ಮೈ ಮುಟ್ಟುತ್ತಿದ್ರು, ಕಾಂಪ್ರಮೈಸ್‌ಗೆ ಒಪ್ಪದಿದ್ದಕ್ಕೆ ಸಿಕ್ಕ ಅವಕಾಶಗಳೆಲ್ಲ ಹೋಯ್ತು: ಚಿತ್ರರಂಗದ ಕರಾಳತೆ ಬಿಚ್ಚಿಟ್ಟ ಖ್ಯಾತ ನಟಿ
ಹೆಣ್ಣುಮಕ್ಕಳು ತಮ್ಮ ಪ್ರತಿಭೆ ಮೂಲಕ ದೊಡ್ಡ ಹೆಸರು ಮಾಡಬೇಕೆಂಬ ಕನಸು ಹೊತ್ತು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಚಿತ್ರರಂಗದಲ್ಲಿ ಎದುರಾಗುವ ಕಾಸ್ಟಿಂಗ್ ಕೌಚ್ ಅನುಭವದಿಂದಾಗಿ ಅದೆಷ್ಟೋ ಮಂದಿ ನಲುಗಿದ್ದಾರೆ. ಇದು ಸಣ್ಣ ಪುಟ್ಟ ಕಲಾವಿದರು ಅಂತಲ್ಲ, ದೊಡ್ಡ ಸ್ಟಾರ್ ನಟಿಯರನ್ನೂ ಬಿಟ್ಟಿಲ್ಲ. ಇತ್ತೀಚೆಗೆ ಹಲವು ನಟಿಯರು ತಮಗಾದ ಕೆಟ್ಟ ಅನುಭವಗಳನ್ನು ಸಂದರ್ಶನಗಳಲ್ಲಿ ಹೇಳಿಕೊಳ್ಳುವ ಮೂಲಕ ಶಾಕ್ ಕೊಟ್ಟಿದ್ದಾರೆ. ಮತ್ತೊಬ್ಬ ಖ್ಯಾತ ನಟಿ ಕೂಡ ಕಾಸ್ಟಿಂಗ್ ಕೌಚ್‌ನಿಂದಾಗಿ ಹೇಗೆಲ್ಲ ನರಳಾಡಿದರು ಎಂಬುದನ್ನು ಹಲವು ವರ್ಷಗಳ ನಂತರ ಹೇಳಿಕೊಂಡಿದ್ದಾರೆ.
2002ರಲ್ಲಿ ಯೇ ದಿಲ್ ಆಶಿಕಾನಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಬಾಲಿವುಡ್ ನಟಿ ಜಿವಿದಾ ಶರ್ಮಾ (Jividha Sharma) ಅವರಿಗೆ ದಶಕಗಳ ಹಿಂದೆಯೇ ಕಾಸ್ಟಿಂಗ್ ಕೌಚ್ ಅನುಭವವಾಗಿದೆ. ಅವರ ಮೊದಲ ಸಿನಿಮಾ ಬ್ಲಾಕ್‌ಬಸ್ಟರ್ ಆದ ಕಾರಣ ಬಹುಬೇಡಿಕೆಯ ನಟಿಯಾಗಿದ್ದ ಜಿವಿದಾ, ಆದರೆ ಇದ್ದಕ್ಕಿದ್ದಂತೆ ಅವರು ಸಿನಿಮಾಗಳಿಂದ ದೂರ ಉಳಿಯುವ ನಿರ್ಧಾರ ಮಾಡಿ ಶಾಕ್ ಕೊಟ್ಟಿದ್ದರು. ಮೊಹೆಂಜೊದಾರೋ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಜಿವಿದಾ ಶರ್ಮಾ ತಾಲ್ ಚಿತ್ರದಲ್ಲಿ ಐಶ್ವರ್ಯಾ ರೈ ಅವರ ತಂಗಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಈ ನಡುವೆ ಜಿವಿದಾ ಅವರಿಗೆ ಕೆಟ್ಟ ಅನುಭವ ಕೂಡ ಆಗಿತ್ತು. ಅದೇನು ಎಂದು ಇತ್ತೀಚಿನ ಸಂದರ್ಶನದಲ್ಲಿ ಅವರು ರಿವೀಲ್ ಮಾಡಿದ್ದಾರೆ. ಕಾಸ್ಟಿಂಗ್ ಕೌಚ್ ತನ್ನನ್ನು ಹೇಗೆ ಕತ್ತಲೆಯಲ್ಲಿ ಇರಿಸಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

'ಕಾಂಪ್ರಮೈಸ್ ಆಗು ಅಂದ್ರು'
'ಯೇ ದಿಲ್ ಆಶಿಕಾನಾ' ನನಗೆ ಒಂದು ದೊಡ್ಡ ಹಿಟ್ ನೀಡಿತ್ತು. ಆ ಸಿನಿಮಾ ಬೆಳ್ಳಿ ಮಹೋತ್ಸವ ಕೂಡ ಆಚರಿಸಿಕೊಂಡಿತ್ತು. ನಂತರ ಆ ಕಾಲಘಟ್ಟದ ಎಲ್ಲ ನಿರ್ದೇಶಕರನ್ನು ನಾನು ಭೇಟಿಯಾಗಿದ್ದೆ. ನಾನು ಫೇಮಸ್ ಕೂಡ ಆಗಿದ್ದೆ. ಹಲವು ಆಫರ್‌ಗಳು ನನ್ನ ಕೈಯಲ್ಲಿದ್ದವು. ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಒಂದು ತೆಲುಗು ಚಿತ್ರಕ್ಕೂ ಸಹಿ ಹಾಕಿದ್ದೆ. ಆದರೆ ಚಿತ್ರದ ಯಶಸ್ಸಿನ ಹೊರತಾಗಿಯೂ, ನಾನು ಮತ್ತೆ ಕೆಲಸ ಪಡೆಯಲು ಕಷ್ಟಪಡಬೇಕಾಯಿತು ಎಂದು ಜಿವಿದಾ ಹೇಳಿದ್ದಾರೆ. ಕೆಲವರು ನನ್ನನ್ನು ಕಾಂಪ್ರಮೈಸ್ ಆಗುವಂತೆ ಕೇಳಿದರು. ಆದರೆ ನಾನು ಅದಕ್ಕೆ ಸಿದ್ಧಳಾಗಿರಲಿಲ್ಲ. ಇದೇ ಅದು ನನ್ನ ವೃತ್ತಿಜೀವನದಲ್ಲಿ ತಡೆಗೋಡೆಯಾಯಿತು' ಎಂದಿದ್ದಾರೆ.
