Ramya: ನನಗೆ ಸೀಕ್ರೇಟ್ ಆಗಿ ಮದುವೆಯಾಗಿ, ಮಕ್ಕಳೂ ಇವೆ: ನಟಿ ರಮ್ಯಾ
ಬೆಂಗಳೂರು, ಜೂನ್ 16: ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಆಳಿದ, ಒಂದರ ಮೇಲೊಂದು ಹಿಟ್ ಸಿನಿಮಾ ಕೊಟ್ಟಿದ್ದ ಕ್ವೀನ್, ಸ್ಟಾರ್ ನಟಿ ರಮ್ಯಾ (Divya Spandana) ರಾಜಕೀಯದಲ್ಲೂ ಛಾಪು ಮೂಡಿಸಲು ಮುಂದಾಗಿ ಸೋತಿದ್ದರು. ಅಲ್ಲಿಂದ ಕನ್ನಡ ಚಿತ್ರರಂಗ, ರಾಜಕೀಯದಿಂದ ದೂರು ಸರಿದರು. ಮರಳಿ ಈ ಎರಡು ಕ್ಷೇತ್ರದಲ್ಲಿ ಸಕ್ರಿಯವಾಗದ ರಮ್ಯಾ ಅವರು ಹೊಸ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಇದೀಗ ರಮ್ಯಾ ಅವರು ಬಾಲ್ಯ, ಅಪ್ಪ, ಸರ್‌ನೇಮ್, ಮದುವೆ, ಮಕ್ಕಳ ಕುರಿತು ಮಾತನಾಡಿದ್ದಾರೆ. ಮುಕ್ತವಾಗಿ ಮಾತನಾಡಿದ ನಟಿ ರಮ್ಯಾ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ನಟಿ ರಮ್ಯಾ ಇದೀಗ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಗಂಟೆಗಳ ಕಾಲ ತಮ್ಮ ಜೀವನದ ಕೆಲವು ಸಂಗತಿಗಳನ್ನು ತಿಳಿಸಿದ್ದಾರೆ. ನಟಿ ಶಭ್ರಾ ಅಯ್ಯಪ್ಪ ಅವರೊಂದಿಗೆ ಪಾಡ್‌ಕಾಸ್ಟ್ ನಲ್ಲಿ ಮಾತನಾಡಿದ್ದಾರೆ. ''ಚಿಕ್ಕವಳಿದ್ದಾಗ ನಾನು ಹೆಚ್ಚು ಮಾತನಾಡುತ್ತಿದ್ದೆ. ಅಮ್ಮ ತುಂಬಾ ಪ್ರೀತಿ ತೋರಿಸುತ್ತಿದ್ದರು. ನಾನು ಆಗ ಊಟಿಯಲ್ಲಿದ್ದೇ'' ಎಂದು ನಟಿ ರಮ್ಯಾ ಅವರು ಮಾತು ಆರಂಭಿಸುತ್ತಾರೆ.

''ನನಗೆ ಅಮ್ಮ ಮಾತ್ರ ಇದ್ದದ್ದು, ನಾನು ಚಿಕ್ಕವಳಿದ್ದಾಗಲೇ ಅಪ್ಪನನ್ನು ಕಳೆದುಕೊಂಡೆ. ಬೋರ್ಡಿಂಗ್ ಸ್ಕೂಲ್‌ನಲ್ಲಿ ಓದುವಾಗ ಅಪ್ಪನಿಲ್ಲದೇ ಖಾಲಿ ಅನ್ನಿಸುತ್ತಿತ್ತು. ನನಗೆ ಇದ್ದದ್ದು ಸಿಂಗಲ್ ಪೇರೆಂಟ್. ಎಲ್ಲರು ಅವರಪ್ಪನ ಬಗ್ಗೆ ಹೇಳುತಿದ್ದರು. ಆಗ ನಾನು ಅಮ್ಮನ ಹೆಸರು ಹೇಳಿತ್ತಿದ್ದೆ. ನನಗೆ ಸರ್‌ನೇಮ್ ಇರಲಿಲ್ಲ. ನಾನು ಭಿನ್ನವಾಗಿ ಕಾಣಿಸುತ್ತಿದ್ದೆ ಎಂದು ವೈಯಕ್ತಿಕ ಮಾಹಿತಿ ಹಂಚಿಕೊಂಡು ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಸಿನಿಮಾಗೆ ಬಂದ ಮೇಲೆ ನಾನು ಹೀಗಾದೆ: ರಮ್ಯಾ
ಚಿಕ್ಕವಳಿದ್ದಾಗ ನಾನು ತುಂಬಾ ಮಾತುಗಾರ್ತಿ. ದೊಡ್ಡವಳಾದ ಮೇಲೆ ಇದಕ್ಕೆ ತದ್ವಿರುದ್ಧವಾದೆ. ಅಪ್ಪನಿಲ್ಲದೇ ಖಾಲಿತನ ಅನುಭವಿಸಿದ ನಾನು ಸೈಲೆಂಟ್ ಆದೆ. ಆ ಕಾರಣಕ್ಕೆ ನಾನು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮಾತನಾಡಿದರೆ ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳಬೇಕಾಗುತ್ತದೆ. ಸಿನಿಮಾಗೆ ಬಂದ ಮೇಲೆ ನಾನು ಅಂತರ್ಮುಖಿ ಆದೆ. ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ನಟಿ ರಮ್ಯಾ ಹೇಳಿಕೊಂಡಿದ್ದಾರೆ.
