ಕನ್ನಡದ ಮತ್ತೊಂದು ಪ್ರಮುಖ ಸೀರಿಯಲ್ ಶುಭಾಂತ್ಯ!
ಕನ್ನಡದ ಪ್ರಮುಖ ಸೀರಿಯಲ್ ಮುಕ್ತಾಯವಾಗುತ್ತಿದೆ. ಇತ್ತೀಚಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾ ರಾಮ ಧಾರಾವಾಹಿ ಮುಕ್ತಾಯವಾಗಿತ್ತು. ಇದೀಗ ಕೆಲವೇ ತಿಂಗಳುಗಳಲ್ಲಿ ಮತ್ತೊಂದು ಪ್ರಮುಖ ಸೀರಿಯಲ್ ಮುಕ್ತಾಯವಾಗುತ್ತಿದೆ. ಆದರೆ ಈ ಸೀರಿಯಲ್ ಮುಕ್ತಾಯವಾಗಲಿದೆ ಎಂದು ಆರು ತಿಂಗಳು ಮುಂಚೆಯೇ ಪ್ರೇಕ್ಷಕರು ನಿರೀಕ್ಷೆ ಮಾಡಿದ್ದರು. ಅದಕ್ಕೆ ಮುಖ್ಯ ಕಾರಣ ಈ ಸೀರಿಯಲ್‌ನಲ್ಲಿನ ಕಥೆ. ಆದರೆ ಕಥೆ ಮುಂದಕ್ಕೆ ಹೋಗದೆ ಸುತ್ತಿದಲ್ಲೇ ಸುತ್ತುತ್ತಿದೆ ಎಂದು ಈಚೆಗೆ ಈ ಸೀರಿಯಲ್‌ನ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಕಥೆ ಮುಕ್ತಾಯವಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದಲೇ ಈ ಕಥೆಯ ಅಂತ್ಯ ಸುತ್ತಿದಲ್ಲೇ ಸುತ್ತುತ್ತಿರುವ ಕಥೆಯ ಬಗ್ಗೆ ಪ್ರೇಕ್ಷಕರು ಸಣ್ಣ ಅಸಮಾಧಾನ ಹೊರ ಹಾಕುತ್ತಲ್ಲೇ ಇದ್ದರು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಶುಭಾಂತ್ಯ ಎಂದು ಹೇಳಲಾಗಿದೆ. ಒಲವಿಗೆ ವಯಸ್ಸಿನ ಅಂತರವಿಲ್ಲ ಎಂದು ಹೇಳಿದ ಚೆಂದದ ಕಥೆಯ ಶುಭಾಂತ್ಯ! ಶ್ರೀರಸ್ತು ಶುಭಮಸ್ತು 'ಶುಭಾಂತ್ಯ' ಎಂದು ಪ್ರೋಮೋ ಬಿಡುಗಡೆ ಮಾಡಲಾಗಿದೆ.

ಒಲವಿಗೆ ವಯಸ್ಸಿನ ಅಂತರವಿಲ್ಲ ಎಂದು ಹೇಳಿದ ಚಂದದ ಕಥೆ. ತುಳಸಿ - ಮಾಧವರೊಂದಿಗೆ ದಾಂಪತ್ಯ ಗೀತೆಯೊಂದಿಗೆ ಮನಗೆದ್ದ ಕಥೆ, ತುಂಬು ಕುಟುಂಬದ ಸ್ವಾರಸ್ಯ ಹೊತ್ತು ಕನ್ನಡಿಗರ ಮನೆಮಾತಾದ ಕಥೆ. ನಮ್ಮೆಲ್ಲರ ಕಥೆಯಾದ ಶ್ರೀರಸ್ತು ಶುಭಮಸ್ತು 'ಶುಭಾಂತ್ಯ' ಎಂದು ಪ್ರೋಮೋ ವಿಡಿಯೋದಲ್ಲಿ ಹೇಳಲಾಗಿದೆ. ಇದಕ್ಕೆ ಸೀರಿಯಲ್‌ನ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಸೀರಿಯಲ್‌ಗಳು ಆರಂಭದಲ್ಲಿ ಎಷ್ಟ್ ಚನ್ನಾಗಿರುತ್ತೋ The End ಅಷ್ಟೇ ಕೆಟ್ಟದಾಗಿ ಇರುತ್ತೆ. ರಾಯರ ಕುದುರೆ.. ಅನ್ನೋಥರ. ಪ್ರಾರಂಭದಲ್ಲಿ ಎಷ್ಟು ಕುತೂಹಲವಾಗಿ ಇರುತ್ತೆ. ಆಮೇಲೆ ಯಾವಾಗ ಮುಗಿಯುತ್ತೋ ಅನ್ನೋ ಹಾಗೆ ಇರುತ್ತೆ. ಸೀತಾರಾಮ, ಜೊತೆ ಜೊತೆಯಲಿ, ಶ್ರೀರಸ್ತು ಶುಭಮಸ್ತು, ಪಾರು, ಪುಟ್ಟಕ್ಕನ ಮಕ್ಕಳು ಎಲ್ಲಾ ಒಂದೇ ಹಾದಿಯಲ್ಲೇ ಇದಾವೆ ಎಂದು ಪ್ರಿಯಾ ಎನ್ನುವವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸೀರಿಯಲ್ ಅನ್ನು ಎರಡು ತಿಂಗಳು ಮುಂಚೆಯೇ ಮುಗಿಸಿದ್ದರೆ ಚೆನ್ನಾಗಿತ್ತು. ಆಗಲೇ ಮುಗಿಸಿದ್ದರೆ ನೈಜವಾಗಿರುತ್ತಿತ್ತು. ಇಷ್ಟೊಂದು ಮುಂದುವರಿಸಬಾರದಿತ್ತು ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪವಿತ್ರಾ ಎನ್ನುವವರು, ಚೆನ್ನಾಗಿತ್ತು ನಾವು ಒಂದು ದಿನ ಬಿಡದ ಹಾಗೆ ನೋಡಿದ್ದೇವೆ ಎಂದಿದ್ದಾರೆ. ರಾಜೇಶ್ವರಿ ಎನ್ನುವವರು ಸೀರಿಯಲ್ ಮಿಸ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಹ ಮುಕ್ತಾಯವಾಗಬೇಕು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಅದು ಇತ್ತೀಚಿನ ದಿನಗಳಲ್ಲಿ ಚೆನ್ನಾಗಿದೆ ಅಂತಲೂ ಹೇಳುತ್ತಿದ್ದಾರೆ. ಒಟ್ಟಾರೆ ಕೆಲವೇ ತಿಂಗಳ ಅಂತರದಲ್ಲಿ ಎರಡು ಪ್ರಮುಖ ಸೀರಿಯಲ್‌ಗಳು ಮುಕ್ತಾಯವಾಗಿದೆ.
ಅಲ್ಲದೇ ಜೀ ಕನ್ನಡ ವಾಹಿನಿಯಲ್ಲಿ ಇನ್ಮುಂದೆ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಶ್ರೀ ಗುರುರಾಯರ ದರ್ಶನ ವೈಭವ! ಶ್ರೀ ರಾಘವೇಂದ್ರ ಮಹಾತ್ಮೆ ಪ್ರಾರಂಭವಾಗಲಿದ್ದು, ಪ್ರೇಕ್ಷಕರು ರಾಯರ ದರ್ಶನಕ್ಕೆ ಕಾತುರದಿಂದ ಕಾಯುತ್ತಿದ್ದಾರೆ.












Click it and Unblock the Notifications