'ನಾನು ಬಾಲಿವುಡ್‌ಗೆ ಕಾಲಿಟ್ಟಾಗ ಇನ್ನೂ ಹದಿಹರೆಯದವಳಾಗಿದ್ದೆ. ಆರಂಭದಲ್ಲಿ ಕಾಂಪ್ರಮೈಸ್ ಎಂದರೆ ಏನು ಎಂದು ನನಗೆ ಅರ್ಥವಾಗಲಿಲ್ಲ. ಕೆಲವು ಜನರು ತುಂಬಾ ಹತ್ತಿರ ಕುಳಿತು, ನನ್ನ ಮೈಮುಟ್ಟಿ ಮುಟ್ಟಿ, ನೀನು ತುಂಬಾ ಸುಂದರವಾಗಿದ್ದೀಯ, ನನಗೆ ನಿನ್ನ ಇಷ್ಟ ಎನ್ನುತ್ತಿದ್ದರು. ಕೆಲವರು ನನ್ನ ಅಸ್ವಾಭಾವಿಕ ರೀತಿಯಲ್ಲಿ ದೈಹಿಕವಾಗಿ ಹತ್ತಿರವಾಗಲು ಪ್ರಯತ್ನಿಸುತ್ತಿದ್ದರು. ಆಗ ಏನೋ ತಪ್ಪಾಗಿದೆ ಎಂದು ನನಗೆ ಅರಿವಾಯಿತು. ಇದಾದ ಕೆಲ ದಿನಗಳಲ್ಲೇ ನನಗೆ ಸಿಕ್ಕಿದ್ದ ಆಫರ್‌ಗಳು ಒಂದೊಂದೇ ಕೈತಪ್ಪಲಾರಂಭಿಸಿತು. ಒಂದು ದೊಡ್ಡ ಸಿನಿಮಾ ಹಿಟ್ ಕೊಟ್ಟ ಮೇಲೂ ನಾನು ಇದನ್ನು ಎದುರಿಸಬೇಕಾಯಿತು' ಎಂದು ಬೇಸರ ಹೊರಹಾಕಿದ್ದಾರೆ.
'ನೀನೇನು ಸ್ಪೆಷಲ್ಲಾ ಅಂದ್ರು'
'ಒಂದು ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದರೂ ಚಿತ್ರರಂಗ ನನ್ನ ಕಡೆಗಣಿಸಿತು. ಆ ಘಟನೆ ನಂತರ ಯಾವುದೇ ಪ್ರಶಸ್ತಿ ಕಾರ್ಯಕ್ರಮಗಳಿಗೂ ನನ್ನನ್ನು ಆಹ್ವಾನಿಸಲಿಲ್ಲ. ನಾನು ರಾತ್ರೋರಾತ್ರಿ ಸ್ಟಾರ್ ಆದೆ. ಆದರೆ ನನ್ನನ್ನ ಹೊರಗಿನವಳಂತೆ ನಡೆಸಿಕೊಂಡರು. ಇದರಿಂದ ನಾನು ದಿನಗಟ್ಟಲೆ ಅಳುತ್ತಿದ್ದೆ. ಕೊನೆಗೆ ಬದುಕಲು ಕಾಂಪ್ರಮೈಸ್ ಆಗಲೇಬೇಕಾ ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟಿತ್ತು. ರಾಜಿ ಮಾಡಿಕೊಳ್ಳದಷ್ಟು ವಿಶೇಷವಾಗಿ ನಿಮ್ಮಲ್ಲೇನಿದೆ? ಉಳಿದವರೆಲ್ಲರೂ ಅದನ್ನ ಮಾಡುತ್ತಾರೆ ಎನ್ನುತ್ತಿದ್ದರು. ಬಹುಶಃ ಇದು ನನ್ನ ಸ್ಥಳವಲ್ಲ, ನಾನು ಇದಕ್ಕೆ ಯೋಗ್ಯಳಲ್ಲ ಎಂದು ಖಿನ್ನತೆಗೂ ಒಳಗಾಗಿದ್ದೆ' ಎಂದು ನಟಿ ಜಿವಿದಾ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.
-
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ












Click it and Unblock the Notifications