ಮದುವೆ ಯಾವಾಗ.? ಕೊನೆಗೂ ಮನದಾಳದ ಆಸೆ ಹೊರಹಾಕಿದ ನಿರೂಪಕಿ ಅನುಶ್ರಿ
Anchor Anushree: ಕನ್ನಡದ ಖ್ಯಾತ ನಿರೂಪಾಕಿ ಅನುಶ್ರೀ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಲೇ ಇದ್ದರು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜಿ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲೂ ಕೂಡ ಅಕುಲ್ ಬಾಲಾಜಿ ಅವರು ಇದೇ ಪ್ರಶ್ನೆಯನ್ನು ಕೇಳಿದ್ದು, ಈ ವೇಳೆ ಅನುಶ್ರೀ ಕೊನೆಗೂ ತಮ್ಮ ಮದುವೆ ಯಾವಾಗ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ಅನುಶ್ರೀ ಅವರು ಎಲ್ಲಿ ಹೋದರೂ ಕೂಡ ಅವರಿಗೆ ಯೂಟ್ಯೂಬರ್ಸ್ ಮೊದಲು ಕೇಳುತ್ತಿದ್ದ ಪ್ರಶ್ನೆಯೇ ನಿಮ್ಮ ಮದುವೆ ಯಾವಾಗ ಮೇಡಂ ಅಂತಾ. ಈ ಪ್ರಶ್ನೆಗಳಿಗೆ ಇದೀಗ ಸ್ವತಃ ಅನುಶ್ರೀ ಅವರೇ ಬಾಯಿಬಿಟ್ಟಿದ್ದಾರೆ. ಹಾಗೆಯೇ ಯಾವ ವರ್ಷ ಮದುವೆ ಅಂತಲೂ ಹೇಳಿ ಗಮನ ಸೆಳೆದಿದ್ದಾರೆ. ಆದರೆ, ಅವರು ಯಾರನ್ನು ಮದುವೆಯಾಗಲಿದ್ದಾರೆ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ಅನುಶ್ರೀ ಹೇಳಿದ್ದೇನು?: ಅಕುಲ್ ಬಾಲಾಜಿ ಅವರು ಅನು ಈಗ ಇಡೀ ಭಾರತದಲ್ಲೇ ಅನುಶ್ರೀ ಅವರ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಅವರೇ ಸಾಕ್ಷತ್ ನಡೆದುಕೊಂಡು ಬಂದರೆ ಏನು ಮಾಡ್ತೀರಾ ಎಂದು ಕಾಮಿಡಿಯಿಂದ ಕೇಳುತ್ತಾರೆ. ಇದಕ್ಕೆ ಉತ್ತರಿಸಿದ "ನಿರೂಪಕಿ ಅನುಶ್ರೀ ಅವರು, "ನನ್ನ ಮದುವೆ ಚಿಂತೆ ಮನೆಯವರಿಗಿಂತ ಯೂಟ್ಯೂಬ್ ಅವರಿಗೆ ಜಾಸ್ತಿ ಇರೋದು. ಪ್ರತಿ ವಾರ ಈ ಪ್ರಶ್ನೆಯನ್ನು ಕೇಳುತ್ತಲೇ ಇದ್ದರು," ಎಂದು ಹೇಳಿದರು.
"ಎಲ್ಲಾ ಹುಡುಗಿಯರಿಗೆ ಇರುವ ಆಸೆ ನನಗೂ ಇದೆ. ನನಗೂ ಜೀವನದಲ್ಲಿ ಒಬ್ಬ ಬಾಳ ಸಂಗಾತಿ ಬರಬೇಕಂತ ಆಸೆ ಇರತ್ತೆ. ಆದರೆ, ಎಲ್ಲದಕ್ಕೂ ತನ್ನದೇ ಆದಂತಹ ಸಮಯ, ಗಳಿಗೆ ಇರುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿ ಬರಬೇಕಾಗಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನಾನು ಮದುಯಾಗುವುದಕ್ಕೆ ಮನಸ್ಸು ಮಾಡಬೇಕಾಗಿತ್ತು. ಇಷ್ಟು ವರ್ಷಗಳ ಕಾಲ ಮನಸ್ಸು ಮಾಡಿರಲಿಲ್ಲ. ಇದೇ ಮೊಟ್ಟ ಮೊದಲ ಬಾರಿ ನಾನು ಮನಸ್ಸು ಮಾಡಿದ್ದೇನೆ ಮದುವೆ ಆಗಬೇಕಂತ," ಎಂದು ಹೇಳಿದರು.
"ಕನ್ನಡಿಗರ ಆಶೀರ್ವಾದದಿಂದ ಮುಂದಿನ ವರ್ಷ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಆ ನನ್ನ ಸರದಾರ, ಆ ಹುಡುಗ ನನ್ನ ಬದುಕಲ್ಲಿ ಬರ್ಲಿ. ಬಂದ್ರೆ ನಿಮ್ಮ ಮುಂದೆ ಅವರನ್ನು ಕರೆದುಕೊಂಡು ಬಂದು ನಿಲ್ಲಿಸಿ ಪರಿಚಯ ಮಾಡಿಸಿಕೊಡುವಂತಹ ಅದೃಷ್ಟ ನನ್ನದಾಗಲಿ ಅಂತಾ ಅಂದುಕೊಳ್ಳುತ್ತೇನೆ," ಎಂದು ಹೇಳುವ ಮೂಲಕ ಗಮನ ಸೆಳೆದರು.
ಒಟ್ಟಿನಲ್ಲಿ ಈ ಮೂಲಕ ತಮ್ಮ ಮದುವೆಯ ಬಗ್ಗೆ ಕೇಳುತ್ತಿದ್ದ ಪ್ರತಿಯೊಬ್ಬರಿಗೂ ಅನುಶ್ರೀ ಅವರು ಉತ್ತರವ ಕೊಟ್ಟಿದ್ದಾರೆ. ಹಾಗೆಯೇ ತನ್ನ ಸಂಗಾತಿ ಯಾರೆಂದು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಅಂತಲೂ ಹೇಳಿ ಮತ್ತಷ್ಟು ಕುತೂಹಲವನ್ನು ಹುಟ್ಟುಹಾಕಿದ್ದಾರೆ.












Click it and Unblock the Notifications