Chandana Ananthakrishna: ಲಕ್ಷ್ಮಿ ನಿವಾಸದ ಜಾಹ್ನವಿ ಪಾತ್ರಕ್ಕೆ ಬಾಯ್ ಹೇಳಿದ್ರಾ ಚಂದನಾ ಅನಂತಕೃಷ್ಣ: ನಟಿ ಹೇಳಿದ್ದೇನು?
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿ ಎಲ್ಲರ ಮೆಚ್ಚುಗೆ ಗಳಿಸಿದೆ. ಮಕ್ಕಳ ಮದುವೆ ಮಾಡುವ ಕನಸು ಕಂಡ ತಾಯಿ, ಒಂದು ಮನೆ ಕಟ್ಟುವ ಕನಸು ಕಾಣುವ ತಂದೆ.. ಇಬ್ಬರ ಆಸೆಗಳ ನಡುವೆ ಮಕ್ಕಳ ಜೀವನ ರೂಪಿಸುವ ಜವಾಬ್ದಾರಿಗಳ ಜೊತೆಗೆ ಮಧ್ಯಮ ವರ್ಗವನ್ನು ಪ್ರತಿನಿಧಿಸುತ್ತಿದ್ದು, ವೀಕ್ಷಕರ ಗಮನ ಸೆಳೆಯುತ್ತಿದೆ.
ಸದ್ಯ ಧಾರಾವಾಹಿಯಲ್ಲಿ ಲಕ್ಷ್ಮಿ ಮಗಳು ಜಾಹ್ನವಿ ಮದುವೆಯಾಗಿದೆ. ದೊಡ್ಡ ಶ್ರೀಮಂತನ ಮನೆಗೆ ಮಗಳನ್ನು ಸೊಸೆಯಾಗಿ ಕಳುಹಿಸಿದ್ದಾರೆ. ಆದರೆ, ಆ ಶ್ರೀಮಂತ ಜಯಂತ್ ದೊಡ್ಡ ಸೈಕೊ ರೀತಿ ವರ್ತಿಸುತ್ತಿದ್ದಾನೆ. ಇದರ ನಡುವೆ ಜಾಹ್ನವಿ ಕಷ್ಟಪಡುತ್ತಿದ್ದಾಳೆ. ವೀಕ್ಷಕರು ಜಾಹ್ನವಿಯ ಸ್ಥಿತಿಗೆ ಮರುಗುತ್ತಿದ್ದಾರೆ. ಇದೇ ವೇಳೆ ಜಾಹ್ನವಿ ಮಾತ್ರದಲ್ಲಿ ನಟಿಸುತ್ತಿರುವ ನಟಿ ಚಂದನಾ ಅನಂತಕೃಷ್ಣ ಧಾರಾವಾಹಿಗೆ ಗುಡ್ ಬಾಯ್ ಹೇಳಿದ್ದಾರೆ ಎಂಬ ವದಂತಿ ಹರಡಿದೆ.

ಲಕ್ಷ್ಮಿ ನಿವಾಸದಿಂದ ಹೊರ ಬಂದ್ರಾ ನಟಿ ಚಂದನಾ?
ಜನಪ್ರಿಯ ಕನ್ನಡ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಕಿರುತೆರೆ ಜೊತೆಗೆ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಸದ್ಯ ಅವರನ್ನು ಜನ ಜಾಹ್ನವಿ, ಜಾನ್ವಿ, ಜಾನು ಎಂದು ಪ್ರೀತಿಯಿಂದ ಕರೆಯುತ್ತಿದ್ದಾರೆ. ಅದಕ್ಕೆ ಕಾರಣ ಅವರು ನಟಿಸುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿ ಎಂದರೆ ತಪ್ಪಾಗುವುದಿಲ್ಲ. ಕಿರುತೆರೆ ವೀಕ್ಷಕರು ಹೆಚ್ಚು ಪ್ರಿತಿಯಿಂದ ಅಪ್ಪಿಕೊಂಡಿರುವ ಹೊಸ ಧಾರಾವಾಹಿಗಳಲ್ಲಿ ಲಕ್ಷ್ಮಿ ನಿವಾಸ ಕೂಡ ಒಂದು. ಇದರಲ್ಲಿ ಜಾಹ್ನವಿ ಪಾತ್ರದಲ್ಲಿಚಂದನಾ ಕಾಣಿಸಿಕೊಂಡಿದ್ದಾರೆ.
ಸದ್ಯ ಲಕ್ಷ್ಮಿ ನಿವಾಸ ಧಾರಾವಾಹಿಯಿಂದ ಚಂದನಾ ಅನಂತಕೃಷ್ಣ ಹೊರ ಬಂದಿದ್ದಾರೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ ಆಗಿದೆ. ಇದಕ್ಕೆ ಜಾಹ್ನವಿ ಅಭಿಮಾನಿಗಳು ಕಂಗಾಲಾಗಿದ್ದಾರೆ. ಅವರು ಸೀರಿಯಲ್‌ನಿಂದ ಹೊರ ಬರೋಕೆ ಸೈಕೊ ಜಯಂತ್ ಕಾರಣ ಎಂದು ಮತ್ತೊಬ್ಬ ಸಹನಟನ ಮೇಲೆ ಆರೋಪ ಹೊರಸಿದ್ದಾರೆ. ಜಯಂತ್ ಜಾನ್ವಿ ಗಂಡನ ಪಾತ್ರದ ಹೆಸರು.
ಸ್ಪಷ್ಟನೆ ನೀಡಿದ ನಟಿ ಚಂದನಾ ಅನಂತಕೃಷ್ಣ
ಈ ವದಂತಿ ವೈರಲ್ ಆಗುತ್ತಿದ್ದಂತೆ ನಟಿ ಚಂದನಾ ಅನಂತಕೃಷ್ಣ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ವಿಷಯ ಹಂಚಿಕೊಂಡಿದ್ದಾರೆ. ತಾವು ಈ ಧಾರಾವಾಹಿಯನ್ನು ಬಿಡುತ್ತಿಲ್ಲ ಎಂದು ಹೇಳಿ ತನ್ನ ಫ್ಯಾನ್ಸ್ ಕಳವಳವನ್ನು ದೂರ ಮಾಡಿದ್ದಾರೆ.

