Aditi Prabhudeva: ಡಾಲಿ ಮದುವೆಗೆ ಹೋಗದೇ ಇರಲು ಕಾರಣ ಹೇಳಿದ ಅದಿತಿ ಪ್ರಭುದೇವ

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಧನ್ಯತಾ ಹಾಗೂ ನಟ ದನಂಜರ್ ಜೋಡಿಯನ್ನು ನೋಡಿದ ಎಲ್ಲರೂ ಕೊಂಡಾಡಿದ್ದಾರೆ. ಈ ಮದುವೆಗೆ ಚಿತ್ರರಂಗದ ಹಲವಾರು ಗಣ್ಯರು ಭೇಟಿ ನೀಡಿ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಆದರೆ ಕೆಲ ಸೆಲೆಬ್ರಿಟಿಗಳು ಈ ಮದುವೆಗೆ ಆಗಮಿಸಿರಲಿಲ್ಲ. ವಿಶೇಷವಾಗಿ ಅದಿತಿ ಪ್ರಭುದೇವ. ಈ ಬಗ್ಗೆ ಹಲವಾರು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೀಗ ಇದಕ್ಕೆಲ್ಲಾ ಅದಿತಿ ಅವರೇ ಉತ್ತರ ನೀಡಿದ್ದಾರೆ. ಹಾಗಾದರೆ ಅದಿತಿ ಪ್ರಭುದೇವ ಡಾಲಿ ಧನಂಜಯ್ ಮದುವೆಗೆ ಆಗಮಿಸದೇ ಇರಲು ಕಾರಣ ಏನು?

ಫೆಬ್ರವರಿ 16ರಂದು ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆ ನೆರವೇರಿತು. ಇವರ ಮದುವೆಗೆ ನಟಿ ಅದಿತಿ ಪ್ರಭುದೇವ ಗೈರಾಗಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ ಅದಿತಿ ಪ್ರಭುದೇವ ಅವರು ಡಾಲಿ ಮದುವೆಗೆ ಹೋಗಲು ಆಗದೇ ಇದ್ದಿದ್ದಕ್ಕೆ ಕಾರಣವನ್ನು ಹೇಳಿಕೊಂಡಿದ್ದಾರೆ.

Actress aditi prabhudeva says why daali dhananjaya didnt go to wedding

ನಟ ಡಾಲಿ ಧನಂಜಯ್ ಹಾಗೂ ಅದಿತಿ ಪ್ರಭುದೇವ ತುಂಬಾ ಒಳ್ಳೆಯ ಸ್ನೇಹಿತರು. ಹೀಗಾಗಿ ಮದುವೆಗೆ ಧನು ಅದಿತಿ ಅವರಿಗೆ ಆಮಂತ್ರಣ ನೀಡಿದ್ದರು. ಆದರೆ ಅದಿತಿ ಪ್ರಭುದೇವ ಮಾತ್ರ ಮದುವೆಗೆ ಹೋಗಿಲ್ಲ. ಇದಕ್ಕೆ ಅದಿತಿ ಅವರೇ ಸಂದರ್ಶನವೊಂದರಲ್ಲಿ ಮಾತನಾಡುವಾಗ ಕಾರಣ ಹೇಳಿದ್ದಾರೆ.

ಡಾಲಿ ಮದುವೆಗೆ ಹೋಗದೇ ಇರಲು ಕಾರಣ ಹೇಳಿದ ಅದಿತಿ

ಸಂದರ್ಶನದ ವೇಳೆ ಅದಿತಿ ಅವರ ಡಾಲಿ ಅವರನ್ನು ಕೊಂಡಾಡಿದ್ದಾರೆ. 'ಡಾಲಿ ಅವರು ತುಂಬಾ ಸ್ವೀಟ್, ತುಂಬಾ ಹಂಬಲ್ ಗಾಯ್, ಅವರು ನನಗೆ ತುಂಬಾ ಒಳ್ಳೆಯ ಫ್ರೆಂಡ್. ನನಗೆ ಮಾತ್ರವಲ್ಲ ಯಶ್ ಅವರಿಗೂ ತುಂಬಾ ಒಳ್ಳೆಯ ಸ್ನೇಹಿತರು ಅವರು. ಆದರೆ ಅವರ ಮದುವೆಗೆ ಹೋಗಲು ಆಗಲಿಲ್ಲ' ಎಂದು ಅದಿತಿ ಬೇಸರ ವ್ಯಕ್ತಪಡಿಸಿದ್ದಾರೆ.

