Anupama Gowda: ಆತ್ಮಹತ್ಯೆಗೆ ಯತ್ನಿಸಿದ್ದರಾ ನಿರೂಪಕಿ ಅನುಪಮಾ ಗೌಡ?: ಆ ಕಹಿ ಕಹಾನಿ ಏನು?
ಕನ್ನಡ ಕಿರುತೆರೆಯ ನಟಿ, ನಿರೂಪಕಿ ಅನುಪಮಾ ಗೌಡ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಕಷ್ಟದ ಹಾದಿಯಲ್ಲಿ ಸಾಗಿ ಬಂದ ಅನುಪಮಾ ಗೌಡ ಈಗ ತಮ್ಮದೇ ಆದ ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ಮೊದಲು ತಮ್ಮ ನಟನೆಯಿಂದ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಅನುಪಮಾ ಗೌಡ ಬಳಿಕ ನಿರೂಪಕಿಯಾಗಿ ಕೂಡ ಸೈ ಎನಿಸಿಕೊಂಡರು. ಇನ್ನು ಬಿಗ್‌ಬಾಸ್ ಅವಕಾಶ ಮಿಸ್ ಮಾಡಿಕೊಳ್ಳದ ಅವರು, ಬಿಗ್‌ಬಾಸ್ ಸೀಜನ್ 5 ಸ್ಪರ್ಧಿಯಾಗಿ ಬಂದು ಜನರಿಗೆ ಮತ್ತಷ್ಟು ಹತ್ತಿರವಾದರು.
ಸದ್ಯ ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿರುವ ಅನುಪಮಾ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್. ಹೆಚ್ಚೆಚ್ಚು ಟ್ರಾವೆಲ್ ಮಾಡುತ್ತಾ ತಮ್ಮ ಸುಂದರ ಅನುಭವಗಳನ್ನು ಹಂಚಿಕೊಳ್ಳುವ ಅವರು, ಆಗಾಗ ಸಖತ್ ಲುಕ್‌ನಲ್ಲಿ ಫೋಟೋಶೂಟ್ ಹಾಗೂ ರೀಲ್ಸ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದಾ ನಗು, ಮುಖದಲ್ಲೊಂದು ಪಾಸಿಟಿವ್ ವೈಬ್ ಇರುವ ಅನುಪಮಾ ಗೌಡ ತಮ್ಮ ಬದುಕಿನಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ.

ನಟನೆ ಆರಂಭಿಸುವ ಮೊದಲಲ್ಲ, ನಟಿಯಾದ ಮೇಲೂ ಅನುಪಮಾ ಗೌಡ ಮಾನಸಿಕ ಖಿನ್ನತೆಗೊಳಾಗಿದ್ದರು ಎನ್ನುವ ವಿಚಾರವನ್ನು ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಆದರೆ ಪ್ರಸ್ತುತ ನಾವು ಕಾಣುತ್ತಿರುವ ಅನುಪಮಾ ಅವರನ್ನು ಕಂಡರೆ ಇದು ಸುಳ್ಳು ಎನ್ನಬಹುದು ಯಾಕೆಂದರೆ ಅಷ್ಟರ ಮಟ್ಟಿಗೆ ಅವರು ಹಸನ್ಮುಖಿ. ಆದರೆ ಇತ್ತೀಚಿಗೆ ನಡೆದ ಸಂದರ್ಶವೊಂದರಲ್ಲಿ ಸ್ವತಃ ಅನುಪಮಾ ಗೌಡ ಅವರೇ ಆ ಕಹಿ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

'ಸುಮಾರು 7-8 ವರ್ಷಗಳ ಹಿಂದೆ ನಾನು ಖಿನ್ನತೆಗೆ ಒಳಗಾಗಿದ್ದೆ. ಆಗ ನಾನು ಆತ್ಮಹತ್ಯೆ ಯೋಚಿಸಿದ್ದೆ. ಆ ಸಮಯದಲ್ಲಿ ಬದುಕಿನ ಬಗ್ಗೆ ಹೋಪ್ ಇರಲಿಲ್ಲ. ನನಗೆ ಇಂಡಸ್ಟ್ರಿ, ಫ್ಯಾಮಿಲಿ ವೈಯಕ್ತಿಕ ಜೀವನ ಇದನ್ನೆಲ್ಲಾ ಧೈರ್ಯವಾಗಿ ಹೇಗೆ ನೋಡಬೇಕು ಅಂತಾ ಗೊತ್ತಿರಲಿಲ್ಲ. ಅಂತಹ ಸಂದರ್ಭ ಬಂದಿದ್ದಕ್ಕೆ, ಅದೇ ವೇಳೆ ನನ್ನ ಸ್ನೇಹಿತರು ನನ್ನ ಜೊತೆ ನಿಂತಿದ್ದಕ್ಕೆ, ಕೆಲವೊಂದು ಶೋಗಳು ನನಗೆ ಸಿಕ್ಕಿದ್ದಕ್ಕೆ ಬಹುಶಃ ನಾನು ಸ್ಟ್ರಾಂಗ್ ಆಗಿಬಿಟ್ಟೆ. ಮುಂದೆ ಹೋಗುತ್ತಾ ಹೋಗುತ್ತಾ.. ಒಂದೊಂದು ಹಂತದಲ್ಲಿ ಒಬ್ಬರನ್ನು ಭೇಟಿಯಾಗುತ್ತಾ ಹೋಗುತ್ತೇವೆ. ಅವರಿಂದ ಒಂದೊಂದು ಪಾಠವನ್ನು ಕಲಿಯುತ್ತಾ ಹೋಗುತ್ತೇವೆ. ಆ ಪಾಠನೇ ನಮ್ಮನ್ನು ಇನ್ನಷ್ಟು ಸ್ಟ್ರಾಂಗ್ ಆಗಿ ಮಾಡಿಬಿಡುತ್ತದೆ. ನಾವು ಹೇಳಬಹುದು ನಾವು ದುಡಿಯುತ್ತೇವೆ, ನಾವು ಇಂಡಿಪೆಂಡೆಂಟ್ ಅದಕ್ಕೆ ನಾನು ಸ್ಟ್ರಾಂಗ್ ಅನ್ನಬಹುದು. ಆದರೆ ಸಮಯ ಸಂದರ್ಭಗಳು ನಮ್ಮನ್ನು ಗಟ್ಟಿ ಮಾಡುತ್ತವೆ ಎನ್ನುವ ಮಾತುಗಳನ್ನು ಅನುಪಮಾ ಗೌಡ ಹೇಳಿದ್ದಾರೆ.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ












Click it and Unblock the Notifications