ದರ್ಶನ್ ಅಣ್ಣನ ವಿಚಾರದಲ್ಲಿ ಆ ಬೇಜಾರಿದೆ: ನಟ ಪ್ರಜ್ವಲ್ ದೇವರಾಜ್ ಹೀಗಂದಿದ್ದೇಕೆ?
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾಮೀನು ರದ್ದಾಗಿ ಸದ್ಯ ಜೈಲುವಾಸದಲ್ಲಿದ್ದಾರೆ. ಈ ಹಿಂದೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಹೀಗಾಗಿ ದರ್ಶನ್ ಅವರು ಮತ್ತೆ ಸೆರೆವಾಸ ಮುಂದುವರಿಸಿದ್ದಾರೆ. ದರ್ಶನ್ ಅವರೊಂದಿಗೆ ತೀರಾ ಆಪ್ತರಾಗಿದ್ದವರಲ್ಲಿ ನಟ ಪ್ರಜ್ವಲ್ ದೇವರಾಜ್ ಕೂಡ ಒಬ್ಬರು. ದರ್ಶನ್ ಅವರ ವಿಚಾರವಾಗಿ ಇತ್ತೀಚೆಗೆ ಮಾತನಾಡಿರುವ ಅವರು, ಆ ಒಂದು ವಿಷಯಕ್ಕೆ ತುಂಬಾ ಬೇಜಾರಿದೆ ಎಂದು ಅಚ್ಚರಿ ವಿಚಾರಗಳನ್ನ ಹೇಳಿದ್ದಾರೆ.
ಹಿರಿಯ ನಟ ದೇವರಾಜ್ ಕುಟುಂಬದ ಜೊತೆಗೆ ನಟ ದರ್ಶನ್ ಉತ್ತಮ ಒಡನಾಟ ಹೊಂದಿದ್ದವರು. ಎಲ್ಲ ಶುಭ ಸಮಾರಂಭಗಳು ಹಾಗೂ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಪ್ರಜ್ವಲ್ ದೇವರಾಜ್ ಕೂಡ ದರ್ಶನ್ ಅವರನ್ನು ಸಹೋದರ ಎಂದು ಕರೆಯುತ್ತಿದ್ದರು. ದರ್ಶನ್ ಅವರು ನನಗೆ ಅಣ್ಣ ಇದ್ದಂಗೆ ಎಂದು ಹಲವು ಸಂದರ್ಶನಗಳಲ್ಲಿ ಪ್ರಜ್ವಲ್ ಹೇಳಿದ್ದರು. ಕೊಲೆ ಕೇಸ್‌ನಲ್ಲಿ ದರ್ಶನ್ ಅವರು ರಿಲೀಸ್ ಆದ ಮೇಲೆ ಪ್ರಜ್ವಲ್ ಕೂಡ ಅವರನ್ನು ಭೇಟಿಯಾಗಿರಲಿಲ್ಲ. ಇದಕ್ಕೆ ಕಾರಣವೇನು ಅಂತಾ ಅವರೇ ಹೇಳಿದ್ದಾರೆ.

'ದರ್ಶನ್ ಅಣ್ಣ ಮತ್ತೆ ಜೈಲಿಗೆ ಹೋಗಿದ್ದು ನಿಜಕ್ಕೂ ಬೇಸರ ತಂದಿದೆ. ನಮ್ಮ ಫ್ರೆಂಡ್‌ಗೆ ಯಾರಿಗಾದ್ರೂ ಸಮಸ್ಯೆ ಆದಾಗಲೇ ತುಂಬಾ ನೋವಾಗುತ್ತೆ. ಹಾಗಿರುವಾಗ ದರ್ಶನ್ ಅವರು ನನಗೆ ಅಣ್ಣನ ತರ, ಅವರೊಂದಿಗೆ ಹಲವು ವರ್ಷಗಳಿಂದ ಸಮಯ ಕಳೆದಿದ್ದೀನಿ. ನಮ್ಮ ಕುಟುಂಬಕ್ಕೆ ದರ್ಶನ್ ಅಣ್ಣ ಎಷ್ಟು ಹತ್ತಿರದವರು ಅನ್ನೋದು ಎಲ್ಲರಿಗೂ ಗೊತ್ತು' ಎಂದು ನಟ ಪ್ರಜ್ವಲ್ ದೇವರಾಜ್ ಭಾವುಕರಾಗಿದ್ದಾರೆ.
'ಇನ್ನೊಂದು ಬೇಸರ ವಿಚಾರ ಅಂದ್ರೆ ಅವರನ್ನ ಭೇಟಿಯಾಗೋಕೆ ಆಗಲೇ ಇಲ್ಲ. ಅವರು ಈ ಹಿಂದೆ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಾಗಲೂ ಅವರನ್ನ ಭೇಟಿಯಾಗೋಕೆ ಆಗಲಿಲ್ಲ. ಭೇಟಿಯಾಗೋಕೆ ತುಂಬಾ ಪ್ರಯತ್ನ ಪಟ್ಟೆ, ಆದ್ರೂ ಆಗಲಿಲ್ಲ. ಅದು ನನಗೆ ತುಂಬಾ ಬೇಜಾರಾಗುತ್ತಿರುವ ವಿಷಯ' ಎಂದಿದ್ದಾರೆ ಪ್ರಜ್ವಲ್.
'ವಿಜಯಲಕ್ಷ್ಮಿ ಅವ್ರಿಗೆ ಸಪೋರ್ಟ್ ಬೇಕಿಲ್ಲ'
'ದರ್ಶನ್ ಅಣ್ಣನ ಪತ್ನಿ ವಿಜಯಲಕ್ಷ್ಮಿ ಅವರಿಗೆ ನಾವು ಮಾತ್ರವಲ್ಲ, ಎಲ್ಲರೂ ಸಪೋರ್ಟ್‌ಗೆ ಇದ್ದೀವಿ. ಅವರು ತುಂಬಾ ಸ್ಟ್ರಾಂಗ್ ಲೇಡಿ. ಅವರು ದರ್ಶನ್ ಅಣ್ಣನಿಗಾಗಿ ಎಷ್ಟು ಫೈಟ್ ಮಾಡಿ ಓಡಾಡಿದ್ರು? ಅನ್ನೋದು ಇಡೀ ಕರ್ನಾಟಕವೇ ನೋಡಿದೆ. ಹಾಗಾಗಿ ಅವರಿಗೆ ಸಪೋರ್ಟ್ ಅಗತ್ಯವಿಲ್ಲ. ಆದರೂ ಅವರಿಗೆ ಏನಾದ್ರೂ ಅಗತ್ಯವಿದ್ರೆ ನಾವೆಲ್ಲ ಇದ್ದೇವೆ' ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.
ದರ್ಶನ್ ತೂಗುದೀಪ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕಳೆದ ವರ್ಷ ಬಂಧನಕ್ಕೆ ಒಳಗಾಗಿದ್ದರು. ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳಿಸಿದ ಕಾರಣಕ್ಕೆ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಜಾಮೀನು ರದ್ದಾಗಿದ್ದರಿಂದ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications