ಆಂಕರ್ ಅನುಶ್ರೀ ಮದುವೆ ಬಗ್ಗೆ ಮತ್ತೊಂದು ಅಪ್ಡೇಟ್ಸ್, ನಿರೂಪಕಿ ಸಾಗಿ ಬಂದ ಜೀವನ ಹೇಗಿತ್ತು?

ಆಂಕರ್ ಅನುಶ್ರೀ ವಿವಾಹದ ಬಗ್ಗೆ ಸಖತ್ ಸುದ್ದಿಯೊಂದು ಈಗಾಗಲೇ ಬಹಿರಂಗವಾಗಿದೆ. ಅಭಿಮಾನಿಗಳು ಖುಷಿ ಆಗಿದ್ದಾರೆ. ಮದುವೆ ಯಾವಾಗ ಎಂದೆಲ್ಲ ಕೇಳುತ್ತಿದ್ದು, ಹೋದಲ್ಲಿ ಬಂದಲ್ಲಿ ಅವರನ್ನು ಕಾಡುತ್ತಿದ್ದ ಪ್ರಶ್ನೆಗಳಿಗೆ ಸ್ವತಃ ಅನುಶ್ರೀ ಅವರ ಕುಟುಂಬಸ್ಥರೇ ಉತ್ತರ ನೀಡಿದ್ದಾರೆ. ಅವರ ಮದುವೆ ಫಿಕ್ಸ್ ಸುದ್ದಿ ಹೊರ ಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಅನುಶ್ರೀಗೆ ಹರಿದು ಬಂದಿವೆ. ಎಲ್ಲರಂತೆ ಏಳು ಬೀಳು ಕಂಡ ಕರಾವಳಿಯ ಬೆಡಗಿ ಆಂಡರ್ ಅನುಶ್ರೀ ನಿರೂಪಣೆಗೆ ಬಂದಿದ್ದೇಗೆ? ಯಾವೆಲ್ಲ ಸಿನಿಮಾಗಳಲ್ಲಿ ನಟಿಸಿದ್ದಾರೆ? ಕೆಲ ಪ್ರತಿಷ್ಠಿತ ರಿಯಾಲಿಟಿ ಶೋಗಳು ಹಾಗೂ ಆಗಸ್ಟ್‌ನಲ್ಲಿ ಅವರ ಮದುವೆ ಎಲ್ಲಿ ನಡೆಯುತ್ತೆ? ಎಂಬ ವಿವರ ಇಲ್ಲಿದೆ.

ಇದೇ ವರ್ಷ ಮಾರ್ಚ್ ತಿಂಗಳಲ್ಲಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಮದುವೆ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದ ನಟಿ ಮತ್ತು ಆಂಕರ್ ಅನುಶ್ರೀ ಅವರ ವಿವಾಹ ಮುಂದಿನ ತಿಂಗಳು 2025 ಆಗಸ್ಟ್ 28ರಂದು ನಡೆಯಲಿದೆ. ತುಳು ಕುಟುಂಬದಲ್ಲಿ ಜನಿಸಿದ ಕರಾವಳಿ ಬೆಡಗಿ ಅನುಶ್ರೀ ಮಂಗಳೂರು ಮೂಲದ ಉದ್ಯಮಿ ರೋಷನ್ ಎಂಬುವವರನ್ನು ವರಿಸಲಿದ್ದಾರೆ. ಈಗಾಗಲೇ ಎರಡು ಕುಟುಂಬದವರು ಬಹಿರಂಗಪಡಿಸಿದ್ದಾರೆ. ಈ ಮೂಲಕ ಮದುವೆ ಬಗ್ಗೆ ಅನುಶ್ರೀ ಅಭಿಮಾನಿಗಳ ಕಾತರತೆಗೆ ಬ್ರೇಕ್ ಬಿದ್ದಿದೆ.

Anchor Anushree Marriage in Bengaluru Date on August 28th Know Her Life amp amp Entry for Anchoring

ಆಂಕರ್ ಅನುಶ್ರೀ ಜರ್ನಿ ಶುರುವಾಗಿದ್ದೇಗೆ?

ಮಾತಿನ ಮಲ್ಲಿ, ಸಖತ್ ನಿರೂಪಣೆಯಿಂದ ಈ ಹಂತಕ್ಕೆ ಬಂದ ಅನುಶ್ರೀ ಅವರು ತಮ್ಮದೇ ಆದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಮೋಡಿದ್ದಾರೆ. 'ಟೆಲಿ ಆಂತ್ಯಕ್ಷರಿ' ಕಾರ್ಯಕ್ರಮದಿಂದ ತಮ್ಮ ವೃತ್ತಿಜೀವನ ಆರಂಭಿಸಿದ ಅನುಶ್ರೀ ಬಳಿಕ ಇಟಿವಿ ಕನ್ನಡದ 'ಡಿಮ್ಯಾಂಡಪ್ಪೋ ಡಿಮಾಂಡು' ಕಾರ್ಯಕ್ರಮದಿಂದ ಜನಪ್ರಿಯತೆ ಪಡೆದುಕೊಂಡರು.

ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡ-1ರಲ್ಲಿ ಭಾಗವಹಿಸಿ 76 ದಿನ ಬಿಗ್‌ ಬಾಸ್‌ ಮನೆಯಲ್ಲಿದ್ದರು. 'ಸುವರ್ಣ ಫಿಲ್ಮ್ ಅವಾರ್ಡ್ಸ್' 'ಫಿಲ್ಮ್‌ಫೇರ್ ಅವಾರ್ಡ್ಸ್' ಹಾಗೂ 'ಎಸ್‌ಐಐಎಂಎ' ನಂತಹ ಮಹತ್ವದ ಕಾರ್ಯಕ್ರಮಗಳನ್ನು ಅವರು ನಿರೂಪಣೆ ಮಾಡಿದ್ದಾರೆ. ಸಣ್ಣದರಿಂದ ದೊಡ್ಡ ಕಾರ್ಯಕ್ರಮಗಳ ನಿರೂಪಣೆಗೂ, ರಿಯಾಲಿಟಿ ಶೋಗಳ ನಿರೂಪಣೆಗೆ ಆಂಕರ್ ಅನುಶ್ರೀ ಬೇಕೆ ಬೇಕು ಎನ್ನುವಷ್ಟರ ಮಟ್ಟಿಗೆ ಅವರು ಬೆಳೆದಿದ್ದಾರೆ.

Anchor Anushree Marriage in Bengaluru Date on August 28th Know Her Life amp amp Entry for Anchoring

ನಿರೂಪಣೆಗೆ ಬಂದ ಮೇಲೆ ಕೆಲವು ಕಷ್ಟಗಳನ್ನು ಎದುರು ನೋಡಿರುವ ಅನುಶ್ರೀ ಅವರು ಸವಾಲುಗಳನ್ನು ಮೆಟ್ಟಿ ತಾಯಿಯನ್ನು ನೋಡಿಕೊಂಡಿದ್ದಾರೆ. ಮನೆಯ ಜ್ವವಾಬ್ದರಿಗಳನ್ನು ನಿರ್ವಹಿಸಿದ್ದಾರೆ. ನಿರೂಪಣೆ ಜೊತೆಗೆ ಜೊತೆಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬೆಂಕಿಪಟ್ನ', 'ಉಪ್ಪು ಹುಳಿ ಖಾರ' ಮತ್ತು 'ಮುರಳಿ ಮೀಟ್ಸ್ ಮೀರಾ' ಚಿತ್ರಗಳಲ್ಲಿ ನಟಿಸಿದ್ದಾರೆ. 'ಮುರಳಿ ಮೀಟ್ಸ್ ಮೀರಾ' ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಸದ್ಯ ಅವರದ್ದೇ ಸ್ವಂತಹ 'ಆಂಕರ್ ಅನುಶ್ರೀ' ಯೂಟ್ಯೂಬ್ ಚಾನೆಲ್ ಮೂಲಕ ನಟ-ನಟಿಯರ, ಕಲಾವಿದರ ಸಂದರ್ಶನ ಮಾಡುತ್ತಾರೆ. ರಂಜಿಸುತ್ತಾರೆ. ಇಷ್ಟೆಲ್ಲ ಮಾಡುವವರ ಮದುವೆ ಒಂದು ಬಾಕಿ ಇತ್ತು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಆಂಕರ್ ಅನುಶ್ರೀ ಮದುವೆ ಎಲ್ಲಿ?

ಒಬ್ಬ ಸ್ಟಾರ್ ಸೆಬೆಬ್ರೆಟಿ ರೀತಿಯಲ್ಲಿ ಒಬ್ಬ ನಿರೂಪಕಿಯ ಮದುವೆ ಬಗ್ಗೆ ಸಾಕಷ್ಟು ಕ್ರೇಜ್ ಸೃಷ್ಟಿಯಾಗಿದ್ದು ಬಹುಶಃ ಇದೇ ಮೊದಲು ಎನ್ನಬಹುದು. ಅನುಶ್ರೀ ಮದುವೆ ಯಾವಾಗ ಎಂದವರಿಗೆ ಉತ್ತರ ಸಿಕ್ಕಿದೆ. ಅನುಶ್ರೀ ಮನೆಯಲ್ಲಿ ನೋಡಿದ ಹುಡುಗನನ್ನು ಅವರು ಒಪ್ಪಿಕೊಂಡಿದ್ದಾರೆ. ಎರಡು ಕಡೆಗೆ ಮದುವೆ ಸಂಭ್ರಮ ಜೋರಾಗಿದೆ. ಆಭರಣ, ಬಟ್ಟೆ-ಬರೆ ಖರೀದಿ ಜೋರಾಗಿದೆ. ರಾಜಧಾನಿ ಬೆಂಗಳೂರಿನಲ್ಲೇ ಸಂಪ್ರದಾಯದಂತೆ ಅದ್ಧೂರಿಯಾಗಿ ಅನುಶ್ರೀ ಮದುವೆ ನಡೆಯಲಿದೆ. ಸಾಕಷ್ಟು ಕಲಾವಿದರು, ಆಪ್ತರು, ನಟ-ನಟಿಯರು ಅನುಶ್ರೀ ಮದುವೆ ಆಗಮಿಸುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+