ಇತ್ತೀಚಿನ ಪೋಸ್ಟ್‌ನಲ್ಲಿ ಚಂದನಾ "ನಾನು ಲಕ್ಷ್ಮಿ ನಿವಾಸ ಶೋ ತೊರೆಯುವ ಬಗ್ಗೆ ವದಂತಿಗಳು ಕೇಳಿಬರುತ್ತಿವೆ. ನಾನು ಈ ಧಾರಾವಾಹಿಯನ್ನು ಬಿಡುವುದಿಲ್ಲ ಎಂದು ನನ್ನ ಅಭಿಮಾನಿಗಳಿಗೆ ಹೇಳಲು ಬಯಸುತ್ತೇನೆ. ನನ್ನ ಮತ್ತು ಜಾನ್ವಿಯ ಮೇಲೆ ನೀವು ಪ್ರೀತಿ ತೋರಿಸುವುದನ್ನು ಮುಂದುವರಿಸಿ" ಎಂದು ಹೇಳಿದ್ದಾರೆ.
ವೀಕ್ಷಕರ ಮನಗೆದ್ದ ಜಾನು
ಚಂದನಾ ಅವರ ಪಾತ್ರ, ಜಾನು ತನ್ನದೆ ಆದ ಮುಗ್ಧ ಮತ್ತು ಸೂಕ್ಷ್ಮ ಅಭಿನಯದಿಂದ ವೀಕ್ಷಕರ ಹೃದಯವನ್ನು ಸೆರೆಹಿಡಿದಿದೆ. ಈ ಮೂಲಕ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಕೇಂದ್ರ ವ್ಯಕ್ತಿಯಾಗಿದ್ದಾರೆ. ಪಾತ್ರಕ್ಕೆ ತಕ್ಕ ಅವರ ಹದಬೆರೆತ ಅಭಿನಯದಿಂದ ಜನರನ್ನು ತಮ್ಮತ್ತ ಸೆಳೆದಿದ್ದಾರೆ. ಸೈಕೊ ಗಂಡನ ಅವಾಂತರಗಳನ್ನು ತಿಳಿಯದಷ್ಟು ಮುಗ್ಧೆಯಾಗಿ ಕಾಣಿಸಿಕೊಂಡಿದ್ದಾರೆ.
ಕೂಡು ಕುಟುಂಬದ ಕಥೆಯಾದ 'ಲಕ್ಷ್ಮೀ ನಿವಾಸ' ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಸದ್ಯ ಜಾಹ್ನವಿ- ಜಯಂತ್ ಅವರ ಪಾತ್ರಗಳು ಪ್ರಮುಖವಾಗಿದ್ದು, ಜನ ಇಬ್ಬರನ್ನು ನೋಡಲು ಕಾಯುತ್ತಿದ್ದಾರೆ. ಜಾನು ಪಾತ್ರದಲ್ಲಿ ಬೇರೆಯವರನ್ನು ನೋಡಲು ಆಗುವುದಿಲ್ಲ ಎಂದು ಫ್ಯಾನ್ಸ್ ಕಾಮೆಂಟ್ ಮೂಲಕ ನಟಿ ಚಂದನಾಗೆ ಮನವಿ ಮಾಡಿದ್ದಾರೆ.












Click it and Unblock the Notifications