ಕಾಂತಾರ ಚಾಪ್ಟರ್ - 1ರ ಬಗ್ಗೆ ಶಾಕಿಂಗ್ ಅಪ್ಡೇಟ್ಸ್ ಕೊಟ್ಟ ನಟಿ ಸಪ್ತಮಿ ಗೌಡ! Kantara Chapter - 1
Kantara Chapter - 1: ಕಾಂತಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲವನ್ನೇ ಸೃಷ್ಟಿ ಮಾಡಿತ್ತು. ದೇಶದಾದ್ಯಂತ ಕನ್ನಡ ಸಿನಿಮಾದತ್ತ ಜನ ತಿರುಗಿ ನೋಡುವಂತೆ ಮಾಡಿತ್ತು. ಈ ಸಿನಿಮಾದ ನಂತರ ಕಾಂತಾರ ಚಾಪ್ಟರ್ 1ಗಾಗಿ ಭರ್ಜರಿ ಸಿದ್ಧತೆಗಳು ನಡೆದಿವೆ. ಈ ಸಿನಿಮಾದ ಮೂಲಕ ಖ್ಯಾತಿ ಗಳಿಸಿರುವ ನಟಿ ಸಪ್ತಮಿ ಗೌಡ ಅವರು ಇದೀಗ ತೆಲುಗು ಸಿನಿಮಾದಲ್ಲಿ ಭರ್ಜರಿ ಬ್ಯೂಸಿಯಾಗಿದ್ದಾರೆ. ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರ ಜೋಡಿಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದರು. ಆದರೆ, ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಗೆ ಭರ್ಜರಿ ಸಿದ್ಧತೆ ನಡೆದಿರುವಾಗಲೇ ಸಪ್ತಮಿ ಗೌಡ ಅವರು ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.
ಸಪ್ತಮಿ ಗೌಡ ಅವರು ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾರೆ. ಸಪ್ತಮಿ ಗೌಡ 2020ರಲ್ಲಿ ಬಿಡುಗಡೆಯಾದ ಡಾಲಿ ಧನಂಜಯ್ ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದಾದ ಮೇಲೆ ಹಿಂದಿ ಸಿನಿಮಾದಲ್ಲಿಯೂ ನಟಿಸಿದ್ದರು. ಇದೀಗ ಅವರು ತೆಲುಗು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.

ಕಾಂತಾರ ಸಿನಿಮಾದ ನಂತರ ಈ ಸಿನಿಮಾದಲ್ಲಿ ನಟಿಸಿರುವ ನಟ & ನಟಿಯರು ಹಾಗೂ ಕಲಾವಿದರ ಕೆರಿಯರ್‌ನಲ್ಲಿ ಹೊಸ ಬದಲಾವಣೆ ಬಂದಿದೆ. ಇದೀಗ ಸಪ್ತಮಿ ಅವರ ಮುಂದೆ ಭರ್ಜರಿ ಪ್ರಾಜೆಕ್ಟ್‌ಗಳಿವೆ. ಈ ರೀತಿ ಇರುವಾಗಲೇ ಕಾಂತಾರ ಚಾಪ್ಟೆರ್ 1ರ ಬಗ್ಗೆ ರಿಯಾಕ್ಟ್ ಮಾಡಿದ್ದು. ಅವರ ಮಾತು ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ಅಭಿಮಾನಿಗಳಿಗೆ ನಿರಾಸೆಯನ್ನೂ ಮೂಡಿಸಿದೆ. ಕಾಂತಾರದಲ್ಲಿ ಬಂಗಾರ ಸಿರಿಯೇ ಹಾಡು ಭಾರೀ ಹವಾ ಸೃಷ್ಟಿ ಮಾಡಿತ್ತು. ಅದೇ ರೀತಿ ಕಾಂತಾರ ಚಾಪ್ಟರ್ 1ರಲ್ಲೂ ಈ ಜೋಡಿ ಮೋಡಿ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. First Day First Show Kannada ದೊಂದಿಗೆ ಅವರು ಮಾತನಾಡಿದ್ದಾರೆ.
ಇದೀಗ ಈ ಸಿನಿಮಾದ ಬಗ್ಗೆ ಮಾತನಾಡಿರುವ ಅವರು, ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮುಂಚೆ ಈಗ ಮಾಡುತ್ತಿರುವ ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡಿದ್ದಾರೆ. ಜುಲೈ 4ಕ್ಕೆ ತೆಲುಗಿನ ತಮ್ಮುಡು ಸಿನಿಮಾ ರಿಲೀಸ್ ಆಗಲಿದೆ. ದಿ ರೈಸ್ ಆಫ್ ಅಶೋಕ ಕನ್ನಡ ಸಿನಿಮಾ ಸಹ ಕೆಲವು ತಿಂಗಳುಗಳಲ್ಲಿ ಬಿಡುಗಡೆ ಆಗಲಿದೆ. ಇನ್ನೂ ಎರಡರಿಂದ ಮೂರು ಪ್ರಾಜೆಕ್ಟ್‌ಗಳು ಇವೆ. ಆ ಪ್ರೊಡೆಕ್ಷನ್ ಹೌಸ್ ಘೋಷಿಸಿದ ಮೇಲೆ ನಾನು ಖಂಡಿತ ತಿಳಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದರೊಂದಿಗೆ ಕಾಂತಾರ ಚಾಪ್ಟರ್ 1ರಲ್ಲಿ ನಾನು ಇರಲ್ಲ ಅಂತ ಹೇಳಿದ್ದಾರೆ.
ಹೌದು ಕಾಂತಾರ ಚಾಪ್ಟರ್1ರಲ್ಲಿ ನಾನು ನಟಿಸಿಲ್ಲ. ನಾನು ಈ ಸಿನಿಮಾದಲ್ಲಿ ನನ್ನ ಪಾತ್ರವೇನು ಇಲ್ಲ ಅಂತ ಅವರು ಹೇಳಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.












Click it and Unblock the Notifications