Lasya Nagaraj: ನಟನ ಜೊತೆ 4 ವರ್ಷ ರಿಲೇಷನ್‌ಶಿಪ್‌ನಲ್ಲಿದ್ದೆ, ವರ್ಕೌಟ್ ಆಗಲಿಲ್ಲ: ನಟಿ ಲಾಸ್ಯ ನಾಗರಾಜ್
ಕನ್ನಡದ ನಟಿ ಹಾಗೂ ಬಿಗ್‌ಬಾಸ್ ಖ್ಯಾತಿಯ ಲಾಸ್ಯ ನಾಗರಾಜ್ ಅವರು ಅಚ್ಚರಿ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ತಮ್ಮ ಮದುವೆ, ಬಾಯ್‌ಫ್ರೆಂಡ್ ಸೇರಿದಂತೆ ಹಲವು ವೈಯಕ್ತಿಕ ವಿಚಾರಗಳ ಬಗ್ಗೆ ಅವರು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ತಮ್ಮ ಬಾಯ್‌ಫ್ರೆಂಡ್, ಲಿವ್ಇನ್ ರಿಲೇಷನ್‌ಶಿಪ್ ಬಗ್ಗೆಯೂ ಅವರು ನೇರವಾಗಿ ಬಹಿರಂಗಪಡಿಸಿದ್ದಾರೆ. ಮುಂದಿನ ವರ್ಷ ನಾನು ಮದುವೆ ಆಗಬೇಕು ಅಂದುಕೊಂಡಿದ್ದೀನಿ ಎಂದೂ ಸುಳಿವು ನೀಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ನಟಿ ಲಾಸ್ಯ, ʼನಾನು ಯಾವತ್ತೂ ಅರೇಂಜ್ ಮ್ಯಾರೇಜ್‌ಗೆ ಒಪ್ಕೋತೀನಿ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ. ಆದ್ರೆ ಈಗ ರಿಲೇಷನ್‌ಶಿಪ್ಸ್ ಎಲ್ಲ ನೋಡಿ ನೋಡಿ ಹಾಗೆ ಅನಿಸುತ್ತಿದೆ. ಯಾರ ಜೊತೆ ಇದ್ರೂ ಏನೋ ಒಂದು ಹೊಂದಾಣಿಕೆ ಸಮಸ್ಯೆ ಇದ್ದೇ ಇರುತ್ತೆ ಎಂದಿದ್ದಾರೆ. ಈ ಹಿಂದೆ ನನಗೂ ಒಬ್ಬ ಬಾಯ್‌ಫ್ರೆಂಡ್ ಇದ್ದ, ಅವನೊಂದಿಗೆ ನಾನು ನಾಲ್ಕು ವರ್ಷ ಕಳೆದೆ. ನಮ್ಮಿಬ್ಬರ ವಿಚಾರ ಮದುವೆ ಹಂತದವರೆಗೆ ಹೋಗಿತ್ತುʼ ಎಂದಿದ್ದಾರೆ.

ʼಅವರು ಕೂಡ ಸಿನಿಮಾ ಇಂಡಸ್ಟ್ರಿಯವರು. ನಾನು ಚೆನ್ನೈನಲ್ಲಿದ್ದಾಗ ಅವರು ತಮಿಳು ಇಂಡಸ್ಟ್ರಿಯಲ್ಲಿದ್ದ ಅವರು ಬಾಯ್‌ಫ್ರೆಂಡ್ ಆಗಿದ್ದರು. ಆಗ ನಾವಿಬ್ಬರೂ ಸುಮಾರು ನಾಲ್ಕು ವರ್ಷಗಳವರೆಗೆ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲೇ ಇದ್ವಿ. ನಮ್ಮ ಅಪ್ಪ ಅಮ್ಮ ಕೂಡ ಅಲ್ಲಿ ಒಬ್ಬಳೇ ಇರ್ತಾಳೆ, ಇಂಡಸ್ಟ್ರಿಯಲ್ಲಿದ್ದಾಳೆ ಅಂತ ಚಿಂತೆಯಲ್ಲಿದ್ದರು. ಆಗ ಅಪಾರ್ಟ್‌ಮೆಂಟ್‌ವೊಂದರಲ್ಲಿ ಇದ್ದೆವು. ಆತ ತುಂಬಾ ಒಳ್ಳೆಯ ವ್ಯಕ್ತಿʼ ಎಂದು ಲಾಸ್ಯ ನಾಗರಾಜ್ ಹೇಳಿದ್ದಾರೆ.
ʼನಮ್ಮ ಅಪ್ಪ ಅಮ್ಮ ಕೂಡ ಅವನನ್ನು ತುಂಬಾ ನಂಬುತ್ತಿದ್ದರು. ಅವರ ಫ್ಯಾಮಿಲಿ ಜೊತೆಗೂ ಚೆನ್ನಾಗಿ ಇದ್ದರು. ಆಗ ಯಾಕೆ ಇಬ್ಬರೂ ಒಟ್ಟಿಗೆ ಇರಬಾರದು ಎಂದು ಹೇಳಿದ್ರು. ಹೇಗಿದ್ರೂ ಇಬ್ಬರೂ ಒಂದೇ ಇಂಡಸ್ಟ್ರಿಯಲ್ಲಿದ್ದೀರಿ, ಒಂದೇ ವಯಸ್ಸಿನವರು, ಮುಂದೆ ಮದುವೆ ಆಗುವವರು, ಹಾಗಾಗಿ ಇಬ್ಬರೂ ಒಟ್ಟಿಗೆ ಇರಿ ಎಂದು ಹೇಳಿದ್ರು. ಆದರೆ ಕಾರಣಾಂತರಗಳಿಂದ ಅದು ವರ್ಕೌಟ್ ಆಗಲಿಲ್ಲ. ಅದೇ ನನ್ನ ಮೊದಲ ರಿಲೇಷನ್‌ಶಿಪ್ʼ ಎಂದು ಹೇಳಿಕೊಂಡಿದ್ದಾರೆ.

ನನಗೆ ಈ ರೀತಿಯ ಹುಡುಗ ಬೇಕು
ʼಸದ್ಯಕ್ಕೆ ನನಗೆ ಬಾಯ್‌ಫ್ರೆಂಡ್ ಇಲ್ಲ. ಮುಂದೆ ಬಂದೇ ಬರ್ತಾರೆ. ನಂಗೆ ಸಿಂಗಲ್ ಆಗಿರೋದು ಇಷ್ಟ ಇಲ್ಲ, ದೊಡ್ಡ ಫ್ಯಾಮಿಲಿ ಅಂದ್ರೆ ಇಷ್ಟ. ಆದರೆ ನನಗೆ ಯಾವುದೇ ಪ್ರಪೋಸಲ್ ಬಂದ್ರೂ ದೂರ ಇಟ್ಟಿದ್ದೀನಿ. ಮುಂದಿನ ವರ್ಷ ನಾನು ಮದುವೆ ಆಗಬೇಕು ಅಂದುಕೊಂಡಿದ್ದೀನಿ. ನಾನು ಹುಡುಗನನ್ನ ನೋಡಿದ ತಕ್ಷಣ ಒಪ್ಪಿಕೊಳ್ಳಲ್ಲ. ಕೆಲ ತಿಂಗಳ ಕಾಲ ಅವರನ್ನ ಅರ್ಥ ಮಾಡಿಕೊಳ್ಳುತ್ತೇನೆʼ ಎಂದು ಲಾಸ್ಯ ಹೇಳಿದ್ದಾರೆ.
ʼನನಗೆ ಚಿಕ್ಕಂದಿನಿಂದಲೂ ಬೈಕ್ ರೈಡಿಂಗ್ ಇಷ್ಟ. ಹಾಗಾಗಿ ಬೈಕ್ ರೈಡರ್‌ಗಳು ಇಷ್ಟ ಆಗ್ತಾರೆ. ನಾನು ಮದುವೆ ಆಗೋ ಹುಡುಗನ ಹತ್ರ ಸೂಪರ್ ಬೈಕ್ ಇರಬೇಕು. ಆದ್ರೆ ಅದು ಅವರಪ್ಪ ಕೊಡಿಸಿರಬಾರದು. ಫಿಟ್ನೆಸ್ ಚೆನ್ನಾಗಿರಬೇಕು. ಅವರದ್ದೇ ಪರಿಶ್ರಮದಿಂದ ಮೇಲೆ ಬಂದಿರಬೇಕು, ಅವರ ಹಣದಲ್ಲೇ ಬದುಕಬೇಕು. ಅಪ್ಪನ ಹತ್ರ ದುಡ್ಡಿದೆ ಅಂತ ಶೋಕಿ ಮಾಡಬಾರ್ದು, ಅಂತಹ ಹುಡುಗ ನನಗೆ ನಿಜವಾಗ್ಲೂ ಇಷ್ಟ ಆಗಲ್ಲ. ಅವನು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ರೂ ಅವನೇ ಸ್ವಂತವಾಗಿ ಬೆಳೆದಿರಬೇಕುʼ ಎಂದಿದ್ದಾರೆ ಲಾಸ್ಯ.












Click it and Unblock the Notifications