ತೆಲುಗು ಹುಡುಗನ ಜೊತೆ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ ನಿವೇದಿತಾ ಗೌಡ
ಕನ್ನಡದ ಸಂಗೀತ ನಿರ್ದೇಶಕ ಹಾಗೂ ರಾಪರ್ ಚಂದನ್ ಶೆಟ್ಟಿಯಿಂದ ವಿಚ್ಚೇದನ ಪಡೆದ ಬಳಿಕ ನಿವೇದಿತಾ ಗೌಡ ತಮ್ಮ ಹೊಸ ಜೀವನ ಆರಂಭಿಸಿದ್ದಾರೆ. ಸದ್ಯ ತಂದೆ-ತಾಯಿ ಜೊತೆಗಿರುವ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಚಂದನ್ ಶೆಟ್ಟಿಗೆ ವಿಚ್ಛೇದನ ನೀಡಿದ ಬಳಿಕ ನಿವೇದಿತಾ ಗೌಡ ತಮ್ಮ ಜೀವನ ಶೈಲಿಯಲ್ಲಿ ಹಲವು ಬದಲಾವಣೆ ಮಾಡಿಕೊಂಡಿದ್ದಾರೆ.
ವಿಚ್ಛೇದನಕ್ಕೂ ಮೊದಲಿನಿಂದಲೂ ಹಾಟ್ ಡ್ರೆಸ್‌ನೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ನಿವೇದಿತಾ, ಈಗ ಇನ್ನಷ್ಟು ವಿಡಿಯೋ ಹಾಗೂ ಫೋಟೋಗಳನ್ನು ಹೆಚ್ಚೆಚ್ಚು ಶೇರ್ ಮಾಡುತ್ತಿರುತ್ತಾರೆ. ನಿವೇದಿತಾ ಏನೇ ಪೋಸ್ಟ್ ಮಾಡಿದರೂ ವಿಚ್ಛೇದನ ಹಾಗೂ ಚಂದನ್ ಶೆಟ್ಟಿ ಕುರಿತಾದ ಕಾಮೆಂಟ್‌ಗಳು ಬರುವುದು ಸಾಮಾನ್ಯವಾಗಿದೆ. ಅದ್ಯಾವುದಕ್ಕೂ ಕ್ಯಾರೇ ಎನ್ನದ ನಿವೇದಿತಾ ಗೌಡ ತಮ್ಮ ಇಷ್ಟದ ಕ್ಷೇತ್ರವನ್ನು ಆಯ್ದುಕೊಂಡು ಅದರಲ್ಲೇ ಮುಂದುವರಿದಿದ್ದಾರೆ.

ಈಗಾಗಲೇ ನಟನಾ ಕ್ಷೇತ್ರವನ್ನೇ ಆಯ್ದುಕೊಂಡಿರುವ ನಿವೇದಿತಾ ಗೌಡ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬರಲಿರುವ ಮನಸಾರೆ ನಿನ್ನೆ ಎನ್ನುವ ಆಲ್ಬಮ್ ಸಾಂಗ್‌ಗೆ ಬಣ್ಣ ಹಚ್ಚಿದ್ದಾರೆ. ತಮ್ಮ ಆಲ್ಬಮ್ ಸಾಂಗ್ ಫಸ್ಟ್ ಲುಕ್ ಪೋಸ್ಟರ್ ಅನ್ನು ನಿವೇದಿತಾ ಗೌಡ ಹಂಚಿಕೊಂಡಿದ್ದಾರೆ. ಮನಸಾರೆ ನಿನ್ನೆ ಹಾಡಿನ ರೋಮ್ಯಾಂಟಿಕ್ ಲುಕ್‌ನ ಫೋಟೋವನ್ನು ನಿವೇದಿತಾ ಗೌಡ ಶೇರ್ ಮಾಡಿದ್ದಾರೆ.
ತೆಲುಗಿನಲ್ಲಿ ವಾಲು ಕಳ್ಳತಾ ಹೆಸರಿನಲ್ಲಿ ಬರುತ್ತಿರುವ ಈ ಹಾಡು ಕನ್ನಡದಲ್ಲಿ ಮನಸಾರೆ ನಿನ್ನ ಎನ್ನುವ ಶೀರ್ಷಿಕೆಯಲ್ಲಿ ಬರಲಿದೆ. ಇದೊಂದು ಪಕ್ಕಾ ಪ್ರೀತಿಯ ರೊಮ್ಯಾಂಟಿಕ್ ಸಾಂಗ್ ಎನ್ನುವುದು ಪೋಸ್ಟರ್ ಮೂಲಕವೇ ತಿಳಿದು ಬರುತ್ತಿದೆ.
ತೆಲುಗಿನಲ್ಲಿ ನಟನಾಗಿ, ಬರಹಗಾರನಾಗಿ, ಸಂಕಲನಕಾರನಾಗಿ ಇಷ್ಟೇ ಅಲ್ಲದೇ ಛಾಯಾಗ್ರಾಹಕರಾಗಿ ಕೂಡ ಗುರುತಿಸಿಕೊಂಡಿರುವ ಗೌರಿ ನಾಯ್ಡು, ನಿವೇದಿತಾ ಗೌಡ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ನಿವೇದಿತಾ ಗೌಡ ಹಾಗೂ ಗೌರಿ ನಾಯ್ಡು ಫೋಟೋಗಳು ಸದ್ಯ ವೈರಲ್ ಆಗುತ್ತಿದ್ದು, ನಿವೇದಿತಾ ಮತ್ತೊಂದು ಹೆಜ್ಜೆಗೆ ಅವರ ಅಭಿಮಾನಿಗಳು ಶುಭಹಾರೈಸಿದ್ದಾರೆ.
ಇನ್ನು ನಿವೇದಿತಾ ಗೌಡ ಕನ್ನಡ ಕಿರುತೆರೆ ಶೋಗಳ ಜೊತೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ನಿವೇದಿತಾ ಗೌಡ ಮತ್ತು ಅವರ ಮಾಜಿ ಪತಿ ಚಂದನ್ ಶೆಟ್ಟಿ ಅಭಿನಯದ ಮುದ್ದು ರಾಕ್ಷಸಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರವನ್ನು ಪುನೀತ್ ಶ್ರೀನಿವಾಸ್ ಕಥೆ ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ. ಮೋಹನ್ ಕುಮಾರ್ ಈ ಮುದ್ದು ರಾಕ್ಷಸಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯಲ್ಲೇ ಈ ಚಿತ್ರ ತೆರೆ ಕಾಣಲಿದೆ.












Click it and Unblock the Notifications