Ramesh Aravind: ಪೆನ್‌ಡ್ರೈವ್ ಕೊಡಲು ಬಂದ ಅಪರಿಚಿತ, ಮೊದಲು ಫ್ರೆಮ್ನಿಂದ ತೆಗೆಯಿರಿ ಎಂದ ನಟ ರಮೇಶ್ ಅರವಿಂದ್!
ಬೆಂಗಳೂರು, ಮೇ. 25: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅವರ ವಿಡಿಯೋ ಸಕತ್ ವೈರಲ್ ಆಗಿದ್ದು, ಪೆನ್‌ಡ್ರೈವ್ ಎಂದರೆ ಸಾಕು ಜನ ಬೆಚ್ಚಿಬೀಳುವ ಹಾಗಾಗಿದೆ. ಸದ್ಯ ನಟ ರಮೇಶ್ ಅರವಿಂದ್ ಕೂಡ ಪೆನ್‌ಡ್ರೈವ್ ನೋಡಿ ಶಾಕ್ ಆಗಿದ್ದಾರೆ.
ಹೌದು... ಪೆನ್‌ಡ್ರೈವ್ ನೋಡಿದ್ರೆ ಜನ ಗಾಬರಿಯಾಗುವ ಹಾಗಾಗಿದೆ. ಇದರ ಜೊತೆಗೆ ನಟ ರಮೇಶ್ ಅರವಿಂದ್ ಅವರಿಗೆ ಒಬ್ಬ ಅಪರಿಚಿತ ಪೆನ್‌ಡ್ರೈವ್ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಎಲ್ಲರಿಗೂ ಪೆನ್‌ಡ್ರೈವ್ ಎಂದರೆ ಭಯ. ಹಾಗೇಯೆ ನಟ ರಮೇಶ್ ಕೂಡ ಗಾಬರಿಬಿದ್ದಿದ್ದಾರೆ. ಹಾಗಾದರೆ ಅಪರಿಚಿತ ರಮೇಶ್ ಅರವಿಂದ್ಗೆ ಪೆನ್‌ಡ್ರೈವ್ ಕೊಟ್ಟಿದ್ದು ಏಕೆ..? ಆ ಪೆನ್ಡ್ರೈವ್ನಲ್ಲಿ ಏನಿತ್ತು ಎನ್ನುವ ಬಗ್ಗೆ ಇಲ್ಲಿದೆ ವಿವರ.

ರಮೇಶ್ ಅರವಿಂದ್ ಶಾಕ್ ಆಗಿದ್ದು ಯಾಕೆ?
ನಟ ರಮೇಶ್ ಅರವಿಂದ್ ಸದ್ಯ ಖಾಸಗಿ ವಾಹಿನಿ ಜೀ ಕನ್ನಡದ ಮಹಾನಟಿ ರಿಯಾಲಿಟಿ ಶೋ ಜಡ್ಜ್ ಆಗಿದ್ದಾರೆ. ಕಾರ್ಯಕ್ರಮದಿಂದ ಹೊರ ಬರುವ ವೇಳೆಯಲ್ಲಿ ಅಪರಿಚಿತರೊಬ್ಬರು ಪೆನ್‌ಡ್ರೈವ್ ಹಿಡಿದು ಎದುರಿಗೆ ಕಾಣಿಸಿಕೊಂಡಿದ್ದಾರೆ. ಇವೆ ವೇಳೆ ಪೆನ್‌ಡ್ರೈವ್ ನೋಡಿ ರಮೇಶ್ ಅರವಿಂದ್ ಶಾಕ್ ಆಗಿದ್ದಾರೆ.
ಮಹಾನಟಿ ಶೂಟಿಂಗ್ ಸ್ಥಳಕ್ಕೆ ಬಂದಿದ್ದ ರಮೇಶ್ ಅರವಿಂದ್ ಅವರನ್ನು ಒಬ್ಬ ಅಪರಿಚಿತ ಬೆಳಗ್ಗೆಯಿಂದ ಕಾಯುತ್ತಿದ್ದರು. ಈ ವಿಷಯ ಕೇಳಿ ಅವರು ಭೇಟಿಯಾಗಲು ಬರುತ್ತಾರೆ. ಅವರು ಬರುತ್ತಿದ್ದಂತೆ ತಮ್ಮನ್ನು ಪರಿಚಯ ಮಾಡಿಕೊಂಡ ವ್ಯಕ್ತಿ ತಕ್ಷಣ ಅವರ ಮುಂದೆ ಪೆನ್‌ಡ್ರೈವ್ ಹಿಡಿಯುತ್ತಾರೆ. ಇದು ನೋಡಿ ರಮೇಶ್ ದೂರ ಓಡುವ ರಿಯಾಕ್ಷನ್ ನೀಡಿದ್ದಾರೆ.

ಕಿರುಚಿತ್ರದ ಪೆನ್‌ಡ್ರೈವ್ ಕೂಡ ತೆಗೆದುಕೊಳ್ಳದ ನಟ ರಮೇಶ್!
ಪೆನ್‌ಡ್ರೈವ್ ನೋಡುತ್ತಿದ್ದ ಹಾಗೆ ರಮೇಶ್ ಅರವಿಂದ್ ಏನಿದು ಎಂದು ಕೇಳುತ್ತಾರೆ. ಆಗ ಇದು ಕಿರುಚಿತ್ರದ ಪೆನ್‌ಡ್ರೈವ್ ಎನ್ನುತ್ತಾರೆ. ನಾನೊಂದು ಶಾರ್ಟ್ ಫಿಲ್ಮ್ ಮಾಡಿದ್ದೇನೆ. ಅದನ್ನು ನೀಡಬೇಕಿತ್ತು ಎನ್ನುತ್ತಾರೆ. ತಕ್ಷಣ ಮೊದಲು ಪೆನ್ಡ್ರೈವ್ನ ಫ್ರೆಮ್ನಿಂದ ತೆಗೆಯಿರಿ ಎಂದು ಗಾಬರಿಯಿಂದ ಹೇಳುತ್ತಾರೆ.
ಬಳಿಕ ನನಗೆ ಗೊತ್ತಾಯಿತು ನೀವು ಜೀ ಪಿಚ್ಚರ್ ಶಾರ್ಟ್ ಫಿಲಂ ಸ್ಪರ್ಧೆಗೆ ಕಳಿಸಲು ತಂದಿದ್ದಿರಾ ಎಂದು. ಆದರೆ, ಇದೆಲ್ಲಾ ಬೇಡ. ಕೆಳಗೆ ಕ್ಯೂಆರ್ ಕೋಡ್ ಇದೆ ಅಥವಾ ಲಿಂಕ್ ಇದೆ. ಅಲ್ಲಿಗೆ ಹೋಗಿ ಏನ್ ಮಾಡಬೇಕು ಎಂದು ನಿಮಗೆ ಗೊತ್ತಾಗುತ್ತದೆ ಎಂದಿದ್ದಾರೆ ರಮೇಶ್ ಅರವಿಂದ್.
ಜೀ ಪಿಚ್ಚರ್ ಶಾರ್ಟ್ ಫಿಲ್ಮ್ ಸ್ಪರ್ಧೆ ಪ್ರಮೋಷನ್
ಎಸ್... ಇದೆಲ್ಲಾ ಮಾಡ್ತಾ ಇರೋದು ಜೀ ಪಿಚ್ಚರ್ ಶಾರ್ಟ್ ಫಿಲ್ಮ್ ಸ್ಪರ್ಧೆಯ ಪ್ರಚಾರಕ್ಕಾಗಿದೆ. ಈ ಹಿಂದೆ ಧಾರಾವಾಹಿಗಳು, ಕಾರ್ಯಕ್ರಮಗಳು ಮತ್ತು ರಿಯಾಲಿಟಿ ಶೋಗಳಿಗೆ ಇತ್ತೀಚಿನ ಹಾಟ್ ಟಾಪಿಕ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಹಾಗೆಯೇ ಜೀ ಪಿಚ್ಚರ್ ಶಾರ್ಟ್ ಫಿಲ್ಮ್ ಸ್ಪರ್ಧೆಯ ಪ್ರಮೋಷನ್‌ಗೆ ಪೆನ್‌ಡ್ರೈವ್ ಬಳಸಿಕೊಳ್ಳಲಾಗಿದೆ.
ಕಿರುಚಿತ್ರ ಸ್ಪರ್ಧೆಗೆ ಕಳಿಸಲು ಇರುವ ಷರತ್ತುಗಳು
* ಕಿರುಚಿತ್ರ ನೋಂದಾಯಿಸಲು ಮೇ 21 ರಿಂದ ಜೂನ್ 8ರ ವರೆಗೆ 'ಜೀ ಆ್ಯಪ್'ನಲ್ಲಿ ಅವಕಾಶ ಇದೆ.
* ಒಂದು ಅಥವಾ ಹಲವು ಕಿರುಚಿತ್ರ ಸ್ವೀಕರಿಸಲಾಗುತ್ತದೆ
*ಕಿರುಚಿತ್ರ ಕನ್ನಡ ಭಾಷೆಯಲ್ಲೇ ಇರಬೇಕು.












Click it and Unblock the Notifications