Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ಡಬಲ್ ಟ್ವಿಸ್ಟ್: ದೀಪಿಕಾ ಬರ್ತಿಲ್ಲ ಕೇಡಿ ಬಿಡ್ತಿಲ್ಲ!
Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬರ್ತಿದ್ದು, ದೀಪಿಕಾ ಬರ್ತಾಳಾ ಎನ್ನುವ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ಒಂದು ಕಡೆ ದೀಪಿಕಾ ಬರ್ತಿಲ್ಲ ಕೇಡಿ ಬಿಡ್ತಿಲ್ಲ! ಮತ್ತೊಂದು ಕಡೆ ಭೂಮಿಕಾನ ಮುಗಿಸುವುದಕ್ಕೆ ಕೇಡಿ ಜೈದೇವ್ ಹಾಕಿದ್ದ ಪ್ಲ್ಯಾನ್‌ಗಳು ತಲೆಕೆಳಗಾಗಿವೆ. ಕೊನೆಗೂ ಭೂಮಿಕಾ, ಜೈದೇವ್ ಹಾಗೂ ಶಕುಂತಲಾದೇವಿ ಮುಖಾಮುಖಿಯಾಗಿದ್ದಾರೆ. ಆದರೆ ಇದರ ಹೊರತಾಗಿಯೂ ಹಲವು ಟ್ವಿಸ್ಟ್‌ಗಳಿವೆ. ಕಳೆದ ಕೆಲವು ಸಂಚಿಕೆಗಳಿಂದ ಗೌತಮ್ ದಿವಾನ್ ಪಾತ್ರ ಕಾಣಿಸಿಕೊಂಡಿಲ್ಲ. ಈ ಬದಲಾವಣೆಯೂ ಸಹ ಚರ್ಚೆಗೆ ಕಾರಣವಾಗಿದೆ. ಹೊಸ ಎಪಿಸೋಡ್‌ನಲ್ಲಿ ಏನಿದೆ ಎನ್ನುವ ವಿವರ ನೋಡೋಣ.
ಅಮೃತಧಾರೆಯಲ್ಲಿ ಇತ್ತೀಚಿನ ಸಂಚಿಕೆಗಳು ತುಂಬಾ ರೋಚಕವಾಗಿ ಮೂಡಿ ಬರ್ತಿದೆ. ಭೂಮಿಕಾ ತಂಗಿ ದೀಪಿಕಾ ಪಾತ್ರ ಎಂಟ್ರಿ ಕೊಟ್ಟ ಮೇಲೆ ಒಂದರ ಮೇಲೊಂದು ಟ್ವಿಸ್ಟ್ ಪ್ರಾರಂಭವಾಗಿದೆ. ಭೂಮಿಕಾ ಮನೆಯಲ್ಲಿ ಕಾಣಿಸ್ತಿಲ್ಲ ಅಂತ ಎಲ್ಲರೂ ಶಾಕ್ ಆಗಿದ್ದಾರೆ. ಆ ಹುಡುಗಿ ಏನಾದ್ರು ಟ್ರ್ಯಾಕಿಗೆ ಬಂದ್ಳಾ, ಏನಾಯ್ತು ಅಂತ ಶಕುಂತಲಾದೇವಿ, ಜೈದೇವ್‌ನ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಜೈದೇವ್ ಅವರು ಹೆದರಿಕೊಂಡು ಓಡಿಹೋಗಿದ್ದಾಳೆ ಇಲ್ಲ ಮನೆಯಲ್ಲಿ ಅಂತ ಹೇಳಿದ್ದಾನೆ.

ಇದೇ ಸಂದರ್ಭಕ್ಕೆ ಸರಿಯಾಗಿ ಬಂದಿರುವ ಭೂಮಿಕಾ, ಯಾಕೆ ಇಷ್ಟೊಂದು ಗಾಬರಿಯಿಂದ ನೋಡ್ತಾ ಇದ್ದೀರಾ ಹೇಗೆ ವಾಪಸ್ ಬಂದ್ಳು ಅಂತನಾ ಇಲ್ಲ ಇನ್ನೂ ಸತ್ತೇ ಇಲ್ಲ ಅಂತನಾ ಅಂತ ಪ್ರಶ್ನೆ ಮಾಡಿದ್ದಾಳೆ. ನಿಮ್ಮಂತಹ ಎಷ್ಟೇ ಜನ ಬಂದರೂ ಈ ಭೂಮಿಕಾಗೆ ಏನು ಮಾಡೋಕೆ ಆಗಲ್ಲ ಅಂತ ಭೂಮಿಕಾ ಸವಾಲು ಹಾಕಿದ್ದಾಳೆ. ಆದರೆ, ಇದು ಒಂದೊಮ್ಮೆ ದೀಪಿಕಾ ಇರಬಹುದು ಅಂತಲೂ ಜನ ಗೆಸ್ ಮಾಡಿದ್ದಾರೆ.
