ಸಣ್ಣ ಕಾಣಲು ಸರ್ಜರಿ ಮಾಡಿಸಿಕೊಂಡ್ರಾ ಉಪೇಂದ್ರ ಪತ್ನಿ ಪ್ರಿಯಾಂಕ?: ಅಸಲಿಯತ್ತೇನು?
ಇತ್ತೀಚಿಗೆ ಸೋಶಿಯಲ್ ಮೀಡಿಯಾ ಎನ್ನುವುದು ಜನರಿಗೆ ಸೆಲೆಬ್ರೆಟಿಗಳನ್ನು ತಲುಪುವ ಸುಲಭದ ಮಾರ್ಗವಾಗಿದೆ. ಮೆಸೇಜ್ ಮೂಲಕ ಕಮೆಂಟ್ ಮೂಲಕ ಕೆಲ ನೆಟ್ಟಿಗರು ಸೆಲೆಬ್ರೆಟಿಗಳ ಬಗ್ಗೆ ಮಾತನಾಡುತ್ತಲೇ ಇರುತ್ತದೆ. ಇದರಿಂದ ಕೆಲವರಿಗೆ ನೋವಾಗುತ್ತದೆ. ನಟಿ ಪ್ರಿಯಾಂಕ ಉಪೇಂದ್ರ ಕನ್ನಡ ಚಿತ್ರರಂಗದ ಎವೆರ್‌ಗ್ರೀನ್ ಚೆಂದದ ನಟಿ. ಸಿನಿಮಾ ಹಾಗೂ ವೈಯಕ್ತಿಕ ಜೀವನದಲ್ಲಿ ಎರಡಲ್ಲೂ ತಮ್ಮ ಘನತೆಯನ್ನು ಕಾಪಾಡಿಕೊಂಡಿದ್ದಾರೆ. ಇಂತವರಿಗೂ ಕೂಡ ಕೆಲ ನೆಟ್ಟಿಗರು ನೆಗೆಟಿವ್ ಕಮೆಂಟ್ ಮಾಡುತ್ತಾರೆ ಎಂದರೆ ನೀವು ನಂಬಲೇಬೇಕು.
ಈ ಬಗ್ಗೆ ಸ್ವತಃ ಪ್ರಿಯಾಂಕ ಉಪೇಂದ್ರ ಅವರೇ ಮಾತನಾಡಿದ್ದಾರೆ. ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ಅವರು, ನನ್ನ ಈ ಸಿನಿಮಾ ಪ್ರಯಾಣದಲ್ಲಿ ನಾನು ತುಂಬಾ ನೆಗೆಟಿವ್ ಕಮೆಂಟ್‌ಗಳನ್ನು ಕೇಳಿದ್ದೇನೆ. ದಪ್ಪ ಆಗಿದ್ದಾರೆ. ಸಣ್ಣ ಆಗಿದ್ದಾರೆ, ಈ ಸರ್ಜರಿ ಮಾಡಿದ್ದಾರೆ. ಆ ಸರ್ಜರಿ ಮಾಡಿ ಹೀಗೆ ಕಾಣುತ್ತಿದ್ದಾರೆ ಎಂದೆಲ್ಲಾ ಹೇಳುತ್ತಾರೆ. ಒಂದೊಂದು ಸಲ ನಮಗೆ ಹುಷಾರಿರುವುದಿಲ್ಲ. ಇದರಿಂದ ಒಂದೊಂದು ಸಲ ದಪ್ಪ ಆಗುತ್ತೇವೆ. ಕೆಲವೊಮ್ಮೆ ಸಣ್ಣ ಆಗುತ್ತೇವೆ. ಟಿನೇಜ್ ಅವರಲ್ಲ ನಾವು. ನಮ್ಮ ದೇಹದಲ್ಲಿ ಬದಲಾಗುತ್ತದೆ ಎಂದು ಪ್ರಿಯಾಂಕ ಉಪೇಂದ್ರ ಹೇಳಿದ್ದಾರೆ.

ನಮ್ಮ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತದೆ. ಅದಕ್ಕೆ ಏನೇನೋ ಕಮೆಂಟ್ ಹಾಕಿರುತ್ತಾರೆ. ಅದು ನನಗೆ ಒಂದೊಂದು ಸಲ ನೋವಾಗುತ್ತದೆ. ನಾವು ಒಮ್ಮೊಮ್ಮೆ ಡ್ರೆಸ್‌ಅಪ್‌ಗೆ ಒಂದು ರೀತಿ ಕಾಣಿಸಿಕೊಳ್ಳುತ್ತೇವೆ. ಮೇಕಪ್ ಇಲ್ಲದೇ ಮತ್ತೊಂದು ರೀತಿ ಕಾಣಿಸಿಕೊಳ್ಳುತ್ತೇವೆ. ಒಂದೊಂದು ಬಾರಿ ದೇಹ ದಪ್ಪ ಆಗುತ್ತದೆ. ಸಣ್ಣ ಆಗುತ್ತದೆ. ಸಣ್ಣ-ದಪ್ಪ ಎನ್ನುವುದೇ ದೊಡ್ಡ ವಿಚಾರ ಆಗಿದೆ ಹೊರತು, ನೀವು ಆರೋಗ್ಯವಾಗಿದ್ದೀರಾ ಅಂತಾ ಯಾರು ಕೇಳಲ್ಲ ಎಂದರು.
ಪ್ರತಿಯೊಬ್ಬರಿಗೂ ಕೂಡ ಅವರದೇ ಆದ ದೇಹರಚನೆ ಇರುತ್ತದೆ. ತುಂಬಾ ಸಣ್ಣಗಿರುವವರು ಆರೋಗ್ಯವಾಗಿದ್ದಾರೆ ಅಂತಾ ಹೇಳಲು ಆಗುವುದಿಲ್ಲ. ಈಗ ಸಣ್ಣ ಇರುವುದು ದೊಡ್ಡ ವಿಚಾರವಾಗಿದೆ. ಚಿಕ್ಕ ಮಕ್ಕಳು ಸಹ ಊಟ ಬಿಟ್ಟು ಸಣ್ಣ ಇರಲು ಇಷ್ಟಪಡುತ್ತವೆ. ಆದರೆ ಅವರಿಗೆ ಆರೋಗ್ಯವಾಗಿರು ಅಂತಾ ಯಾರೂ ಹೇಳಲ್ಲ. ದೇಹ ರಚನೆ ಇರುವುದೇ ಹೀಗೆ ಎನ್ನುವ ಪಾಸಿಟಿವ್ ಆಲೋಚನೆ ಎಲ್ಲರಿಗೂ ಬರಬೇಕು ಎಂದು ಹೇಳಿದರು.
ಇನ್ನು ಮೇಕಪ್ ಬಗ್ಗೆ, ಈ ವಯಸ್ಸಿಗೆ ಹೀಗೆ ಇರಬೇಕು ಅಂದೇನಿಲ್ಲಾ, ನನ್ನ ಖುಷಿಗೆ ನಾನು ಡ್ರೆಸ್‌ಅಪ್ ಆಗುತ್ತೇನೆ. ವೆಸ್ಟರ್ನ್ ಡ್ರೆಸ್ ಹಾಕಿದರೂ ಹೇಳುತ್ತಾರೆ. ಇಂಡಿಯನ್ ಡ್ರೆಸ್ ಹಾಕಿದರೂ ಹೇಳುತ್ತಾರೆ. ಒಟ್ಟಾರೆ ಏನೋ ಒಂದು ಹೇಳುತ್ತಲೇ ಇರುತ್ತಾರೆ. ನೆಗೆಟಿವ್ ಕಮೆಂಟ್‌ಗಳಿಗೆ ನನಗೆ ಏನೂ ಬೇಜಾರುಗುವುದಿಲ್ಲ. ಇದರ ಜೊತೆಗೆ ಕೆಲವರು ಒಳ್ಳೆಯ ಮೆಸೇಜ್‌ಗಳನ್ನು ಸಹ ಕಳುಹಿಸುತ್ತಾರೆ. ಕೆಟ್ಟ ಮೆಸೇಜ್‌ಗಳು ಬರುತ್ತಲೇ ಇರುತ್ತದೆ ಅಂತವರನ್ನು ಬ್ಲಾಕ್ ಮಾಡುತ್ತೇವೆ ಎಂದು ಪ್ರಿಯಾಂಕ ಉಪೇಂದ್ರ ಹೇಳಿದ್ದಾರೆ.












Click it and Unblock the Notifications