Ajay Rao: ಜ್ಯೋತಿಷ್ಯವನ್ನು ಫಾಲೋ ಮಾಡಬಾರದು- ಅಜಯ್ ರಾವ್
ಸ್ಯಾಂಡಲ್‌ವುಡ್ ನಟ ಅಜಯ್ ರಾವ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಜೀವನದಲ್ಲಿ ಜ್ಯೋತಿಷ್ಯವನ್ನು ಫಾಲೋ ಮಾಡಬಾರದು ಯಾಕೆಂದರೆ ನಾನು ಸ್ವಲ್ಪ ಮಟ್ಟಿಗೆ ಜ್ಯೋತಿಷ್ಯವನ್ನು ತಿಳಿದಿದ್ದೇನೆ ಎಂದು ತಾಜ್ ಮಹಲ್ ನಟ ಅಜಯ್ ರಾವ್ ಹೇಳಿದ್ದಾರೆ. ಅಷ್ಟಕ್ಕೂ ಅಜಯ್ ರಾವ್ ಹೀಗೆ ಹೇಳಿದ್ದು ಯಾಕೆ?
ರಾಪಿಡ್ ರಶ್ಮಿ ಜೊತೆಗೆ ಸಂದರ್ಶನದಲ್ಲಿ ಮಾತನಾಡಿದ ಅಜಯ್ ರಾವ್ ತಮಗೆ ನಟನೆಯೊಂದಿಗೆ ಮತ್ತೊಂದು ವಿದ್ಯೆಯೂ ಗೊತ್ತಿದೆ ಎಂದು ಹೇಳಿಕೊಂಡಿದ್ದಾರೆ. ಜ್ಯೋತಿಷ್ಯವನ್ನು ಸ್ವಲ್ಪ ಮಟ್ಟಿಗೆ ತಿಳಿದಿದ್ದೇನೆ. ಅದನ್ನು ಹೆಚ್ಚಾಗಿ ಅನುಸರಿಸಬಾರದು ಎಂದು ಅಜಯ್ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಅಜಯ್ ರಾವ್ ಒಬ್ಬ ಉತ್ತಮ ನಟ. ಇದರೊಂದಿಗೆ ಅವರು ಜ್ಯೋತಿಷ್ಯ ಶಾಸ್ತ್ರವನ್ನು ಬಲ್ಲವರಾಗಿದ್ದಾರೆ. ಇದನ್ನು ಅವರು ಅಧ್ಯಯನ ಮಾಡಿದ್ದಾರೆ. ಆದರೆ ಇದರಲ್ಲಿ ಪಂಡಿತರಲ್ಲದೇ ಇದ್ದರು ಜ್ಯೋತಿಷ್ಯವನ್ನು ಫಾಲೋ ಮಾಡುವವರಿಗೆ ಕಿವಿ ಮಾತು ಹೇಳಿದ್ದಾರೆ. ಜೊತೆಗೆ ಜ್ಯೋತಿಷ್ಯವನ್ನು ಯಾಕೆ ಅನುಸರಿಸಬಾರದು ಎನ್ನುವುದಕ್ಕೆ ವಿವರಣೆ ಕೂಡ ನೀಡಿದ್ದಾರೆ.
ಜ್ಯೋತಿಷ್ಯ ಶಾಸ್ತ್ರವನ್ನು ಕೊಂಚ ಮಟ್ಟಿಗೆ ಗೊತ್ತಿದೆ. ಮೇಧಾವಿ ಅಲ್ಲ. ಇದು ಆಸಕ್ತಿದಾಯಕ ವಿಜ್ಞಾನ. ಅದರೆ ಅದನ್ನು ಫಾಲೋ ಮಾಡಬಾರದು ಎಂದು ಅಜಯ್ ಹೇಳಿದ್ದಾರೆ. ಇದಕ್ಕೆ ವಿವರಣೆಯನ್ನೂ ನೀಡಿದ ಅವರು- 'ಮಳೆ ಬರುತ್ತದೆ. ನಿಮ್ಮ ಪರಿಹಾರಗಳಿಗೆ ಶಾಸ್ತ್ರಿಗಳ ಹತ್ತಿರ ಹೋಗುತ್ತೀರಿ. ಪರಿಹಾರ ಪೂಜೆಗಳನ್ನು ಅವರು ಹೇಳುತ್ತಾರೆ. ಆ ಬಳಿಕ ಒಂದು ಛತ್ರಿ ಸಿಗಬಹುತೇ ವಿನ: ಮಳೆಯಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲ. ಜ್ಯೋತಿಷ್ಯ ಅನ್ನೋದು ಒಂದು ಚಿಕ್ಕ ಬೆಂಬಲ ಅಷ್ಟೇ. ಕಷ್ಟದ ಸಮಯದಲ್ಲಿ ಒಂದು ಕವಚ ಬರುತ್ತದೆ. ಆ ಕಾಲವನ್ನು ಯಾವಾಗಲೂ ಬದಲಾಯಿಸೋಕೆ ಸಾಧ್ಯವಿಲ್ಲ' ಎಂದು ಅಜಯ್ ಹೇಳಿದ್ದಾರೆ.
ಹೀಗಾಗಿ ಜ್ಯೋಷಿತ್ಯವನ್ನು ಎಲ್ಲಾ ಸಮಸ್ಯೆಗೆ ಪರಿಹಾರವಾಗಿ ನಾವು ನೋಡಬಾರದು. ಅದೊಂದು ಸಣ್ಣ ಪರಿಹಾರ ಅಷ್ಟೇ, ಸಮಸ್ಯೆಗಳಿಂದ ನಮ್ಮನ್ನು ದೂರ ಮಾಡಲು ಸಾಧ್ಯವಿಲ್ಲ. ಅದನ್ನು ನಾವು ಅನುಭವಿಸಲೇಬೇಕು. ಅದರಿಂದ ಸಣ್ಣ ಪರಿಹಾರ ಮಾತ್ರ ನಮಗೆ ಸಿಗಬಹುದು ಅಷ್ಟೇ ಎಂದು ಅಜಯ್ ರಾವ್ ಹೇಳಿದ್ದಾರೆ.
ನಟ ಅಜಯ್ ರಾವ್ ಮತ್ತು ಸ್ವಪ್ನ ಅಜಯ್ ರಾವ್ ಅವರು 2014 ಡಿಸೆಂಬರ್‌ನಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಯದ್ದು ಲವ್ ಕಂ ಅರೇಂಜ್ ಮ್ಯಾರೇಜ್. ಹೀಗೆ ಪರಿಚಯವಾಗಿ, ಆ ಪರಿಯಚಯ ಸ್ನೇಹಕ್ಕೆ ಮತ್ತು ಸ್ನೇಹ ಪ್ರೀತಿಗೆ ತಿರುಗಿ ನಂತರ ಸಪ್ತಪದಿ ತುಳಿದಿದ್ದರು. ಸದ್ಯ ಈ ಜೋಡಿಗೆ ಚೆರಿಷ್ಮಾ ಎಂಬ ಹೆಸರಿನ ಮುದ್ದಾಗ ಮಗಳಿದ್ದಾಳೆ. ಸುಂದರ ಸಂಸಾರ ಅಜಯ್ ಕೃಷ್ಣ ಅವರದ್ದಾಗಿದೆ. ಆದರೆ ಇಬ್ಬರದ್ದು ಶುಭ ಮುಹೂರ್ತದಲ್ಲಿ ಆದ ಮದುವೆ ಅಲ್ಲ. ಹೀಗಾಗಿ ಇವರ ದಾಂಪತ್ಯ ಮುರಿದು ಬೀಳುತ್ತದೆ ಎಂದು ಹೇಳಲಾಗಿತ್ತಂತೆ. ಸಿನಿಮಾ ಕೂಡ ಪ್ಲ್ಯಾಪ್ ಆಗುತ್ತದೆ ಎಂದು ಹೇಳಿದ್ದರು. ಆದರೆ ಕೊನೆ ಏನೂ ಆಗಿಲ್ಲ. ಸಿನಿಮಾ ಕೂಡ ಸೂಪರ್ ಹಿಟ್ ಆಯ್ತು ಎಂದಿದ್ದಾರೆ ಅಜಯ್. ನಾನು ಪರ್ಸ್‌ನಲ್ ಆಗಲಿ ಅಥವಾ ಪ್ರೊಫೆಶನಲ್ ಆಗಲಿ, ಟೈಂ ಮತ್ತು ಮುಹೂರ್ತ ನೋಡುವುದಕ್ಕೆ ಹೋಗೋದಿಲ್ಲ. ಶಾಸ್ತ್ರ ಮತ್ತು ಸಂಪ್ರದಾಯಗಳನ್ನು ನಾನು ನಂಬುತ್ತೇನೆ ಆದರೂ ನಾನು ಅದನ್ನು ಫಾಲೋ ಮಾಡಲ್ಲ ಎಂದಿದ್ದಾರೆ.
ಅಜಯ್ ರಾವ್ 'ಎಕ್ಸಕ್ಯೂಸ್ ಮಿ' ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ನಟ. ಸಿನಿಮಾದಲ್ಲಿ ರಮ್ಯಾ ನಂತರ ಪೂಜಾ ಗಾಂಧಿ, ರಚಿತಾ ರಾಮ್ ಹಾಗೂ ಇನ್ನಿತರ ನಟಿಯರೊಂದಿಗೆ ನಟಿಸಿದ್ದಾರೆ. ಇದೀಗ 'ಯುದ್ಧಕಾಂಡ' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.












Click it and Unblock the Notifications