''ನನಗೆ ಅನೇಕ ಬಾರಿ ಮದುವೆ ಮಾಡಿಸಿದ್ದಾರೆ''
ಇನ್ನು ನನ್ನ ಮದುವೆ ವಿಚಾರ ಆಗಾಗ ಚರ್ಚೆಯಲ್ಲಿರುತ್ತದೆ. ನನಗೆ ಗೊತ್ತಿಲ್ಲದೇ ಅನೇಕ ಸಲ ನನಗೆ ಮದುವೆ ಮಾಡಿಸಿದ್ದಾರೆ. ಮಕ್ಕಳನ್ನು ಮಾಡಿಸಿದ್ದಾರೆ ಎಂದು ನಗೆ ಬೀರಿದರು. ರಮ್ಯಾಗೆ ಮದುವೆ, ಮಕ್ಕಳಾಗಿವೆ. ವಿದೇಶದಲ್ಲಿದ್ದಾರೆ ಎಂದೆಲ್ಲ ಗಾಸಿಪ್ ಹರಿದಾಡಿತ್ತು. ಇದೆಲ್ಲವು ನನಗೆ ವಿಚಿತ್ರ ಅನ್ನಿಸುತ್ತದೆ. ತಮಗೆ ತಾವೇ ಕಲ್ಪನೆ ಮಾಡಿಕೊಂಡು ನನಗೆ ಮದುವೆ ಮಾಡಿದ್ದಾರೆ ಎಂದು ನಗು ನಗುತ್ತಲೇ ಮಾತನಾಡಿದರು.
7 ವರ್ಷಗಳ ಬಳಿಕ ಮೊದಲ ಬಾರಿಗೆ ಪ್ರತ್ಯಕ್ಷ
ಈ ಹಿಂದೆ ನಟಿ ರಮ್ಯಾ ಅವರು 'ಹಾಸ್ಟೆಲ್ ಹುಡುಗರು' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಮ್ ಬ್ಯಾಕ್ ಮಾಡುತ್ತಾರೆ ಎನ್ನಲಾಗಿತ್ತು. ಇದರಲ್ಲಿ ಪ್ರೊಮೋ ಶೂಟ್ ಮಾಡಿದ್ದರು. ಈ ಪ್ರೋಮೋದ ನನ್ನ ದೃಶ್ಯಗಳನ್ನು ನನ್ನ ಅನುಮತಿ ಇಲ್ಲದೇ ಟ್ರೈಲರ್‌ನಲ್ಲಿ ಬಳಸಿಕೊಳ್ಳಲಾಗಿದೆ ಎಂದು ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಏಳು ವರ್ಷಗಳ ಬಳಿಕ ನಟಿ ರಮ್ಯಾ ಅಂದು ಪ್ರತ್ಯಕ್ಷವಾಗಿದ್ದರು.
ಅಭಿಪ್ರಾಯವನ್ನು ದಿಟ್ಟವಾಗಿ ಹಂಚಿಕೊಳ್ಳುವ ನಟಿ
2024ರಲ್ಲಿ ನಟ ದರ್ಶನ್ ಕೇಸ್, ಇತ್ತೀಚಿನ ಬೆಂಗಳೂರು ಕಾಲ್ತುಳಿದ ಪ್ರಕರಣ, ಮೊನ್ನೆಯ ವಿಮಾನ ದುರಂತ ಬಗ್ಗೆ ರಮ್ಯಾ ಅವರು ತಮ್ಮ ದಿಟ್ಟ ಅಭಿಪ್ರಾಯ ಹಂಚಿಕೊಳ್ಳುತ್ತಲೇ ಬಂದಿದ್ದಾರೆ. ಕಳೆದ ವರ್ಷ 'ಉತ್ತರಾಖಂಡ' ಸಿನಿಮಾದಲ್ಲಿ ನಟ ಧನಂಜಯ್ ಅವರಿಗೆ ಪೂರ್ಣ ಪ್ರಯಾಣದಲ್ಲಿ ನಾಯಕಿಯಾಗಿ ನಟಿಸುವುದಾಗಿ ಒಪ್ಪಿದ್ದರು ಎನ್ನಲಾಗಿತ್ತು. ಮಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ ಆ ಚಿತ್ರದಿಂದಲೂ ಹೊರ ನಡೆದರು. ಅವರು ಅಪಾರ ಅಭಿಮಾನಿಗಳು ಮತ್ತೆ ನಟಿ ರಮ್ಯಾ ಯಾವಾಗ ಸಿನಿಮಾ ಮಾಡುತ್ತಾರೆ ಎಂದು ಕಾಯುತ್ತಿದ್ದಾರೆ.












Click it and Unblock the Notifications