Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್ ಸತ್ತಿಲ್ಲ, ಹೊಸ ಟ್ವಿಸ್ಟ್‌ ನ್ಯೂ ವಿಲನ್ ಎಂಟ್ರಿ!

ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಜೈದೇವ್ ಕೊಲೆಯಾಗಿದೆ ಎಂದೇ ತೋರಿಸಲಾಗಿತ್ತು. ಇದೀಗ ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ವಿಲನ್ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಜೈದೇವ್ ಸಹ ಬದುಕಿದ್ದಾನೆ ಎನ್ನುವಂತೆ ತೋರಿಸಲಾಗಿದೆ. ಜೈದೇವ್ ಕೊಲೆ ಕೇಸ್‌ನಲ್ಲಿ ಭೂಮಿಕಾ ಹಾಗೂ ಜೀವಾಗೆ ಸಂಕಷ್ಟ ಎದುರಾಗಲಿದೆ ಎನ್ನುವಂತೆಯೇ ತೋರಿಸಲಾಗಿತ್ತು. ಆದರೆ ಇದೀಗ ಜೈದೇವ್ ಬದುಕಿ ಬಂದಿರುವಂತೆ ತೋರಿಸಲಾಗಿದೆ. ಆದರೆ, ಜೈದೇವ್ ಬದುಕಿದ್ದಾನೆ ಎನ್ನುವ ವಿಷಯ ರಿವೀಲ್ ಆಗಿರುವ ಬೆನ್ನಲ್ಲೇ ಸೀರಿಯಲ್‌ಗೆ ಹೊಸ ವಿಲನ್ ಎಂಟ್ರಿ ಕೊಟ್ಟಿರುವಂತೆ ತೋರಿಸಲಾಗಿದೆ.

ಜೈದೇವ್ ಬದುಕಿರಬಹುದು ಎಂದು ಈಚೆಗೆ ಭೂಮಿಕಾ ಅನುಮಾನ ವ್ಯಕ್ತಪಡಿಸಿದ್ದಳು. ಭೂಮಿಕಾ ಅನುಮಾನ ಕೊನೆಗೂ ನಿಜವಾಗಿದೆ. ಜೈದೇವ್‌ ಬದುಕಿದ್ದಾನೆ ಎನ್ನುವ ಸತ್ಯ ಬೆಳಕಿಗೆ ಬಂದಿದೆ. ಇದೇ ಸಂದರ್ಭದಲ್ಲಿ ಜೈದೇವ್ ಬಗ್ಗೆ ನಿಮಗಿಂತ ನನಗೆ ಚೆನ್ನಾಗಿ ಗೊತ್ತಿದೆ ಕೇಡಿ ಜೈದೇವ್ ಬಗ್ಗೆ ಹಾಗೂ ದಾಖಲೆಗಳ ಬಗ್ಗೆ ಮಾಹಿತಿ ಬೇಕಾದರೆ ನನ್ನ ಬಳಿ ಬನ್ನಿ ಅಂತ ಅಪರಿಚಿತ ವ್ಯಕ್ತಿಯೊಬ್ಬ ಶಕುಂತಲಾ ದೇವಿಗೆ ಕರೆ ಮಾಡಿ ಕರೆದಿದ್ದಾನೆ. ಇದು ಹೊಸ ವಿಲನ್ ಎಂಟ್ರಿ ಇರಬಹುದು ಅಂತ ಅಂದಾಜಿಸಲಾಗಿದೆ. ಜೈದೇವ್‌ನ ಶವ ಹೂತ್ತಿದ್ದ ಜಾಗಕ್ಕೆ ಮಲ್ಲಿ, ಭೂಮಿಕಾ ಹಾಗೂ ಜೀವಾ ಹೋಗಿದ್ದಾರೆ. ಆದರೆ, ಆ ಪ್ರದೇಶದಲ್ಲಿ ಜೈದೇವ್ ಶವ ಇಲ್ಲ. ಇದನ್ನು ನೋಡಿ ಎಲ್ಲರು ಶಾಕ್ ಆಗಿದ್ದಾರೆ.

Amruthadhare Serial Bhumika Doubt Comes True Jaidev Is Alive New Villain Enters What New

ಭೂಮಿಕಾ ಅನುಮಾನ ನಿಜವಾಯ್ತು!

