ಅಶ್ವಿನಿ ಪುನೀತ್ ರಾಜಕುಮಾರ್ ಪರ ಧ್ವನಿ ಎತ್ತಿದ ನಟ ಜಗ್ಗೇಶ್: ಹೇಳಿದ್ದೇನು?
ಹುಬ್ಬಳ್ಳಿ, ಏಪ್ರಿಲ್ 07: ಆರ್‌ಸಿಬಿ ಪಂದ್ಯಾವಳಿ ಸೋಲಿನ ಕುರಿತು ಕರ್ನಾಟಕ ರತ್ನ ದಿ.ಪುನೀತ್ ರಾಜಕುಆರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ವಿರುದ್ಧ ಕೀಳುಮಟ್ಟದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆ ಕುರಿತು ಇದೀಗ ಬಿಜೆಪಿ ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಅವರು ಪ್ರತಿಕ್ರಿಯಿಸಿದ್ದಾರೆ.
ಸಿನಿಮಾಗಳ ವಿಚಾರದಲ್ಲಿ ಸ್ಟಾರ್ ವಾರ್ ಕಾಮನ್ ಎಂಬ ಮಾತಿದೆ. ಆದರೆ ಅತಿರೇಕಕ್ಕೆ ಹೋದಾಗ ಮಾತ್ರ ಅಸಹ್ಯವೆನಿಸುತ್ತದೆ. ಸ್ಟಾರ್ ವಾರ್ ವಿರೋಧಿಸುತ್ತಿದ್ದ ನಟ ಪುನೀತ್ ಅವರು ಇಂದಿ ನಮ್ಮೊಂದಿಗಿಲ್ಲ. ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ನಟ ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕೀಳುಮಟ್ಟದಲ್ಲಿ ನಿಂದಿಸಲಾಗಿದೆ.

ಅಪ್ಪು ಅಭಿಮಾನಿಗಳ ಆಕ್ರೊಶ
ಇದಕ್ಕೆ ಅಪ್ಪು ಅವರ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಅವಹೇಳನಕಾರಿ ಪೋಸ್ಟ್ ಖಂಡಿಸಿ ಕನ್ನಡ ಚಿತ್ರರಂಗದ ಹಲವು ಕಲಾವಿದರೂ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲದೇ ನಾಡಿನ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಮಹಿಳೆ ಕುರಿತು ಅಗೌರವ ತೋರುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ನಟ ಜಗ್ಗೇಶ್ ಟ್ವೀಟ್ ಖಂಡಿಸಿ ಟ್ವೀಟ್
ಇದೀಗ ಡಾ. ರಾಜ್ ಕುಮಾರ್ ಅವರು ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಇರುವ ನಟ ಜಗ್ಗೇಶ್ ಅವರು ವೈರಲ್ ಪೋಸ್ಟ್ ಅನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.
ಅವರ ಟ್ವೀಟ್‌ನಲ್ಲಿ ''ಪುನೀತನ ಮಡದಿ ಅಣಕಿಸಿದ ನತದೃಷ್ಟರೆ ನಿಮಗು ತಾಯಿ ಇರಬೇಕು ಹಾಗು ತಾಯಿ ಬೆಲೆ ಗೊತ್ತಿರಬೇಕು...ಒಂದುವೇಳೆ ತಾಯಿ ಹೆಣ್ಣು ಗೌರವ ಇಲ್ಲ ಎಂದರೆ ಕಂಡಿತ ಅಂಥವರು ಮನುಗುಲಕ್ಕೆ ಅನರ್ಹ!
ಪುನೀತನ ಮಡದಿ ಅನಾಥಳಲ್ಲಾ ತನ್ನ ಪ್ರೀತಿಸುತ್ತಿದ್ದ ಕೋಟ್ಯಾಂತರ ಅಭಿಮಾನಿಗಳ ಬಳುವಳಿ ಕೊಟ್ಟು ಹೋಗಿದ್ದಾನೆ. ಹೆಣ್ಣು ಕುಲಕ್ಕೆ ನೋವುಕೊಟ್ಟವ ಉದ್ಧಾರ ಆಗಿದ್ದು ಇತಿಹಾಸವಿಲ್ಲಾ!'' ಎಂದು ಅವರು ಬೇಸರ ಹೊರ ಹಾಕಿದ್ದಾರೆ.

ಕೀಳ ಪದಗಳಲ್ಲಿ ನಿಂದಿಸಿದ ಪೋಸ್ಟ್ ವೈರಲ್
2024ರ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚೆಂಜರ್ಸ್ ಪ್ರಚಾರ ವಿಚಾರ ಇಟ್ಟುಕೊಂಡು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಆರ್‌ಸಿಪಿ ಸೋಲಿಗೆ ಕಾರಣ ಎಂದು ಕೀಳು ಪದಗಳನ್ನು ಬಳಸಿ ಪೋಸ್ಟ್ ಮಾಡಿದ್ದಾರೆ. ಇದು ದರ್ಶನ್ ಅಭಿಮಾನಿ ಎನ್ನಲಾಗುತ್ತಿರುವ ವ್ಯಕ್ತಿಯಿಂದ ಕೃತ್ಯ ನಡೆದಿದೆ.
ಮೊದಲು ಈ ವ್ಯಕ್ತಿಯು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಎಕ್ಸ್‌ನಲ್ಲಿ 'ಗಜಪಡೆ' ಹೆಸರಿನ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದ. ಪೋಸ್ಟ್‌ಗೆ ವೈರಲ್ ಆಗುತ್ತಿದ್ದಂತೆ ಟ್ವಿಟ್ಟರ್ ಹ್ಯಾಂಡಲ್ ಹೆಸರನ್ನು ಗಜಪಡೆ ಬದಲಾಗಿ ಕಿಚ್ಚ ಸುದೀಪ್ ಅಭಿಮಾನಿ ಎಂದು ಬದಲಾಯಿಸಿದ್ದ. ಈ ಮೂಲಕ ತಾನು ಮಾಡಿದ ಕೃತ್ಯವನ್ನು ಸುದೀಪ್ ಅಭಿಮಾನಿಗಳ ತಲೆ ಕಟ್ಟಲು ಯತ್ನಿಸಿದ್ದ.
ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವ್ಯಾಪಕ ಖಂಡನೆಗಳು ವ್ಯಕ್ತವಾದವು. ಸಾಮಾಜಿಕ ಜಾಲತಾಣದಲ್ಲಿ ತಪ್ಪಿತಸ್ಥತನ್ನು ಬಂಧಿಸಿ ಎಂಬ ಆಗ್ರಹ ಜೋರಾಗಿದೆ. ಜೊತೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಸಾಮಾಜಿಕ ಜಾಲತಾನದಲ್ಲಿ ಸಾಕಷ್ಟು ಬೆಂಬಲ ಸಿಕ್ಕಿದ್ದು, ನಿಮ್ಮೊಂದಿಗೆ ನಾವಿದ್ದೇವೆ. ಇಂತಹ ಕಿಡಿಗೇಡಿಗಳ ಮಾತಿಗೆ, ನೀಚತನಕ್ಕೆ ಕಿವಿಕೊಡಬೇಡಿ ಎಂದು ಧೈರ್ಯ ತುಂಬಿದ್ದಾರೆ.












Click it and Unblock the Notifications