Urvashi Rautela Video: ದರ್ಶನ್ ಜತೆ ನಟಿಸಿದ್ದ ಬಹುಭಾಷಾ ನಟಿ ಬಟ್ಟೆ ಬಿಚ್ಚುವ ಹಸಿಬಿಸಿ ವಿಡಿಯೋ ಲೀಕ್
ಬೆಂಗಳೂರು, ಜುಲೈ 19: ಕ್ರಿಕೇಟ್ ಸ್ಟೇಡಿಯಂ ನಲ್ಲಿ ಗೋಲ್ಡ್ ಐಫೋನ್ ಕಳೆದುಕೊಂಡು ಹುಡುಕಿಕೊಡಿ ಎಂದು ಕೇಳುವ ಮೂಲಕ ಸುದ್ದಿಯಾಗಿದ್ದ ಬಹುಬಾಷಾ ನಟಿ ಊರ್ವಶಿ ರೌಟೆಲಾ ಅವರು, ಇದೀಗ ಹಸಿಬಿಸಿ ವಿಡಿಯೋದಿಂದಾಗಿ ಸುದ್ದಿಯಾಗಿದ್ದಾರೆ.
ಹೌದು, ಕನ್ನಡದ ನಟ ದರ್ಶನ್ ನಟನೆಯ 'ಐರಾವತ' ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿರುವ ಈ ಬಹುಭಾಷಾ ನಟಿಯ ಬಾತ್‌ರೂಂ ವಿಡಿಯೋವೊಂದರ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಊರ್ವಶಿ ವಿಡಿಯೋ ಹಲ್‌ಚಲ್ ಸೃಷ್ಟಿಸುತ್ತಿದೆ. ವಿಡಿಯೋ ಬೆನ್ನಲ್ಲೆ ತಮ್ಮ ಮ್ಯಾನೇಜರ್ ಜತೆ ವಿಡಿಯೋ ಲೀಕ್ ಬಗ್ಗೆ ನಟಿ ಮಾತನಾಡಿದ ಆಡಿಯೋ ಸಹ ವೈರಲ್ ಆಗಿದೆ.

ಈ ವಿಡಿಯೋ ವೈರಲ್ ಆದರೂ ಸಹಿತ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಟಿ ಊರ್ವಶಿ ರೌಟೇಲಾ ಅವರು ಮನಸ್ಸು ಮಾಡಿಲ್ಲ. ಇದೆಲ್ಲ ನೋಡಿದರೆ ಇದೊಂದು ಸಿನಿಮಾ ಗಿಮಿಕ್ಕಾ? ಇಲ್ಲವೇ ಬೇಕು ಅಂತಲೇ ವಿಡಿಯೋ ಹರಿಬಿಟ್ಟು ಪ್ರಮೋಷನ್ ಮಾಡಲಾಗಿಯೇ? ಎಂದು ನೆಟ್ಟಿಗರು ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಬಾತ್ ರೂಮ್ ಒಳಗೆ ಟವೆಲ್ ಹಿಡಿದು ಒಳಬರುವ ನಟಿ ಊರ್ವಶಿ ರೌಟೆಲಾ ಅವರು ಕೂದಲನ್ನು ಸರಿ ಮಾಡಿಕೊಳ್ಳುತ್ತಾರೆ. ನಂತರ ಅವರು ಅಲ್ಲಿ ಬಟ್ಟೆ ತೆಗೆಯುವುದಕ್ಕೆ ಪ್ರಯತ್ನಿಸುತ್ತಾರೆ. ಅರ್ಧ ಬಟ್ಟೆ ತೆರೆದು ಕ್ಯಾಮೆರಾದತ್ತ ಹೊರಳುತ್ತಿದ್ದಂತೆ ವಿಡಿಯೋ ಕಟ್ ಆಗುತ್ತಿದೆ. ಆದ್ದರಿಂದ ಈ ವಿಡಿಯೋಉದ್ದೇಶಪೂರ್ವಕವಾಗಿ ಮಾಡಲಾಗಿದೆ, ಅಸಲಿಗೆ ಇದು ವಿಡಿಯೋ ಲೀಕ್ ಅಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.

ಆಡಿಯೋದಲ್ಲಿ ನಟಿ ಮಾತನಾಡಿದ್ದೇನು?
ಬಟ್ಟೆ ಕಳೆಯುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ಊರ್ವಶಿ ರೌಟೇಲಾ ಅವರು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿಡಿಯೋ ಲೀಕ್ ಕುರಿತು ತಮ್ಮ ಮ್ಯಾನೇಜರ್ ಬಳಿಕ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.
ಆಡಿಯೋದಲ್ಲಿ, ''ನಟಿ ಬಾತ್ ರೂಮ್ ವಿಡಿಯೋ ಲೀಕ್ ಆಗಿದ್ದನ್ನು ಖಂಡಿಸಿದ್ದಾರೆ. ಇದು ಹೇಗೆ ಆಯಿತು ಎಂದು ಪ್ರಶ್ನಿಸಿದ್ದಾರೆ. ಫೋನ್‌ನಲ್ಲಿ ಈ ವಿಡಿಯೋ ನೀವು ನೋಡಿದಿರಾ ಎಂದು ಕೇಳಿದ್ದಾರೆ. ಅದಕ್ಕೆ ಅವರು ಹೌದು ಎಂದು ಉತ್ತರಿಸಿದ್ದಾರೆ. ಇಂಥಹ ಗೌಪ್ಯ ಮತ್ತು ಖಾಸಗಿ ವಿಡಿಯೋಗಳು ಹೇಗೆ ಹೊರ ಬರುತ್ತವೆ?. ಇದು ನನಗೆ ಅರ್ಥವಾಗುತ್ತಿಲ್ಲ. ಈ ಬಗ್ಗೆ ನಾನು ನಿಮ್ಮ ಜೊತೆ ಮಾತನಾಡಬೇಕು ಎಂದು ಹೇಳಿದ್ದಾರೆ'' ಎನ್ನಲಾದ ಆಡಿಯೋ ವೈರಲ್ ಆಗಿದೆ.
ಈ ಹಿಂದೆ ಚಿನ್ನದ ಕೇಕ್ ಕಟ್ ಮಾಡಿದ್ದ ನಟಿ
ಸದ್ಯ ನಟಿ ಬಾಲಿವುಡ್ ಹಲವು ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. ಈ ನಟಿ ಜಾಹೀರಾತುಗಳಲ್ಲಿ ನಟಿಸಿದ್ದರು. ಕ್ರಿಕೇಟ್ ಸ್ಟೇಡಿಯಂ ನಲ್ಲಿ ಗೋಲ್ಡ್ ಐಫೋನ್ ಕಳೆದುಕೊಂಡು ಸುದ್ದಿಯಾಗಿದ್ದರು. ನಟಿಯ ಹುಟ್ಟು ಹಬ್ಬದ ವೇಳೆ ಗಾಯಕರೊಬ್ಬರು ತಂದಿದ್ದ ಚಿನ್ನದ ಕೇಕ್ ಕಟ್ ಮಾಡಿ ಸುದ್ದಿಯಾಗಿದ್ದರು. ಇದೀಗ ಹಸಿಬಿಸಿ ವಿಡಿಯೋದಿಂದ ನಟಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.












Click it and Unblock the Notifications