Sangeetha Bhat: ಮಗು ಮಾಡಿಕೊಳ್ಳಲ್ಲ, ನಮ್ಮ ಲೈಫ್‌ ತ್ಯಾಗ ಮಾಡೋಕಾಗಲ್ಲ: ನಟಿ ಸಂಗೀತಾ ಭಟ್‌ ಹೀಗಂದಿದ್ದೇಕೆ?

ಸ್ಯಾಂಡಲ್‌ವುಡ್‌ ನಟಿ ಸಂಗೀತಾ ಭಟ್‌ ಹಾಗೂ ಕಿರುತೆರೆ ನಟ ಸುದರ್ಶನ್‌ ರಂಗಪ್ರಸಾದ್‌ ಅವರು ಮುದ್ದಾದ ತಾರಾಜೋಡಿಯಾಗಿ ಗಮನ ಸೆಳೆದಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿರುವ ಈ ದಂಪತಿ ಮಕ್ಕಳು ಮಾಡಿಕೊಳ್ಳುವ ವಿಚಾರವಾಗಿ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ನಮಗೆ ಮಕ್ಕಳು ಬೇಡ, ನಾವು ಮಕ್ಕಳು ಮಾಡಿಕೊಳ್ಳಬಾರದು ಅಂತ ನಿರ್ಧರಿಸಿದ್ದೇವೆ ಎಂದು ಸಂಗೀತಾ ಭಟ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಜನ ಬೈದುಕೊಂಡರೂ ಪರವಾಗಿಲ್ಲ ಇದೇ ನಮ್ಮ ನಿರ್ಧಾರ ಎಂದಿದ್ದಾರೆ. ಇದಕ್ಕೆ ಬಲವಾದ ಕಾರಣವೂ ಇದ್ದು, ಅದು ಏನೆಂದು ನಟಿ ಹೇಳಿದ್ದಾರೆ.

'ಮೊದಲಿಗೆ ತಮ್ಮ ಪತಿ ಸುದರ್ಶನ್‌ ಅವರ ಬಗ್ಗೆ ಮಾತನಾಡಿರುವ ಸಂಗೀತಾ ಭಟ್‌, ನಮ್ಮ ಮನೆಯಲ್ಲಿ ನನ್ನ ಇಲಿ ತರ ಬೆಳೆಸಿದ್ರು. ಆದ್ರೆ ಇವತ್ತು ನಾನು ಈ ಮಟ್ಟಕ್ಕೆ ಬೆಳೆದು ಈ ತರ ಮಾತನಾಡ್ತಿದ್ದೀನಿ ಅಂದ್ರೆ ಹಾಗೆ ಮಾಡಿದ್ದು ನನ್ನ ಗಂಡ. ಇವರು ನನಗೆ ತುಂಬಾ ಸಪೋರ್ಟ್‌ ಮಾಡ್ತಾರೆ. ನಮ್ಮ ಮನೆಯಲ್ಲಿ ನಡೆದ ಘಟನೆಗಳನ್ನು ನೋಡಿದ್ರೆ, ಆ ತರಹದ ಗಂಡಸರು ಯಾರಿಗೂ ಸಿಗೋದು ಬೇಡ ಅನಿಸುತ್ತೆ. ಆದ್ರೆ ಗಂಡನನ್ನು ನೋಡಿದಾಗ ಇಂತಹ ಗಂಡಸರೂ ಇರ್ತಾರಾ ಅಂತ ಅಚ್ಚರಿಪಡ್ತೀನಿ' ಎಂದು ಕೊಂಡಾಡಿದ್ದಾರೆ.

actress-sangeetha-bhat-says-no-to-kids-shares-why-they-chose-a-different-life-path

'ಆ ಜೀವಿ ಪ್ರಪಂಚಕ್ಕೆ ಬರೋದು ಬೇಡ'

'ನಮಗೆ ಮೊದಲಿನಿಂದಲೂ ಜವಾಬ್ದಾರಿಗಳು ಬೇಡ ಅಂತಿದ್ದೀವಿ. ಜವಾಬ್ದಾರಿ ಅಂದ್ರೆ ಮಕ್ಕಳು ಬೇಡ ಅಂತಾನಾ ಎಂದು ಜನ ನೋಡಿ ನಮ್ಮನ್ನ ಬಾಯಿಗೆ ಬಂದಂಗೆ ಬೈದುಕೊಳ್ಳಬಹುದು. ಆದರೆ ಸತ್ಯ ಅದಲ್ಲ, ನಮಗೆ ನಮ್ಮ ಜೀವನದಲ್ಲಾದ ಘಟನೆಗಳನ್ನು ನೋಡಿ ಇನ್ನೊಂದು ಜೀವಿಯನ್ನ ಪ್ರಪಂಚಕ್ಕೆ ತರೋದು ಬೇಡ ಅಂದುಕೊಂಡಿದ್ದೀವಿ' ಎಂದು ಸಂಗೀತಾ ಭಟ್‌ ತಮ್ಮ ನಿರ್ಧಾರ ತಿಳಿಸಿದ್ದಾರೆ.

