ಬಿಗ್ ಬಾಸ್ 12 ಫಿನಾಲೆ: ಗಿಲ್ಲಿ ಕನಸು ನುಚ್ಚುನೂರು: ಆಗಿದ್ದೇನು ಗೊತ್ತಾ?
Bigg Boss 12 Finale: ಬಿಗ್‌ಬಾಸ್ ಕನ್ನಡ 12 ಫಿನಾಲೆ ವೇಳೆ ಟಾಪ್ 4 ಸ್ಪರ್ಧಿ ದೊಡ್ಮನೆಯಿಂದ ಹೊರಗಡೆಬಂದಿದ್ದಾರೆ. ಇದರಿಂದ ಗಿಲ್ಲಿ ನಟನ ಕನಸು ನುಚ್ಚುನೂರು ಆಗಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಿಗ್‌ಬಾಸ್ ಮನೆಯಿಂದ ಟಾಪ್ 4 ಸ್ಪರ್ಧಿ ಹೊರಬಿದ್ದಿದ್ದಾರೆ. ಹೌದು.. ಬಿಗ್‌ಬಾಸ್ ಕನ್ನಡ 12 ಮನೆಯಲ್ಲಿ ಚಾಲಕಿ ಅಂತಲೇ ಫೇಮಸ್ ಆಗಿದ್ದ ಕಾವ್ಯ ವೈಶ್ಯ ಫಿನಾಲೆ ವೇಳೆ ಔಟ್ ಆಗಿದ್ದಾರೆ. ಪ್ರೇಕ್ಷಕಕ ಪ್ರಭುಗಳು ನೀಡಿದ ಮತಗಳ ನಿರ್ಣಯದ ಮೇರೆಗೆ ಅವರು ಹೊರಬಿದ್ದಿರುವುದು ಅಭಿಮಾನಿಗಳಿಗೆ ಭಾರಿ ಬೇಸರ ತಂದಿದೆ. ಮತ್ತೊಂದೆಡೆ ಟಾಪ್ 2ವರೆಗೂ ಜೊತೆಯಲ್ಲೇ ಕರೆದುಕೊಂಡು ಹೋಗುತ್ತೇನೆ ಎಂದಿದ್ದ ಗಿಲ್ಲಿ ಕನಸು ಕೂಡ ನುಚ್ಚುನೂರಾದಂತಾಗಿದೆ.

ಬಿಗ್ ಬಾಸ್ ಮನೆಯಿಂದ ಔಟ್ ಆಗುವ ಟಾಪ್ ನಾಲ್ಕನೇ ಸ್ಪರ್ಧಿ ಯಾರು ಎಂಬುದನ್ನು ಬಹಿರಂಗಪಡಿಸುವುದಕ್ಕೆ ಕಿಚ್ಚ ಸುದೀಪ್ ಅವರು ನಟ ರವಿಚಂದ್ರನ್ ಅವರನ್ನು ವೇದಿಕೆಗೆ ಆಹ್ವಾನಿಸಿದರು. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯ ಅವರನ್ನು ಒಂದೊಂದು ಬಾರ್ಡರ್ ಹಾಕಿ ಅದರ ಒಳಗಡೆ ಲೈಟ್ ಹಾಕಲಾಗಿತ್ತು.
ಬಿಗ್ ಬಾಸ್ ಮನೆಯಿಂದ ಕಾವ್ಯ ಔಟ್: ಕೊನೆಗೆ ಯಾರ ಮೇಲೆ ಲೈಟ್ ಬೀಳಲಿದೆಯೋ ಅವರು ಹೊರಗಡೆ ಬರುತ್ತಾರೆ ಎಂದು ಹೇಳಲಾಗಿತ್ತು. ಅದರಂತೆಯೇ ಕಾವ್ಯ ಮೇಲೆ ಲೈಟ್ ಬಿದ್ದಿದ್ದು, ಅವರನ್ನು ರವಿಚಂದ್ರನ್ ಅವರನ್ನು ಹೊರಗಡೆ ಕರೆತಂದಿದ್ದಾರೆ. ಇದೀಗ ಟಾಪ್ 3 ಸ್ಪರ್ಧಿಗಳು ಉಳಿದುಕೊಂಡಿದ್ದು, ಇವರ ಪೈಕಿ ಮತ್ತೆ ಯಾರು ಹೊರಗಡೆ ಬರಲಿದ್ದಾರೆಯೋ ಎಂದು ಕಾದುನೋಡಬೇಕಿದೆ. ಈಗಾಗಲೇ ಧನುಷ್ ಗೌಡ, ಮ್ಯೂಟೆಂಟ್ ರಘು, ಕಾವ್ಯ ಔಟ್ ಆಗಿದ್ದಾರೆ
ಬಿಗ್ ಬಾಸ್ ಮನೆಗೆ ಜಂಟಿಯಾಗಿ ಎಂಟ್ರಿ ಕೊಟ್ಟು ಕೊನೆವರೆಗೂ ಉಳಿದವರಲ್ಲಿ ಕಾವ್ಯ ಶೈವ ಒಬ್ಬರಾಗಿದ್ದಾರೆ. ಗಿಲ್ಲಿಯ ಜೋಡಿಯಾಗಿ ಅವರು ಆಗಮಿಸಿದ್ದರು. ಬಿಗ್ ಬಾಸ್‌ನಲ್ಲಿ ಫೈನಲ್ ಆಗಿ 6 ಸ್ಪರ್ಧಿಗಳು ಫಿನಾಲೆಗೆ ಎಂಟ್ರಿ ಕೊಟ್ಟರು. ಅದರಲ್ಲಿ ಕಾವ್ಯ ಕೂಡ ಒಬ್ಬರು.
ಕಾವ್ಯ ಕನಸು ಭಗ್ನ: ಆದರೆ ಇದೀಗ ಟಾಪ್ 3 ವರೆಗೂ ಬಂದು ಕಾವ್ಯ ಔಟ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ ಟ್ರೋಫಿ ವಿನ್ನರ್ ಆಗುವ ಅವರ ಕನಸು ಭಗ್ನ ಆದಂತಾಗಿದೆ. ಗಿಲ್ಲಿ ಪಕ್ಕ ಕಾವ್ಯಾನೆ ಇರುತ್ತಾರೆ ಅಂತಾ ಅಂದುಕೊಂಡಿದ್ದ ಫ್ಯಾನ್ಸ್‌ಗೆ ನಿರಾಸೆ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಬಹುತೇಕರು ಗಿಲ್ಲಿಯಿಂದ ಕಾವ್ಯ ಅಂತಾ ಅಂದುಕೊಂಡಿದ್ದರು. ಈ ಕುರಿತು ಸಾಕಷ್ಟು ಹೇಳಿಕೆಗಳು ಸಹ ಕೇಳಿಬಂದಿದ್ದವು. ಅದರಲ್ಲೂ ಗಿಲ್ಲಿ ಅವರು ಕಾವು.. ಕಾವು.. ಅಂತಾನೇ ತಮಾಷೆ ಮಾಡುತ್ತಿದ್ದರು. ಕಾವ್ಯ ಅವರು ಸಾಕಷ್ಟು ಬಾರಿ ಟಾಸ್ಕ್‌ಗಳಲ್ಲಿ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದರು.
ಮೊದಲ ವಾರದಲ್ಲೇ ಅವರು ಟಾಸ್ಕ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಜೊತೆಗೆ ಮನೆ ಸದಸ್ಯರೊಂದಿಗೆ ಹೊಂದಿಕೊಂಡಿದ್ದರು. ಗಿಲ್ಲಿ ಕಾರಣ, ಜಂಟಿಯಾಗಿ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ ಇವರಿಬ್ಬರ ಬಾಂಡಿಂಗ್ ಭಾರೀ ಚರ್ಚೆಗೆ ಕಾರಣ ಆಗಿತ್ತು. ಇವರಿಬ್ಬರ ಬಾಂಡಿಂಗ್ ಈ ಸೀಸನ್‌ನಲ್ಲಿ ಗಮನ ಸೆಳೆದಿತ್ತು.
ಮೊದಲಿಗೆ ಕಾವ್ಯ ಹಾಗೂ ಗಿಲ್ಲಿ ನಡುವೆ ಉತ್ತಮ ಬಾಂಡಿಂಗ್ ಇತ್ತು. ದಿನಕಳೆದಂತೆ ಕಾವ್ಯ ಅವರಿಗೆ ಗಿಲ್ಲಿ ನಟನ ಕಾಮಿಡಿ ಇರಿಟೇಟ್ ಆಗುವುದಕ್ಕೆ ಶುರುವಾಯ್ತು. ನಾಮಿನೇಶನ್ ವೇಳೆ, ಕಳಪೆ ಸಮಯದಲ್ಲಿ ಗಿಲ್ಲಿ ಹೆಸರನ್ನೇ ಹೇಳುತ್ತಿದ್ದರು.
ಗಿಲ್ಲಿ ನಟನ ಜೊತೆಗಿನ ಬಾಂಡಿಂಗ್ ಕೆಲವೊಮ್ಮೆ ಅವರ ಜರ್ನಿಯ ಬೆನ್ನೆಲುಬು ಅಂತ ಅಲ್ಲಿನ ಸ್ಪರ್ಧಿಗಳೇ ಮಾತನಾಡಿರುವ ಉದಾಹರಣೆಗಳಿವೆ. ಇನ್ನೂ ಫ್ಯಾಮಿಲಿ ವೀಕ್‌ನಲ್ಲಿ ತಮ್ಮ ಮಾಡಿದ ತಪ್ಪಿನಿಂದ ಕಾವ್ಯಗೆ ಹೊಡೆತ ಬಿದ್ದಿತು. ಮನೆಯವರ ಮಾತು ಕೇಳಿ ಗಿಲ್ಲಿ ಜೊತೆ ಹೊಂದಿಕೊಂಡರು ಎಂಬುದು ಕೆಲವರ ಅಭಿಪ್ರಾಯವಾಗಿತ್ತು.
ಕಾವ್ಯ ಬಿಗ್ ಬಾಸ್‌ನಲ್ಲಿ ನಿರ್ಧಾರಗಳನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಮತ್ತೊಂದು ಪ್ಲಸ್ ಪಾಯಿಂಟ್ ಅಂದರೆ, ಟಾಸ್ಕ್ ಹಾಗೂ ನಾಮಿನೇಷನ್‌ಗಳಲ್ಲಿ ವೈಯಕ್ತಿಕವಾಗಿ ಅವರು ಯಾರನ್ನೂ ಟಾರ್ಗೆಟ್ ಮಾಡುತ್ತಿರಲಿಲ್ಲ. ಗಿಲ್ಲಿ, ಅಶ್ವಿನಿ, ರಕ್ಷಿತಾ ಶೆಟ್ಟಿ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿದ್ದು, ಇದೀಗ ಕಾವ್ಯ ಕೊನೆಗೂ ಮನೆಯಿಂದ ಹೊರಬಂದಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications