Krishi Thapanda: ನನ್ನ ಪರ್ಸನಲ್‌ ವಿಷ್ಯ ಪಬ್ಲಿಕ್‌ ಆಗಿದೆ, ಕೀಳಾಗಿ ಮಾತಾಡೋ ಹಕ್ಕು ಯಾರಿಗೂ ಇಲ್ಲ

ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಹಾಗೂ ಸ್ಯಾಂಡಲ್‌ವುಡ್‌ ನಟಿಯೊಬ್ಬರು ನಿರ್ಮಾಪಕರೊಬ್ಬರ ವಿರುದ್ಧ ಕಿರುಕುಳ ಆರೋಪ ಮಾಡಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಿರ್ಮಾಪಕ ತನಗೆ ಮಾನಸಿಕ ಹಿಂಸೆ ನೀಡಿದ್ದ ಎಂದು ನಟಿ ಆರೋಪ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಆ ನಿರ್ಮಾಪಕನನ್ನು ಬಂಧಿಸಿದ್ದರು. ಬಳಿಕ ಜಾಮೀನು ಸಿಕ್ಕಿ ಹೊರಬಂದಿದ್ದಾರೆ. ಆದರೆ ಮೊದಲಿಗೆ ಆ ನಟಿ ಯಾರು ಎಂದು ಹೆಸರು ಬಹಿರಂಗವಾಗಿರಲಿಲ್ಲ. ಇದರ ನಡುವೆ ನಟಿ ಕೃಷಿ ತಾಪಂಡ ಹಂಚಿಕೊಂಡಿರುವ ಪೋಸ್ಟ್‌ ಸಂಚಲನ ಸೃಷ್ಟಿಸಿದೆ. ನನ್ನ ಪರ್ಸನಲ್‌ ವಿಚಾರ ಈಗ ಪಬ್ಲಿಕ್‌ ಆಗಿದೆ ಎಂದು ಅವರು ಬೇಸರ ಹಂಚಿಕೊಂಡಿದ್ದಾರೆ.

ನಿರ್ಮಾಪಕರೊಬ್ಬರ ಮೇಲೆ ನಟಿ ದೂರು ನೀಡಿದ್ದಾರೆ ಎನ್ನುವ ಸುದ್ದಿಯ ನಡುವೆ ನಟಿ ಕೃಷಿ ತಾಪಂಡ ಹಂಚಿಕೊಂಡಿರುವ ಈ ಪ್ರಕರಣಕ್ಕೆ ಹೋಲುವಂತಿದೆ. "ಕಳೆದ ಕೆಲವು ದಿನಗಳು ನನಗೆ ತುಂಬಾ ಭಾರವಾಗಿದ್ದವು. ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ ಎಂದು ಕೃಷಿ ತಾಪಂಡ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಪೊಲೀಸರ, ಕಾನೂನು, ಮಾಧ್ಯಮ ಮತ್ತು ಅನೇಕ ಜನರ ಬೆಂಬಲ ಸಿಕ್ಕಿದ್ದಕ್ಕೆ ನಾನು ಕೃತಜ್ಞಳು. ಆದರೆ ಕೆಲವರು ಇನ್ನೂ ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದಂತೆ ಮಾತನಾಡುತ್ತಿದ್ದಾರೆ" ಎಂದು ಬೇಸರ ಹಂಚಿಕೊಂಡಿದ್ದಾರೆ.

