Dr.Shiva Rajkumar: ಡ್ಯಾನ್ಸ್ ಶೋ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ನಟ ಶಿವರಾಜ್‌ಕುಮಾರ್
Dr.Shiva Rajkumar: ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ (ಡಿಕೆಡಿ) ಶೋನಲ್ಲಿ ನಟ ಶಿವಣ್ಣ ಆನಂದ ಭಾಷ್ಪವನ್ನು ಹರಿಸಿದ್ದಾರೆ. ವೇದಿಕೆ ಮೇಲೆ ಸ್ಪರ್ಧಿಗಳು ಟಗರು ಸಿನಿಮಾದ ಟಗರು ಬಂತು ಟಗರು ಎಂಬ ಹಾಡಿಗೆ ಅಧ್ಬುತವಾದ ನೃತ್ಯ ಮಾಡಿದ್ದು, ಈ ಪರ್ಫಾರ್‌ಮೆನ್ಸ್‌ಗೆ ಅಲ್ಲಿದ್ದವರೆಲ್ಲ ಧಂಗಾದರು. ಮತ್ತೊಂದೆಡೆ ನಟ ಶಿವಣ್ಣ ಕಣ್ಣೀರಿಟ್ಟರು.
ಟಗರು ಬಂತು ಟಗರು ಹಾಡಿಗೆ ಡ್ಯಾನ್ಸ್ ಮಾಡಿದ ಸ್ಪರ್ಧಿಗಳ ಪರ್ಫಾಮೆನ್ಸ್ ಬಗ್ಗೆ ನಿರೂಪಕಿ ಅನುಶ್ರೀ ಅವರು ಕೇಳಿದಾಗ, ನಟ ಶಿವಣ್ಣ ಎದ್ದುನಿಂತು ಒಂದು ಕ್ಷಣ ಸುಮ್ಮನಾಗಿ ಕಣ್ಣೀರಿಟ್ಟುಬಿಟ್ಟರು. ಬಳಿಕ ಪಕ್ಕದಲ್ಲಿ ಕುಳಿತಿದ್ದ ನಟ ರಕ್ಷಿತಾ, ಚಿನ್ನಿ ಮಾಸ್ಟರ್ ಹಾಗೂ ವೇದಿಕೆ ಮೇಲಿಂದ ಬಂದ ನಿರೂಪಕಿ ಅನುಶ್ರೀ ಅವರು ನಟ ಶಿವಣ್ಣನನ್ನು ಸಮಾಧಾನ ಮಾಡಲು ಮುಂದಾದರು.

ಇನ್ನು ಕಣ್ಣೀರೊರಿಸಿಕೊಂಡು ಪ್ರತಿಕ್ರಿಯಿಸಿದ ಶಿವಣ್ಣ, ಇದು ಯಾವುದೋ ಸಂಕಟದಿಂದ ಬಂದ ಕಣ್ಣೀರಲ್ಲ. ಆನಂದದಿಂದ ಬಂದ ಕಣ್ಣೀರು. ನಾನು ನಿಮ್ಮ ಅಭಿಮಾನಿ, ಈ ಡ್ಯಾನ್ಸ್ ನೋಡಿ ಧನ್ಯನಾದೆ ಎಂದು ಸ್ಪರ್ಧಿಗಳನ್ನು ಹೊಗಳಿದರು. ಬಳಿಕ ಜಡ್ಜ್ ಸೀಟ್‌ನಿಂದ ಎದ್ದು ಹೋಗಿ ವೇದಿಕೆ ಮೇಲೆ ಎಲ್ಲಾ ಸ್ಪರ್ಧಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಟಗರು ಬಂತು ಟಗರು ಹಾಡಿಗೆ ಹೆಜ್ಜೆ ಹಾಕಿದರು. ಅಷ್ಟೇ ಅಲ್ಲದೆ, ಡಾಲಿ ಧನಂಜಯ್ ಜೊತೆ ನಿಂತು ಸಿನಿಮಾದ ಡೈಲಗ್ ಹೊಡೆದು ಗಮನ ಸೆಳೆದರು.
ಡಾಲಿ ಧನಂಜಯ್ ಬಗ್ಗೆ ಮಾತನಾಡಿದ ಅವರು, ಟಗರು ಜೊತೆ ಡಾಲಿ ಇದ್ದೇನೇ ಚಂದ. ನಾಮ್ಮೊಬ್ಬರಿಂದಲೇ ಸಿನಿಮಾ ಹಿಟ್ ಆಗಿದ್ದಲ್ಲ. ಇದರ ಪ್ರಮುಖ ಪಾತ್ರ ಡಾಲಿಯದ್ದು ಇದೆ ಎಂದು ಹೇಳುವ ಮೂಲಕ ದೊಡ್ಡತನ ಮೆರೆಯುವ ಮೂಲಕ ಅಲ್ಲಿದ್ದವರ ಹಾಗೂ ಶೋ ವೀಕ್ಷಣೆ ಮಾಡುವವರ ಮನ ಗೆದ್ದರು.












Click it and Unblock the Notifications