'ಈಗ ನಾವಿರುವ ಪರಿಸ್ಥಿತಿಯಲ್ಲಿ ಅದು ತುಂಬಾ ದುಬಾರಿ ಕೂಡ ಹೌದು. ಇದು ಜೋಕ್‌ ಅಲ್ಲ, ಒಂದು ಮಗುವನ್ನ ಹೆತ್ತು ಅದನ್ನ ಆರೈಕೆ ಮಾಡಿ, ಅದಕ್ಕೆ ಬೇಕಾದ ಜೀವನ ಕೊಡೋದು, ಅದಕ್ಕಾಗಿ ನಮ್ಮ ಲೈಫ್‌ನ ನಾವು ತ್ಯಾಗ ಮಾಡೋದು ಅದೆಲ್ಲ ಬೇಡ' ಎಂದಿದ್ದಾರೆ. 'ಜೀವನದಲ್ಲಿ ಫನ್‌ ಆಗಿರೋಣ, ಟ್ರಾವೆಲ್‌ ಇರಲಿ, ಒಳ್ಳೆಯ ಸಿನಿಮಾಗಳಿರಲಿ, ಒಳ್ಳೆಯ ಪಾತ್ರಗಳಿರಲಿ. ಆದರೆ ಮಗು ಹೆರೋದು ಅದೆಲ್ಲ ಬೇಡ ಎಂದಿದ್ದಾರೆ ನಟಿ ಸಂಗೀತಾ. ಈ ವಿಡಿಯೋ ನೋಡಿದ ಮೇಲೆ ಜನ ನಮಗೆ ಕಾಮೆಂಟ್‌ನಲ್ಲಿ ಸಿಕ್ಕಾಪಟ್ಟೆ ಬೈದ್ರೂ ಪರವಾಗಿಲ್ಲ, ಐದೂ ಬೆರಳು ಒಂದೇ ತರ ಇರಲ್ಲ, ಎಲ್ಲರೂ ಡಿಫರೆಂಟ್‌, ಇದು ನಮ್ಮ ಆಯ್ಕೆ. ಹಾಗಾಗಿ ನಾವು ಮಗು ಮಾಡಿಕೊಳ್ಳಲ್ಲ' ಎಂದು ನೇರವಾಗಿ ಹೇಳಿದ್ದಾರೆ.

actress-sangeetha-bhat-says-no-to-kids-shares-why-they-chose-a-different-life-path

'ಸಂಗೀತಾಳ ಆ ಗುಣ ನನಗೆ ತುಂಬಾ ಇಷ್ಟ'

'ಸಂಗೀತಾ ಅವರ ಆಂತರಿಕ ಸೌಂದರ್ಯದಿಂದ ನಾನು ಇಂಪ್ರೆಸ್‌ ಆಗ್ತೀನಿ. ಬಾಹ್ಯ ಸೌಂದರ್ಯ ಒಂದು ದಿನ ಹೋಗುತ್ತೆ. ಆದರೆ ಆಂತರಿಕ ಸೌಂದರ್ಯ, ಆ ಶಕ್ತಿ, ಜೀವನದಲ್ಲಿ ಏನಾದರೂ ಮಾಡಬೇಕು ಅನ್ನೋ ಛಲ ಅದೆಲ್ಲವೂ ಇಷ್ಟವಾಗುತ್ತೆ' ಎಂದು ಸಂಗೀತಾ ಭಟ್‌ ಪತಿ ಸುದರ್ಶನ್‌ ಹೇಳಿದ್ದಾರೆ. 'ಇವಳಿಗೆ ಫ್ಯಾಮಿಲಿ ಸಪೋರ್ಟ್‌ ಅನ್ನೋದೆ ಇರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ತನ್ನ ಕುಟುಂಬವನ್ನ ತಾನೇ ನೋಡಿಕೊಂಡಿದ್ದಾಳೆ. ತುಂಬಾ ಕಷ್ಟಪಟ್ಟು ಮೇಲೆ ಬಂದವಳು. ಈ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನಗೂ ಪೊಸೆಸಿವ್‌ನೆಸ್‌ ಇದೆ. ಬೇರೆ ನಟರ ಜೊತೆ ಹೆಂಡತಿ ಆಕ್ಟ್‌ ಮಾಡುವಾಗ ಸಿಕ್ಕಾಪಟ್ಟೆ ಉರಿಯುತ್ತೆ. ನಾನು ಒಬ್ಬ ಗಂಡನೇ, ಆದ್ರೆ ಎಲ್ಲವನ್ನೂ ಸಹಿಸಿಕೊಂಡಿರ್ತೀನಿ' ಎಂದಿದ್ದಾರೆ ಸುದರ್ಶನ್‌.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+