Amruthadhare Serial: ಮತ್ತೆ ಬಂದ ಕೇಡಿ ಜೈದೇವ್; ಮನೆಯಲ್ಲಿ ಅವಿತ್ತಿದ್ದು ಶಾಕ್ ಕೊಟ್ಟ ಭೂಮಿಕಾ! ಹೊಸ ಟ್ವಿಸ್ಟ್
Amruthadhare Serial: ಅಮೃತಧಾರೆ ಸೀರಿಯಲ್ನಲ್ಲಿ ವೀಕ್ಷಕರು ನಿರೀಕ್ಷೆ ಮಾಡಿದಂತೆಯೇ ಕೇಡಿ ಜೈದೇವ್ ವಾಪಸ್ ಬಂದಿದ್ದಾನೆ. ಜೈದೇವ್ ವಾಪಸ್ ಬಂದ ಬೆನ್ನಲ್ಲೇ ಕೇಡಿ ಜೈದೇವ್ ಹಾಗೂ ಭೂಮಿಕಾ ಮುಖಾಮುಖಿಯಾಗಿದ್ದಾರೆ. ಜೈದೇವ್ - ಭೂಮಿಕಾ ಮುಖಾಮುಖಿಯಾಗಿದ್ದಾರೆ. ಜೈದೇವ್ ಬದುಕಿದ್ದಾನೆ ಎನ್ನುವ ಅನುಮಾನ ಇದೀಗ ನಿಜವಾಗಿದೆ. ನಾನು ನನ್ನ ಮನೆಯಲ್ಲೇ ಇದ್ದೀನಿ... ಅನ್ನೋದು ಯಾರೊಬ್ಬರಿಗೂ ಗೊತ್ತಾಗಲ್ಲ ಅಂತ ಹೇಳುತ್ತಿದ್ದಂತೆಯೇ ಭೂಮಿಕಾ ಕಾಣಿಸಿಕೊಂಡಿದ್ದಾಳೆ.
ಜೈದೇವ್ ಬರುವುದಕ್ಕಿಂತ ಮುಂಚೆಯೇ ಭೂಮಿಕಾ ಬಂದು ಮನೆಯಲ್ಲಿ ಕುಳಿತಿದ್ದಾಳೆ. ವಾರೆವ್ಹಾ ಏನ್ ಭೂಮಿಕಾ ಬಂದು ನನ್ನ ಮನೆಯೊಳಗಡೆನೇ ಹಿಂಗೆ ಸ್ಟೈಲ್ ಆಗಿಕುಂತ್ಕೊಂಡಿದ್ದೀಯ, ಮೆಚ್ಚಿದೆ ನಿನ್ನ ಅಂತ ಕೇಳಿದ್ದಾನೆ. ಇದಕ್ಕೆ ಭೂಮಿಕಾ ನೀನು ಬದುಕಿದ್ದೀಯಾ ಅಂತ ಆ ದೇವರಿಗೆ ಧನ್ಯವಾದ ಹೇಳಲಾ... ಇಲ್ಲ ನಿನ್ನಂತಹ ರಾಕ್ಷಸನಿಗೆ ಸಾವೇ ಇಲ್ಲ. ಕುತಂತ್ರಕ್ಕೆ ಅಂತ್ಯವೇ ಇಲ್ಲ ಅಂತ ಅವನ ಪ್ರಶ್ನೆ ಮಾಡಲಾ ಒಂದು ಅರ್ಥವಾಗ್ತಿಲ್ಲ. ಈ ಟೀಚರಮ್ಮ ನಿಮಗೊಂದು ಕಥೆನ ನೆನಪು ಮಾಡಿಸ್ತಾಳೆ. ಶಿಶುಪಾಲ ನೂರು ತಪ್ಪು ಮಾಡಿದ ಆದರೂ ಶ್ರೀಕೃಷ್ಣ ಅವನಿಗೆ ಶಿಕ್ಷೆ ಕೊಡಲಿಲ್ಲ. ಆದರೆ ನೂರ ಒಂದನೆ ತಪ್ಪು ಮಾಡಿದ ತಕ್ಷಣ ಶಿಶುಪಾಲ ಪಾತಾಳಕ್ಕೆ ಹೋದ.. ಅವನು ನ್ಯಾಯ ಮಾಡುತ್ತಾನೆ, ಅವನು ನಿಮಗೆ ಶಿಕ್ಷೆ ಕೊಡ್ತಾನೆ ಅಂತ ಭೂಮಿಕಾ ಸವಾಲು ಹಾಕಿದ್ದಾಳೆ. ಅಲ್ಲದೆ ಜೋಪಾನ ಅಂತಲೂ ಎಚ್ಚರಿಸಿದ್ದಾಳೆ.

