Actor Darshan Thoogudeepa: 'ನಟ ದರ್ಶನ್‌ಗೆ ಇದೇ ಕೋರ್ಟ್‌ನಲ್ಲಿ ಜಾಮೀನು ಸಿಗೋದು ಪಕ್ಕಾ': ಭವಿಷ್ಯ ನಿಜವಾಗುತ್ತಾ.?

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ & ಗ್ಯಾಗ್‌ ಜೈಲು ಸೇರಿದ್ದಾರೆ. ಈಗಾಗಲೇ ಅಕ್ಟೋಬರ್‌ 14ರಂದು ನಟ ದರ್ಶನ್‌ ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಸಿಸಿಎಚ್‌ ಕೋರ್ಟ್‌ ವಜಾಗೊಳಿಸಿತ್ತು. ಇದಕ್ಕೂ ಮುಂಚೆಯೊಬ್ಬರು ದರ್ಶನ್‌ಗೆ ಜಾಮೀನು ಸಿಗೋದು ಹೈಕೋರ್ಟ್‌ ಅಥವಾ ಸುಪ್ರಿಂ ಕೋರ್ಟ್‌ನಲ್ಲಿ ಎಂದು ಭವಿಷ್ಯ ನುಡಿದಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್‌ ಜಾಮೀನು ಅರ್ಜಿ 57ನೇ ಸಿಸಿಎಚ್‌ ಕೋರ್ಟ್‌ ವಜಾಗೊಳಿಸಿದ ಬೆನ್ನಲ್ಲೇ ದರ್ಶನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇನ್ನು ಇತ್ತೀಚೆಗಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರ್ಗಿ ಅವರು, ದರ್ಶನ್‌ಗೆ ಸಿಸಿಎಚ್‌ ಕೋರ್ಟ್‌ನಲ್ಲಂತೂ ಜಾಮೀನು ಸಿಗುವುದಿಲ್ಲ. ಸಿಕ್ಕರೆ, ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಅಂತಾ ಭವಿಷ್ಯ ನುಡಿದಿದ್ದರು.

Bail to Actor Darshan in High Court or Supreme Prashanth Sambargi predition

ಇದೀಗ ಪ್ರಶಾಂತ್‌ ಸಂಬರ್ಗಿ ನುಡಿದಿರುವ ಭವಿಷ್ಯದಂತೆ ನಟ ದರ್ಶನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇನ್ನು, ಕೋರ್ಟ್‌ನಲ್ಲಿ ಜಾಮೀನು ಅರ್ಜಿ ನಡೆಯುತ್ತಿರುವಾಗಲೇ, ನಟ ದರ್ಶನ್‌ ಬಿಡುಗಡೆಯಾಗುವ ನಿರೀಕ್ಷೆಯಲ್ಲಿ ಆಪ್ತರು ಅವರನ್ನು ಬಳ್ಳಾರಿ ಜೈಲಿನಿಂದ ಕರೆದೊಯ್ಯಲು ಹೆಲಿಕಾಪ್ಟರ್‌ ಬುಕ್‌ ಮಾಡಿದ್ದರು ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು.

ಹೆಲಿಕಾಪ್ಟರ್‌ ಬುಕ್‌ ಮಾಡಲು ಕಾರಣ ಏನು?: ಇನ್ನು ದರ್ಶನ್‌ ಆಪ್ತರು ಬುಕ್‌ ಮಾಡಿದ ಹೆಲಿಕಾಪ್ಟರ್‌ ಬಗ್ಗೆ ಮಾತನಾಡಿದ ಪ್ರಶಾಂತ್‌ ಸಂಬರ್ಗಿ ಅವರು, ಒಂದು ವೇಳೆ ದರ್ಶನ್‌ ಬಿಡುಗಡೆಯಾದರೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ ಉಂಟಾಗುತ್ತದೆ, ಅಂಧಾಭಿಮಾನಿಗಳು ನೆರೆಯುತ್ತಾರೆ ಎನ್ನುವ ಉದ್ದೇಶದಿಂದ ಹೆಲಿಕಾಪ್ಟರ್‌ ಬುಕ್‌ ಮಾಡಿರುತ್ತಾರೆ. ಹೆಲಿಕಾಪ್ಟರ್‌ನಲ್ಲಿ ನಾವು ನೋಡಿದ್ದೇವೆ, ಹತ್ತಿದ್ದೇವೆ. ಇದೇನು ದೊಡ್ಡ ವಿಚಾರವೇನಲ್ಲ ಎಂದು ಹೇಳಿದ್ದರು.

ದರ್ಶನ್‌ ಜಾಮೀನು ಬಗ್ಗೆ ಮಾತನಾಡಿದ ಅವರು, ಬೇಲ್‌ ಅವರ ಧರ್ಮಸಿದ್ಧ ಹಕ್ಕಾಗಿದೆ. ಜಾಮೀನು ಸಿಕ್ಕರೂ ಕೋರ್ಟ್‌ಗೆ ಹೋಗುತ್ತಿರಬೇಕು. ಅಲ್ಲಿ ವಾದ-ಪ್ರತಿವಾದ ನಡೆಯುತ್ತಿರುತ್ತದೆ. ಜಡ್ಜ್‌ಮೆಂಡ್‌ ಬಂದರೆ ಮತ್ತೆ ಜೈಲ್‌ಗೇ ಹೋಗಬೇಕಾಗುತ್ತದೆ. ದರ್ಶನ್‌ ಆಚೆ ಬಂದೇ ಬರುತ್ತಾರೆ. ಆದರೆ, ಅವರಿಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲೇ ಜಾಮೀನು ಸಿಗೋದು ಎಂದು ಭವಿಷ್ಯ ನುಡಿದಿದ್ದರು. ಇನ್ನು ಈ ಭವಿಷ್ಯ ನಿಜವಾಗುತ್ತಾ ಎಂದು ಕಾದುನೋಡಬೇಕಿದೆ.

ಇದೀಗ ಅದರಂತೆಯೇ ಅಕ್ಟೋಬರ್ 22ರಂದು ಹೈಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ತೀರ್ಪು ಏನು ಬರಲಿದೆ ಎಂದು ಕಾದುನೋಡಬೇಕಿದೆ. ಇನ್ನು ದರ್ಶನ್‌ ಪರ ಹೈಕೋರ್ಟ್‌ನಲ್ಲಿ ವಕೀಲ ಎಸ್‌.ಸುನಿಲ್‌ ಕುಮಾರ್‌ ಅವರು ವಾದ ಮಂಡನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಬೆಂಗಲೂರಿನ 57ನೇ ಸಿಸಿಎಚ್‌ ಕೋರ್ಟ್‌ನಲ್ಲಿ ನಟ ದರ್ಶನ್‌ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು ವಾದ ಮಂಡನೆ ಮಾಡಿದ್ದರು. ಸರ್ಕಾರದ ಪರವಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡನೆ ಮಾಡಿದ್ದರು. ಕೊನೆಗೆ ವಾದ-ವಿವಾದವನ್ನು ಆಲಿಸಿದ್ದ 57ನೇ ಸಿಸಿಎಚ್‌ ಕೋರ್ಟ್‌ ದರ್ಶನ್‌ & ಪವಿತ್ರಾ ಗೌಡಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಇಬ್ಬರು ಆರೋಪಿಗಳಿಗೆ ಮಾತ್ರ ಜಾಮೀನು ನೀಡಿ ಆದೇಶ ಹೊರಡಿಸಿತ್ತು.

ಇಬ್ಬರಿಗೆ ಜಾಮೀನು: ಎಸ್‌ಪಿಪಿ ಪ್ರಸನ್ನ ಕುಮಾರ್ ಹೇಳಿದಂತೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ13 ಆರೋಪಿ ದೀಪಕ್‌ ಹಾಗೂ ಎ8 ಆರೋಪಿ ರವಿಶಂಕರ್‌ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಎ2 ಆರೋಪಿ ನಟ ದರ್ಶನ್, ಎ1 ಪವಿತ್ರಾಗೌಡ, ಎ11 ನಾಗರಾಜ್, ಎ12 ಲಕ್ಷ್ಮಣ್ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+