Sonu Gowda: 20 ವರ್ಷಕ್ಕೆ ಮದ್ವೆ, ಡಿವೋರ್ಸ್:‌ ವಿಚ್ಚೇದನದ ಕಾರಣ ಬಿಚ್ಚಿಟ್ಟ ಸೋನುಗೌಡ

ಸೋನು ಗೌಡ ಅವರು ಕನ್ನಡದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 2008ರಲ್ಲಿ ಶ್ರೀನಗರ ಕಿಟ್ಟಿ ನಟನೆಯ ಈ ಚಿತ್ರಕ್ಕೆ ದುನಿಯಾ ಸೂರಿ ಅವರು ನಿರ್ದೇಶನ ಮಾಡಿರುವ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಸೋನು ಗೌಡ ಅವರು ನಟಿಸಿದರು. ಈ ಚಿತ್ರ ಯಶಸ್ಸು ಕಂಡಿತು. ಮೊದಲ ಚಿತ್ರದಲ್ಲೇ ಸೋನು ಗೌಡ ಎಲ್ಲರ ಗಮನ ಸೆಳೆದರು. ಅವರು ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದರು. ಆದರೆ, ಕೆಲವೇ ಸಮಯದಲ್ಲಿ ಕೆಲ ನಿರ್ಧಾರದಿಂದ ಸಿನಿ ಜರ್ನಿಯಿಂದ ದೂರು ಉಳಿದರು. ಸಿನಿ ಜರ್ನಿ ಹಾಗೂ ವೈಯಕ್ತಿಕ ಜೀನವದ ಬಗ್ಗೆ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ನಟಿಸುವ ಮೂಲಕ ಸೋನು ಗೌಡ ಅವರು ಅಂದು ಬೇಡಿಕೆಯ ನಟಿಯಾಗಿದ್ದರು. ಸೋನು ಗೌಡ ಅವರು 20ನೇ ವಯಸ್ಸಿನಲ್ಲಿ ಮದುವೆಯಾಗಿ ಕನ್ನಡ ಚಿತ್ರರಂಗಕ್ಕೆ ವಿದಾಯ ಹೇಳಿದರು. ಆದರೆ, ಮದುವೆಯಾದ ಮೂರು ತಿಂಗಳಲ್ಲೇ ದಂಪತಿಗಳ ನಡುವೆ ವೈಮನಸ್ಸು ಉಂಟಾಯಿತು. ಏಳು ವರ್ಷಗಳ ಕಾಲ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ, ಅಂತಿಮವಾಗಿ ವಿಚ್ಛೇದನ ಪಡೆದರು. ಪ್ರೀತಿ,ಪ್ರೇಮ, ಮದುವೆ, ವಿಚ್ಚೇದನ ಹಾಗೂ ಜೀವನದ ಬಗ್ಗೆ ಸೋನು ಗೌಡ ಅವರೇ ಹೇಳಿಕೊಂಡಿದ್ದಾರೆ.

Actress Sonu Gowda Shares Her Struggle Journey

20ನೇ ವಯಸ್ಸಿಗೆ ಸೋನು ಗೌಡ ಅವರು ತಾವು ಪ್ರೀತಿಸಿದ ಹುಡುಗನ ಜೊತೆ ಮದುವೆ ಆದರು. ಪ್ರೀತಿಸಿದ ಹುಡುಗ ನನ್ನನ್ನು ನೋಡಿಕೊಳ್ಳುತ್ತಾನೆ ಎಂದು ಮದುವೆ ಬಳಿಕ ನಾನು ಬಣ್ಣದ ಲೋಕದಿಂದಲೂ ದೂರ ಆಗಲು ಮುಂದಾದೆ ಎಂದು ಸೋನು ಗೌಡ ಹೇಳಿಕೊಂಡಿದ್ದಾರೆ. ಆದರೆ, ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಮದುವೆ ಆದ ಮೂರೇ ತಿಂಗಳಿಗೆ ಎಲ್ಲವೂ ಬದಲಾಯಿತು. ನಮ್ಮಿಬ್ಬರ ಮಧ್ಯೆ ಮೂರೇ ತಿಂಗಳಿಗೆ ವೈಮನಸ್ಸು ಹೆಚ್ಚಾದವು ಎಂದು ನಟಿ ಸೋನುಗೌಡ ಅವರು ಹೇಳಿದ್ದಾರೆ.

ಮದುವೆಯಾದ ಮೂರು ತಿಂಗಳಲ್ಲೇ ದಂಪತಿಗಳ ನಡುವೆ ವೈಮನಸ್ಸು ಉಂಟಾಯಿತು. ಏಳು ವರ್ಷಗಳ ಕಾಲ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ, ಆದರೂ ಸರಿ ಆಗಲೇ ಇಲ್ಲ. ಕೊನೆಗೆ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದರು. ಪತಿ ಯಾವುದೇ ಕೆಲಸ ಮಾಡೋದಿಲ್ಲ ಎಂಬುದು ಸೋನು ಗೌಡ ಅವರ ದೂರಾಗಿತ್ತು. ಕೆಲಸ ಮಾಡುವ ಬಗ್ಗೆ ಆಸಕ್ತಿಯನ್ನೂ ಅವರು ತೋರಿಸುತ್ತಾ ಇರಲಿಲ್ಲ. ಕೊನೆಗೆ ಸೋನು ಗೌಡ ಅವರು ಚೆನ್ನೈಗೆ ತೆರಳಿ ಜಾಹೀರಾತು ಶೂಟ್​ಗಳನ್ನು ಮಾಡೋಕೆ ಆರಂಭಿಸಿದರು. ಆ ಸಂದರ್ಭದಲ್ಲಿ ಸೋನು ಅವರ ಡೆಬಿಟ್ ಕಾರ್ಡ್ ಇದ್ದಿದ್ದು ಅವರ ಪತಿ ಕೈಯಲ್ಲಿ ಎಂದು ಹೇಳಿಕೊಂಡಿದ್ದಾರೆ.

ನನ್ನ ಸಮಾಧಾನ ಮಾಡುವವರೆಗೂ ನಾನು ಕೋಪ ಕಮ್ಮಿ ಆಗಲ್ಲ ಅಂತ ಅವರಿಗೆ ಗೊತ್ತಿತ್ತು. ನಮ್ಮಿಬ್ಬರಿಗೂ ಬದುಕಿನ ಬಗ್ಗೆ ಜವಾಬ್ದಾರಿ ಇರ್ಲಿಲ್ಲ. ಬರೀ ಹುಡುಗಾಟದ ತರನೇ ಇದ್ವಿ. ಈ ವಿಚಾರವಾಗಿ ನಾನು ತುಂಬಾ ಕಣ್ಣೀರು ಹಾಕಿದಿನಿ. ಚಿತ್ರರಂಗ ಬಿಟ್ಟೆ ಅಂತ ಹಿಂದೆ ಎಲ್ಲಾ ಪತ್ರಿಕೆಯಲ್ಲೂ ಬಂದಿತ್ತು. ಆದರೆ ನನಗೆ ಅದರ ಬಗ್ಗೆ ಅಷ್ಟು ಯೋಜನೆ ಮಾಡಿರ್ಲಿಲ್ಲ. ಆಗ ನನ್ನ ಫ್ರೆಂಡ್‌ ಅನುಪಮಾಗೆ ಕಾಲ್ ಮಾಡಿದಾಗ ಚೆನ್ನೈ‌ ಬಾ ಅಂದ್ರು, ಆಗ ನಾನು ಆಡ್‌ ಶೂಟ್‌ ಮಾಡುತ್ತಿದ್ದೆ ಎಂದು ಕಷ್ಟದ ದಿನಗಳನ್ನ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+