Sonakshi Sinha: ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ನಟಿ ಸೋನಾಕ್ಷಿ, ಹುಡುಗ ಯಾರು ಗೊತ್ತೆ?
ಮುಂಬೈ, ಜೂನ್. 10: ದಬಾಂಗ್ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಜೂನ್ 23 ರಂದು ಮುಂಬೈನಲ್ಲಿ ತಮ್ಮ ಸಂಗಾತಿ ಮತ್ತು ನಟ ಜಹೀರ್ ಇಕ್ಬಾಲ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಬಾಲಿವುಡ್‌ನಲ್ಲಿ ಮತ್ತೆ ಮದುವೆಯ ಕಲರವ ಕೇಳಿಬರಲಿದೆ.
ನಟಿ ಸೋನಾಕ್ಷಿ ಸಿನ್ಹಾ ಮತ್ತು ನಟ ಜಹೀರ್ ಇಕ್ಬಾಲ್ ಬಹಳ ಸಮಯದಿಂದ ಪ್ರೀತಿಸುತ್ತಿದ್ದಾರೆ. ಆದರೆ, ಯಾವತ್ತೂ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಒಟ್ಟಿಗೆ ಕಾಣಿಸಿಕೊಳ್ಳುವುದು, ಸಾಮಾಜಿಕ ಮಾಧ್ಯಮಗಳಲ್ಲಿಫೋಟೋಗಳನ್ನು ಹಂಚಿಕೊಳ್ಳುವುದು, ಕ್ಯಾಟ್ ಆಗಿ ವಿಶ್ ಮಾಡುವುದು ಮಾತ್ರ ಮುಂದುವರೆಯುತ್ತಿದೆ. ಇದು ಇವರ ಸಂಬಂಧಕ್ಕೆ ಸಾಕ್ಷಿಯಾಗಿದೆ.

ಕಳೆದ ವರ್ಷ ನಟಿ ಸೋನಾಕ್ಷಿ ಸಿನ್ಹಾ ಅವರ ಹುಟ್ಟುಹಬ್ಬದ ಸಮಯದಲ್ಲಿ ಈ ವಿಷಯ ಹೆಚ್ಚು ಚರ್ಚೆಗೆ ಬಂದಿತ್ತು. ಜಹೀರ್ ಇಕ್ಬಾಲ್ ಅವರಿಬ್ಬರ ಮುದ್ದಾದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ತುಂಬಾ ಪ್ರೀತಿಯಿಂದ ಶುಭಾಶಯ ಬರೆದಿದ್ದ ಅವರು, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರು.
ಬಳಿಕ ಅವರ ಫೋಟೋಗಳು ಹೆಚ್ಚು ಹೆಚ್ಚು ಶೇರ್ ಆಗಲು ಆರಂಭಿಸಿದ್ದವು. ಒಟ್ಟಿ ಪ್ರವಾಸ ಹೋಗುವುದು, ಒಟ್ಟಿಗೆ ಸುತ್ತಾಡುವ ಫೋಟೋಗಳು ಇದ್ದವು. ಇನ್ನು, ಇತ್ತೀಚೆಗೆ ಕೂಡ ಈ ತಿಂಗಳ ಆರಂಭದಲ್ಲಿ, ಜಹೀರ್ ಇಕ್ಬಾಲ್ ಸೋನಾಕ್ಷಿ ಸಿನ್ಹಾಗೆ ಜನ್ಮದಿನದ ಶುಭಾಶಯಗಳನ್ನು ಕೋರುವಾಗ ಇಬ್ಬರ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದರು.ಪೋಸ್ಟ್‌ಗೆ "ಹ್ಯಾಪಿ ಬರ್ತ್‌ಡೇ ಸೋನ್ಜ್ಜ್" ಎಂದು ಶೀರ್ಷಿಕೆ ನೀಡಿದ್ದರು.
ಸೋನಾಕ್ಷಿ ಸಿನ್ಹಾ ಮತ್ತು ನಟ ಜಹೀರ್ ಇಕ್ಬಾಲ್ ಮದುವೆ
ನಟಿ ಸೋನಾಕ್ಷಿ ಸಿನ್ಹಾ ಮತ್ತು ನಟ ಜಹೀರ್ ಇಕ್ಬಾಲ್ ಅವರ ಮದುವೆ ಆತ್ಮೀಯರ ಸಮ್ಮುಖದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಇರಲಿದ್ದಾರೆ. ಇದರ ಜೊತೆಗೆ ಹೀರಾಮಂಡಿಯ ಸಂಪೂರ್ಣ ಚಿತ್ರತಂಡವನ್ನು ಮದುವೆಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮದುವೆಯ ಆಮಂತ್ರಣವನ್ನು ಮ್ಯಾಗಜೀನ್ ಕವರ್‌ನಂತೆ ವಿನ್ಯಾಸಗೊಳಿಸಲಾಗಿದೆ. ಅತಿಥಿಗಳನ್ನು ಔಪಚಾರಿಕವಾಗಿ ಬರಲು ತಿಳಿಸಲಾಗಿದೆ ಮತ್ತು ಮದುವೆಯ ಆಚರಣೆಗಳು ಮುಂಬೈನ ಬಾಸ್ಟಿಯನ್‌ನಲ್ಲಿ ನಡೆಯಲಿವೆ. ಈಗಾಗಲೇ ಎರಡು ಕುಟುಂಬಗಳು ಮದುವೆ ಸಿದ್ಧತೆಯನ್ನು ಆರಂಭಿಸಿವೆ.
ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ, ಸಲ್ಮಾನ್ ಖಾನ್ ಅವರ ದಬಾಂಗ್ ಸಿನಿಮಾದಿಂದ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಹಿಂದಿ ಚಿತ್ರೋದ್ಯಮದಲ್ಲಿ ಒಂದು ದಶಕದಿಂದ ಕೆಲಸ ಮಾಡುತ್ತಿದ್ದಾರೆ. ಕೆಲಸದ ವಿಷಯದಲ್ಲಿ ನಟಿ ಸೋನಾಕ್ಷಿ ಸಿನ್ಹಾ ಕೊನೆಯದಾಗಿ ಸಂಜಯ್ ಲೀಲಾ ಬನ್ಸಾಲಿಯವರ ವೆಬ್ ಸರಣಿ ಹೀರಾಮಂಡಿಯಲ್ಲಿ ಕಾಣಿಸಿಕೊಂಡಿದ್ದರು. ಹೀರಾಮಂಡಿಯಲ್ಲಿನ ನಟನೆಗಾಗಿ ಸಕತ್ ಹೊಗಳಿಕೆಯನ್ನು ಪಡೆದ ಅವರು, ಹೆಚ್ಚು ಸಂಭಾವನೆ ಪಡೆದ ನಟಿಯರಲ್ಲಿಯೂ ಒಬ್ಬರಾಗಿದ್ದಾರೆ.
ಇನ್ನು, ಜಹೀರ್ ಇಕ್ಬಾಲ್ ನೋಟ್‌ಬುಕ್ ಮತ್ತು ಡಬಲ್ ಎಕ್ಸ್‌ಎಲ್‌ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡಬಲ್ ಎಕ್ಸ್‌ಎಲ್ ಸಿನಿಮಾದಲ್ಲಿ ಜಹೀರ್ ಇಕ್ಬಾಲ್ ಸೋನಾಕ್ಷಿಯೊಂದಿಗೆ ತೆರೆ ಹಂಚಿಕೊಂಡಿದ್ದರು.












Click it and Unblock the Notifications