Amruthadhare Serial: ಶಕುಂತಲಾದೇವಿ ಮುಂದೆ ಸತ್ಯ ಬಿಚ್ಚಿಟ್ಟ ಜೈದೇವ್
ತಾಯಿ ಶಕುಂತಲಾ ದೇವಿಯ ಮುಂದೆ ಜೈದೇವ್ ಸತ್ಯ ಬಿಚ್ಚಿಟ್ಟಿದ್ದಾನೆ. ದಿಯಾ ಮತ್ತೆ ಅನು ಎನ್ನುವ ಹುಡುಗಿ ಕಾಣೆ ಆಗಿರೋದಕ್ಕೆ ನಾನೇ ಕಾರಣ ಅಂತ, ಅದಕ್ಕೆ ಸಾಕ್ಷಿ ಕಲೆ ಹಾಕುವುದಕ್ಕೆ ಮಲ್ಲಿ, ಭೂಮಿಕಾ, ಜೀವಾ ಮೂರು ಜನ ಸೇರಿಕೊಂಡು ಒಬ್ಬಳು ಹುಡುಗಿ, ಪಿಸಿನ ಅಂಡರ್ ಕವರ್ ಏಜೆಂಟ್ ಆಗಿ ನನ್ನ ಹಿಂದೆ ಬಿಟ್ರು ಆದರೆ ಅವರ ತುಕಾಲಿ ಪ್ಲ್ಯಾನ್ ಫ್ಲಾಪ್ ಆಗಿ ಆ ಹುಡುಗಿ ನನ್ನ ಹತ್ರ ತಗ್ಲಾಕೊಂಡ್ಲು. ಆ ಹುಡುಗಿನ ಯೂಸ್ ಮಾಡಿಕೊಂಡು ಇವರಿಗೆಲ್ಲರಿಗೂ ಒಂದು ಫುಲ್ ಸ್ಟಾಪ್ ಹಾಕಬೇಕು ಅಂತ ಒಂದು ಒಳ್ಳೆಯ ಮುಹೂರ್ತ ಫಿಕ್ಸ್ ಮಾಡಿ ಇವರನ್ನಲ್ಲೆ ಒಂದು ಜಾಗಕ್ಕೆ ಕರ್ಸಕೊಂಡೆ. ಆದರೆ ಜಸ್ಟ್ ಮಿಸ್ಸ್ ಗುಳ್ಳೆ ನರಿಗಳ ತರ ನನ್ನ ಮೇಲೆ ಹಲ್ಲೆ ಮಾಡಿ. ನನ್ನ ಕಥೆಗೆ ಫುಲ್ ಸ್ಟಾಪ್ ಹಾಕೋಕೆ ನೋಡಿದ್ರು ಅಂತ ಜೈದೇವ್ ಹೇಳಿದ್ದಾನೆ. ಅಲ್ಲದೆ ಅಂದು ನಡೆದ ವಿಚಾರವನ್ನೆಲ್ಲ ವಿವರಿಸಿ ಹೇಳಿದ್ದಾನೆ.
Amruthadhare Serial: ವೀಕ್ಷಕ ತಾಳ್ಮೆ ಪರೀಕ್ಷೆ ನಡೆಯುತ್ತಿದೆ ಎಂದ ನೆಟ್ಟಿಗರು
ಇನ್ನು ಅಮೃತಧಾರೆ ಸೀರಿಯಲ್ ಹೊಸ ಎಪಿಸೋಡ್ಗಳಿಗೆ ಹಾಗೂ ಜೈದೇವ್ ವಾಪಸ್ ಬಂದಿರುವುದಕ್ಕೆ ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾವನ್ನಪ್ಪಿರುವ ವ್ಯಕ್ತಿ ವಾಪಸ್ ಬರುವುದಕ್ಕೆ ಹೇಗೆ ಸಾಧ್ಯ, ಪೆದ್ದು ಪೊಲೀಸ್ನಿಂದಲೇ ಈ ಬುದ್ಧಿವಂತ ತಪ್ಪಿಸ್ಕೊಂಡಿದ್ದು ಎಂದು ನೆಟ್ಟಿಗರು ಹೇಳಿದ್ದಾರೆ. ಇಷ್ಟು ದಿನ ಚೆನ್ನಾಗಿತ್ತು ಇನ್ನುಮೇಲೆ ಏನೂ ಗೊತ್ತಾಗ್ತಿಲ್ಲ ಯಾಕೆಂದ್ರೆ ಜೈದೇವ್ನ ಹೂತಲ್ಲಿ ಸಿಸಿಟಿವಿ ಫೋರ್ಟೆಜ್ ಹೇಗೆ ಬಂತು, ಜೊತೆಗೆ ಜೈದೇವ್ ಹೂತಲ್ಲಿಂದ ಹೇಗೆ ಎದ್ದು ಬಂದ ಅಂತ ತಲೆಬುಡ ಅರ್ಥ ಆಗ್ತಿಲ್ಲ ವಿಚಿತ್ರ ಧಾರವಾಹಿ ಆಗ್ಬಾರ್ದಷ್ಟೇ ಅಂತಲೂ ಕೆಲವರು ಹೇಳಿದ್ದಾರೆ.


Click it and Unblock the Notifications