Actress Krishi Thapanda Speaks Out My Personal Life Is Public No One Has Right To Shame

"ಎಲ್ಲರೂ ನನ್ನನ್ನು ನಂಬಲೇಬೇಕು ಅಥವಾ ಬೆಂಬಲಿಸಲೇಬೇಕು ಎನ್ನುವ ನಿರೀಕ್ಷೆ ನನಗಿಲ್ಲ. ಆದರೆ ಯಾರನ್ನಾದರೂ ಕೆಡವೋ ಅಥವಾ ಕೀಳಾಗಿ ಮಾತನಾಡೋ ಹಕ್ಕು ಯಾರಿಗೂ ಇಲ್ಲ. ಸೋಶಿಯಲ್ ಮೀಡಿಯಾದ ದ್ವೇಷ-ಬುಲ್ಲಿಯಿಂಗ್ ಎಲ್ಲರೂ ತಾಳಲು ಸಾಧ್ಯವಾಗುವುದಿಲ್ಲ.ನನ್ನ ಸುರಕ್ಷತೆ, ನನ್ನ ಮನಶಾಂತಿ ಮತ್ತು ನನ್ನ ಬದುಕಿಗಾಗಿ ನಾನು ಮಾಡಬೇಕಾದುದನ್ನೇ ಮಾಡಿದ್ದೇನೆ. ನನ್ನ ಸತ್ಯದ ಮೇಲೆ ನಾನು ದೃಢವಾಗಿದ್ದೇನೆ. ನನ್ನ ಜೊತೆ ನಿಂತ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು" ಎಂದು ಕೃಷಿ ತಾಪಂಡ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅರವಿಂದ್‌ ರೆಡ್ಡಿ ಹೇಳಿದ್ದೇನು?

ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಅವರ ವಿರುದ್ಧ ನಟಿಯೊಬ್ಬರು ದೂರು ನೀಡಿದ್ದಾರೆ ಎಂದು ಹೇಳಲಾಗಿತ್ತು. ನಟಿಗೆ ಕಿರುಕುಳ ಹಾಗೂ ಬೆದರಿಕೆ ಹಾಕಿದ ಆರೋಪ ಕೂಡ ಕೇಳಿಬಂದಿತ್ತು. ಬಳಿಕ ಅರವಿಂದ್‌ ರೆಡ್ಡಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಜಾಮೀನು ಪಡೆದು ಹೊರಬಂದಿದ್ದ ಅವರು, ನಟಿಯ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ನಾವಿಬ್ಬರೂ ಲಿವ್‌ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದೆವು. ಆದರೂ ಬೇರೊಬ್ಬರ ಜೊತೆ ನಟಿ ಸಂಸಾರ ಮಾಡುತ್ತಿದ್ದರು. ಈ ವಿಚಾರ ತಿಳಿದು ಇಬ್ಬರೂ ದೂರ ಆಗಿದ್ದಾಗಿ ಸ್ಪಷ್ಟನೆ ನೀಡಿದ್ದರು. ಆದರೆ ಆ ಕನ್ನಡದ ನಟಿ ಯಾರು ಎಂದು ಎಲ್ಲಿಯೂ ಹೆಸರು ರಿವೀಲ್‌ ಆಗಿರಲಿಲ್ಲ.

ತಮ್ಮ ಮೇಲಿನ ಆರೋಪಗಳಿಗೆ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಸುದ್ದಿಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ್ದರು. ಆ ನಟಿ ನನಗೆ ಮಾತ್ರವಲ್ಲ, ಮದುವೆ ಆಗ್ತೀನಿ, ರಿಲೇಷನ್‌ಶಿಪ್‌ನಲ್ಲಿ ಇರುತ್ತೀನಿ ಎಂದು ಇನ್ನೂ ಮೂವರಿಗೆ ಮೋಸ ಮಾಡಿದ್ದಾರೆ. ಎರಡು ವರ್ಷದ ಹಿಂದೆ ನಮ್ಮಿಬ್ಬರ ಸಂಬಂಧ ಮುರಿದಿದೆ. ಈಗ ಅವರು ನನ್ನ ಮೇಲೆ ಆರೋಪ ಮಾಡಿರೋದು ನನಗೂ ಶಾಕ್ ಕೊಟ್ಟಿದೆ ಎಂದಿದ್ದರು. ಸದ್ಯ ಈ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+