ಅರ್ಜುನ್ ಜನ್ಯಾ & ಆಂಕರ್ ಅನುಶ್ರೀ ನಡುವೆ ದಿಢೀರ್ ಮುನಿಸು? Anchor Anushree
2025 ಆಂಕರ್ ಅನುಶ್ರೀ ಅವರ ಅಭಿಮಾನಿಗಳಿಗೆ ಜೀವನದಲ್ಲಿ ಮರೆಯಲು ಆಗದ ವರ್ಷ ಎನ್ನಬಹುದು. ಆಂಕರ್ ಅನುಶ್ರೀ ಅವರು ತಮ್ಮ 37ನೇ ವಯಸ್ಸಿನಲ್ಲಿ ಮದುವೆ ಅಗಿದ್ದಾರೆ, ಆಂಕರ್ ಅನುಶ್ರೀ ಅವರ ಈ ಮದುವೆ ಸುದ್ದಿ ಕೇಳಿದ ಅಭಿಮಾನಿಗಳು ಕೂಡ ಖುಷಿಯಲ್ಲಿ ಕುಣಿದಾಡಿದ್ದಾರೆ. ಕೋಟಿ ಕೋಟಿ ಅಭಿಮಾನಿ ಹೃದಯಗಳ ಹಾರೈಕೆ ಇದೀಗ ನಿಜವಾಗಿದೆ. ಜೀವನದಲ್ಲಿ ನೂರಾರು ಕಷ್ಟಗಳನ್ನು ಎದುರಿಸಿದ್ದ ಅನುಶ್ರೀ, ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಚಾರ ಅನುಶ್ರೀ ಅವರ ಅಭಿಮಾನಿಗಳ ಎದೆಯಲ್ಲಿ ತಂಗಾಳಿ ಹರಿಸಿದೆ. ಹೀಗಿದ್ದಾಗಲೇ, ಅರ್ಜುನ್ ಜನ್ಯಾ & ಆಂಕರ್ ಅನುಶ್ರೀ ನಡುವೆ ದಿಢೀರ್ ಜಗಳ ಆಗಿತ್ತಾ...
ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾಗಿದ್ದರು ಆಂಕರ್ ಅನುಶ್ರೀ ಅವರು. ಕನ್ನಡ ರಿಯಾಲಿಟಿ ಕಾರ್ಯಕ್ರಮಗಳ ಪೈಕಿ ನಂಬರ್-1 ಶೋ ನಡೆಸಿಕೊಡುವುದು ಆಂಕರ್ ಅನುಶ್ರೀ ಅವರು. ಜೀ ಕನ್ನಡ ಚಾನೆಲ್‌ಗೆ ಆಂಕರ್ ಅನುಶ್ರೀ ಅವರು ದತ್ತು ಪುತ್ರಿ ಆಗಿ ಹೋಗಿದ್ದಾರೆ ಅಂತಾ ಜನರು ಕೂಡ ಪ್ರೀತಿಯಿಂದ ಮಾತನಾಡುತ್ತಾರೆ. ಯಾಕಂದ್ರೆ ಜೀ ಕನ್ನಡ ಚಾನೆಲ್ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಅನುಶ್ರೀ ಅವರ ನಿರೂಪಣೆ ಬೇಕೆ ಬೇಕು. ಅದೇ ರೀತಿ ಸರ್ಕಾರಿ ಕಾರ್ಯಕ್ರಮ & ಖಾಸಗಿ ಕಾರ್ಯಕ್ರಮ ಕೂಡ ಆಂಕರ್ ಅನುಶ್ರೀ ಅವರಿಂದಲೇ ನಿರೂಪಣೆ ಮಾಡಿಸಲಾಗುತ್ತದೆ.

ಆಂಕರ್ ಅನುಶ್ರೀ ನಂಬರ್ ಒನ್ ಆಂಕರ್!
ಹೌದು, ತಮಾಷೆಗಾಗಿ ಆಂಕರ್ ಅನುಶ್ರೀ ಅವರು & ಅರ್ಜುನ್ ಜನ್ಯ ಕಿರಿಕ್ ಮಾಡಿಕೊಂಡ ಹಳೆಯ ವಿಡಿಯೋ ವೈರಲ್ ಮಾಡಲಾಗುತ್ತಿದೆ. ಕೆಲವು ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ದಿಢೀರ್ ವೈರಲ್ ಮಾಡಿ, ನಿಜವಾಗಿಯೂ ಕಿರಿಕ್ ಆಗಿದೆ ಎಂಬ ರೀತಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಇದು ಹಳೆಯ ವಿಡಿಯೋ ಆಗಿದ್ದು, ರಿಯಾಲಿಟಿ ಶೋಗೆ ಅಂತಾ ಮಾಡಿದ ಆಕ್ಟಿಂಗ್ ಅನ್ನೋ ಬಗ್ಗೆ ಅಭಿಮಾನಿಗಳು ಈಗ ಉತ್ತರವನ್ನು ನೀಡುತ್ತಿದ್ದಾರೆ.












Click it and Unblock the Notifications