Actress Kasthuri: ಹೈದರಾಬಾದ್‌ನಲ್ಲಿ ಖ್ಯಾತ ನಟಿ ಬಂಧನ
ತಮಿಳುನಾಡಿನ ತೆಲುಗು ಭಾಷಿಕರ ವಿರುದ್ಧ ಕೆಟ್ಟದಾಗಿ ಟೀಕೆ ಮಾಡಿದ್ದ ನಟಿ ಕಸ್ತೂರಿ ಶಂಕರ್ ಅವರನ್ನು ಚೆನ್ನೈ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರೂ ಕಸ್ತೂರಿ ಶಂಕರ್ ತಲೆಮರೆಸಿಕೊಂಡಿದ್ದರು, ಬಳಿಕ ಹುಡುಕಾಟ ಆರಂಭಿಸಿದ್ದ ಚೆನ್ನೈ ಪೊಲೀಸರು ಶನಿವಾರ ಹೈದರಾಬಾದ್‌ನಲ್ಲಿ ನಟಿಯನ್ನು ಬಂಧಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಟಿ ಕಸ್ತೂರಿ ಶಂಕರ್ ತೆಲುಗು ಭಾಷಿಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಸ್ತೂರಿ ಶಂಕರ್ ಹೇಳಿಕೆ ವಿರುದ್ದ ಮಧುರೈ ತಿರುನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಬಂಧನ ಭೀತಿಯನ್ನು ತಪ್ಪಿಸಿಕೊಳ್ಳಲು ಕಸ್ತೂರಿ ಶಂಕರ್ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ಸಾರ್ವಜನಿಕ ವೇದಿಕೆಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ನಂತರ ಪರಿಣಾಮಗಳಿಂದ ಪಾರಾಗಲು ಕ್ಷಮೆಯಾಚಿಸುವುದನ್ನು ಸಹಿಸಲಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಅಭಿಪ್ರಾಯಪಟ್ಟಿತ್ತು.

ಪ್ರಕರಣದ ವಿಚಾರಣ ನಡೆಸಿದ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್, ದೂರುದಾರರು ಆರೋಪ ಮಾಡಿರುವಂತೆ ಕಸ್ತೂರಿ ಹೇಳಿಕೆಯು ತೆಲುಗು ಸಮುದಾಯಕ್ಕೆ ಸೇರಿದ ಮಹಿಳೆಯರ ವಿರುದ್ಧ ನೇರವಾಗಿ ಹೇಳದೇ ಇದ್ದರೂ, ಎಲ್ಲಾ ತೆಲುಗು ಭಾಷಿಕರನ್ನು ಕೆಟ್ಟದಾಗಿ ನೋಡುವಂತೆ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಕಸ್ತೂರಿ ಶಂಕರ್ ಭಾಷಣವನ್ನು ನೋಡಿದಾಗ ಅದೊಂದು ದ್ವೇಷಪೂರಿತ ಹೇಳಿಕೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಭಾರತದಂತದ ವೈವಿಧ್ಯಮಯ ದೇಶದಲ್ಲಿ, ಭಾಷೆಯ ಆಧಾರದ ಮೇಲೆ ಒಂದು ಗುಂಪಿನ ಜನರನ್ನು ಕೀಳಾಗಿ ಅಥವಾ ಅವಮಾನ ಮಾಡುವಂತೆ ಭಾಷಣ ಮಾಡಿದಾಗ ಅದನ್ನು ಸಹಿಸಲು ಸಾಧ್ಯವಿಲ್ಲ" ಎಂದು ಹೇಳಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಕಸ್ತೂರಿ ಶಂಕರ್ ಕ್ಷಮೆಯಾಚನೆ ಪೋಸ್ಟ್ ಮಾಡಿದ್ದರೂ, ಅದರಲ್ಲಿ ಅವರು ತನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳುವ ಪ್ರಯತ್ನ ಮಾಡಿಲ್ಲ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಮಾತ್ರ ಪ್ರಯತ್ನಿಸಿದ್ದಾರೆ ಎಂದು ವರದಿ ಕೋರ್ಟ್ ಅಭಿಪ್ರಾಯಪಟ್ಟಿದೆ.
ತಲೆಮರೆಸಿಕೊಂಡಿದ್ದ ಕಸ್ತೂರಿ ಶಂಕರ್
ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮೊದಲು ಸಮರ್ಥನೆ ಕೊಡಲು ಮುಂದಾದ ಕಸ್ತೂರಿ ಶಂಕರ್, ಆಕ್ರೋಶ ವ್ಯಕ್ತವಾದ ಕ್ಷಮೆ ಕೇಳಿದ್ದರು. ಅದರೆ ಕಸ್ತೂರಿ ಶಂಕರ್ ವಿರುದ್ಧ ದೂರು ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್ ಕೊಟ್ಟಿದ್ದರೂ ಕಸ್ತೂರಿ ಶಂಕರ್ ಹಾಜರಾಗಿರಲಿಲ್ಲ, ಇದರಿಂದಾಗಿ ನಟಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿತ್ತು.
ತಮ್ಮ ವಿರುದ್ಧ ಬಂಧನ ವಾರೆಂಟ್ ನೀಡುತ್ತಿದ್ದಂತೆ ಕಸ್ತೂರಿ ಶಂಕರ್ ತಲೆಮರೆಸಿಕೊಂಡಿದ್ದರು. ಬಳಿಕ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಶನಿವಾರ ಹೈದರಾಬಾದ್‌ನಲ್ಲಿ ನಟಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications