Kajol Fake Video: ಮತ್ತೊಂದು ಡೀಪ್‌ಫೇಕ್ ವಿಡಿಯೋ ವೈರಲ್: ಕ್ಯಾಮರಾ ಎದುರು ಡ್ರೆಸ್ ಚೇಂಜ್ ಮಾಡಿದ ಕಾಜೋಲ್?

ಅರೆಬರೆ ಬಟ್ಟೆ ತೊಟ್ಟು ವಿಡಿಯೋ ಶೇರ್ ಮಾಡುವುದು ಇವತ್ತಿಗೆ ಹೊಸದೇನಲ್ಲ. ಆದರೆ ತಮ್ಮದಲ್ಲದ ದೃಶ್ಯವನ್ನು ಅರೆಬರೆ ಬಟ್ಟೆಯಲ್ಲಿ ಶೇರ್ ಮಾಡುವುದು ಇವತ್ತಿಗೆ ಹೆಚ್ಚು ಸುದ್ದಿಯಾಗುತ್ತಿದೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮುಖವಿರುವ ಡೀಪ್‌ಫೇಕ್ ವಿಡಿಯೋ ಸೆಲೆಬ್ರಿಟಿಗಳ ನಿದ್ದೆಗೆಡಿಸುವುದು ಮಾತ್ರವಲ್ಲದೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ ಇಂಥಹದ್ದೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಬಾಲಿವುಡ್‌ನ ಖ್ಯಾತ ನಟಿ ಕಾಜೋಲ್ ಡ್ರೆಸ್ ಚೇಂಜ್ ಮಾಡುತ್ತಿರುವುದು ಕಂಡುಬಂದಿದೆ. ಕ್ಯಾಮರಾ ಎದುರು ಕಾಜೋಲ್ ಡ್ರೆಸ್ ಚೇಂಜ್ ಮಾಡಿದ್ರಾ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಉದ್ಬವಿಸುತ್ತಿದ್ದಂತೆ ಮತ್ತದೇ ಡೀಪ್‌ಫೇಕ್ ವಿಡಿಯೋ ನೆನಪಿಗೆ ಬಂದಿದೆ. ಅದಾಗ್ಯೂ ಅನೇಕರು ಇದು ಕಾಜೋಲ್ ಅವರದ್ದೇ ವಿಡಿಯೋ ಎಂದು ನಂಬಿದ್ದಾರೆ.

another-deepfake-video-viral

ಆದರೆ ಇದರ ಸತ್ಯಾಸತ್ಯತೆ ಪರಿಶೀಲನೆ ಮಾಡಿದಾಗ ಇದರ ಅಸಲಿಯತ್ತು ಬಯಲಾಗಿದೆ. ಇದು ಡೀಪ್‌ಫೇಕ್ ಎಂಬುದು ಸ್ಪಷ್ಟವಾಗಿದೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡ ನಿಜವಾದ ಮಹಿಳೆ ಇಂಗ್ಲೀಷ್ ಸೋಶಿಯಲ್ ಮೀಡಿಯಾ ಇನ್‌ಫ್ಲೂಯನ್ಸರ್‌ ರೋಸಿ ಬ್ರೀನ್. ಈಕೆ ಕೆಲವು ದಿನಗಳ ಹಿಂದೆ ಟಿಕ್‌ಟಾಕ್‌ನಲ್ಲಿ ಈ ವಿಡಿಯೋವನ್ನು ಶೇರ್‌ಮಾಡಿದ್ದಳು. 'ಗೆಟ್ ರೆಡಿ ವಿತ್ ಮೀ' ಟ್ರೆಂಡ್‌ನ ಅಂಗವಾಗಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದರು.

ಈ ವಿಡಿಯೋವನ್ನು ಬಳಸಿಕೊಂಡು ಕಿಡಿಗೇಡಿಗಳು ಕಿಡಿಹಚ್ಚಿದ್ದಾರೆ. ವಿಡಿಯೋದಲ್ಲಿ ರೋಸಿ ಬ್ರೀನ್ ಮುಖದ ಬದಲಾಗಿ ಕಾಜೋಲ್ ಮುಖವನ್ನು ಅಂಟಿಸಿದ್ದಾರೆ. ಇದನ್ನೇ ನಿಜವೆಂದು ಭಾವಿಸಿದ ಕೆಲವರು ಕಾಜೋಲ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಡೀಪ್‌ಫೇಕ್ ವಿಡಿಯೋ ಬಗ್ಗೆ ಚರ್ಚೆ ಶುರುವಾಗಿದ್ದು ರಶ್ಮಿಕಾ ಮಂದಣ್ಣ ಅವರ ಮುಖವಿರುವ ವಿಡಿಯೋದಿಂದ.

another-deepfake-video-viral

ಇತ್ತೀಚೆಗೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರನ್ನು ಇದೇ ರೀತಿ ತೋರಿಸಲಾಗಿತ್ತು. ಈ ವಿಡಿಯೋ ಸಾಕಷ್ಟು ವೈರಲ್ ಆಗಿ ರಶ್ಮಿಕಾ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ದಂಗಾಗಿ ಹೋಗಿದ್ರು. ಕೊಂಚವೂ ಭಿನ್ನತೆ ಇಲ್ಲದೆ ಸೃಷ್ಟಿಸುವ ಈ ವಿಡಿಯೋ ಸೆಲೆಬ್ರಿಟಿಗಳ ನಿದ್ದೆಗೆಡಿಸಿದೆ. ಒಂದೇ ಒಂದು ಸೆಲೆಬ್ರಿಟಿಯ ಮುಖವನ್ನು ಬದಲಾಯಿಸಿದರೆ ಮುಗಿತು. ದೇಹ ಯಾರದ್ದೇ ಆಗಲಿ ಹೇಗೆ ಇರಲಿ ಅದು ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದೆ. ಈ ತಂತ್ರಜ್ಞಾನ ಬಳಕೆ ಮಾಡಿ ಸೆಲೆಬ್ರಿಟಿಗಳ ಮಾನಭಂಗ ಮಾಡುತ್ತಿರುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಲು ಒತ್ತಾಯ ಹೆಚ್ಚಾಗಿದೆ.

ಹೀಗಾಗಿ ಸೈಬರ್ ಕ್ರೈಮ್ ವಿರುದ್ಧ ಶೀರ್ಘವೇ ಕಠಿಣ ಕಾನೂನು ಜಾರಿ ಆಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಫೇಮಸ್ ಸೆಲೆಬ್ರಿಟಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಡೀಪ್‌ಫೇಕ್ ವಿಡಿಯೋ ಕ್ರಿಯೇಟ್ ಮಾಡುತ್ತಿರುವುದಕ್ಕೆ ಖಂಡನೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+