ಕೇಡಿ ಜೈದೇವ್ ವಿಚಾರದಲ್ಲಿ ಭೂಮಿಕಾ ಅನುಮಾನ ನಿಜವಾಯ್ತು ಎನ್ನುವಂತೆ ತೋರಿಸಲಾಗಿದೆ. ಸಿಸಿಟಿವಿ ಫೋಟೋಜ್ ಸಿಕ್ಕಿದೆ ನೋಡೋಣ ಅಂತ ಮಲ್ಲಿ, ಭೂಮಿಕಾ ಹಾಗೂ ಜೀವಾ ಇಬ್ಬರನ್ನು ಕರೆದುಕೊಂಡಿ ಹೋಗಿದ್ದಾಳೆ. ಸಿಸಿಟಿವಿ ಫೋಟೋಜ್‌ಸ್‌ನಲ್ಲಿ ಜೈದೇವ್ ಕೈ ಮೇಲೆತ್ತಿರುವಂತೆ ತೋರಿಸಲಾಗಿದೆ. ಇದರೊಂದಿಗೆ ಜೇಡಿ IS Back ? ಎನ್ನುವಂತೆ ತೋರಿಸಲಾಗಿದೆ. ಈ ಮೂಲಕ ಜೈದೇವ್ ಇನ್ನೂ ಮೃತಪಟ್ಟಿಲ್ಲ ಜೀವಂತವಾಗಿಯೇ ಇದ್ದಾನೆ ಎನ್ನುವಂತೆ ತೋರಿಸಲಾಗಿದೆ. ನಿಮ್ಮ ಅನುಮಾನ ನಿಜವಾಯ್ತು ಜೈದೇವ್ ಬದುಕಿದ್ದಾನೆ ಅಂತ ಮಲ್ಲಿ ಹೇಳಿದ್ದಾಳೆ.

ಅಮೃತಧಾರೆ ಸೀರಿಯಲ್‌ಗೆ: ಹೊಸ ವಿಲನ್ ಎಂಟ್ರಿ ?

ಇನ್ನು ಅಮೃತಧಾರೆ ಸೀರಿಯಲ್‌ಗೆ ಹೊಸ ವಿಲನ್ ಎಂಟ್ರಿ ಕೊಡ್ತಿದ್ದಾನಾ ಇಲ್ಲ ಕೇಡಿ ಜೈದೇವ್ ಪಾತ್ರ ಮಾಡುವವರು ಬದಲಾಗಿದ್ದಾರೆಯೇ ಎನ್ನುವ ಕುತೂಹಲ ಮೂಡಿದೆ. ಕೇಡಿ ಜೈದೇವ್ ಬಗ್ಗೆ ಶಕುಂತಲಾ ದೇವಿಗೆ ಅಪರಿತ ವ್ಯಕ್ತಿಯಿಂದ ಕಾಲ್ ಬಂದಿದೆ. ನೀವು ನಿಮ್ಮ ಮಗನನ್ನು ಹುಡುಕುತ್ತಿದ್ದೀರಿ ಅಲ್ವಾ, ನಿಮ್ಮ ಮಗನಿಗೆ ಏನಾಗಿದೆ ಎನ್ನುವುದು ನನಗೆ ಗೊತ್ತು. ನಿಮಗೆ ಸತ್ಯ ಗೊತ್ತಾಗಬೇಕಾದರೆ, ನಾನು ಹೇಳುವ ವಿಳಾಸಕ್ಕೆ ಬನ್ನಿ ಅಂತ ಕರೆದಿದ್ದಾನೆ.

ನೀವು ಯಾರು ಎನ್ನುವ ಶಕುಂತಲಾ ಪ್ರಶ್ನೆಗೆ ನಿಮಗೆ ಇಂಟ್ರಸ್ಟ್‌ ಇದ್ದರೆ ಬನ್ನಿ. ಬಂದರೆ ನಿಮಗೆ ಬೇಕಾಗಿರುವ ಉತ್ತರ ಸಿಗುತ್ತೆ. ನಿಮ್ಮ ಮಗ ಜೈದೇವ್ ಬಗ್ಗೆ ನಿಮಗೆ ಎಷ್ಟು ಗೊತ್ತೋ ಅದಕ್ಕಿಂತ ಜಾಸ್ತಿ ನನಗೆ ಗೊತ್ತಿದೆ. ನನ್ನ ಹತ್ರ ಇರುವ ರೆಕಾರ್ಡಿಂಗ್ಸ್‌ ಎಲ್ಲವನ್ನ ನಿಮಗೆ ತೋರಿಸುತ್ತೀನಿ. ಬರೂದಕ್ಕೆ ಧೈರ್ಯ ಇದ್ದರೆ, ಬನ್ನಿ ಅಂತ ಅಪರಿಚಿತ ವ್ಯಕ್ತಿ ಹೇಳಿದ್ದಾನೆ. ಅಲ್ಲದೆ ನೀವು ನನಗೆ ಸರಿಯಾದ ಬಹುಮಾನ ಕೊಡಬೇಕು ಅಂತನೂ ಡಿಮ್ಯಾಂಡ್ ಮಾಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+