Amruthadhare Serial: ದೀಪಿಕಾ & ಟೀಂನಲ್ಲಿ ಕಾಸಿನದ್ದೇ ಚರ್ಚೆ
ಇನ್ನು ದೀಪಿಕಾ ಸಿಟಿಗೆ ಬರೋದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾಳೆ. ಆದರೆ, ಒಂದೇ ಏಟಿಗೆ ನನ್ನ ಎಲ್ಲ ಸಮಸ್ಯೆ ತೀರಿ ಹೋಗುತ್ತೆ ಅಷ್ಟೊಂದು ದುಡ್ಡು ಕೊಡ್ತಾರಂತೆ ಅಂತಲೂ ದೀಪಿಕಾ ಅವರ ಶಿಷ್ಯಂದಿರಿಗೆ ಹೇಳಿದ್ದಾಳೆ. ಅಷ್ಟೊಂದು ದುಡ್ಡು ಬಂದರೆ ನನ್ನ ಕಷ್ಟವೆಲ್ಲ ತೀರಿ ಹೋಗುತ್ತೆ, ಐಷಾರಾಮಿ ಜೀವನ ನಡೆಸಬಹುದು ಎನ್ನುವ ಲೆಕ್ಕಾಚಾರದಲ್ಲೂ ದೀಪಿಕಾ & ಅವರ ಟೀಂ ಇದೆ. ಹಣದ ಆಸೆಗೆ ಭೂಮಿಕಾಳಂತೆ ದೀಪಿಕಾ ಬಂದು ಅಭಿನಯಿಸುತ್ತಾಳಾ ಎನ್ನುವುದು ಕುತೂಹಲ ಮೂಡಿದೆ.
Amruthadhare Serial: ದೀಪಿಕಾಗಾಗಿ ಭೂಮಿಕಾನೇ ಬಲಿ ಕೊಡಲು ಮುಂದಾದ ಕೇಡಿ ಜೈದೇವ್!
ದೀಪಿಕಾಗಾಗಿ ಭೂಮಿಕಾನೇ ಬಲಿ ಕೊಡುವುದಕ್ಕೆ ಕೇಡಿ ಜೈದೇವ್ ಮುಂದಾಗಿದ್ದಾನೆ. ಅಜ್ಜಿಗೆ ಎದೆನೋವು ಕಾಣಿಸಿಕೊಂಡಿದೆ ಅಂತ ಭೂಮಿಕಾಗೆ ಕಾಲ್ ಬಂದಿದೆ. ಇಷ್ಟೊತ್ತಲ್ಲಿ ನೀವೊಬ್ಬರೇ ಹೋಗುವುದು ಬೇಡ ಅಂತ ಮಲ್ಲಿ ತಡೆದಿದ್ದರೂ, ಅವರ ಮಾತು ಕೇಳದೆ ಭೂಮಿಕಾನೇ ಕಾರು ಓಡಿಸಿಕೊಂಡು ಅಜ್ಜಿನ ನೋಡೋಕೆ ಹೋಗಿ ದ್ದಾಳೆ. ಭೂಮಿಕಾ ಮನೆಯಿಂದ ಹೊರ್ಡತ್ತಾಳೆ ಮುಂದೇನು ಅಂತ ಶಕುಂತಲಾ ದೇವಿ ಕೇಳಿದ್ದಾಳೆ.
ಇದಕ್ಕೆ ಕೇಡಿ ಜೈದೇವ್ ಭೂಮಿಕಾ ಚಿಕ್ಕಮಗಳೂರಿಗೆ ಹೋಗ ಬೇಕಾದರೆ ಆ ಒಂದು ದಾರಿಯಲ್ಲೇ ಹೋಗಬೇಕು. ಅವಳು ಹೋಗುವ ದಾರಿಯಿಂದ ನನಗೆ ಬೇಕಾದ ದಾರಿಗೆ ಕರೆದುಕೊಳ್ಳುವುದಕ್ಕೆ ಆಲ್‌ರೆಡಿ ಮಾರ್ಗ ಬದಲಾವಣೆಯ ಬೋರ್ಡ್‌ಗಳು ರೆಡಿ ಇದೆ. ಮುಂದೆ ದಾರಿ ಇದೆ ಅನಿಸುತ್ತೆ ಆದರೆ ಅದು ದಾರಿ ಅಲ್ಲ ಕ್ವಾರಿ ಅಂತ ಜೈದೇವ್ ಹೇಳಿದ್ದಾನೆ. ಕ್ವಾರಿಗೆ ಭೂಮಿಕಾ ಕಾರು ಬೀಳಲಿದೆ ಎನ್ನುವಂತೆ ತೋರಿಸಲಾಗಿದೆ.


Click it and Unblock the Notifications
