Amruthadhare Serial: ಗೌತಮ್‌ಗೆ ಹೆಂಡ್ತಿ-ಮಗ ಸಿಕ್ಕಾಯ್ತು; ಮಗಳ ಜೊತೆಗೆ ಒಂದಾಗೋದು ಯಾವಾಗ ಗೊತ್ತಾ?
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ತನಗೆ ಅವಳಿ ಮಕ್ಕಳಾಗಿದ್ದು ಎಂಬ ನಿಜ ಗೊತ್ತಾಗಿದೆ. ಅವಳಿ ಮಕ್ಕಳಲ್ಲಿ ಮಗಳನ್ನು ಶಕುಂತಲಾ ಕೊಂದಿದ್ದಾಳೆ ಎಂದು ಭೂಮಿಕಾ ತಿಳಿದುಕೊಂಡಿದ್ದಾಳೆ. ಆದರೆ, ಇದರ ಹಿಂದಿನ ಸತ್ಯ ಬೇರೆಯಾಗಿದೆ. ಅಂದು ಜೈದೇವ್ ಮಗುವನ್ನು ಕಾಡಿನಲ್ಲಿ ಎಸೆದು ಹೋಗಿದ್ದನು. ಮರುದಿನ ಹುಡುಕಾಡಿದಾಗ ಮಗು ಸಿಕ್ಕಿರಲಿಲ್ಲ. ಮಗು ಸತ್ತಿದೆ ಎಂದು ಶಕುಂತಲಾ ಮತ್ತು ಜೈದೇವ್ ತಿಳಿದುಕೊಂಡಿದ್ದಾರೆ. ಇತ್ತ ಶಕುಂತಲಾ ಬೆದರಿಕೆಗೆ ಭೂಮಿಕಾ ಗೌತಮ್ ಹಾಗೂ ಮಗನ ಜೀವ ಕಾಪಾಡಲು ಮನೆ ಬಿಟ್ಟು ಐದು ವರ್ಷ ಕಳೆದಿದ್ದಾಳೆ.
ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷದ ಬಳಿಕ ಕಥೆ ಆರಂಭವಾಗಿದೆ. ಗೌತಮ್ ಮತ್ತು ಭೂಮಿಕಾ ಮಗನ ಪಾತ್ರದಲ್ಲಿ ನಟಿಸುತ್ತಿರೊ ಬಾಲಕ ಎಲ್ಲರಿಗೂ ಇಷ್ಟವಾಗುತ್ತಿದ್ದಾನೆ. ಇತ್ತ ಕ್ಯಾಬ್ ಡ್ರೈವರ್ ಆಗಿ ಐದು ವರ್ಷಗಳ ಕಾಲ ಮಗ ಹಾಗೂ ಹೆಂಡತಿಯನ್ನ ಹುಡುಕುತ್ತಿದ್ದ ಗೌತಮ್ ಗೆ ಕೊನೆಗೂ ಮನದರಸಿ ಭೂಮಿಕಾ ಸಿಕ್ಕಿದ್ದಾಳೆ. ಭೂಮಿಕಾ ಸಿಕ್ಕ ಖುಷಿಯಲ್ಲಿ ಹೂ ಕೊಟ್ಟ ಜೊತೆಯಾಗಿ ಬದುಕಲು ನೂರಾರು ಕಾರಣಗಳಿದ್ದವು ಎಂದು ಗೌತಮ್ ಭೂಮಿಕಾಳನ್ನ ಪ್ರಶ್ನಿಸಿದ್ದಾಳೆ. ಆದರೆ, ಗೌತಮ್ ಹಲವು ಪ್ರಶ್ನೆಗಳಿಗೆ ಉತ್ತರ ಕೊಡದೇ ಭೂಮಿಕಾ ಮತ್ತೆ ನಮ್ಮ ಮುಂದೆ ಬರಬೇಡಿ ಎಂದು ಖಾರವಾಗಿ ಹೇಳಿದ್ದಾಳೆ.

