು' ಎಂದು ಭವ್ಯಾ ಹೇಳಿಕೊಂಡಿದ್ದಾರೆ.












Click it and Unblock the Notifications