Nisha Ravikrishnan: ಇದು ನನಗೆ ಎಂಟನೇ ಮದ್ವೆ, ಮದುವೆ ಅಂದ್ರೆ ನನಗೆ ಬೇಜಾರು ಎಂದ ನಟಿ ನಿಶಾ ರವಿಕೃಷ್ಣನ್
ಗಟ್ಟಿಮೇಳದಲ್ಲಿ ರೌಡಿ ಬೇಬಿ ಎಂದೇ ಫೇಮಸ್ ಆಗಿದ್ದ ನಿಶಾ ರವಿಕೃಷ್ಣನ್ ಮದುವೆ ಕುರಿತು ಮಾತನಾಡಿದ್ದಾರೆ. ಇದು ನನಗೆ ಎಂಟನೇ ಮದುವೆ, ಮದುವೆ ಅಂದ್ರೆ ನನಗೆ ಬೇಜಾರು ಎಂದು ಕಿರುತರೆ ನಟಿ ನಿಶಾ ರವಿಕೃಷ್ಣನ್ ಮದುವೆ ಕುರಿತು ಬೇಸರವನ್ನ ವ್ಯಕ್ತಪಡಿಸಿದ್ದಾರೆ.
ಗಟ್ಟಿಮೇಳದಲ್ಲಿ ರೌಡಿ ಬೇಬಿ ಎಂದೇ ಫೇಮಸ್ ಆಗಿದ್ದ ನಿಶಾ ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುವ ಅಣ್ಣಯ್ಯ ಸೀರಿಯಲ್ ಕಥೆಯಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ವಿಭಿನ್ನ ಕಥೆ ಇದಾಗಿದೆ. ಬೇರೊಬ್ಬರ ಪ್ರೀತಿಸುವ ನಾಯಕಿಯನ್ನ ಅನಿವಾರ್ಯ ಕಾರಣಗಳಿಂದ ಅಣ್ಣಯ್ಯ ಮದುವೆಯಾಗಿದ್ದಾರೆ. ಅನಿವಾರ್ಯ ಕಾರಣದಿಂದ ಪಾರು ಸಹ ಅಣ್ಣಯ್ಯನನ್ನ ಮದುವೆಯಾಗಿ ತಂದೆಯ ವಿರುದ್ಧವಾಗಿ ಪಾತ್ರದಲ್ಲಿ ನಟಿಸಿದ್ದಾರೆ.

ಈಗ ನಟಿಯ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ನಿಶಾ ಮದುಮಗಳಂತೆ ಕಾಣಿಸುತ್ತಿದ್ದಾರೆ. ಗುಡ್ ಟು ಗೋ ಯುಟ್ಯೂಬ್ ಚಾನೆಲ್ನಲ್ಲಿ ಇವರ ವಿಡಿಯೋ ಹಂಚಿಕೊಳ್ಳಲಾಗಿದೆ. ಸೀರಿಯಲ್ ಶೂಟಿಂಗ್ ಸಮಯದಲ್ಲಿ ತೆಗೆದಿರುವ ವಿಡಿಯೋ. ಇದರಲ್ಲಿ ನಿಶಾ ಮತ್ತು ಅಣ್ಣಯ್ಯ ಸೀರಿಯಲ್ನ ಬಳಗವನ್ನು ನೋಡಬಹುದು. ಅಣ್ಣಯ್ಯ ಸೀರಿಯಲ್ನಲ್ಲಿ ನಿಶಾ ಅವರು ನಿರ್ವಹಿಸುತ್ತಿರುವ ಪಾತ್ರ ಪಾರುವಿನ ಮದ್ವೆ ಟೈಮ್ನಲ್ಲಿ ತೆಗೆದಿರುವಂಥದ್ದು. ಈ ಸಮಯದಲ್ಲಿ ನಟಿ, ರಿಯಲ್ ಮತ್ತು ರೀಲ್ ಮದ್ವೆಗಳ ಬಗ್ಗೆ ಮಾತನಾಡಿದ್ದಾರೆ.
ಅಷ್ಟಕ್ಕೂ ಇದು ಅಣ್ಣಯ್ಯ ಸೀರಿಯಲ್ ತೆರೆಮರೆಯ ಕಥೆ. ಅಂದರೆ ಸೀರಿಯಲ್ ಶೂಟಿಂಗ್ ಸಮಯದಲ್ಲಿ ತೆಗೆದಿರುವ ವಿಡಿಯೋ. ಇದರಲ್ಲಿ ನಿಶಾ ಮತ್ತು ಅಣ್ಣಯ್ಯ ಸೀರಿಯಲ್ನ ಬಳಗವನ್ನು ನೋಡಬಹುದು. ಈ ಸೀರಿಯಲ್ನಲ್ಲಿ ನಿಶಾ ಅವರು ನಿರ್ವಹಿಸುತ್ತಿರುವ ಪಾತ್ರ ಪಾರುವಿನ ಮದುವೆ ಟೈಮ್ನಲ್ಲಿ ತೆಗೆದಿರುವಂಥದ್ದು. ಈ ಸಮಯದಲ್ಲಿ ನಟಿ, ರಿಯಲ್ ಮತ್ತು ರೀಲ್ ಮದ್ವೆಗಳ ಬಗ್ಗೆ ಮಾತನಾಡಿದ್ದಾರೆ.
ನಿಶಾ ರವಿಕೃಷ್ಣನ್ ಇದು ನನಗೆ ಎಂಟನೇ ಮದ್ವೆ ಇರಬಹುದು. ತೆಲಗು ಮತ್ತು ಕನ್ನಡ ಸೀರಿಯಲ್ಗಳಲ್ಲಿ ಸಾಕಷ್ಟು ಬಾರಿ ಮದುವೆಯಾಗಿದ್ದೇನೆ. ಅದಕ್ಕಾಗಿಯೇ ಮದುವೆ ಎಂದರೆ ಬೇಜಾರು ಆಗಿಹೋಗಿದೆ ಎಂದು ತಮಾಷೆಯಾಗಿ ಮಾತನಾಡಿದ್ದಾರೆ. ಅಣ್ಣಯ್ಯ ಧಾರಾವಾಹಿಯಲ್ಲಿ ಪತ್ನಿಗೆ (ಪಾರು) ಆಕೆಯ ಲವರ್ ಜೊತೆ ಸೇರಿಸುವುದು ಇವನ ಉದ್ದೇಶ, ಆದರೆ ಎಲ್ಲರ ಕಣ್ಣಿಗೆ ಮಾತ್ರ ಇವರು ಆದರ್ಶ ದಂಪತಿಯಾಗಿದ್ದಾರೆ.
ಗಟ್ಟಿಮೇಳದಲ್ಲಿ ರೌಡಿ ಬೇಬಿ ಎಂದೇ ಫೇಮಸ್ ಆಗಿದ್ದ ನಿಶಾ, ಅಣ್ಣಯ್ಯನ ಮದುವೆಯಾಗಿ ಲವರ್ಗಾಗಿ ಕಾಯುತ್ತಿದ್ದಾಳೆ. ಇತ್ತ ಪತಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಮಾಡುತ್ತಲೇ ಮನೆಯವರ ವಿಶ್ವಾಸ ಗಳಿಸುತ್ತಿದ್ದಾಳೆ ನಾಯಕಿ ಪಾರು.
ನಿಶಾ ರವಿಕೃಷ್ಣನ್ ರಿಯಲ್ ಲೈಫ್ ಹೇಗಿದೆ ಗೊತ್ತಾ?
ನಿಶಾ ಅವರು ಹುಟ್ಟಿದ್ದು ಬೆಂಗಳೂರೇ. ಆದರೆ, ಮೂಲತಃ ಕೇರಳದವರು, ನಟಿ ನಿಶಾ ರವಿಕೃಷ್ಣನ್ ಇನ್ನೂ ಸಿಂಗಲ್. ಈ ಕುರಿತು ನಟಿ ನಿಶಾ ರವಿಕೃಷ್ಣನ್ ಅವರೇ ಹೇಳಿಕೊಂಡಿದ್ದಾರೆ. ಸೀರಿಯಲ್ಗಳಲ್ಲಿ ಎಂಟು ಮದ್ವೆಯಾಗಿದೆ. ಅವುಗಳಲ್ಲಿ ಆಡಂಬರದ ಮದುವೆಗಳೇ ಜಾಸ್ತಿ ಇದ್ದವು. ಆದರೆ ರಿಯಲ್ ಲೈಫ್ನಲ್ಲಿ ಸಿಂಪಲ್ ಆಗಿ ಮದುವೆಯಾಗುವ ಆಸೆ ಇದೆ ಎಂದಿದ್ದಾರೆ ನಿಶಾ ರವಿಕೃಷ್ಣನ್.
ಮೂಲತಃ ಮಲಯಾಳಿಯಾಗಿರುವ ಚಟಪಟ ಎಂದು ಕನ್ನಡ ಮಾತನಾಡುತ್ತಾರೆ. ಮಲಯಾಳಿಯಾಗಿರುವ ನಿಶಾ ರವಿಕೃಷ್ಣನ್ ಅವರು ಕನ್ನಡ ಮತ್ತು ತೆಲಗು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ನಿಶಾ ಮಿಲನ್ ಎಂದು ಕೂಡ ಫೇಮಸ್ ಆಗಿದ್ದಾರೆ. 2018ರಲ್ಲಿ ಸ್ಟಾರ್ ಸುವರ್ಣದಲ್ಲಿ ತೆರೆ ಕಂಡ 'ಸರ್ವಮಂಗಲ ಮಾಂಗಲ್ಯೆ' ಸೀರಿಯಲ್ ಮೂಲಕ ಕನ್ನಡಕ್ಕೆ ಪರಿಚಿತರಾದರು. 2019ರಲ್ಲಿ ಅವರಿಗೆ 'ಗಟ್ಟಿಮೇಳ' ಸೀರಿಯಲ್ನ ಅಮೂಲ್ಯ ಪಾತ್ರ ಅವರಿಗೆ ಬ್ರೇಕ್ ಕೊಟ್ಟಿತು. ರೌಡಿ ಬೇಬಿ ಎಂದೇ ಈಗಲೂ ಎಲ್ಲರೂ ಅವರನ್ನು ಕರೆಯುತ್ತಾರೆ.
ನಟಿ ನಿಶಾ ರವಿಕೃಷ್ಣನ್ ಐದು ವರ್ಷ ಈ ಸೀರಿಯಲ್ ತೆರೆ ಕಂಡಿದೆ. ಈ ಬಳಿಕ ನಿಶಾ ತೆಲುಗು ಸೀರಿಯಲ್ನಲ್ಲಿ ಕಾಣಿಸಿಕೊಂಡರು. ಕನ್ನಡದ ಅಣ್ಣಯ್ಯದಲ್ಲಿ ಪಾರು ಆಗಿ ಹಾಗೂ ತೆಲುಗಿನ ಅಮ್ಮಯ್ಯಿಗಾರು ಸೀರಿಯಲ್ನಲ್ಲಿಯೂ ನಟಿಸುತ್ತಿದ್ದಾರೆ.












Click it and Unblock the Notifications