ಸಾವು-ಬದುಕಿನ ಹೋರಾಟ, ಯಾವ ಶತ್ರುವಿಗೂ ಬೇಡ: ನಟಿ ರಜಿನಿ

ಅಮೃತವರ್ಷಿಣಿ ಸೀರಿಯಲ್‌ ಖ್ಯಾತಿಯ ಕನ್ನಡ ಕಿರುತೆರೆಯ ನಟಿ ರಜಿನಿ ಅವರು ಇತ್ತೀಚೆಗಷ್ಟೇ ತನ್ನ ಸ್ನೇಹಿತ ಅರುಣ್‌ ಗೌಡ ಅವರನ್ನು ಮದುವೆಯಾಗಿದ್ದರು. ಏಳು ವರ್ಷಗಳಿಂದ ಪರಿಚಯವಿದ್ದ ಅರುಣ್‌ ಅವರೊಂದಿಗೆ ಕಾಮಿಡಿ ರೀಲ್ಸ್‌ ಮಾಡುತ್ತಾ ಸೋಷಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿದ್ದರು. ಇವರಿಬ್ಬರೂ ಮದುವೆಯಾಗಿದ್ದಾರೆ ಎಂದೆಲ್ಲ ವದಂತಿ ಮೊದಲೇ ಹಬ್ಬಿತ್ತು. ಆದರೆ ಅವರು ನನ್ನ ಸ್ನೇಹಿತ ಎಂದು ರಜಿನಿ ಹೇಳಿಕೊಂಡಿದ್ದರು. ಆದರೆ ಕೆಲ ವಾರದ ಹಿಂದಷ್ಟೇ ಇಬ್ಬರೂ ಸಪ್ತಪದಿ ತುಳಿಯುವ ಮೂಲಕ ಶಾಕ್‌ ಕೊಟ್ಟಿದ್ದಾರೆ. ಇದೀಗ ರಜಿನಿ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ "ಈ ಸಾವು-ಬದುಕಿನ ಹೋರಾಟ, ಯಾವ ಶತ್ರುವಿಗೂ ಬೇಡ" ಎಂದಿದ್ದಾರೆ.

ಬಾಡಿ ಬಿಲ್ಡರ್‌ ಆಗಿರುವ ರಜಿನಿ ಅವರ ಪತಿ ಅರುಣ್‌ ಇತ್ತೀಚೆಗೆ ಕಾಂಪಿಷೇಷನ್‌ಗೆ ಹೋಗಿದ್ದು, ಸಿಕ್ಕಾಪಟ್ಟೆ ತಯಾರಿ ಕೂಡ ನಡೆಸಿದ್ದರು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. 'ಅರುಣ್‌ಗೆ ಮೆಡಲ್‌ ಟ್ರೋಫಿ ಸಿಕ್ಕಿಲ್ಲ. ಆದ್ರೆ ನಿಮ್ಮ ವಿಶ್‌ ಯಾವ ಟ್ರೋಫಿ, ಮೆಡಲ್‌ಗೂ ಕಮ್ಮಿ ಇಲ್ಲ. ಇದು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತೆ ಎಂದಿದ್ದಾರೆ. ಬದುಕನ್ನು ಪ್ರೀತಿಸುತ್ತಾ ಸಾಗಿ ಬದುಕು ನಮ್ಮನ್ನು ಪ್ರೀತಿಸುತ್ತೆ ಸೋಲನ್ನು ನಗುತ್ತಾ ಸ್ವಾಗತಿಸಿ ಗೆಲುವು ನಮ್ಮನ್ನು ಸ್ವಾಗತಿಸುತ್ತೆ. ಶುಭ ದಿನ' ಎಂದು ನಟಿ ಬರೆದುಕೊಂಡಿದ್ದಾರೆ.

