Fact Check: ರಶ್ಮಿಕಾ ಮಂದಣ್ಣ- ಹಾರ್ದಿಕ್ ಪಾಂಡ್ಯ ಡೇಟಿಂಗ್, ಮ್ಯಾರೇಜ್! ಫೋಟೋ ವೈರಲ್..

Actress Rashmika Mandanna: ಹಿಂದಿ, ತೆಲುಗು, ತಮಿಳು ಸೇರಿದಂತೆ ವಿವಿಧ ಹೊಸ ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯೂಸಿ ಇರುವ 'ಸಿಕಂದರ್' ನಟಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ತೆಲುಗು ಸ್ಟಾರ್ ನಟ ವಿಜಯ್ ದೇವಕೊಂಡ ಅವರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಮಾಹಿತಿ ಆಗಾಗ ಹರಿದಾಡುತ್ತಿದೆ. ಫ್ಯಾನ್ಸ್ ಇದು ನಿಜ ಅಂತಲೂ ಹೇಳಿದ್ದಾರೆ. ಇದೀಗ ನಟಿ ರಶ್ಮಿಕಾ ಅವರು ಖ್ಯಾತ ಕ್ರಿಕೇಟರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಅವರ ಮದುವೆ ಫೋಟೋ ಸಹ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.

ಇತ್ತ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತನ್ನ ಮೊದಲ ಪತ್ನಿ ನಟಾಸಾ ಸ್ಟಾಂಕೋವಿಕ್ ಅವರಿಂದ ವಿಚ್ಛೇಚನ ಪಡೆದು ಬೇರ್ಪಟ್ಟಿದ್ದಾರೆ. ಅವರ ನಂತರ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಈ ಮಧ್ಯೆ ನಟಿ ರಶ್ಮಿಕಾ ಹಾಗೂ ಪಾಂಡ್ಯ ಜೊತೆಯಾಗಿದ್ದಾರೆ ಎಂಬ ವದಂತಿ ಕೇಳಿ ಬಂದಿದೆ. ಮೊನ್ನೆಯಷ್ಟೇ ರಶ್ಮಿಕಾ ತಮ್ಮ ಜನ್ಮದಿನವನ್ನು ಓಮನ್‌ನಲ್ಲಿ ನಟ ವಿಜಯ್ ದೇವಕೊಂಡ ಅವರೊಂದಿಗೆ ಆಚರಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಇದೀಗ ಈ ಫೋಟೋ ನೋಡಿದ ರಶ್ಮಿಕಾ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ.

Actress Rashmika Mandanna Dating and Marriage With Cricketer Hardik Pandya Photos Viral

ಸಾಮಾಜಿಕ ಜಾಲತಾಣದಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ಹಾರ್ದಿಕ್ ಪಾಂಡ್ಯ ಅವರು ಜೊತೆಯಾಗಿ ಇಬ್ಬರು ಕ್ಯಾಮೆರಾಗೆ ಪೋಸ್ ನೀಡುತ್ತಿರುವಂತಹ ಫೋಟೋವೊಂದು ಹರಿದಾಡುತ್ತಿದೆ. ಈ ಬಗ್ಗೆ ನೆಟ್ಟಿಗರು ಅಲರ್ಟ್ ಆಗಿದ್ದು, ಏನಿದು ಹೊಸ ಸುದ್ದಿ ಎಂದು ತಡಕಾಡಿದ್ದಾರೆ. ಅಲ್ಲದೇ ಅತೀ ಹೆಚ್ಚು ಟ್ರೋಲ್ ಆಗಿದ್ದ ರಶ್ಮಿಕಾ ಈ ಫೋಟೋ ನೋಡಿದ ಟ್ರೋಲಿಗರು ಸಹ ಬೇರೆ ಬೇರೆ ಫೋಟೋಗಳು, ಅಪ್ಡೇಟ್ ಗಾಗಿ ಹುಡುಕಿದ್ದಾರೆ. ನೆಟ್ಟಿಗರ ಪೈಕಿ ಒಬ್ಬರು ರಶ್ಮಿಕಾ, ಪಾಂಡ್ಯ ಮದುವೆ ಆಗಿದ್ದಾರೆ ಎಂದು ಹೇಳಿದ್ದಾರೆ.

ಮದುವೆ ಫೋಟೋ ವೈರಲ್

ನೋಡಲು ಈ ಫೋಟೋ ಹೇಗಿದೆ ಎಂದರೆ, ಇಬ್ಬರು ಹೂವಿನ ಮಾಲೆ ಧರಿಸಿದ್ದಾರೆ. ಕ್ರಿಕೇಟ್ ಗ್ರೌಂಡ್‌ನಲ್ಲಿ ಇರುವಂತೆ ಕಾಣುತ್ತದೆ. ರಶ್ಮಿಕಾ ಹಣೆಯ ಮೇಲೆ ಸಿಂಧೂರವಿದೆ. ರಿಜಿಸ್ಟರ್ ಮ್ಯಾರೇಜ್ ರೀತಿಯ ಫೋಟೋ ಇದಾಗಿದೆ. ಈ ಫೋಟೋ ಕಳೆದ 04 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇವರಿಬ್ಬರ ಮದುವೆ ಹೇಳಿಕೆಗೆ ಪೂರಕವಾದ ಫೋಟೋ ಇದು ಎಂಬಂತಿದೆ.

ನಟ ವಿಜಯ್‌ ಬಿಟ್ಟು ದೂರವಾದರೆ ರಶ್ಮಿಕಾ?

ಫೋಟೋ ಮೇಲೆ ಕ್ರಿಕೇಟಿಗ ಮತ್ತು ನ್ಯಾಷನಲ್ ಕ್ರಷ್ ಇಬ್ಬರು ವಿವಾಹವಾಗಿದ್ದಾರೆ. ನೀವು ಅವರಿಗೆ ಶುಭಾಷಯ ಕೋರುವುದಿಲ್ಲವೇ? ಎಂದು ಬರೆಯಲಾಗಿದೆ. ಈ ಫೋಟೋ ಅನ್ನು ಇನ್ಸ್‌ಟಾಗ್ರಾಮ್‌ನಲ್ಲಿ @santoshyadav43821 ಎಂಬುವವರು ಹಂಚಿಕೊಂಡಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ಫೋಟೋ ಕುರಿತು ಸಾಕಷ್ಟು ಚರ್ಚೆ ಆಗುತ್ತಿದೆ. ಅಸಲಿಗೆ ಇದರ ಹಿಂದಿನ ಸತ್ಯವೇನು? ನಿಜವಾಗಿಯೂ ರಶ್ಮಿಕಾ ಅವರು ವಿಜಯ್‌ರಿಂದ ಅವರಿಂದ ದೂರವಾದರೆ? ಯಾರೊಂದಿಗೆ ನಟಿ ರಶ್ಮಿಕಾ ಡೇಟಿಂಗ್‌ನಲ್ಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಈ ವೈರಲ್ ಫೋಟೋ ಸತ್ಯಾಸತ್ಯತೆ ಪರಿಶೀಲಿಸಿದಾಗ ಇದು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ರಚಿತ ಸಿನಿಮಾ ಆಗಿದೆ. ಗೂಗಲ್ ಹುಡುಕಾಟದ ವೇಳೆ ಫೋಟೋ ಅಸಲಿಯತ್ತು, ಇದರಲ್ಲಿ ಹುರುಳಿಲ್ಲ ಎಂಬ ಸತ್ಯ ಗೊತ್ತಾಗಿದೆ. ಈ ಕುರಿತು ಸೆಲೆಬ್ರೇಟಿಗಳ ಪ್ರೊಫೈಲ್‌ಗಳಲ್ಲಿ ಒಂದೇ ಒಂದು ಫೋಟೋ ಇಲ್ಲ. ಮೇಲ್ನೋಟಕ್ಕೆ ಎಐ ಚಿತ್ರವೆಂದು ಗುರುತಿಸಿಬಿಡಬಹುದು. ಈ ಫೋಟೋ, ರಶ್ಮಿಕಾ ಮತ್ತು ಪಾಂಡ್ಯ ಡೇಟಿಂಗ್, ಮದುವೆ ನಿಜವಲ್ಲ. ಇದೊಂದು ನಕಲಿ ಫೋಟೋ ಆಗಿದೆ. ಸಾರ್ವಜನಿಕರು, ಸಾಮಾಜಿಕ ಮಾಧ್ಯಮ ಬಳಕೆದಾರರು ಇಂತಹ ನಕಲಿ, ಎಐ ರಚಿತ ಫೋಟೋ, ವಿಷಯ ನಂಬುವಾಗ ಜಾಗರೂಕರಾಗಿರುವಂತೆ ತಿಳಿಸಲಾಗಿದೆ.

ಸದ್ಯ ನಟಿ ರಶ್ಮಿಕಾ ಮಂದಣ್ಣ ಅವರು 'ಕುಬೇರ', 'ದಿ ಗರ್ಲ್‌ಫ್ರೆಂಡ್' ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. ಇತ್ತೀಚೆಗೆ ಅವರ ಹಿಂದಿಯ 'ಸಿಕಂದರ್' ಸಿನಿಮಾ ತೆರೆ ಕಂಡಿತ್ತು. ಅದಾದ ಬಳಿಕ ಓಮನ್‌ನಲ್ಲಿ ಬರ್ತ್‌ಡೇ ಆಚರಿಸಿಕೊಂಡು ಬಂದ ನಟಿ ರಶ್ಮಿಕಾ ನಂತರ ಮುಂಬೈನ ಕಾರ್ಯಕ್ರಮವೊಂದರಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಲುಕ್, ಡ್ರೆಸ್‌ನಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಕ್ಲೇಮು

ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟಿಗ್ ಹಾರ್ದಿಕ್ ಪಾಂಡ್ಯ ಮತ್ತು ನಟಿ ರಶ್ಮಿಕಾ ಮಂದಣ್ಣ ಮದುವೆ ಆಗಿರುವ ಮಾಲೆ ಧರಿಸಿದ ಫೋಟೋ ಸದ್ದು ಮಾಡುತ್ತಿದೆ.

ಪರಿಸಮಾಪ್ತಿ

ನಟಿ ರಶ್ಮಿಕಾ ಮಂದಣ್ಣ ಮತ್ತು ಹಾರ್ದಿಕ್ ಪ್ಯಾಂಡ್ ಅವರಿಬ್ಬರ ಫೋಟೋ ಕೊಲಾಜ್ ಮಾಡಿದ AI ರಚಿತ ಫೋಟೋ ಇದಾಗಿದೆ. ನಕಲಿ ಪೋಟೋ ಮದುವೆ ಸುಳ್ಳು ಸುದ್ದಿಯಾಗಿದೆ.

Rating

Mostly False ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+