ಗೌತಮ್ ತನ್ನ ಮಗ ಆಕಾಶ್ ಕಣ್ಣೇದುರು ಇದ್ದರೂ ಕೂಡ ಸತ್ಯ ಅರಿಯದ ಗೌತಮ್ ತನ್ನ ಮಗನನ್ನು ಹುಡುಕುತ್ತಾ ಆನಂದ್ ಜೊತೆ ಶಾಲೆಗೆ ಬಂದಿದ್ದಾನೆ. ಆಗ ಆಕಾಶ್ ಮತ್ತೆ ಎದುರಾಗಿದ್ದು, ಮಗನನ್ನು ಹುಡುಕಲು ಸಹಾಯ ಮಾಡುವಂತೆ ತನ್ನ ಮಗನ ಬಳಿ ಮನವಿ ಮಾಡಿದ್ದಾನೆ. ಆಗ ಆಕಾಶ್ ನಿಮ್ಮ ಮಗ ಎಷ್ಟನೇ ಕ್ಲಾಸ್ ಎಂದು ಕೇಳುತ್ತಾನೆ. ಆದರೆ, ಗೌತಮ್ ನನಗೆ ಗೊತ್ತಿಲ್ಲ ನನಗೆ ಸಹಾಯ ಮಾಡು ಎಂದು ಅಪ್ಪುನ ಕೇಳುತ್ತಾನೆ. ಇನ್ನೊಂದು ಕಡೆ ಪ್ರಿನ್ಸಿಪಾಲ್ ಪೋಷಕರನ್ನು ಕರೆತರುವಂತೆ ಆಕಾಶ್‌ಗೆ ಹೇಳಿದ ಹಿನ್ನೆಲೆ ನಾನು ನಿಮಗೆ ಸಹಾಯ ಮಾಡುತ್ತೇನೆ ಆದರೆ ನೀವು ನನ್ನ ತಂದೆಯಂತೆ ಇವತ್ತು ಆಕ್ಟ್ ಮಾಡಬೇಕೆನ್ನುವ ಷರತ್ತು ಹಾಕುತ್ತಾನೆ.
ಪ್ರಿನ್ಸಿಪಾಲ್ ಜೊತೆಗೆ ಅಪ್ಪು ಅಪ್ಪನಾಗಿ ಆಕ್ಟ್ ಮಾಡಿ ಹೊರ ಬಂದ ಬಳಿಕ ಅವರೇ ನಮ್ಮ ತಾಯಿ ಎಂದು ಆಕಾಶ್ ಗೌತಮ್ ಗೆ ತೋರಿಸುತ್ತಾನೆ. ಈ ಸ್ಕೂಲ್ ನಲ್ಲೇ ನಮ್ಮ ಅಮ್ಮ ಟೀಚರ್ ಸರ್ ಎಂದು ಹೇಳುತ್ತಾನೆ. ಈ ಆಕಾಶ್ ನನ್ನ ಮಗ ಎಂದು ಗೌತಮ್ ದಿವಾನ್ ಭಾವುಕನಾಗಿ ಆಕಾಶ್‌ನನ್ನ ತಬ್ಬಿಕೊಂಡು ಭಾವುಕನಾಗುತ್ತಾನೆ. ಮಗನನ್ನು ನೋಡಲು ಬಂದಿರುವ ಗೌತಮ್ ದಿವಾನ್‌ಗೆ ಮುದ್ದು ಕಂದನ ಅಪ್ಪುಗೆ ಸಿಕ್ಕಿದೆ. ಕಳೆದೊಂದು ವಾರದಿಂದ ತನ್ನೊಂದಿಗೆ ತಲೆಹರಟೆ ಮಾಡುತ್ತಿದ್ದ ಹುಡುಗನೇ ತನ್ನ ಮಗ ಎಂದು ತಿಳಿದು ಗೌತಮ್ ಭಾವುಕನಾಗಿದ್ದಾನೆ.
ಇನ್ನೂ ಶಾಲೆಗೆ ಬೇರೆಯವರನ್ನು ಅಪ್ಪ ಎಂದು ಮಗ ಕರೆದುಕೊಂಡು ಬಂದಿರುವ ವಿಷ್ಯ ಭೂಮಿಕಾಗೆ ಗೊತ್ತಾಗಿದೆ. ಆದರೆ, ಮಗ ಅಪ್ಪು ಕರೆದುಕೊಂಡು ಬಂದಿರೋದು ತನ್ನ ಸ್ವಂತ ತಂದೆ ಎಂಬ ಸತ್ಯ ಭೂಮಿಕಾಗೆ ಗೊತ್ತಾಗಿಲ್ಲ. ಹೀಗಾಗಿ ವಿಷಯ ಗೊತ್ತಾಗುತ್ತಿದ್ದಂತೆ ಭೂಮಿಕಾ ಮಗನ ಕ್ಲಾಸ್‌ರೂಮಿಗೆ ಹೋಗಿ ಮಗನನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ಅಲ್ಲದೇ ಮಗ ಮಾಡಿದ ತಪ್ಪಿಗೆ ಭೂಮಿಕಾ ಸಿಕ್ಕಾಗಿದ್ದಾಳೆ. ಇತ್ತ ಐದು ವರ್ಷದ ಬಳಿಕ ಮಗ ಹಾಗೂ ಹೆಂಡತಿಯನ್ನ ಗೌತಮ್ ನೋಡಿ ಫುಲ್ ಖುಷಿಯಾಗಿದ್ದು, ಭೂಮಿಕಾ ಸ್ನೇಹಿತೆ ಜೊತೆಗೆ ಮಗಳು ಇರುವ ಸತ್ಯ ಇನ್ನೂ ರೀವಿಲ್ ಆಗಿಲ್ಲ. ಮಗ, ಮಗಳ ಜೊತೆಗೆ ಗೌತಮ್ ಹಾಗೂ ಭೂಮಿಕಾ ಯಾವಾಗ ಒಂದಾಗುತ್ತಾರೆ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications