ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ಇದ್ದ ಆರೋಗ್ಯ ಸಮಸ್ಯೆ ಏನು?
ರಾಕೇಶ್ ಪೂಜಾರಿ ಅವರು ಮೇ 11ರ ಬೆಳಿಗ್ಗೆ 'ಕಾಂತಾರ: ಚಾಪ್ಟರ್ 1' ಶೂಟ್ನಲ್ಲಿ ಇದ್ದರು. ಆ ಬಳಿಕ ಸಂಜೆ ಆಪ್ತರೊಬ್ಬರ ಮೆಹಂದಿ ಶಾಸ್ತ್ರಕ್ಕೆ ಹೋಗಿದ್ದಾರೆ. ಮಧ್ಯ ರಾತ್ರಿ ವೇಳೆಗೆ ಹೃದಯಾಘಾತ ಸಂಭವಿಸಿದೆ. ರಾಕೇಶ್ ಪೂಜಾರಿ ಅವರ ಸಾವಿನ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿದೆ. ಸಾವು ಸಂಭವಿಸುವುದಕ್ಕೂ ಮೊದಲು ಏನಾಗಿತ್ತು ಎಂದು ಅವರ ಆಪ್ತ ಹಾಗೂ ನಟ ಗೋವಿಂದೇ ಗೌಡ (ಜಿಜಿ) ವಿವರಿಸಿದ್ದಾರೆ.
'ಕಾಮಿಡಿ ಕಿಲಾಡಿಗಳು ಸೀಸನ್ 3' ವಿನ್ನರ್ ರಾಕೇಶ್ ಪೂಜಾರಿ ಅವರು ನಿನ್ನೆ (ಮೇ 11) ಬೆಳಿಗ್ಗೆ 'ಕಾಂತಾರ ಚಾಪ್ಟರ್ 1' ಶೂಟ್ನಲ್ಲಿ ಇದ್ದರು. ಆ ಬಳಿಕ ಸಂಜೆ ಆಪ್ತರೊಬ್ಬರ ಮೆಹಂದಿ ಶಾಸ್ತ್ರಕ್ಕೆ ಹೋಗಿದ್ದಾರೆ. ಮಧ್ಯ ರಾತ್ರಿ ವೇಳೆಗೆ ಹೃದಯಾಘಾತ ಸಂಭವಿಸಿದೆ. ರಾಕೇಶ್ಗೆ ಇತ್ತೀಚೆಗೆ ಅಪಘಾತ ಸಂಭವಿಸಿತ್ತು. ಆದರೆ, ಯಾವುದೇ ಹೆಚ್ಚಿನ ತೊಂದರೆ ಆಗಿರಲಿಲ್ಲ. ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಯೂ ಇರಲಿಲ್ಲ ಎಂಬುದಾಗಿ ಗೋವಿಂದೇ ಗೌಡ ಅವರು ಹೇಳಿದ್ದಾರೆ.

ಈ ಕುರಿತು ಖಾಸಗಿ ವಾಹಿನಿಯಲ್ಲಿ ಗೋವಿಂದೆ ಗೌಡ ಅವರು ಮಾತನಾಡಿ, ರಾಕೇಶ್ ಪೂಜಾರಿ ಒಳ್ಳೆಯ ಕಲಾವಿದ ಎನ್ನುವುದಕ್ಕಿಂತ ಒಳ್ಳೆಯ ಮನುಷ್ಯನಾಗಿದ್ದ. ನನಗೂ ಆತ ತುಂಬಾನೇ ಆಪ್ತ. ಎಲ್ಲರ ಪ್ರೀತಿ ಪಾತ್ರ ವ್ಯಕ್ತಿ ಆಗಿದ್ದ. ಪ್ಲೇಟ್ಲೆಟ್ಸ್ ಕಡಿಮೆ ಇತ್ತು. ಆ ಬಳಿ ಹಾರ್ಟ್ ಅಟ್ಯಾಕ್ ಆಗಿದೆ. ವಿಷಯ ಕೇಳಿ ತುಂಬಾನೇ ನೋವಾಗುತ್ತಿದೆ. ಇದನ್ನು ನಂಬೋಕೆ ಆಗುತ್ತಿಲ್ಲ. ಈ ವಿಚಾರವನ್ನು ಅರಗಿಸಿಕೊಳ್ಳೋಕೆ ಸಾಧ್ಯವೇ ಆಗುತ್ತಿಲ್ಲ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ಬೆಳಿಗ್ಗೆ ಕಾಂತಾರ ಸಿನಿಮಾ ಶೂಟ್ನಲ್ಲಿ ಇದ್ದ. ಶೂಟ್ ಮುಗಿಸಿ ಸಂಜೆ ಗೆಳೆಯರ ಮದುವೆ ಫಂಕ್ಷನ್ಗೆ ಹೋಗಿದ್ದಾನೆ. ಸುಸ್ತು ಎನ್ನುತ್ತಿದ್ದ. ಮಧ್ಯರಾತ್ರಿ ಹಾರ್ಟ್ ಅಟ್ಯಾಕ್ ಆಯ್ತು. ಎಲ್ಲರೂ ನನಗೆ ಕಾಲ್ ಮಾಡಿದ್ದರು. ಆದರೆ ಮೊಬೈಲ್ ಸೈಲೆಂಟ್ನಲ್ಲಿ ಇದ್ದಿದ್ದರಿಂದ ವಿಷಯ ಗೊತ್ತಾಗಿರಲಿಲ್ಲ. ಬೆಳಿಗ್ಗೆ ಎದ್ದು ನೋಡಿದಾಗ ವಿಷಯ ತಿಳಿಯಿತು. ನನಗೆ ನಂಬುದಕ್ಕೆ ಆಗಲಿಲ್ಲ. ಇತ್ತೀಚೆಗೆ ರಾಕೇಶ್ಗೆ ಬೈಕ್ ಸ್ಕಿಡ್ ಆಗಿ ಅಪಘಾತ ಆಗಿತ್ತು. ಆದರೆ, ಬೇಗ ರಿಕವರಿ ಆದ. ಅದನ್ನು ಹೊರತುಪಡಿಸಿ ಅವನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆತ ತುಂಬಾನೇ ಆ್ಯಕ್ಟೀವ್ ಆಗಿದ್ದ. ಎಲ್ಲರಿಗೂ ಬೇಕಾಗಿದ್ದ ವ್ಯಕ್ತಿ. ತುಂಬಾನೇ ನೋವಾಗುತ್ತಿದೆ. ಮಾನವೀಯ ವ್ಯಕ್ತಿ. ಅದು ನನಗೆ ಅನುಭವಕ್ಕೆ ಬಂದಿತ್ತು. ನನ್ನ ಪಾಪು ಯಾರ ಜೊತೆಯೂ ಹೋಗುತ್ತಿರಲಿಲ್ಲ. ಆದರೆ, ಅವನ ಜೊತೆ ತುಂಬಾನೇ ಹೊತ್ತು ಆಟ ಆಡಿದ್ದ ಎಂದು ಗೋವಿಂದೇ ಗೌಡ (ಜಿಜಿ) ತಿಳಿಸಿದ್ದಾರೆ.
ಗೆಳೆಯನ ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಖುಷಿಯಾಗೇ ಸಮಯ ಕಳೆದಿದ್ದರು. ಅಲ್ಲದೇ ಅಲ್ಲಿ ಡ್ಯಾನ್ಸ್ ಕೂಡಾ ಮಾಡಿ ಸಂಭ್ರಮಿಸಿದ್ದರು. ಮೆಹೆಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.












Click it and Unblock the Notifications