'ಡಾಲಿ ಮದುವೆಗೆ ಹೋಗದೇ ಇರಲು ಪ್ರಮುಖ ಕಾರಣ ಮಗು ಆದ್ಮೇಲೆ ಜೀವನ ತುಂಬಾ ಬದಲಾಗುತ್ತದೆ. ನಾನು ಬೆಂಗಳೂರಲ್ಲಿ ಇದ್ದಿದ್ದರೆ ಮದುವೆಗೆ ಹೋಗಿ ಬರಬಹುದಾಗಿತ್ತು. ಆದರೆ ಬೆಂಗಳೂರಿಗೆ ನಾನು ಮದುವೆ ದಿನವೇ ಪ್ರಯಾಣ ಮಾಡಿಕೊಂಡು ಬರ್ತಾಯಿದ್ದೆ. ಜೊತೆಗೆ ಪುಟ್ಟ ಮಗು ಬೇರೆ ಇತ್ತು. ಮದುವೆ ಹೋಗಬೇಕು ಅನ್ನೋ ಆಸೆ ತುಂಬಾ ಇತ್ತು ನನಗೆ. ಆದರೆ ಮದುವೆಯಲ್ಲಿ ತುಂಬಾ ಜನ ಇದ್ದರು. ಧನು ಸರ್ ಮದುವೆ ಅಂದರೆ ಜನ ಇದ್ದೇ ಇರುತ್ತಾರೆ. ಎಲ್ಲರಿಗೂ ಧನು ಸರ್ ಮದುವೆ ನೋಡಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಆ ಗದ್ದಲದಲ್ಲಿ ನನ್ನ ಪುಟ್ಟ ಮಗುವನ್ನು ಕರೆದುಕೊಂಡು ಹೋಗುವುದು ಬೇಡ ಅನಿಸಿತು. ಮಗಳು ಇನ್ನೂ ತುಂಬಾ ಚಿಕ್ಕದು. ಆ ಮಗುನಾ ಬೆಂಗಳೂರಿಗೆ ಕರೆದುಕೊಂಡು ಬಂದು ನಂತರ ಮದುವೆಗೆ ಹೋಗೋದು ಕಷ್ಟ ಅನಿಸಿತು' ಎಂದು ಅದಿತಿ ಹೇಳಿದ್ದಾರೆ.

ಧನು ಸರ್‌ಗೆ ಮೆಸೇಜ್ ಮಾಡಿದ್ದೆ- ಅದಿತಿ

'ಆದರೂ ಮನಸ್ಸು ತಡೆಯಲೇ ಇಲ್ಲ. ಧನು ಸರ್‌ಗೆ ಒಂದು ಮೆಸೇಜ್ ಹಾಕಿದೆ. ಸರ್‌... ನನಗೆ ಪಾಪು ಕರೆದುಕೊಂಡು ಬರೋದಕ್ಕೆ ಆಗಲ್ಲ. ಇಲ್ಲಿಂದಲೇ ವಿಶ್ ಮಾಡ್ತೀನಿ. ಒಳ್ಳೆದಾಗಲಿ ಸರ್ ಅಂತ ಮಿಶ್ ಮಾಡಿದೆ. ಆಗ ಧನು ಸರ್ ಹೇ ನೋ ಪ್ರಾಬ್ಲೋಮ್, ನನಗೆ ಅರ್ಥ ಆಗುತ್ತೆ ಎಂದರು. ಟಿವಿ, ಯೂಟ್ಯೂಬ್ ಅಲ್ಲಿ ನಾನು ನೋಡಿದೆ. ತುಂಬಾ ಖುಷಿ ಆಯ್ತು' ಎಂದು ಅದಿತಿ ಹೇಳಿಕೊಂಡಿದ್ದಾರೆ.

ಧನು ಸರ್ ಬಯಸಿದ ಹುಡುಗಿ ಸಿಕ್ಕಿದ್ದಾರೆ- ಅದಿತಿ

'ಧನು ಸರ್‌ಗೆ ತುಂಬಾ ಆಸೆ ಇತ್ತು. ಅಪ್ಪ ಅಮ್ಮ ಮೆಚ್ಚುವ ಹುಡುಗಿ ಸಿಗ್ಬೇಕು. ಇಂಡಿಪೆಂಡೆಂಟ್ ಆಗಿರಬೇಕು. ಸಂಸ್ಕಾರ ಇರೋ ಹುಡುಗಿನೇ ಮದುವೆ ಆಗಬೇಕು ಅನ್ನೋದು ಧನು ಸರ್ ಅವರ ಆಸೆ ಆಗಿತ್ತು. ಧನ್ಯತಾ ಅವರನ್ನ ನೋಡಿದರೆನೇ ಗೊತ್ತಾಗುತ್ತದೆ. ಅವರು ತುಂಬಾ ಹೋಮ್ಲಿ ಹುಡುಗಿ. ಇಬ್ಬರು ಖುಷಿಯಾಗಿದ್ದಾರೆ. ಅದನ್ನು ನೋಡಿದರೇ ಖುಷಿ ಆಗುತ್ತದೆ. ಅವರ ಜೀವದುದ್ದಕ್ಕೂ ಖುಷಿಯಾಗಿ ಸಂತೋಷವಾಗಿ ಇರಲಿ ಅನ್ನೋದು ನನ್ನ ಆಸೆ' ಎಂದು ಅದಿತಿ ಅವರು ಧನು ಮದುವೆ ಬಗ್ಗೆ ಸಂತೋಷದ ಮಾತುಗಳನ್ನು ಆಡಿದ್ದಾರೆ. ಈ ಮೂಲಕ ಅದಿತಿ ಅವರು ಧನಂಜಯ್ ಮದುವೆಗೆ ಹೋಗದೇ ಇರಲು ಹಬ್ಬಿದ ಹಲವಾರು ಊಹಾಪೋಹಗಳಿಗೆ ತೆರೆ ಎಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+