Actress Rajini Shares Emotional Message on Husband Arun Bodybuilding Struggle

'ಉಪ್ಪು ಖಾರವಿಲ್ಲದ ಊಟ'

'ಇದು ಅರುಣ್‌ ಒಬ್ಬರ ಕಥೆ ಅಲ್ಲ, ಅಲ್ಲಿ ಬಂದಂತಹ ಸಾವಿರಾರು ಮಂದಿಯ ಕಥೆ. ಉಪ್ಪು ಖಾರವಿಲ್ಲದ ಊಟ ಮಾಡಿದ ದಿನಗಳು, ನಿದ್ದೆಯಿಲ್ಲದ ರಾತ್ರಿಗಳು, ಈ ಒಂದು ದಿನಕ್ಕಾಗಿ ಒಂದು ವರ್ಷವಿಡೀ ಸಾವು ಬದುಕಿನ ಹೋರಾಟ. ಆದರೆ ಕೊನೆಗೆ ಏನೂ ಇಲ್ಲದೆ ಬರಿಗೈನಲ್ಲಿ ಉಳಿಯುವ ಸ್ಥಿತಿ ಯಾವ ಶತ್ರುವಿಗೂ ಬೇಡ' ಎಂದು ರಜಿನಿ ಬೇಸರ ಹೊರಹಾಕಿದ್ದಾರೆ.

'ಅರುಣ್‌ ಅವರ ದೇಹದ ಬಗ್ಗೆ ಅವರ ಕೋಚ್‌ ಕೂಡ ಒಳ್ಳೆಯದೇ ಹೇಳಿದ್ರು. ನಾವು ಮಾಡೋ ಕೆಲಸ ಕೋಚ್‌ಗೆ ಇಷ್ಟ ಆದ್ರೆ ಆ ದೇವರಿಗೆ ಇಷ್ಟ ಆದಂತೆ ಅಂದಿದ್ದ. ಆದರೆ ಅದೃಷ್ಣ ಕೈಕೊಟ್ಟಿದೆ. ಇದೆಲ್ಲ ಅವನಿಗೆ ಮೊದಲ ಸೋಲೇನಲ್ಲ. ನಾವು ಯಶಸ್ಸಿನ ಹಾದಿಯಲ್ಲಿದ್ದಾಗ ಏರಿಳಿತಗಳು ತುಂಬಾ ಮುಖ್ಯ. ಮುಂದೆ ಸೋಲು ಕೂಡ ನಮ್ಮ ಮುಂದೆ ತಲೆಬಾಗುವಂತಿರಬೇಕು' ಎಂದು ರಜಿನಿ ಹೇಳಿದ್ದಾರೆ.

'ಮದುವೆ ಬಗ್ಗೆ ಇಬ್ಬರೂ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದ ರಜಿನಿ, ನನ್ನ ಅರುಣ್‌ ಬಾಡಿ ಬಗ್ಗೆ ಸಾಕಷ್ಟು ಜನ ಕಾಮೆಂಟ್ ಮಾಡ್ತಾರೆ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳಲ್ಲ. ಆ ದೇಹ ಮಾಡಲು ಎಷ್ಟು ಕಷ್ಟಪಟ್ಟಿದ್ದಾನೆ ಎನ್ನುವುದು ನನಗೆ ಗೊತ್ತು. ಫೈನಲಿ ನಾವು ಏರ್‌ಪೋರ್ಟ್‌ಗೆ ರೀಚ್ ಆದೆವು. ಅರುಣ್‌ನ ಕಳಿಸಿಕೊಡೋಕೆ ತುಂಬಾ ಬೇಜಾರಾಗ್ತಿದೆ. ಆದರೂ ಆಲ್‌ದಿ ಬೆಸ್ಟ್ ಹೇಳಿದೆ. ಬದುಕನ್ನು ಬೇರೆಯವರ ಇಚ್ಛೆಯಂತೆ ಅಲ್ಲ, ನಮ್ಮ ಇಚ್ಛೆಯಂತೆ ಬದುಕಬೇಕು' ಎಂದು ರಜನಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+